Homeಮುಖಪುಟಮೇಘಾಲಯದಲ್ಲಿ ಕಾಂಗ್ರೆಸ್‌ಗೆ ಮತ್ತೇ ಸಂಕಷ್ಟ; GHADC ನ ಎಲ್ಲಾ 11 ಚುನಾಯಿತ ಪ್ರತಿನಿಧಿಗಳು ಟಿಎಂಸಿಗೆ!

ಮೇಘಾಲಯದಲ್ಲಿ ಕಾಂಗ್ರೆಸ್‌ಗೆ ಮತ್ತೇ ಸಂಕಷ್ಟ; GHADC ನ ಎಲ್ಲಾ 11 ಚುನಾಯಿತ ಪ್ರತಿನಿಧಿಗಳು ಟಿಎಂಸಿಗೆ!

- Advertisement -
- Advertisement -

ಮೇಘಾಲಯದಲ್ಲಿ ಕಾಂಗ್ರೆಸ್‌ ಶಾಸಕರು, ಇತರ ಚುನಾಯಿತ ಸದಸ್ಯರು ಮತ್ತು ಕಾರ್ಯಕರ್ತರ ದಂಡೇ ತೃಣಮೂಲ ಕಾಂಗ್ರೆಸ್‌(TMC)ಗೆ ಪಕ್ಷಾಂತರ ಆಗುತ್ತಿರುವುದು ಮುಂದುವರೆದಿದೆ. ಗರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಕೌನ್ಸಿಲ್ (GHADC) ಯ ಎಲ್ಲಾ 11 ಚುನಾಯಿತ ಸದಸ್ಯರು ಗುರುವಾರ ಸಂಜೆ ಪಕ್ಷವನ್ನು ತೊರೆದು TMC ಸೇರಿದ್ದಾರೆ. ಈ ಮೂಲಕ ಪಕ್ಷದ ಭದ್ರಕೋಟೆ ಎಂದೇ ಬಣ್ಣಿಸಲಾಗುವ ಗರೋ ಹಿಲ್ಸ್‌ನಲ್ಲಿ ಕಾಂಗ್ರೆಸ್‌‌ ಭಾರಿ ಹಿನ್ನಡೆ ಅನುಭವಿಸಿದೆ.

ಮೇಘಾಲಯದ 17 ಕಾಂಗ್ರೆಸ್ ಶಾಸಕರಲ್ಲಿ 12 ಮಂದಿ ಶಾಸಕರು ಇತ್ತೀಚೆಗಷ್ಟೇ ಟಿಎಂಸಿ ಸೇರಿದ್ದರು. ಈ ಮೂಲಕ ಟಿಎಂಸಿಯು ನಾಟಕೀಯವಾಗಿ ರಾಜ್ಯದ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.

ಇದನ್ನೂ ಓದಿ:ಕಾಂಗ್ರೆಸ್‌ಗೆ ಆಘಾತ: ಮೇಘಾಲಯದ 12 ಶಾಸಕರು ಟಿಎಂಸಿಗೆ ಸೇರ್ಪಡೆ

ಈ ನಡುವೆ 400 ಯೂತ್ ಕಾಂಗ್ರೆಸ್ ಸದಸ್ಯರು ಮತ್ತು ಪಕ್ಷದ ವಿದ್ಯಾರ್ಥಿ ಘಟಕ ಎನ್‌ಎಸ್‌ಯುವಿನ 600 ಮಂದಿ ಕಾರ್ಯಕರ್ತರು ಸಂಘಟನೆ ತೊರೆದಿದ್ದಾರೆ. ಅವರೆಲ್ಲರೂ ಟಿಎಂಸಿಗೆ ಸೇರುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

GHADC ಅನ್ನು 1952 ರಲ್ಲಿ ಮೇಘಾಲಯವು ಅಸ್ಸಾಂನ ಭಾಗವಾಗಿದ್ದಾಗ ರಚಿಸಲಾಗಿತ್ತು. GHADC ನಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಚುನಾಯಿತ ಪ್ರತಿನಿಧಿಯನ್ನು ಹೊಂದಿಲ್ಲದಿರುವುದು ಇದೇ ಮೊದಲ ಬಾರಿಯಾಗಿದೆ. ಕಳೆದ ಏಪ್ರಿಲ್‌ನಲ್ಲಿ ನಡೆದ GHADC ಚುನಾವಣೆಯಲ್ಲಿ 30 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಇದರ ನಂತರ ಒಬ್ಬ ಚುನಾಯಿತ ಸದಸ್ಯ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಪ್ರಾದೇಶಿಕ ಯುನೈಟೆಡ್ ಡೆಮಾಕ್ರಟಿಕ್ ಪಕ್ಷಕ್ಕೆ ಪಕ್ಷಾಂತರಗೊಂಡಿದ್ದರು.

ಗುರುವಾರ ನಡೆದ ಕಾರ್ಯಕ್ರಮದಲ್ಲಿ ಟಿಎಂಸಿ 11 ಕೌನ್ಸಿಲ್ ಸದಸ್ಯರನ್ನು ಪಕ್ಷಕ್ಕೆ ಸ್ವಾಗತಿಸಿದೆ. ಪಕ್ಷದ ಹಲವಾರು ಶಾಸಕರು ಅದರಲ್ಲಿ ಉಪಸ್ಥಿತರಿದ್ದರು. ಎರಡು ದಿನಗಳ ಹಿಂದೆಯಷ್ಟೇ, ಟಿಎಂಸಿ ರಾಜ್ಯ ನಾಯಕ, ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಅವರು ಉಳಿದ ಐದು ಕಾಂಗ್ರೆಸ್ ಶಾಸಕರಿಗೂ ಪಕ್ಷಕ್ಕೆ ಸೇರುವಂತೆ ಕೇಳಿಕೊಂಡಿದ್ದರು.

ಇದನ್ನೂ ಓದಿ:ಆರ್‌ಎಸ್‌ಎಸ್‌, ಬಿಜೆಪಿಯಲ್ಲಿ ಭಾರೀ ಭ್ರಷ್ಟಾಚಾರ: ಮೇಘಾಲಯ ರಾಜ್ಯಪಾಲರ ಗಂಭೀರ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...