ಮೇಘಾಲಯದಲ್ಲಿ ಕಾಂಗ್ರೆಸ್‌ನ ನಾಲ್ವರು ಶಾಸಕರಲ್ಲಿ ಮೂವರು ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್‌ಪಿಪಿ) ಗೆ ಸೇರ್ಪಡೆಗೊಂಡಿದ್ದು, ರಾಜ್ಯ ವಿಧಾನಸಭೆಯಲ್ಲಿ ಆಡಳಿತ ಪಕ್ಷ ಸರಳ ಬಹುಮತ ಪಡೆದುಕೊಂಡಿದೆ.
ಸೋಮವಾರ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ಸಮ್ಮುಖದಲ್ಲಿ ಮೂವರು ಶಾಸಕರಾದ ಸೆಲೆಸ್ಟೀನ್ ಲಿಂಗ್ಡೋಹ್, ಚಾರ್ಲ್ಸ್ ಮಾರ್ಂಗಾರ್ ಮತ್ತು ಗೇಬ್ರಿಯಲ್ ವಾಹ್ಲಾಂಗ್ – ಅಧಿಕೃತವಾಗಿ ಎನ್‌ಪಿಪಿಗೆ ಸೇರ್ಪಡೆಗೊಂಡಿದ್ದಾರೆ.
ಈ ಹಿಂದೆ, ಶಾಸಕರು ಪಕ್ಷ ಬದಲಾಯಿಸುತ್ತಾರೆ ಎಂದು ಸುಳಿವು ಸಿಕ್ಕ ಹಿನ್ನೆಲೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ವಿನ್ಸೆಂಟ್ ಪಾಲಾ ಅವರು ಮೂವರನ್ನು ಸಭೆಗೆ ಕರೆದಿದ್ದರು. ಸಭೆಗೆ ಗೈರಾದ ಇಬ್ಬರು ಶಾಸಕರಾದ ನಾಂಗ್‌ಸ್ಟೋಯಿನ್ ಶಾಸಕ ವಹ್ಲಾಂಗ್ ಮತ್ತು ಮಾವಾಟಿ ಶಾಸಕ ಮರ್ಂಗಾರ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ಮೇಘಾಲಯ ಸ್ಪೀಕರ್ ಥಾಮಸ್ ಸಂಗ್ಮಾ ಅವರು ಮೂವರು ಶಾಸಕರ ಪಕ್ಷರು ಎನ್‌ಪಿಪಿಗೆ ಸೇರಿದ್ದನ್ನು ಪಕ್ಷಾಂತರಕ್ಕೆ ವಿರುದ್ಧವಾಗಿ ‘ವಿಲೀನ’ ಎಂದು ಪರಿಗಣಿಸಿದ್ದರೆ. ಏಕೆಂದರೆ, ಕಾಂಗ್ರೆಸ್‌ನ ಮೂರನೇ ಎರಡರಷ್ಟು ಶಾಸಕರು ಎನ್‌ಪಿಪಿಗೆ ಹಾರಿದ್ದಾರೆ.
“ಕಾಂಗ್ರೆಸ್ ಶಾಸಕರನ್ನು ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ನಮ್ಮ ಸರ್ಕಾರದ ಮೇಲಿನ ನಂಬಿಕೆಯ ನಿಜವಾದ ಪ್ರದರ್ಶನವಾಗಿದೆ. ಎನ್‌ಪಿಪಿಗೆ ಕಾಂಗ್ರೆಸ್ ಶಾಸಕರ ವಿಲೀನವು 60 ಸದಸ್ಯರ ಮೇಘಾಲಯ ವಿಧಾನಸಭೆಯಲ್ಲಿ ನಮ್ಮ ಬಲವನ್ನು 31ಕ್ಕೆ ಹೆಚ್ಚಿಸಿದೆ” ಎಂದು ಮುಖ್ಯಮಂತ್ರಿ ಸಂಗ್ಮಾ ಅವರು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಒಟ್ಟು 60 ಸದಸ್ಯ ಬಲದ ಮೇಘಾಲಯ ವಿಧಾನಸಭೆಯಲ್ಲಿ ಎನ್‌ಪಿಪಿ ಪಕ್ಷ 26 ಸ್ಥಾನಗಳನ್ನು ಹೊಂದಿತ್ತು. ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿಯ 11, ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್‌ನ ಇಬ್ಬರು, ಬಿಜೆಪಿಯ ಇಬ್ಬರು ಮತ್ತು ಹೆಚ್‌ಎಸ್‌ಪಿಡಿಪಿಯ ಇಬ್ಬರು ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಿತ್ತು. ಇದೀಗ ಕಾಂಗ್ರೆಸ್ ಪಕ್ಷದ ಶಾಸಕ ಸೇರ್ಪಡೆಯೊಂದಿಗೆ ವಿಧಾನಸಭೆಯಲ್ಲಿ ಸರಳ ಬಹುಮತ ಸಾಧಿಸಿದೆ.
ಇದನ್ನೂ ಓದಿ : ಮಹಾರಾಷ್ಟ್ರ | ನರ್ಸರಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಭುಗಿಲೆದ್ದ ಪ್ರತಿಭಟನೆ


