ಜೈಪುರ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ತಮ್ಮ ಪಕ್ಷ ಅಧಿಕಾರ ಹಿಡಿಯಲು ಸಹಾಯ ಮಾಡಿದ ಕಾಂಗ್ರೆಸ್ ಪಕ್ಷದಿಂದ ಪಕ್ಷಾಂತರವಾದ ಕೌನ್ಸಿಲರ್‌ಗಳಿಗೆ ಗೋಮೂತ್ರ ಮತ್ತು ಗಂಗಾಜಲ ಕುಡಿಸಿ ‘ಶುದ್ಧೀಕರಣ ಸಮಾರಂಭ’ವನ್ನು ಬಿಜೆಪಿ ಶಾಸಕರೊಬ್ಬರು ನಡೆಸಿದ ಘಟನೆ ನಡೆದಿದೆ. ಜೈಪುರ ಮುನ್ಸಿಪಲ್ ಕಾರ್ಪೊರೇಷನ್ ಹೆರಿಟೇಜ್ (ಜೆಎಂಸಿಎಚ್) ನ ಹೊಸ ಮೇಯರ್ ಆಗಿ ಕುಸುಮ್ ಯಾದವ್ ಅವರು ಅಧಿಕಾರ ವಹಿಸಿದ್ದು, ಈ ವೇಳೆ ಘಟನೆ ನಡೆದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಗುರುವಾರದಂದು ಗಂಗಾಜಲ ಮತ್ತು ಗೋಮೂತ್ರವನ್ನು ಒಳಗೊಂಡ ಶುದ್ಧೀಕರಣ ಆಚರಣೆಯ ನಂತರ ಕುಸುಮ್ ಯಾದವ್ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ಬಿಜೆಪಿ ಶಾಸಕ ಬಲ್ಮುಕುಂದ್ ಆಚಾರ್ಯ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನಡೆಸಲಾಗಿತ್ತು.
ವೇದ ಮಂತ್ರಗಳೊಂದಿಗೆ ನಡೆದ ಶುದ್ಧೀಕರಣ ಸಮಾರಂಭವು ಹತೋಜ್ ಧಾಮ್ ದೇವಾಲಯದ ಪೂಜಾರಿ ಕೂಡಾ ಆಗಿರುವ ಬಲ್ಮುಕುಂದ್ ಆಚಾರ್ಯ ಅವರು ಕುಸುಮ್ ಯಾದವ್ ಮಾತ್ರವಲ್ಲದೆ ಬಿಜೆಪಿಯನ್ನು ಬೆಂಬಲಿಸಿ ಪಕ್ಷಾಂತರಗೊಂಡ ಕೆಲವು ಕಾಂಗ್ರೆಸ್ ಕೌನ್ಸಿಲರ್‌ಗಳನ್ನು ಕೂಡಾ ಸಾಂಕೇತಿಕವಾಗಿ ಶುದ್ಧೀಕರಿಸಿದ್ದಾರೆ.
‘ಶುದ್ಧೀಕರಣ ಪ್ರಕ್ರಿಯೆ’ಯ ಅಂಗವಾಗಿ ಕೌನ್ಸಿಲರ್‌ಗಳು ಮತ್ತು ಅಧಿಕಾರಿಗಳಿಗೆ ಸಾಂಕೇತಿಕವಾಗಿ ಗಂಗಾಜಲ ಮತ್ತು ಗೋಮೂತ್ರವನ್ನು ‘ಕುಡಿಯುವಂತೆ’ ಮಾಡಲಾಗಿತ್ತು ಎಂದು ವರದಿಯಾಗಿದೆ.
