ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಅವರಿಗೆ ನೀಡಲಾಗಿದ್ದ ಆಸನದಲ್ಲಿ ಭದ್ರತಾ ಸಿಬ್ಬಂದಿಯು ನೋಟುಗಳ ಕಂತೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ರಾಜ್ಯಸಭಾ ಸ್ಪೀಕರ್ ಜಗದೀಪ್ ಧಂಖರ್ ಶುಕ್ರವಾರ ಹೇಳಿದ್ದಾರೆ. ಸದನದ ಗುರುವಾರ ಅಧಿವೇಶನದ ನಂತರ ಸಿಂಘ್ವಿ ಅವರಿಗೆ ಹಂಚಿಕೆಯಾಗಿರುವ ಸೀಟ್ ನಂ.222 ರಿಂದ ಈ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಸಂಸದ ಸಿಂಘ್ವಿಗೆ
ಸ್ಪೀಕರ್ ಅವರ ಈ ಹೇಳಿಕೆ ನಂತರ ಪ್ರತಿಪಕ್ಷಗಳು ಕೋಲಾಹಲ ಮಾಡಿದ್ದು, ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ ತನಿಖೆ ಪೂರ್ಣಗೊಳ್ಳದೆ ಸದಸ್ಯರನ್ನು ಹೆಸರಿಸಬಾರದು ಎಂದು ಹೇಳಿದ್ದಾರೆ. ಕಾಂಗ್ರೆಸ್ ಸಂಸದ ಸಿಂಘ್ವಿಗೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಗುರುವಾರ ಸದನವನ್ನು ಮುಂದೂಡಿದ ನಂತರ, ತೆಲಂಗಾಣ ರಾಜ್ಯದಿಂದ ಚುನಾಯಿತರಾಗಿರುವ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಪ್ರಸ್ತುತ ನೀಡಲಾದ ಸೀಟ್ ಸಂಖ್ಯೆ 222 ರಿಂದ ಭದ್ರತಾ ಅಧಿಕಾರಿಗಳು ನೋಟುಗಳ ಕಂತೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಎಂದಿನಿಂತೆ ತನಿಖೆಗೆ ಆದೇಶಿಸಲಾಗಿದೆ” ಎಂದು ಧಂಖರ್ ಹೇಳಿದ್ದಾರೆ.
Ruckus erupted in Parliament after Rajya Sabha Chairman Jagdeep Dhankar said that security officials recovered 'bundles of currency notes' from the seat allotted to MP Abhishek Manu Singhvi.
📹 Sansad TV. pic.twitter.com/ALVwKONE7L
— The New Indian Express (@NewIndianXpress) December 6, 2024
ಹಣದ ಕಟ್ಟು 500 ರೂ.ಗಳ ನೋಟುಗಳಾಗಿದ್ದು, 100 ನೋಟುಗಳನ್ನು ಹೊಂದಿರುವಂತೆ ತೋರುತ್ತಿದೆ ಎಂದು ಧಂಖರ್ ಹೇಳಿದ್ದಾರೆ. ಕರೆನ್ಸಿ ನೋಟುಗಳು ಅಸಲಿಯೊ ಅಥವಾ ನಕಲಿಯೋ ಎಂಬುದು ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದ್ದಾರೆ. “ಇದು ನನ್ನ ಕರ್ತವ್ಯವಾಗಿದ್ದು, ಅದನ್ನು ಸದನಕ್ಕೆ ತಿಳಿಸಲು ನಾನು ಬದ್ಧನಾಗಿದ್ದೇನೆ. ಇದು ಸಾಮಾನ್ಯ ವಿಧ್ವಂಸಕ-ವಿರೋಧಿ ಪರಿಶೀಲನೆಯಾಗಿದೆ,” ಅವರು ಹೇಳಿದ್ದಾರೆ.
ಈ ಕರೆನ್ಸಿ ನೋಟುಗಳು ತಮ್ಮದು ಎಂದು ಯಾರಾದರೂ ಕ್ಲೈಮ್ ಮಾಡುತ್ತಾರೆ ಎಂದು ನಾನು ನಿರೀಕ್ಷಿಸುತ್ತಿದ್ದೇನೆ, ಆದರೆ ಯಾರೂ ಅದನ್ನು ಇಲ್ಲಿಯವರೆಗೆ ಕ್ಲೈಮ್ ಮಾಡಿಲ್ಲ ಎಂದು ಧಂಖರ್ ಹೇಳಿದ್ದಾರೆ. “ಜನರು ಅದನ್ನು ಮರೆತುಬಿಡುವ ಆರ್ಥಿಕತೆಯ ಸ್ಥಿತಿಯನ್ನು ಇದು ಪ್ರತಿಬಿಂಬಿಸುತ್ತದೆಯೇ” ಎಂದು ಅವರು ಹೇಳಿದರು. ಈ ಘಟನೆ ಬಗ್ಗೆ ಆಡಳಿತರೂಢ ಮತ್ತು ವಿರೋಧ ಪಕ್ಷಗಳ ಕಡೆಯಿಂದ ವಾಗ್ವಾದಕ್ಕೆ ಸದನ ಸಾಕ್ಷಿಯಾಯಿತು.
“ಹಣ ಎಲ್ಲಿ ಸಿಕ್ಕಿದೆ ಎಂದು ಅವರ ಹೆಸರು ಹೇಳುವುದಕ್ಕೆ ಆಕ್ಷೇಪಣೆ ಯಾಕೆ? ಸ್ಪೀಕರ್ ಆಸನ ಸಂಖ್ಯೆ ಮತ್ತು ಅದರಲ್ಲಿ ಕೂತಿದ್ದ ಸದಸ್ಯರನ್ನು ತೋರಿಸಿದ್ದಾರೆ. ಅದರಲ್ಲಿ ಸಮಸ್ಯೆ ಏನು” ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಸದನದಲ್ಲಿ ನೋಟುಗಳ ಕಂತೆಗಳನ್ನು ಒಯ್ಯುವುದು ಸೂಕ್ತವಲ್ಲ ಎಂದ ಅವರು, ಗಂಭೀರ ತನಿಖೆಯಾಗಬೇಕು ಎಂದು ಒಪ್ಪಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಹುಲ್ ವಿರುದ್ಧ ಅವಹೇಳನಕಾರಿ ಭಾಷೆ: ಬಿಜೆಪಿ ಸಂಸದರ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ
ರಾಹುಲ್ ವಿರುದ್ಧ ಅವಹೇಳನಕಾರಿ ಭಾಷೆ: ಬಿಜೆಪಿ ಸಂಸದರ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ


