ಕಾಂಗ್ರೆಸ್ ಪಕ್ಷದ ವಕ್ತಾರ ರಾಜೀವ್ ತ್ಯಾಗಿ (53) ಬೆಂಗಳೂರು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹಿಂದಿ ವಾಹಿನಿಯೊಂದರ ಟಿವಿ ಡಿಬೇಟ್‌ನಲ್ಲಿ ಭಾಗವಹಿಸಿದ ನಂತರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಘಾಜಿಯಾಬಾದ್‌ನಲ್ಲಿನ ಸೆಕ್ಟರ್ 16ರಲ್ಲಿನ ತಮ್ಮ ನಿವಾಸದಿಂದ ಆಜ್‌ತಕ್ ವಾಹಿನಿಯ ಟಿವಿ ಚರ್ಚೆಯಲ್ಲಿ ಅವರು ಭಾಗವಹಿಸಿದ್ದರು. ಚರ್ಚೆಯ ನಂತರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ. ರಾಜೀವ್‌ರವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ.
ರಾಜೀವ್ ಸಂಜೆ 5 ಗಂಟೆ ಸುಮಾರಿಗೆ ಲೈವ್ ಡಿಬೇಟ್‌ನಲ್ಲಿ ಭಾಗವಹಿಸಿದ್ದರು. ನಂತರ 6-6.15 ರ ಹೊತ್ತಿಗೆ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಉಸಿರಾಡಲು ಕಷ್ಟವಾಗಿದೆ. ಆಗ ಅವರ ಕುಟುಂಬದವರನ್ನು ಅವರನ್ನು ಸ್ಥಳೀಯ ಯಶೋಧಾ ಹಾಸ್ಪಿಟಲ್‌ಗೆ ದಾಖಲು ಮಾಡಿದ್ದಾರೆ. 6.30ರ ವೇಳೆಗೆ ಅವರು ಮೃತರಾಗಿದ್ದಾರೆ ಎಂದು ವೈದ್ಯರಾದ ಡಾ.ಸುನೀಲ್ ದಾಗರ್ ತಿಳಿಸಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಅವರು ನಮ್ಮ ಆಸ್ಪತ್ರೆಗೆ ಬರುತ್ತಿದ್ದಾರೆ. ನಮ್ಮ ದಾಖಲೆಗಳ ಪ್ರಕಾರ ಅವರಿಗೆ ಯಾವುದೇ ಗಂಭೀರ ಸಮಸ್ಯೆಗಳಿರಲಿಲ್ಲ. ಸಣ್ಣ ಮಟ್ಟಿಗಿನ ಕೊಲೆಸ್ಟ್ರಾಲ್ ಸಮಸ್ಯೆ ಮಾತ್ರ ಇತ್ತು ಎಂದು ಡಾ.ಸುನೀಲ್ ದಾಗರ್ ತಿಳಿಸಿದ್ದಾರೆ.
ಟಿವಿ ಚರ್ಚೆಗಳಲ್ಲಿ ರಾಜೀವ್ ತ್ಯಾಗಿ ಹೆಸರುವಾಸಿಯಾಗಿದ್ದರು. ತಮ್ಮ ಹರಿತ ಮಾತುಗಳ ಮೂಲಕ ಗಮನ ಸೆಳೆದಿದ್ದರು. ಎರಡು ದಿನದ ಹಿಂದೆ ಬೆಂಗಳೂರಿನಲ್ಲಿ ಫೇಸ್‌ಬುಕ್ ಪೋಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಭೆಯ ಕುರಿತು ಅವರು ಚರ್ಚೆಯಲ್ಲಿ ಭಾಗವಹಿಸಿದ್ದು, ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಕೂಡ ಆ ಚರ್ಚೆಯಲ್ಲಿದ್ದರು. ಸಾವಿನ ಸುದ್ದಿ ತಿಳಿದ ಕೂಡಲೇ “ನನ್ನ ಸ್ನೇಹಿತ ರಾಜೀವ್ ತ್ಯಾಗಿ ನಿಧನರಾದರು ಎಂದು ನಂಬಲು ಆಗುತ್ತಿಲ್ಲ. 5 ಗಂಟೆ ಸುಮಾರಿಗೆ ನಾವಿಬ್ಬರೂ ಟಿವಿ ಚರ್ಚೆಯಲ್ಲಿದ್ದವು. ಜೀವನ ಎಷ್ಟು ಅನಿರೀಕ್ಷಿತ. ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಪದಗಳಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಗುಲಾಂ ನಬಿ ಅಜಾದ್ ಸೇರಿದಂತೆ ಹಲವು ಕಾಂಗ್ರೆಸ್ ಗಣ್ಯರು ರಾಜೀವ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. “ಒಬ್ಬ ದೃಢ ಕಾಂಗ್ರೆಸಿಗ ಮತ್ತು ನಿಜ ದೇಶಭಕ್ತ ರಾಜೀವ್ ತ್ಯಾಗಿಯವರ ಹಠಾತ್ ನಿಧನದಿಂದ ದುಃಖಿತವಾಗಿದ್ದೇವೆ. ಈ ನೋವಿನ ಸಂದರ್ಭದಲ್ಲಿ ಅವರ ಕುಟುಂಬದೊಂದಿಗೆ ಇದ್ದೇವೆ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
