ಸದಾನಂದ ಗೌಡ ಅವರು ಒಕ್ಕೂಟ ಸರ್ಕಾರದ ಮಂತ್ರಿಯಾಗಿರುವುದೂ ಒಂದೇ ನಾಯಿ ಮೊಲೆಯಲ್ಲಿ ಹಾಲಿರುವುದೂ ಒಂದೇ ಎಂದು ಕರ್ನಾಟಕ ಕಾಂಗ್ರೆಸ್ ಬುಧವಾರ ಆಕ್ರೋಶ ವ್ಯಕ್ತಪಡಿಸಿದೆ. ರೈತರು ಗೊಬ್ಬರಕ್ಕಾಗಿ ಪರದಾಡುತ್ತಿದ್ದರೂ ತನ್ನ ಸ್ವಂತ ರಾಜ್ಯಕ್ಕೆ ಗೊಬ್ಬರ ಪೂರೈಸದೆ ನಗುತ್ತಲೇ ಜಾರಿಕೊಳ್ಳುವ ಇವರನ್ನು ಕರ್ನಾಟಕದವರು ಎನ್ನಲು ನಾಚಿಕೆಯಾಗುತ್ತದೆ. ಯಾವ ಪುರುಷಾರ್ಥಕ್ಕೆ ಇವರಿಗೆ ಮಂತ್ರಿಗಿರಿ? ಎಂದು ಕಾಂಗ್ರೆಸ್ ಹೇಳಿದೆ.
ಇಂದು ಪಕ್ಷದ ಅಧೀಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿರುವ ಕಾಂಗ್ರೆಸ್, “ಡಿ.ವಿ. ಸದಾನಂದ ಗೌಡ ಅವರು ಒಕ್ಕೂಟ ಸರ್ಕಾರದ ಮಂತ್ರಿಯಾಗಿರುವುದೂ ಒಂದೇ ನಾಯಿ ಮೊಲೆಯಲ್ಲಿ ಹಾಲಿರುವುದೂ ಒಂದೇ. ರಾಜ್ಯದಲ್ಲಿ ರೈತರು ಗೊಬ್ಬರಕ್ಕಾಗಿ ಪರದಾಡುತ್ತಿದ್ದರೂ ತನ್ನ ಸ್ವಂತ ರಾಜ್ಯಕ್ಕೆ ಗೊಬ್ಬರ ಪೂರೈಸದೆ ನಗುತ್ತಲೇ ಜಾರಿಕೊಳ್ಳುವ ಇವರನ್ನು ಕರ್ನಾಟಕದವರು ಎನ್ನಲು ನಾಚಿಕೆಯಾಗುತ್ತದೆ. ಯಾವ ಪುರುಷಾರ್ಥಕ್ಕೆ ಇವರಿಗೆ ಮಂತ್ರಿಗಿರಿ?” ಎಂದು ಹೇಳಿದೆ.
'@DVSadanandGowda ಅವರು ಕೇಂದ್ರ ಮಂತ್ರಿಯಾಗಿರುವುದೂ ಒಂದೇ ನಾಯಿ ಮೊಲೆಯಲ್ಲಿ ಹಾಲಿರುವುದೂ ಒಂದೇ.
ರಾಜ್ಯದಲ್ಲಿ ರೈತರು ಗೊಬ್ಬರಕ್ಕಾಗಿ ಪರದಾಡುತ್ತಿದ್ದರೂ ತನ್ನ ಸ್ವಂತ ರಾಜ್ಯಕ್ಕೆ ಗೊಬ್ಬರ ಪೂರೈಸದೆ ನಗುತ್ತಲೇ ಜಾರಿಕೊಳ್ಳುವ ಇವರನ್ನು ಕರ್ನಾಟಕದವರು ಎನ್ನಲು ನಾಚಿಕೆಯಾಗುತ್ತದೆ.
