“ಕಾಂಗ್ರೆಸ್ ಎಂತಹ ಸ್ಥಿತಿಯಲ್ಲಿದೆ ಎಂದರೆ, ಲೋಕಸಭೆ ಮತ್ತು ರಾಜ್ಯಸಭೆಯನ್ನು ಒಟ್ಟುಗೂಡಿಸಿದರೆ ಅವರಿಗೆ 100 ಸಂಸದರು ಕೂಡಾ ಇಲ್ಲ” ಎಂದು ಪ್ರಧಾನಿ ಮೋದಿ ಬಿಹಾರ ವಿಧಾನಸಭಾ ಚುನಾವಣೆಯ ಭಾಗವಾಗಿ ಫಾರ್‌ಬಿಸ್‌ಗಂಜ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಲೇವಡಿ ಮಾಡಿದ್ದಾರೆ.
ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಪ್ರಾರಂಭವಾಗಿದ್ದು, ಅಲ್ಲಿ ಮೂರು ಹಂತದ ಚುನಾವಣೆ ನಡೆಯಲಿದೆ, ಇಂದು ಎರಡನೇ ಹಂತದ ಚುನಾವಣೆ ನಡೆಯುತ್ತಿದೆ.
ಇದನ್ನೂ ಓದಿ: ಬಿಹಾರ ಚುನಾವಣೆ: CPI(ML) ಅಭ್ಯರ್ಥಿಯನ್ನು ಬಾಂಬ್ ದಾಳಿ ಆರೋಪಿಯೆಂದು ಸುಳ್ಳು ಹರಡಿದ ಬಿಜೆಪಿ!
“ಕಾಂಗ್ರೆಸ್ ಎಂದಿಗೂ ಮಾತುಕತೆ ನಡೆಸಲಿಲ್ಲ, ಅದಕ್ಕಾಗಿಯೇ ಅದರ ಒಟ್ಟು ಶಕ್ತಿ ಸಂಸತ್ತಿನಲ್ಲಿ 100 ಕ್ಕಿಂತ ಕಡಿಮೆಯಾಗಿದೆ” ಎಂದು ಪ್ರಧಾನಿ ಟೀಕಿಸಿದರು.
ಸೋಮವಾರ ಬಿಜೆಪಿಯ ಒಂಬತ್ತು ಅಭ್ಯರ್ಥಿಗಳು ಸದನಕ್ಕೆ ಅವಿರೋಧವಾಗಿ ಆಯ್ಕೆಯಾಗುವುದರ ಮೂಲಕ, ಬಿಜೆಪಿ ನೇತೃತ್ವದ ’ಎನ್‌ಡಿಎ’ ಒಕ್ಕೂಟವು ತನ್ನ ಸದಸ್ಯ ಬಲವನ್ನು ರಾಜ್ಯಸಭೆಯಲ್ಲಿ ಇದೇ ಮೊದಲ ಬಾರಿಗೆ 100 ದಾಟಿದೆ. ಪ್ರಸ್ತುತ ಆಡಳಿತಾರೂಡ ಎನ್‌ಡಿಎ ಒಕ್ಕೂಟ ರಾಜ್ಯಸಭೆಯಲ್ಲಿ ಒಟ್ಟು 104 ನೇ ಸ್ಥಾನವನ್ನು ಹೊಂದಿದೆ.
242 ಸದಸ್ಯ ಬಲವಿರುವ ರಾಜ್ಯಸಭೆಯಲ್ಲಿ ದೀರ್ಘಕಾಲದವರೆಗೆ ಪ್ರಾಬಲ್ಯ ಹೊಂದಿದ್ದ ಕಾಂಗ್ರೆಸ್ 38 ಸ್ಥಾನಗಳನ್ನು ಹೊಂದಿದೆ. ಲೋಕಸಭೆಯ ತನ್ನ ಸಂಸದರನ್ನು ಸೇರಿಸಿದರೆ ಕಾಂಗ್ರೆಸ್ ಒಟ್ಟು 89 ಸದಸ್ಯರನ್ನು ಹೊಂದಿದೆ.
ಕಾಂಗ್ರೆಸ್ 14 ಪ್ರಮುಖ ರಾಜ್ಯಗಳಿಂದ ಶೂನ್ಯ ಸಂಸದರನ್ನು ಹೊಂದಿದೆ. ಅಷ್ಟೇ ಅಲ್ಲದೆ ಅತೀ ಹೆಚ್ಚು ಲೋಕಸಭಾ ಕ್ಷೇತ್ರಗಳಿರುವ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗೆದ್ದಿರುವ ಒಂದು ಸ್ಥಾನವನ್ನಷ್ಟೇ ಕಾಂಗ್ರೆಸ್‌ಗಿದೆ.
ಇದನ್ನೂ ಓದಿ: ಬಿಹಾರ ಚುನಾವಣೆ: #BiharRejectsModi ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್!


