ಸಿದ್ದರಾಮಯ್ಯ ಅವರ ಕನಸಿನ ಯೋಜನೆ ಎಂದೇ ಕರೆಸಿಕೊಳ್ಳುವ ”ಅನ್ನಭಾಗ್ಯ” ಯೋಜನೆಗೆ ಇದೀಗ ಕತ್ತರಿ ಹಾಕಲಾಗುತ್ತದೆ ಎಂದು ಎನ್ನುವ ವಿಚಾರ ಚರ್ಚೆಯಾಗುತ್ತಿದೆ. ಈ ಕುರಿತು ಕಾಂಗ್ರೆಸ್ ಕಿಡಿಕಾರಿದ್ದು, ”ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ನಾಯಕರು ಅದೆಷ್ಟೇ ಷಡ್ಯಂತ್ರ ನಡೆಸಿದರೂ ನಾವು ಅನ್ನಭಾಗ್ಯದ ಅಕ್ಕಿಯನ್ನು 10 ಕೆಜಿಗೆ ಏರಿಸುವುದು ನಿಶ್ಚಿತ” ಎಂದು ಹೇಳಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ”ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ನಾಯಕರು ಅದೆಷ್ಟೇ ಷಡ್ಯಂತ್ರ ನಡೆಸಿದರೂ ನಾವು ಅನ್ನಭಾಗ್ಯದ ಅಕ್ಕಿಯನ್ನು 10 ಕೆಜಿಗೆ ಏರಿಸುವುದು ನಿಶ್ಚಿತ. ಬಸವಣ್ಣನ ಅನುಭವ ಮಂಟಪದ ದಾಸೋಹಕ್ಕೂ ವಿರೋಧಿಗಳು ಇಂತಹದ್ದೇ ಅಡೆತಡೆಗಳನ್ನು ಸೃಷ್ಟಿಸಿದ್ದರು. ನಮ್ಮ ಅನ್ನಭಾಗ್ಯದ ದಾಸೋಹವನ್ನು ಬಿಜೆಪಿಗರ ಯಾವ ಕುತಂತ್ರವೂ ತಡೆಯಲು ಸಾಧ್ಯವಿಲ್ಲ” ಎಂದು ಖಡಕ್ ಸಂದೇಶ ನೀಡಿದ್ದಾರೆ.
ಕೇಂದ್ರ ಸರ್ಕಾರ ಹಾಗೂ @BJP4Karnataka ನಾಯಕರು ಅದೆಷ್ಟೇ ಷಡ್ಯಂತ್ರ ನಡೆಸಿದರೂ ನಾವು ಅನ್ನಭಾಗ್ಯದ ಅಕ್ಕಿಯನ್ನು 10 ಕೆಜಿಗೆ ಏರಿಸುವುದು ನಿಶ್ಚಿತ.
ಬಸವಣ್ಣನ ಅನುಭವ ಮಂಟಪದ ದಾಸೋಹಕ್ಕೂ ವಿರೋಧಿಗಳು ಇಂತಹದ್ದೇ ಅಡೆತಡೆಗಳನ್ನು ಸೃಷ್ಟಿಸಿದ್ದರು.
ನಮ್ಮ ಅನ್ನಭಾಗ್ಯದ ದಾಸೋಹವನ್ನು ಬಿಜೆಪಿಗರ ಯಾವ ಕುತಂತ್ರವೂ ತಡೆಯಲು ಸಾಧ್ಯವಿಲ್ಲ.
— Karnataka Congress (@INCKarnataka) June 15, 2023
”ಕೇಂದ್ರ ಸರ್ಕಾರ ಸ್ಪಷ್ಟವಾಗಿ ಆಹಾರ ಹಕ್ಕು ಕಾಯ್ದೆಯನ್ನು ಉಲ್ಲಂಘಿಸುತ್ತಿದೆ. 7 ಲಕ್ಷ ಟನ್ ಅಕ್ಕಿ ಸಂಗ್ರಹವಿದ್ದರೂ ರಾಜ್ಯಗಳಿಗೆ FCI ಅಕ್ಕಿ ಮಾರಾಟ ಮಾಡುವುದನ್ನು ನಿರಾಕರಿಸುವ ಮೂಲಕ ಕನ್ನಡಿಗರ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಮೋದಿ. ಖಾಸಗಿಯವರಿಗೆ ಮಾರಾಟ ಮಾಡುವ ಅವಕಾಶವಿರುವಾಗ ರಾಜ್ಯ ಸರ್ಕಾರಕ್ಕೆ ಏಕೆ ಈ ನಿರಾಕರಣೆ. ಇದು ದುರುದ್ದೇಶವಲ್ಲದೆ ಇನ್ನೇನು?” ಎಂದು ಪ್ರಶ್ನೆ ಮಾಡಿದೆ.
ಕೇಂದ್ರ ಸರ್ಕಾರ ಸ್ಪಷ್ಟವಾಗಿ ಆಹಾರ ಹಕ್ಕು ಕಾಯ್ದೆಯನ್ನು ಉಲ್ಲಂಘಿಸುತ್ತಿದೆ.