ಇದನ್ನೂಓದಿ: ‘ಧರ್ಮ ಘೋಷಿಸಿ’ | ಜಗನ್‌ಗೆ ಆಂಧ್ರ ಸಿಎಂ ಸವಾಲು; ತಿರುಪತಿ ಭೇಟಿ ರದ್ದು
ಭ್ರಷ್ಟಾಚಾರ ಆರೋಪದ ಕಾರಣದಿಂದ ಪದಚ್ಯುತಗೊಂಡಿದ್ದ ಕಾಂಗ್ರೆಸ್ ಮೇಯರ್ ಮುನೇಶ್ ಗುರ್ಜಾರ್ ಅವರನ್ನು ಪದಚ್ಯುತಗೊಳಿಸಿದ ಬೆನ್ನಲ್ಲೇ ಕುಸುಮ್ ಯಾದವ್ ಅವರನ್ನು ಮೇಯರ್ ಆಗಿ ನೇಮಕ ಮಾಡಲಾಗಿತ್ತು. ಕುಸುಮ್ ಯಾದವ್ ಅವರು ಏಳು ಕಾಂಗ್ರೆಸ್ ಕೌನ್ಸಿಲರ್‌ಗಳು ಮತ್ತು ಸ್ವತಂತ್ರ ಸದಸ್ಯರ ಬೆಂಬಲದೊಂದಿಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು. ಕೌನ್ಸಿಲರ್‌ಗಳಿಗೆ ಗೋಮೂತ್ರ
ಆಪಾದಿತ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವವರನ್ನು ಶುದ್ಧೀಕರಿಸಲು ಶುದ್ಧೀಕರಣ ಸಮಾರಂಭ ಅಗತ್ಯ ಎಂದು ಬಿಜೆಪಿ ಶಾಸಕ ಬಲ್ಮುಕುಂದ್ ಆಚಾರ್ಯ ವಿವರಿಸಿದ್ದಾರೆ. “ನಾವು ಪಾಲಿಕೆಯನ್ನು ಗಂಗಾಜಲದಿಂದ ಶುದ್ಧೀಕರಿಸಿದ್ದೇವೆ, ಎಲ್ಲಾ ಕಲ್ಮಶಗಳನ್ನು ತೆಗೆದುಹಾಕಿದ್ದೇವೆ. ಈಗ ಬಿಜೆಪಿಯನ್ನು ಬೆಂಬಲಿಸಿದ ಕಾಂಗ್ರೆಸ್ ಕೌನ್ಸಿಲರ್‌ಗಳನ್ನು ‘ಸನಾತನಿ’ಗಳನ್ನಾಗಿ ಮಾಡಲಾಗಿದೆ” ಎಂದು ಅವರು ಹೇಳಿದ್ದಾರೆ.
ತನ್ನ ಮಹಾ ಶುದ್ಧೀಕರಣ ಸಮಾರಂಭದಿಂದಾಗಿ ಇಡೀ ಜೈಪುರ ಮುನ್ಸಿಪಲ್ ಕಾರ್ಪೊರೇಶನ್ ಅನ್ನು ‘ಭ್ರಷ್ಟಾಚಾರ ಮುಕ್ತ’ ಮಾಡಲಾಗಿದೆ ಎಂದು ಅವರು ಹೇಳಿಕೆಗಳನ್ನು ನೀಡಿದ್ದಾರೆ.
ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಖಚರಿಯಾವಾಸ್ ಅವರು ಶಾಸಕ ಆಚಾರ್ಯ ಅವರ ಕೃತ್ಯಗಳನ್ನು ತೀವ್ರವಾಗಿ ಖಂಡಿಸಿದ್ದು, ಅವರ ಅಧಿಕಾರವನ್ನು ಪ್ರಶ್ನಿಸಿದ್ದಾರೆ. “ನೀವು ಶಾಸಕರಾಗಿದ್ದೀರಿ, ಆಧ್ಯಾತ್ಮಿಕ ನಾಯಕರಲ್ಲ. ಕಾಂಗ್ರೆಸ್ ಕೌನ್ಸಿಲರ್‌ಗಳು ಈಗ ಶುದ್ಧ ಮತ್ತು ಸನಾತನಿಗಳು ಎಂದು ನೀವು ಹೇಗೆ ಘೋಷಿಸುತ್ತೀರಿ? ಬಲ್ಮುಕುಂದ್ ಆಚಾರ್ಯ ಸನಾತನ ಧರ್ಮದ ಸ್ವಯಂ ಪ್ರೇರಿತ ರಕ್ಷಕರೆ?” ಎಂದು ಕೇಳಿದ್ದಾರೆ.
ವಿಡಿಯೊ ನೋಡಿ: ಅಟ್ರಾಸಿಟಿ ಕಾದಂಬರಿ ಚರ್ಚೆಯಲ್ಲಿ ವಿಕಾಸ್ ಮತ್ತು ಗುರುಪ್ರಸಾದ್ ಪ್ರತಿಕ್ರಿಯೆ


