ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರನ್ನು ‘ನಿಜವಾದ ಮುತ್ಸದ್ದಿ’ ಎಂದು ಬಣ್ಣಿಸಿದ ಪಕ್ಷದ ಸಂಸದ ಶಶಿ ತರೂರ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ.
ಶನಿವಾರ (ನ.8) ಅಡ್ವಾಣಿಯವರ 98ನೇ ಹುಟ್ಟುಹಬ್ಬದ ಪ್ರಯುಕ್ತ ಪೋಸ್ಟ್ ಹಾಕಿ ಶುಭಾಶಯ ಕೋರಿದ್ದ ತರೂರ್, “ಸಾರ್ವಜನಿಕ ಸೇವೆಗೆ ಅಡ್ವಾಣಿಯವರ ಅಚಲ ಬದ್ಧತೆ, ಅವರ ನಮ್ರತೆ ಮತ್ತು ಸಭ್ಯತೆ ಹಾಗೂ ಆಧುನಿಕ ಭಾರತದ ಪಥವನ್ನು ರೂಪಿಸುವಲ್ಲಿ ಅವರ ಪಾತ್ರ ಶ್ಲಾಘಿಣೀಯ” ಎಂದಿದ್ದರು. “ಅಡ್ವಾಣಿ ನಿಜವಾದ ರಾಜಕಾರಣಿ, ಅವರ ಸೇವಾ ಜೀವನವು ಅನುಕರಣೀಯವಾಗಿದೆ” ಎಂದು ಕೊಂಡಾಡಿದ್ದರು.
Wishing the venerable Shri L.K. Advani a very happy 98th birthday! His unwavering commitment to public service, his modesty & decency, and his role in shaping the trajectory of modern India are indelible. A true statesman whose life of service has been exemplary. 🙏 pic.twitter.com/5EJh4zvmVC
— Shashi Tharoor (@ShashiTharoor) November 8, 2025
ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ತರೂರ್ ಅವರು ಅಡ್ವಾಣಿ ಅವರನ್ನು ಹೊಗಳಿದ್ದನ್ನು ಪ್ರಶ್ನಿಸಿದ್ದಾರೆ, 1980ರ ದಶಕದ ಉತ್ತರಾರ್ಧದಲ್ಲಿ ಮತ್ತು 1990ರ ದಶಕದ ಆರಂಭದಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಅಡ್ವಾಣಿ ರ‍್ಯಾಲಿ ನಡೆಸಿದ್ದನ್ನು ತರೂರ್‌ಗೆ ನೆನಪಿಸಿದ್ದಾರೆ.
ತರೂರ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದವರಲ್ಲಿ ವಕೀಲ ಸಂಜಯ್ ಹೆಗ್ಡೆ ಕೂಡ ಒಬ್ಬರು. “ಕ್ಷಮಿಸಿ ತರೂರ್, ಈ ದೇಶದಲ್ಲಿ ದ್ವೇಷದ ಬೀಜಗಳನ್ನು ಬಿತ್ತುವುದು ಸಾರ್ವಜನಿಕ ಸೇವೆಯಲ್ಲ” (ಖುಷ್ವಂತ್ ಸಿಂಗ್ ಅವರ ಮಾತುಗಳನ್ನು ಉಲ್ಲೇಖಿಸಿ) ಎಂದು ಭಾನುವಾರ (ನ.9) ಸಂಜಯ್ ಹೆಗ್ಡೆ ಹೇಳಿದ್ದಾರೆ.