We are deeply saddened by the sudden demise of Shri Rajiv Tyagi. A staunch Congressman & a true patriot. Our thoughts and prayers are with his families & friends in this time of grief. pic.twitter.com/yHKSlzPwbX
— Congress (@INCIndia) August 12, 2020
ಸರಳ ಮತ್ತು ಸಂಯಮವುಳ್ಳವರನ್ನು ಈ ವಿಷಕಾರಿ ಡಿಬೀಟ್‌ಗಳು ಮತ್ತು ವಿಷಕಾರಿ ವಕ್ತಾರರು ಎಷ್ಟು ಸಮಯದವರೆಗೂ ಕೊಲ್ಲುತ್ತಾರೆ? ಟಿಆರ್‌ಪಿಗಾಗಿ ನಡೆಯುವ ಈ ಡಿಬೇಟ್‌ಗಳು ಎಷ್ಟು ಕಾಲ ಮುಂದುವರೆಯುತ್ತವೆ? ಹಿಂದು ಮುಸ್ಲಿಂ ಎಂಬ ವಿಷಕಾರಿ ವಿಭಾಗವು ಎಷ್ಟು ದಿನಗಳ ಕಾಲ ಈ ದೇಶದ ಆತ್ಮವನ್ನು ತಿನ್ನುತ್ತದೆ? ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಕಿಡಿಕಾರಿದ್ದಾರೆ.
ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ ವಿ ಟ್ವೀಟ್ ಮಾಡಿ, “ಚರ್ಚೆಯ ಸಮಯದಲ್ಲಿ ರಾಜೀವ್ ತ್ಯಾಗಿ ಅವರನ್ನು‘ ಜೈಚಂದ್ ’ಎಂದು ಕರೆಯಲಾಯಿತು. ಅವರನ್ನು ‘ನಕಲಿ ಹಿಂದೂ’ ಎಂದು ಕರೆಯಲಾಯಿತು, ಅವರ ನಂಬಿಕೆಯನ್ನು ಪ್ರಶ್ನಿಸಲಾಯಿತು. ಆನಂತರ ಅವರು ಹೃದಯಾಘಾತದಿಂದ ಬಳಲಿದ್ದಾರೆ” ಎಂದು ಆರೋಪಿಸಿದ್ದಾರೆ.
After abusing Rajiv Tyagi ji minutes before his death, Sambit Patra went on to the next TV debate to spread more poison.
Breaks my heart to think that Rajiv Tyagi ji’s last words probably were “Pls allow me to speak”.
Sambit Patra & Aaj Tak killed him. #ArrestSambitPatra
— Saket Gokhale (@SaketGokhale) August 12, 2020
ರಾಜೀವ್ ತ್ಯಾಗಿ ಅವರಿಗೆ ಹೃದಯಾಘಾತ ಆಗವು ಕೆಲವೇ ಕ್ಷಣಗಳ ಮೊದಲು ಸಂಬಿತ್ ಪಾತ್ರ ಅವರನ್ನು ನಿಂದಿಸಿದ್ದರು. ಅಲ್ಲದೇ ಮತ್ತಷ್ಟು ವಿಷ ಹರಡಲು ಮತ್ತೊಂದು ಚರ್ಚೆಗೆ ಹೋದರು.
ನನಗೆ ಮಾತನಾಡಲು ಅವಕಾಶಕೊಡಿ ಎಂಬುದು ರಾಜೀವ್ ತ್ಯಾಗಿಯವರ ಕೊನೆಯ ಮಾತಾಗಿತ್ತು ಎಂಬುದನ್ನು ನೆನೆದು ನನಗೆ ದುಃಖವಾಗುತ್ತಿದೆ. ಸಂಬಿತ್ ಪಾತ್ರ ಮತ್ತು ಆಜ್‌ತಜ್ ಅವರನ್ನು ಕೊಂದಿದೆ. ಅರೆಸ್ಟ್ ಸಂಬಿತ್ ಪಾತ್ರ ಎಂದು ಮಾಹಿತ ಹಕ್ಕು ಕಾರ್ಯಕರ್ತ ಸಾಕೇತ್ ಗೋಖುಲೆ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ #ArrestSambitPatra ಹ್ಯಾಷ್‌ಟ್ಯಾಗ್ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ.

ಇದನ್ನೂ ಓದಿ: ಗಲಭೆಕೋರರು ಹಚ್ಚಿದ ಬೆಂಕಿ ಮತ್ತು ಮಾಧ್ಯಮಗಳು ಹಚ್ಚುತ್ತಿರುವ ಬೆಂಕಿ