ಯಾವ ಪುರುಷಾರ್ಥಕ್ಕೆ ಇವರಿಗೆ ಮಂತ್ರಿಗಿರಿ?
1/2— Karnataka Congress (@INCKarnataka) June 23, 2021
ಇದನ್ನೂ ಓದಿ: ಕೊರೊನಾ ಹೆಸರಲ್ಲಿ ತಬ್ಲೀಘಿಗಳ ಅವಹೇಳನ: ಇಂದು ರಾತ್ರಿ ಕ್ಷಮೆ ಕೇಳಲಿರುವ ನ್ಯೂಸ್ 18 ಕನ್ನಡ!
“ಫಾರ್ಮಾಸೂಟಿಕಲ್ ಮಂತ್ರಿಯಾಗಿ ರಾಜ್ಯಕ್ಕೆ ರೆಮಿಡಿಸಿವಿರ್, ಲಸಿಕೆ ಹಾಗೂ ಅಂಪೊಟರಿಸನ್ ಹಂಚಿಕೆಯಲ್ಲಿ ನ್ಯಾಯ ಸಲ್ಲಿಸದ ಸದಾನಂದ ಗೌಡರು ರಸಗೊಬ್ಬರ ಸಚಿವರಾಗಿಯೂ ನಮ್ಮ ರೈತರಿಗೆ ಗೊಬ್ಬರ ಒದಗಿಸಲಾಗಲಿಲ್ಲ” ಎಂದು ಕಾಂಗ್ರೆಸ್ ಹೇಳಿದೆ.
“ಸದಾನಂದ ಗೌಡ ಅವರೇ, ಎಲ್ಲವೂ ಪಿಎಂ ಕಚೇರಿಯಲ್ಲಿ ನಿರ್ವಹಣೆಯಾಗುತ್ತಿದೆ, ನಿಮ್ಮ ಕೈಯಲ್ಲಿ ಏನೂ ಇಲ್ಲ ಎನ್ನುವ ಸತ್ಯವನ್ನಾದರೂ ಹೇಳಿಬಿಡಿ” ಎಂದು ಕಾಂಗ್ರೆಸ್ ಕಿಡಿ ಕಾರಿದೆ.
“ಬಿಜೆಪಿಯ ಆಡಳಿತದಲ್ಲಿ ರಾಜ್ಯವು ‘ನತದೃಷ್ಟ ಕರ್ನಾಟಕ’ವಾಗಿದೆ. ಕರೋನಾ ಸೋಂಕಿತರಿಗೆ ಆಕ್ಸಿಜನ್ ಕೊಡಲಿಲ್ಲ, ಬೆಡ್ ಒದಗಿಸಲಿಲ್ಲ, ರೆಮಿಡಿಸಿವಿರ್ ನೀಡಲಿಲ್ಲ, ಅಂಪೊಟರಿಸನ್ ಇಲ್ಲ, ಚಿಕಿತ್ಸೆ ಇಲ್ಲವೇ ಇಲ್ಲ, ಸಮರ್ಪಕ ಆರ್ಥಿಕ ಪ್ಯಾಕೇಜ್ ಇಲ್ಲ ಈಗ ಮುಂಗಾರಿನಲ್ಲಿ ರೈತರಿಗೆ ಗೊಬ್ಬರ ಕೊಡುತ್ತಿಲ್ಲ, ಬಿತ್ತನೆ ಬೀಜ ಇಲ್ಲವೇ ಇಲ್ಲ” ಎಂದು ಕಾಂಗ್ರೆಸ್ ಹೇಳಿದೆ.
ಇದನ್ನೂ ಓದಿ: ಅಬಕಾರಿ ಸಚಿವ ಗೋಪಾಲಯ್ಯ ವಿರುದ್ಧ ಎಸಿಬಿಯಲ್ಲಿ ದೂರು ದಾಖಲು: ವಲಸೆ ಸಚಿವರಿಗೆ ನಡುಕ