. Agreed, @sanjayuvacha, but reducing his long years of service to one episode, however significant, is also unfair. The totality of Nehruji’s career cannot be judged by the China setback, nor Indira Gandhi’s by the Emergency alone. I believe we should extend the same courtesy to…
— Shashi Tharoor (@ShashiTharoor) November 9, 2025
ಇದಕ್ಕೆ ಉತ್ತರಿಸಿರುವ ತರೂರ್, “ಅಡ್ವಾಣಿ ಅವರ ದೀರ್ಘ ರಾಜಕೀಯ ವೃತ್ತಿಜೀವನವನ್ನು ಒಂದು ಘಟನೆಗೆ ಮಾತ್ರ ಸೀಮಿತಗೊಳಿಸುವುದು, ಅದು ಎಷ್ಟೇ ಮಹತ್ವದ್ದಾಗಿದ್ದರೂ ಅನ್ಯಾಯ. ನೆಹರೂ ಅವರ ವೃತ್ತಿಜೀವನದ ಸಂಪೂರ್ಣತೆಯನ್ನು ಚೀನಾ ಸೋಲಿನಿಂದ ಮಾತ್ರ, ಅದೇ ರೀತಿ ಇಂದಿರಾ ಗಾಂಧಿಯವರ ಜೀವನವನ್ನು ತುರ್ತುಪರಿಸ್ಥಿತಿಯಿಂದ ಮಾತ್ರ ನಿರ್ಣಯಿಸಲಾಗದು. ನಾವು ಅದೇ ಗೌರವವನ್ನು ಅಡ್ವಾಣಿ ಅವರಿಗೂ ಕೊಡಬೇಕು” ಎಂದು ವಾದಿಸಿದ್ದಾರೆ.
Like always, Dr. Shashi Tharoor speaks for himself and the Indian National Congress outrightly dissociates itself from his most recent statement.
That he continues to do so as a Congress MP and CWC member reflects the essential democratic and liberal spirit unique to INC.
— Pawan Khera 🇮🇳 (@Pawankhera) November 9, 2025
ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಪ್ರತಿಕ್ರಿಯಿಸಿ, “ಯಾವಾಗಲೂ ಹಾಗೆ, ಡಾ. ಶಶಿ ತರೂರ್ ತಮ್ಮ ಪರವಾಗಿ ಮಾತನಾಡುತ್ತಾರೆ. ಅವರ ಇತ್ತೀಚಿನ ಹೇಳಿಕೆಯಿಂದ ಕಾಂಗ್ರೆಸ್ ಸಂಪೂರ್ಣ ಅಂತರ ಕಾಯ್ದುಕೊಂಡಿದೆ. ಕಾಂಗ್ರೆಸ್ ಸಂಸದರಾಗಿ ಮತ್ತು ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದುಕೊಂಡೇ ತರೂರ್ ಇಂತಹ ಹೇಳಿಕೆಗಳನ್ನು ನೀಡುತ್ತಲೇ ಇರುವುದು ಪಕ್ಷದಲ್ಲಿರುವ ‘ಪ್ರಜಾಪ್ರಭುತ್ವ ಮತ್ತು ಉದಾರವಾದಿ ಮನೋಭಾವ’ ವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
Like always, Dr. Shashi Tharoor speaks for himself and the Indian National Congress outrightly dissociates itself from his most recent statement.
That he continues to do so as a Congress MP and CWC member reflects the essential democratic and liberal spirit unique to INC.
— Pawan Khera 🇮🇳 (@Pawankhera) November 9, 2025
ಈ ವರ್ಷದ ಆರಂಭದಲ್ಲಿ, ಅಂದರೆ ಏಪ್ರಿಲ್ ತಿಂಗಳಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ಮಾಡಿದ ನಂತರ, ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ನಿಲುವನ್ನು ತರೂರ್ ಕೊಂಡಾಡಿದ್ದರು. ಅವರ ಪಕ್ಷ ಕಾಂಗ್ರೆಸ್ ನಿಲುವಿಗಿಂತ ತರೂರ್ ನಿಲುವು ವ್ಯತಿರಿಕ್ತವಾಗಿತ್ತು. ಆಗಲೂ ಕಾಂಗ್ರೆಸ್ ತರೂರ್ ಹೇಳಿಕೆಗಳಿಂದ ಅಂತರ ಕಾಯ್ದುಕೊಂಡಿತ್ತು.
ಆರ್‌ಎಸ್‌ಎಸ್ ನೋಂದಣಿ ಮಾಡಿಕೊಂಡಿಲ್ಲ ಏಕೆ? ಒತ್ತಡಕ್ಕೆ ಮಣಿದು ಉತ್ತರ ಕೊಟ್ಟ ಭಾಗವತ್


