ಮಹರಾಷ್ಟ್ರದ ಕಾಂಗ್ರೆಸ್ ಶಾಸಕ ನಿತೀಶ್ ರಾಣೆ ಇಂದು ಮುಂಬೈ ಸಮೀಪದ ಮುಂಬೈ ಗೋವಾ ಹೆದ್ದಾರಿ ಬಳಿ ತನ್ನ ಬೆಂಬಲಿಗರೊಡನೆ ಇಂಜಿನಿಯರ್ ಮೆಲೆ ಕೊಳಚೆ ನೀರು ಸುರಿದು, ಕಂಬಕ್ಕೆ ಕಟ್ಟಿ ಅವಮಾನಿಸಿದ ಘಟನೆ ಸಂಭವಿಸಿದೆ. ಮಾಧ್ಯಮಗಳೆದುರೆ ಈ ಘಟನೆ ಜರುಗಿದ್ದು ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಲ್ಲದೇ ಆ ಕಾಂಗ್ರೆಸ್ ಶಾಸಕನನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.
(ವಿಡಿಯೋ ಕೃಪೆ: ಎಎನ್ಐ)
ವಾರದಹಿಂದೆ ಬಿಜೆಪಿ ಶಾಸಕ ಆಕಾಶ್ ವರ್ಗಿಯ ಎಂಬುವವರು ಬ್ಯಾಟ್‍ನಿಂದ ಅಧಿಕಾರಗಳ ಮೇಲೆ ಹಲ್ಲೆ ನಡೆಸಿದ್ದರು. ಎರಡು ದಿನಗಳ ಹಿಂದೆ ತಾನೇ ತೆಲಂಗಾಣದಲ್ಲಿ ಮಹಿಳಾ ಫಾರೆಸ್ಟ್ ರೇಂಜ್ ಆಫಿಸರ್ ಮೇಲೆ ಶಾಸಕನ ತಮ್ಮ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದನ್ನು. ಆ ಘಟನೆಗಳು ಮಾಸುವ ಮುನ್ನವೇ ಈ ಶಾಸಕನ ದುವರ್ತನೆ ನಡೆದಿದೆ.
ಮುಂಬೈ – ಗೋವಾ ಬಳಿಯ ಕನಕವಲ್ಲಿ ಎಂಬಲ್ಲಿ ರಸ್ತೆ ಮತ್ತು ಸೇತುವೆ ಕಾಮಗರಿ ನಡೆಯುತ್ತಿತ್ತು. ಪರಿಶೀಲನೆಗೆಂದು ಬಂದ ಶಾಸಕ ನಿತೀಶ್ ರಾಣೆ ಕೆಲಸ ಪೂರ್ಣಗೊಂಡಿಲ್ಲದಿರುವುದರಿಂದ ಜನರಿಗೆ ತೊಂದರೆಯಾಗುತ್ತದೆ ಎಂದು ಸಿಡಿಮಿಡಿಗೊಂಡಿದ್ದರು. ಆ ಸಂದರ್ಭದಲ್ಲಿ ಕೋಪದಿಂದ ಉಪ ಇಂಜಿನಿಯರ್ ಪ್ರಕಾಶ್ ಶೆಡ್ಕರ್ ಮೇಲೆ ಕಾಮಗಾರಿ ವಿಳಂಬ ಮಾಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡ ಶಾಸಕ ಅಲ್ಲಿ ತಮ್ಮ ಬೆಂಬಲಿಗರು ತುಂಬಿಟ್ಟಿದ್ದ ಕೊಳಚೆ ನೀರನ್ನು ಸುರಿದಿದ್ದಾರೆ. ನಂತರ ಅವರ ಬೆಂಬಲಿಗರು ಇಂಜಿನಿಯರ್ ಅನ್ನು ಕಂಬಕ್ಕೆ ಕಟ್ಟಿದ್ದರು ಎಂದು ಸಹ ಹೇಳಲಾಗುತ್ತಿದೆ.
ಘಟನೆ ಕುರಿತು 50ಕ್ಕೂ ಹೆಚ್ಚು ಜನರ ಮೇಲೆ ಎಫ್‍ಐಆರ್ ದಾಖಲಾಗಿದ್ದು ಇಬ್ಬರನ್ನು ಬಂಧಿಸಲಾಗಿತ್ತು. ಸ್ವಲ್ಪ ಸಮಯ ತಲೆಮರೆಸಿಕೊಂಡಿದ್ದ ಶಾಸಕ ತೀಶ್ ರಾಣೆ ಈಗ ಶರಣಾಗಿದ್ದಾರೆ. ಇವರು ಈ ಹಿಂದೆಯೂ ಸಹ 2017ರಲ್ಲಿ ಸಭೆಯೊಂದರಲ್ಲಿ ಸ್ಥಿಮಿತತೆ ಕಳೆದುಕೊಂಡು ಹಿರಿಯ ಅಧಿಕಾರಿಯ ಮೆಲೆ ಮೀನು ಎಸೆದಿದ್ದರು.
ಹಿಂದೆ ಕಾಂಗ್ರೆಸ್ ನಾಯಕರಾಗಿದ್ದು ಹಾಲಿ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿರುವ ನಿತೀಶ್ ರಾಣೆಯವರ ತಂದೆ ನಾರಾಯಣ್ ರಾಣೆಯವರು ಘಟನೆಯನ್ನು ಖಂಡಿಸಿದ್ದಾರೆ. “ರಸ್ತೆ ವಿಷಯವಾಗಿ ಪ್ರತಿಭಟನೆ ಮಾಡುತ್ತಿದ್ದದ್ದು ಸರಿ, ಆದರೆ ಆತನ ವರ್ತನೆ ಅನಪೇಕ್ಷಣೀಯ. ಆತ ಮತ್ತು ಆತನ ಬೆಂಬಲಿಗರು ಹಿಂಸೆ ಮಾಡಿರುವು ಸರಿಯಾದುದಲ್ಲ, ಈ ವಿಚಾರವಾಗಿ ಆತನನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ”.
ಈ ಘಟನೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.