7 ಲಕ್ಷ ಟನ್ ಅಕ್ಕಿ ಸಂಗ್ರಹವಿದ್ದರೂ ರಾಜ್ಯಗಳಿಗೆ FCI ಅಕ್ಕಿ ಮಾರಾಟ ಮಾಡುವುದನ್ನು ನಿರಾಕರಿಸುವ ಮೂಲಕ ಕನ್ನಡಿಗರ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಮೋದಿ.
ಖಾಸಗಿಯವರಿಗೆ ಮಾರಾಟ ಮಾಡುವ ಅವಕಾಶವಿರುವಾಗ ರಾಜ್ಯ ಸರ್ಕಾರಕ್ಕೆ ಏಕೆ ಈ ನಿರಾಕರಣೆ.
ಇದು…
— Karnataka Congress (@INCKarnataka) June 15, 2023
”ಕಳೆದ ವರ್ಷ ಸರ್ಕಾರಿ ದಾಸ್ತಾನಿನಲ್ಲಿದ್ದ ಅಪಾರ ಪ್ರಮಾಣದ ದವಸ ಧಾನ್ಯದ ಹಾಳಾಗಿ ಹೋಗಿದ್ದ ವರದಿಯಾಗಿತ್ತು. ಈಗಲೂ 7 ಲಕ್ಷ ಟನ್ ಅಕ್ಕಿಯನ್ನು ಗೋದಾಮಿನಲ್ಲಿಟ್ಟು ಕೊಳೆಸುತ್ತಿದೆ ಕೇಂದ್ರ ಸರ್ಕಾರ. ರಾಜ್ಯ ಸರ್ಕಾರ ಹಣ ಕೊಟ್ಟರೂ ಅಕ್ಕಿ ಕೊಡಲೊಪ್ಪದ್ದು ಜನವಿರೋಧಿ ನಡೆಯಲ್ಲವೇ? ಬಡವರ ಅನ್ನ ಕಿತ್ತೂಕೊಳ್ಳಲು ಬಿಜೆಪಿ ನಾನಾ ಮಾರ್ಗ ಹುಡುಕುತ್ತಿದೆ!” ಎಂದು ಟೀಕೆ ಮಾಡಿದೆ.
ಕಳೆದ ವರ್ಷ ಸರ್ಕಾರಿ ದಾಸ್ತಾನಿನಲ್ಲಿದ್ದ ಅಪಾರ ಪ್ರಮಾಣದ ದವಸ ಧಾನ್ಯದ ಹಾಳಾಗಿ ಹೋಗಿದ್ದ ವರದಿಯಾಗಿತ್ತು.
ಈಗಲೂ 7 ಲಕ್ಷ ಟನ್ ಅಕ್ಕಿಯನ್ನು ಗೋದಾಮಿನಲ್ಲಿಟ್ಟು ಕೊಳೆಸುತ್ತಿದೆ ಕೇಂದ್ರ ಸರ್ಕಾರ.
ರಾಜ್ಯ ಸರ್ಕಾರ ಹಣ ಕೊಟ್ಟರೂ ಅಕ್ಕಿ ಕೊಡಲೊಪ್ಪದ್ದು ಜನವಿರೋಧಿ ನಡೆಯಲ್ಲವೇ?
ಬಡವರ ಅನ್ನ ಕಿತ್ತೂಕೊಳ್ಳಲು ಬಿಜೆಪಿ ನಾನಾ ಮಾರ್ಗ ಹುಡುಕುತ್ತಿದೆ!
— Karnataka Congress (@INCKarnataka) June 15, 2023
”ಕಳೆದ 6 ವರ್ಷದಲ್ಲಿ 25,000 ಮೆಟ್ರಿಕ್ ಟನ್ ದವಸ ಧಾನ್ಯಗಳು ಕೇಂದ್ರದ ಗೋದಾಮಿನಲ್ಲಿ ನಷ್ಟವಾಗಿದೆ. ಮೈತುಂಬ ದ್ವೇಷ ರಾಜಕಾರಣವನ್ನೇ ತುಂಬಿಕೊಂಡಿರುವ ಮೋದಿಯವರಿಗೆ ದವಸಧಾನ್ಯಗಳನ್ನು ಜನರ ಹಸಿವು ನೀಗಿಸಲು ನೀಡುವುದಕ್ಕಿಂತ ಇಲಿ ಹೆಗ್ಗಣಗಳ ಹೊಟ್ಟೆ ತುಂಬಿಸುವಲ್ಲಿಯೇ ಹೆಚ್ಚಿನ ಆಸಕ್ತಿ ಇದ್ದಂತಿದೆ. ಆಹಾರ ಹಕ್ಕನ್ನು ನಿರಾಕರಿಸುವುದು ಸಂವಿಧಾನ ವಿರೋಧಿ ನಡೆ” ಎಂದು ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಕಳೆದ 6 ವರ್ಷದಲ್ಲಿ 25,000 ಮೆಟ್ರಿಕ್ ಟನ್ ದವಸ ಧಾನ್ಯಗಳು ಕೇಂದ್ರದ ಗೋದಾಮಿನಲ್ಲಿ ನಷ್ಟವಾಗಿದೆ.
