ಕೊರೊನಾ ನಿರ್ವಹಣೆಯಲ್ಲಿ ವಿಫಲವಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಕರ್ನಾಟಕ ಕಾಂಗ್ರೆಸ್ “ತಗಡು ಯೋಗಿ” ಎಂದು ಮಂಗಳವಾರ ಕರೆದಿದೆ. “ಆದಿತ್ಯನಾಥ್ ಅವರು ಕರ್ನಾಟಕದ ಬಿಜೆಪಿ ನಾಯಕರಿಗೆ ಮಾಡೆಲ್ ಆಗಿರುವುದರಲ್ಲಿ ಯಾವ ಅತಿಶಯೋಕ್ತಿ ಇಲ್ಲ, ಏಕೆಂದರೆ ಇವರೂ ಅಂತಹ ಅಯೋಗ್ಯರೆ” ಎಂದು ರಾಜ್ಯದ ವಿರೋಧ ಪಕ್ಷವು ಬಿಜೆಪಿ ವಿರುದ್ದ ತೀವ್ರವಾಗಿ ವಾಗ್ದಾಳಿ ನಡೆಸಿದೆ.
ಕೊರೊನಾ ನಿರ್ವಹಣೆಯಲ್ಲಿ ವಿಫಲವಾಗಿರುವ ಆದಿತ್ಯನಾಥ್‌ಗೆ ಹೈಕೋರ್ಟ್ ಛೀಮಾರಿ ಹಾಕಿರುವ ವರದಿಯ ಚಿತ್ರವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್, “ಉತ್ತರ ಪ್ರದೇಶ ಬಿಜೆಪಿ ಸರ್ಕಾರದ ಕೊರೊನಾ ನಿರ್ವಹಣೆಯ ವೈಫಲ್ಯಕ್ಕೆ ಹೈಕೋರ್ಟ್ ಛಿಮಾರಿ ಹಾಕಿದೆ. ಸುಡುಗಾಡಿನಲ್ಲೂ ಜಾಗವಿಲ್ಲದ ಸ್ಥಿತಿ ನಿರ್ಮಿಸಿ, ತನ್ನ ವೈಫಲ್ಯ ಮುಚ್ಚಿಕೊಳ್ಳಲು ಸ್ಮಶಾನಕ್ಕೆ ತಗಡು ಮುಚ್ಚಿದ, ತಗಡು ಯೋಗಿ ಇಲ್ಲಿನ ಬಿಜೆಪಿ ನಾಯಕರಿಗೆ ‘ಮಾಡೆಲ್’ ಆಗಿರುವುದರಲ್ಲಿ ಯಾವ ಅತಿಶಯೋಕ್ತಿ ಇಲ್ಲ. ಏಕೆಂದರೆ ಇವರೂ ಅಂತಹ ಅಯೋಗ್ಯರೆ” ಎಂದು ಕಾಂಗ್ರೆಸ್ ಕಿಡಿ ಕಾರಿದೆ.
ಯುಪಿಯ ಬಿಜೆಪಿ ಸರ್ಕಾರದ ಕರೋನಾ ನಿರ್ವಹಣೆಯ ವೈಫಲ್ಯಕ್ಕೆ ಹೈಕೋರ್ಟ್ ಛಿಮಾರಿ ಹಾಕಿದೆ.
ಸುಡುಗಾಡಲ್ಲೂ ಜಗವಿಲ್ಲದ ಸ್ಥಿತಿ ನಿರ್ಮಿಸಿ, ತನ್ನ ವೈಫಲ್ಯ ಮುಚ್ಚಿಕೊಳ್ಳಲು ಸ್ಮಶಾನಕ್ಕೆ ತಗಡು ಮುಚ್ಚಿದ ತಗಡು ಯೋಗಿ ಇಲ್ಲಿನ @BJP4Karnataka ನಾಯಕರಿಗೆ "ಮಾಡೆಲ್" ಆಗಿರುವುದರಲ್ಲಿ ಯಾವ ಅತಿಶಯೋಕ್ತಿ ಇಲ್ಲ ಏಕೆಂದರೆ ಇವರೂ ಅಂತಹ ಅಯೋಗ್ಯರೆ! pic.twitter.com/BquVUIdy4e
— Karnataka Congress (@INCKarnataka) April 20, 2021
ಇದನ್ನೂ ಓದಿ: ‘ಜೈಶ್ರೀರಾಮ್’ ಹೇಳದೇ ಇದ್ದುದಕ್ಕೆ 10 ವರ್ಷದ ಬಾಲಕನನ್ನು ತೀವ್ರವಾಗಿ ಥಳಿಸಿದ ಬಿಜೆಪಿ ಕಾರ್ಯಕರ್ತ!
ಜೊತೆಗೆ ಮಂಗಳವಾರ ರಾಜ್ಯ ಹಾಗೂ ದೇಶದ ಕೊರೊನಾ ಪರಿಸ್ಥಿತಿ ಕುರಿತು ಹಲವು ಹೇಳಿಕೆಗಳನ್ನು ಕಾಂಗ್ರೆಸ್ ನೀಡಿದೆ. ಅದು ಬೆಳಿಗ್ಗೆ ಮಾಡಿದ ಟ್ವೀಟ್‌ನಲ್ಲಿ, “ಆಕ್ಸಿಜನ್ ಬೇಡಿಕೆ ಹೆಚ್ಚಿದೆ, ಪೂರೈಕೆ ಕಡಿಮೆ ಇದೆ, ಇದ್ದಿದ್ದೂ ಕಾಳ ಸಂತೆಯ ಪಾಲಾಗುತ್ತಿದೆ. ಹೀಗಿರುವಾಗ ರಾಜ್ಯ ಬಿಜೆಪಿ ಸರ್ಕಾರ ಕಾಳ ಸಂತೆಯನ್ನು ನಿಯಂತ್ರಿಸಿ, ಉತ್ಪಾದನೆ ಹೆಚ್ಚಿಸಿ ಹಾಗೂ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುವುದನ್ನ ಬಿಟ್ಟು ವಾರ್ ರೂಮ್ ಎನ್ನುವ ಕಣ್ಣೊರೆಸುವ ಕೆಲಸದಿಂದ ನಯಾಪೈಸೆ ಉಪಯೋಗವಾಗುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಆಕ್ಸಿಜನ್ ಬೇಡಿಕೆ ಹೆಚ್ಚಿದೆ, ಪೂರೈಕೆ ಕಡಿಮೆ ಇದೆ, ಇದ್ದಿದ್ದೂ ಕಾಳ ಸಂತೆಯ ಪಾಲಾಗುತ್ತಿದೆ.
ಹೀಗಿರುವಾಗ @BJP4Karnataka ಸರ್ಕಾರ ಕಾಳ ಸಂತೆಯನ್ನು ನಿಯಂತ್ರಿಸಿ, ಉತ್ಪಾದನೆ ಹೆಚ್ಚಿಸಿ ಹಾಗೂ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುವುದನ್ನ ಬಿಟ್ಟು ವಾರ್ ರೂಮ್ ಎನ್ನುವ ಕಣ್ಣೊರೆಸುವ ಕೆಲಸದಿಂದ ನಯಾಪೈಸೆ ಉಪಯೋಗವಾಗುತ್ತಿಲ್ಲ. pic.twitter.com/me3o2inqBw— Karnataka Congress (@INCKarnataka) April 20, 2021
ಕೊರೊನಾ ಹಿನ್ನಲೆಯಲ್ಲಿ ರಾಜ್ಯಪಾಲರು ಸರ್ವಪಕ್ಷ ಸಭೆ ಕರೆದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, “ರಾಜ್ಯಪಾಲರು ಸರ್ವಪಕ್ಷ ಸಭೆ ಕರೆದಿರುವುದು ಏನು ಸೂಚಿಸುತ್ತದೆ? ರಾಜ್ಯದಲ್ಲಿ ಚುನಾಯಿತ ಸರ್ಕಾರವಿಲ್ಲವೇ? ಸರ್ಕಾರದ ಅಸಮರ್ಥ್ಯವೇ ಅಥವಾ ‘ಯಡಿಯೂರಪ್ಪ ಮುಕ್ತ ಬಿಜೆಪಿ’ ಅಭಿಯಾನದ ಬಾಗವೇ? ಸರ್ಕಾರಕ್ಕೆ ವಿಪಕ್ಷಗಳನ್ನು ಎದುರಿಸುವ ಮುಖವಿಲ್ಲವೇ? ಅಥವಾ ಪರಿಸ್ಥಿತಿ ಎದುರಿಸಲಾಗದೆ ಕೈ ಚೆಲ್ಲಿದೆಯೇ? ಇಂತಹ ಮುಖಹೇಡಿ ಸರ್ಕಾರದಿಂದ ಜನರ ಜೀವ ಉಳಿಸುವುದು ಸಾಧ್ಯವಿಲ್ಲ” ಎಂದು ಹೇಳಿದೆ.
“ಯಾವ ಕೊರತೆಯೂ ಇಲ್ಲ ಎಲ್ಲವೂ ಸುಳ್ಳು ವದಂತಿಗಳು ಎಂದು ವಾಸ್ತವನ್ನು ಮುಚ್ಚಿಡಲು, ಸತ್ಯವನ್ನೇ ಸುಳ್ಳು ಮಾಡುತ್ತಿದ್ದ ಬಿಜೆಪಿ ಜನರ ಮುಂದೆ ಬೆತ್ತಲಾಗಿದೆ. ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲವೇ ಇಲ್ಲ, ವಿಪಕ್ಷಗಳ ಸುಳ್ಳು ಹಬ್ಬಿಸುತ್ತಿವೆ ಎಂದಿದ್ದ ರಾಜ್ಯ ಬಿಜೆಪಿಗರೇ ಉತ್ತರಿಸಿ, ಕೊರತೆ ಇಲ್ಲ ಎಂದ ಮೇಲೆ ಸಿಎಂ ಕೇಂದ್ರಕ್ಕೆ ಪತ್ರ ಬರೆದಿದ್ದೇಕೆ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇದನ್ನೂ ಓದಿ: ಯುಪಿಯ 5 ನಗರಗಳಲ್ಲಿ ಲಾಕ್‌ಡೌನ್ ಇಲ್ಲ: ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ ಸುಪ್ರೀಂ!


