“ಭಾರತ ದೇಶದ ಸಂವಿಧಾನದ ಮೂಲ ಆಶಯಗಳನ್ನು ಗೌರವಿಸಿ, ರಕ್ಷಿಸುವ ದೃಷ್ಟಿಯಿಂದ ಮತ್ತು ದೇಶದ ಸಾಮಾನ್ಯ ಜನರ ನೆಮ್ಮದಿಗೆ ಯಾವುದೇ ಆತಂಕ ಅಥವಾ ಭಯ ಇಲ್ಲದ ವಾತಾವರಣ ಸೃಷ್ಟಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ದೇಶದ ಹಿತದೃಷ್ಟಿ ಮತ್ತು ಸಂವಿಧಾನದ ಆಶಯಗಳನ್ನು ರಕ್ಷಿಸುವ ದೃಷ್ಟಿಯಿಂದ NPR ಅನ್ನು ಜಾರಿಗೊಳಿಸದಿರಲು ಸರ್ವಾನುಮತದಿಂದ ಸರ್ಕಾರವನ್ನು ಒತ್ತಾಯಿಸಲಾಯಿತು” ಎಂದು ಕಾಂಗ್ರೆಸ್ ಪಕ್ಷವು ನಿರ್ಣಯ ತೆಗೆದುಕೊಂಡಿದೆ.

ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಮತ್ತು ಕಾರ್ಯಾಧ್ಯಕ್ಷರಾದ ಈಶ್ವರ ಭಿ, ಖಂಡ್ರೆಯವರು ಸಭೆಯಲ್ಲಿ ಹಾಜರಿದ್ದು ಈ ನಿರ್ಣಯ ತೆಗೆದುಕೊಂಡಿದ್ದಾರೆ.
ರಾಜ್ಯ ಮತ್ತು ದೇಶದ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿ, ಇಡೀ ಭಾರತ ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಅಹಿಂಸಾತ್ಮಕವಾಗಿ ವಿವಿಧ ಸಂಘಟನೆಗಳು, ರ್ಪಗತಿಪರ ಚಿಂತಕರು ಮತ್ತು ನಿಷ್ಠಾವಂತ ದೇಶ ಭಕ್ತರಿಂದ NPR, NRC, CAA ಇದರ ವಿರುದ್ದ ಅಹಿಂಸಾತ್ಮಕ ಚಳುವಳಿ ನಿರಂತರವಾಗಿ ನಡೆಯುತ್ತಿರುವ ವಿಷಯವನ್ನು ಸಭೆಯು ಗಂಭೀರವಾಗಿ ಪರಿಗಣಿಸಿ, ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಶಾಸಕಾಂಗ ಪಕ್ಷದ ಕಾರ್ಯದರ್ಶಿ ಈ ತುಕಾರಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