ಮೈತುಂಬ ದ್ವೇಷ ರಾಜಕಾರಣವನ್ನೇ ತುಂಬಿಕೊಂಡಿರುವ ಮೋದಿಯವರಿಗೆ ದವಸಧಾನ್ಯಗಳನ್ನು ಜನರ ಹಸಿವು ನೀಗಿಸಲು ನೀಡುವುದಕ್ಕಿಂತ ಇಲಿ ಹೆಗ್ಗಣಗಳ ಹೊಟ್ಟೆ ತುಂಬಿಸುವಲ್ಲಿಯೇ ಹೆಚ್ಚಿನ ಆಸಕ್ತಿ ಇದ್ದಂತಿದೆ.
ಆಹಾರ ಹಕ್ಕನ್ನು ನಿರಾಕರಿಸುವುದು ಸಂವಿಧಾನ… pic.twitter.com/Nu3h5ThlUk
— Karnataka Congress (@INCKarnataka) June 15, 2023
ಬಿಜೆಪಿ ನಾಯಕರ ವಿರುದ್ದ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲ
ಈ ಬಗ್ಗೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ”ಹೆಚ್ಚುವರಿ ತಲಾ 5 ಕೆ.ಜಿ ಅಕ್ಕಿ ವಿತರಣೆಗಾಗಿ ತಿಂಗಳಿಗೆ 2.28 ಲಕ್ಷ ಟನ್ ಅಕ್ಕಿ ನೀಡಲು ಒಪ್ಪಿದ್ದ ಭಾರತೀಯ ಆಹಾರ ನಿಗಮ ಈಗ ಹಿಂದೇಟು ಹಾಕಿದೆ. ಇದಕ್ಕೆ ಬಿಜೆಪಿಯ ಬಡವರ ವಿರೋಧಿ ಧೋರಣೆಯೇ ಕಾರಣ. ಈ ಸಂಬಂಧ ಕೇಂದ್ರಕ್ಕೆ ಪ್ರತಿಭಟನಾ ಪತ್ರ ಬರೆಯಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ.
”ಭಾರತೀಯ ಆಹಾರ ನಿಗಮವು 7 ಲಕ್ಷ ಟನ್ ಅಕ್ಕಿ ಇಟ್ಟುಕೊಂಡು ಕೊಡುವುದಿಲ್ಲ ಎನ್ನುತ್ತಿದೆ. ಅನ್ನಭಾಗ್ಯ ಯೋಜನೆಯಿಂದ ಕಾಂಗ್ರೆಸ್‌ಗೆ ಒಳ್ಳೆಯ ಹೆಸರು ಬರುತ್ತದೆ. ಬಡವರ ಕಲ್ಯಾಣ ಆಗುತ್ತದೆ. ಅದನ್ನು ತಪ್ಪಿಸಬೇಕು ಎಂದೇ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆ” ಎಂದು ಹೇಳಿದರು.
”ನಿಗಮವು ನಮಗೆ ಅಕ್ಕಿ ಕೊಡುವುದಾಗಿ ತಿಳಿಸಿದ್ದರಿಂದಲೇ ನಾವು ಜುಲೈ 1 ರಿಂದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ತಲಾ 10 ಕೆ.ಜಿ ಅಕ್ಕಿ ಕೊಡುವುದಾಗಿ ಹೇಳಿದ್ದೆವು. ಈಗ ಕೊಡುವುದಿಲ್ಲ ಎನ್ನುತ್ತಿದೆ. ಬೇರೆ ರಾಜ್ಯಗಳಿಂದ ಖರೀದಿಸಬೇಕಾಗಿದೆ. ತಮ್ಮ ಬಳಿ ಅಕ್ಕಿ ಇಲ್ಲ ಎಂದು ಪಂಜಾಬ್ ಹೇಳಿದೆ. ಛತ್ತೀಸ್‌ಗಢ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ನೋಡೋಣ ಎಂದಿದ್ದಾರೆ. ಆ ರಾಜ್ಯಗಳ ಜತೆ ಮಾತುಕತೆಗೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ಅಲ್ಲಿಗೆ ತೆರಳಲಿದ್ದಾರೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅನ್ನಭಾಗ್ಯಕ್ಕೆ ಕತ್ತರಿ ಹಾಕಲು ಮುಂದಾದ ಕೇಂದ್ರ: ಪ್ರತಿಭಟನಾ ಪತ್ರ ಬರೆಯುವ ಎಚ್ಚರಿಕೆ ನೀಡಿದ ಸಿಎಂ ಸಿದ್ದರಾಮಯ್ಯ


