ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆಗಳ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಆರೋಪ ಪ್ರತ್ಯಾರೋಪಗಳು ಮುಂದುವರೆದಿದೆ. ಬಿಜೆಪಿ ವಿರುದ್ದ ಸುಳ್ಳು, ಕೋಮುದ್ವೇಷ ಮತ್ತು ತಪ್ಪುದಾರಿಗೆಳೆಯು ಮಾಹಿತಿ ಹಂಚಿಕೆ ಆರೋಪಿಸಿ ಕಾಂಗ್ರೆಸ್ ಚುನಾವಣಾ ಆಯೋಗದ ಮೊರೆ ಹೋಗಿದೆ.
ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಂದ ಮೀಸಲಾತಿ ಕಿತ್ತುಕೊಂಡು ಅಲ್ಪಸಂಖ್ಯಾತರಿಗೆ (ಮುಸ್ಲಿಮರಿಗೆ) ನೀಡಲಾಗುತ್ತಿದೆ ಎಂದು ಸೂಚಿಸುವ ‘ಕೋಮು ದ್ವೇಷದ’ ಕಾರ್ಟೂನ್ ಹಂಚಿರುವುದು ಸೇರಿದಂತೆ ಬಿಜೆಪಿ ವಿರುದ್ದ ಹಲವು ಆರೋಪಗಳನ್ನು ಮಾಡಿರುವ ಕಾಂಗ್ರೆಸ್, ಸೋಮವಾರ (ನ.11) ಚುನಾವಣಾ ಆಯೋಗಕ್ಕೆ 8 ದೂರುಗಳನ್ನು ನೀಡಿದೆ. ಎಲ್ಲಾ ದೂರುಗಳನ್ನು ಚುನಾವಣಾ ಆಯೋಗ ಸ್ವೀಕರಿಸಿ ಮಾನ್ಯ ಮಾಡಿದೆ ಎಂದು ವರದಿಯಾಗಿದೆ.
“ನಾವು ಚುನಾವಣಾ ಆಯೋಗದ ಮುಂದೆ ಕೆಲವು ಗಂಭೀರ ಕಳವಳಗಳನ್ನು ವ್ಯಕ್ತಪಡಿಸಿದ್ದೇವೆ. ಅವುಗಳ ಬಗ್ಗೆ ಚರ್ಚಿಸಿದ್ದೇವೆ. ಕಾಂಗ್ರೆಸ್ ನೀಡಿರುವ ಎಲ್ಲಾ ಎಂಟು ದೂರುಗಳನ್ನು ಚುನಾವಣಾ ಆಯೋಗವು ಮಾನ್ಯ ಮಾಡಿದೆ” ಎಂದು ದೂರು ನೀಡಿದ ಕಾಂಗ್ರೆಸ್ ನಿಯೋಗದ ನೇತೃತ್ವ ವಹಿಸಿದ್ದ ಸಂಸದ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
ಸೋಮವಾರ ಚುನಾವಣಾ ಆಯೋಗಕ್ಕೆ ಜ್ಞಾಪಕ ಪತ್ರವನ್ನು ಕಳುಹಿಸಿದ್ದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, “ಬಿಜೆಪಿಯ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಜಾಹೀರಾತು ಸ್ಪಷ್ಟವಾಗಿ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ. ಅದರ ವಿರುದ್ದ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಜಾರ್ಖಂಡ್ ಬಿಜೆಪಿಯ ಫೇಸ್‌ಬುಕ್ ಹ್ಯಾಂಡಲ್‌ನಲ್ಲಿ “ಕಾಂಗ್ರೆಸ್ ನೇತೃತ್ವದ ಎಂವಿಎಯ ತುಷ್ಟೀಕರಣದ ಆಟ ಆನ್ ಆಗಿದೆ … ಬುದ್ಧಿವಂತಿಕೆಯಿಂದ ಮತ ಚಲಾಯಿಸಿ, ಮಹಾರಾಷ್ಟ್ರ” ಎಂಬ ಶೀರ್ಷಿಕೆಯಲ್ಲಿ ಪೋಸ್ಟ್ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.

ಪೋಸ್ಟ್‌ನಲ್ಲಿ, “ಒಬ್ಬ ವ್ಯಕ್ತಿಯು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಸದಸ್ಯರನ್ನು ರಿಕ್ಷಾದಿಂದ ಬಲವಂತವಾಗಿ ಹೊರ ಹಾಕುವುದನ್ನು ಮತ್ತು ನಿರ್ದಿಷ್ಟ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯ (ಮುಸ್ಲಿಂ) ಕ್ಕೆ ಸೇರಿದ ವ್ಯಕ್ತಿಗೆ ಸ್ಥಳಾವಕಾಶ ನೀಡುವುದನ್ನು ಕಾರ್ಟೂನ್ ಮೂಲಕ ಚಿತ್ರಿಸಲಾಗಿದೆ” ಎಂದು ಜೈರಾಮ್ ರಮೇಶ್ ತಮ್ಮ ಜ್ಞಾಪಕ ಪತ್ರದಲ್ಲಿ ವಿವರಿಸಿದ್ದಾರೆ.
A complaint has just been lodged with the Election Commission on a most disgusting ad relating to Jharkhand put out by the BJP officially. It not only brazenly and blatantly violates the ECI's Model Code of Conduct, it is also an act of serious criminality.
We hope the ECI will… pic.twitter.com/ayHtcA62xR
— Jairam Ramesh (@Jairam_Ramesh) November 10, 2024
“ಈ ಕಾರ್ಟೂನ್ ಕಾಂಗ್ರೆಸ್ ಬಗ್ಗೆ ಸುಳ್ಳು ಮತ್ತು ಆಧಾರರಹಿತ ಅರೋಪವನ್ನು ಪ್ರಚಾರ ಮಾಡಲು ಬಿಜೆಪಿ ಮಾಡಿದ ನಿರ್ಲಜ್ಜ ಪ್ರಯತ್ನವಾಗಿದೆ” ಎಂದು ಜೈರಾಮ್ ರಮೇಶ್ ಕಿಡಿಕಾರಿದ್ದಾರೆ. ಬಿಜೆಪಿಯ ಎಲ್ಲಾ ಸಾಮಾಜಿಕ ಜಾಲತಾಣ ಹ್ಯಾಂಡಲ್‌ಗಳಿಂದ ತಕ್ಷಣವೇ ಆ ಪೋಸ್ಟ್ ತೆಗೆಸಬೇಕು ಮತ್ತು ಬಿಜೆಪಿ ನಾಯಕರ ವಿರುದ್ದ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಪೋಸ್ಟ್ ಮಾಡಿದ್ದ ಕಾರ್ಟೂನ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಹೋಲುವ ವ್ಯಕ್ತಿಯೊಬ್ಬರು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಸದಸ್ಯರನ್ನು ರಿಕ್ಷಾದಿಂದ ಹೊರಗೆ ತಳ್ಳುವುದು ಮತ್ತು ನಿರ್ದಿಷ್ಟ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯ (ಮುಸ್ಲಿಂ) ಕ್ಕೆ ಸೇರಿದ ವ್ಯಕ್ತಿಗೆ ಸ್ಥಳಾವಕಾಶ ನೀಡುವುದನ್ನು ತೋರಿಸಲಾಗಿತ್ತು.
ಇದನ್ನೂ ಓದಿ : ಮಣಿಪುರ | ಜಿರಿಬಾಮ್ ಜಿಲ್ಲೆಯಲ್ಲಿ ಗುಂಡಿನ ಚಕಮಕಿ : 10 ಕುಕಿ ಬಂಡುಕೋರರ ಹತ್ಯೆ


