ಕಾಂಗ್ರೆಸ್ ಸಂಸದ ರಕಿಬುಲ್ ಹುಸೇನ್ ಮೇಲೆ ಗುರುವಾರ ನಾಗಾಂವ್ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಭಾಗಿಯಾಗಿರುವ 10 ಜನರನ್ನು ಅಸ್ಸಾಂ ಪೊಲೀಸರು ಗುರುತಿಸಿದ್ದಾರೆ ಎಂದು TNIE ಶುಕ್ರವಾರ ವರದಿ ಮಾಡಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸಾಮಾಜಿಕ ಮಾಧ್ಯಮದಲ್ಲಿ ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ.
ಹಲ್ಲೆಗೆ ಕಾರಣರಾದವರನ್ನು ಪೊಲೀಸರು ಗುರುತಿಸಿದ್ದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಪೊಲೀಸರು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತಾರೆ ಎಂದು ಸಿಎಂ ಶರ್ಮಾ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಸಂಸದ ರಕಿಬುಲ್ ಹುಸೇನ್
ಆರೋಪಿಗಳನ್ನು ಜಮ್ತೋಲಾ ನಿವಾಸಿ ಹಾರುನ್, ಫಕೋಲಿ ನಿವಾಸಿ ಹರೇಶ್, ತಮುಲಿತಪ್ ನಿವಾಸಿ ಬಶೀರ್, ಕವೋಯಿಮರಿ ನಿವಾಸಿಗಳಾದ ಕಾಸಿಮ್ ಅಲಿ ಮತ್ತು ರಶೀದುಲ್, ಗುಣಬಾರಿ ನಿವಾಸಿ ಅಯೂಬ್, ರೈಲು ನಿಲ್ದಾಣ ಬಳಿಯ ಲುಟ್ಕಿಯೋರ್, ರೌಮರಿ ನಿವಾಸಿ ಖಲೀಕ್, ಗೋರೆಮತಿಖೋವಾ ನಿವಾಸಿಗಳಾದ ಮೊಜಿಬ್ ಮತ್ತು ಕೋಚ್‌ಗಾಂವ್ ನಿವಾಸಿ ಜಹಾಂಗೀರ್ ಎಂದು ಗುರುತಿಸಲಾಗಿದೆ.
ರಖೀಬುಲ್ ಹುಸೇನ್ ಅವರು ಶುಕ್ರವಾರ ಎಫ್‌ಐಆರ್ ದಾಖಲಿಸಿದ್ದು, ದಾಳಿಗೆ ಸಂಬಂಧಿಸಿದಂತೆ 22 ಜನರನ್ನು ಹೆಸರಿಸಿದ್ದಾರೆ. ಪಾರ್ಟಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ರುಪೋಹಿಹಾತ್‌ನಲ್ಲಿ ಈ ಘಟನೆ ಸಂಭವಿಸಿತ್ತು.
ಘಟನೆಯ ವಿಡಿಯೊ ವೈರಲ್ ಆಗಿದ್ದು, ಅದರಲ್ಲಿ ಒಬ್ಬ ವ್ಯಕ್ತಿ ಬ್ಯಾಟ್ ತರಹದ ವಸ್ತುವಿನಿಂದ ಅವರನ್ನು ಹೊಡೆದು ರಸ್ತೆಗೆ ಬೀಳಿಸಿರುವುದು ಕಂಡುಬಂದಿದೆ. ಅವರ ಭದ್ರತಾ ಅಧಿಕಾರಿಗಳು ಅವರನ್ನು ರಕ್ಷಿಸಲು ಪ್ರಯತ್ನಿಸಿದರಾದರೂ, ದಾಳಿಕೋರರು ಅವರ ಮೇಲೆ ಬಲಪ್ರಯೋಗ ಮಾಡಿ ಹಲ್ಲೆ ನಡೆಸಿದ್ದಾರೆ.
2001 ರಿಂದ ಐದು ಬಾರಿ ಸಮಗುರಿ ವಿಧಾನಸಭಾ ಸ್ಥಾನವನ್ನು ಗೆದ್ದಿರುವ ರಕೀಬುಲ್ ಹುಸೇನ್, ಕಳೆದ ವರ್ಷ ಧುಬ್ರಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಅವರಿಂದ ತೆರವುಗೊಂಡಿದ್ದ ಸಮಗುರಿ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಅವರ ಮಗ ಸ್ಪರ್ಧಿಸಿದ್ದರಾದರೂ, ಅಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರು.
ಇಲ್ಲಿ ಕ್ಲಿಕ್ ಮಾಡಿ …
ವಾಟ್ಸಾಪ್ ಗುಂಪಲ್ಲಿರುವುದು ಅಪರಾಧವಲ್ಲ: ದೆಹಲಿ ಹೈಕೋರ್ಟ್‌ಗೆ ಉಮರ್ ಖಾಲಿದ್

