Homeಮುಖಪುಟಕರ್ನಾಟಕ-ಕೇರಳದಲ್ಲಿ 9 ಕೊರೋನ ಪ್ರಕರಣ ಪತ್ತೆ: ಭಾರತದಲ್ಲಿ ಒಟ್ಟು 56 ಪ್ರಕರಣಗಳು

ಕರ್ನಾಟಕ-ಕೇರಳದಲ್ಲಿ 9 ಕೊರೋನ ಪ್ರಕರಣ ಪತ್ತೆ: ಭಾರತದಲ್ಲಿ ಒಟ್ಟು 56 ಪ್ರಕರಣಗಳು

- Advertisement -
- Advertisement -

ಒಂಬತ್ತು ಹೊಸ ಕೊರೋನ ವೈರಸ್ ಭಾದಿತ ಪ್ರಕರಣಗಳು ಕೇರಳ ಮತ್ತು ಕರ್ನಾಟಕದಲ್ಲಿ ವರದಿಯಾಗಿದೆ. ದೇಶದಲ್ಲಿ ಒಟ್ಟು ಸೋಂಕಿಗೆ ಒಳಗಾದವರ ಸಂಖ್ಯೆಯನ್ನು 56 ಕ್ಕೆ ಏರಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ

ಇಂದು ಬೆಳಿಗ್ಗೆ 58 ಭಾರತೀಯರನ್ನು ಸುರಕ್ಷಿತವಾಗಿ ಇರಾನ್‌ನಿಂದ ವಿಮಾನದಲ್ಲಿ ಕರೆತರಲಾಗಿದೆ. ಇರಾನಿನಿಂದ ಭಾರತೀಯರನ್ನು ಹೊತ್ತ ಭಾರತೀಯ ವಾಯುಪಡೆಯ ವಿಮಾನ-ಸಿ-17 ಗ್ಲೋಬ್ ಮಾಸ್ಟರ್ ದೆಹಲಿಯಿಂದ 30 ಕಿ.ಮೀ ದೂರದಲ್ಲಿರುವ ಗಾಜಿಯಾಬಾದ್‌ಗೆ ಬಂದಿಳಿಯಿತು. ಈ ಬಗ್ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ “ಮಿಷನ್ ಪೂರ್ಣಗೊಂಡಿದೆ, ಇನ್ನು ಮುಂದಿನದ್ದು” ಎಂದು  ಟ್ವೀಟ್ ಮಾಡಿದ್ದಾರೆ.

ಇದು ಬೆಳಿಗ್ಗೆ ಇರಾನಿನಿಂದ ಕರೆ ತಂದ ಭಾರತೀಯ ವಾಯುಪಡೆಯ ಸಿ -17 ಗ್ಲೋಬ್‌ಮಾಸ್ಟರ್, ಭಾರತೀಯ ವಾಯುಪಡೆಯಲ್ಲೆ ಅತಿದೊಡ್ಡ ಮಿಲಿಟರಿ ವಿಮಾನವಾಗಿದೆ. ಫೆಬ್ರವರಿ 27 ರಂದು, 76 ಭಾರತೀಯರು ಮತ್ತು 36 ವಿದೇಶಿ ಪ್ರಜೆಗಳನ್ನು ಕೊರೋನ ವೈರಸ್ ಪತ್ತೆಯಾದ ವುಹಾನ್ ನಗರದಿಂದ ಕರೆತಲಾಗಿತ್ತು.

ಕಳೆದ ಮೂರು ದಿನಗಳಲ್ಲಿ ಕೇರಳದಲ್ಲಿ 12 ಪ್ರಕರಣಗಳು ವರದಿಯಾಗಿವೆ. ಕೊರೋನ ವೈರಸ್ ರೋಗಿಗಳೊಂದಿಗೆ ಸಂಪರ್ಕಕ್ಕೆ ಬಂದ ಸುಮಾರು 270 ಜನರು ಪತ್ತೆಯಾಗಿದ್ದಾರೆ. ಅವರಲ್ಲಿ ತೊಂಬತ್ತೈದು ಮಂದಿ “ಹೆಚ್ಚಿನ ಅಪಾಯದ ವಿಭಾಗ” ದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ಪ್ರಕರಣಗಳು ಪತ್ತೆಯಾದ ನಂತರ ಕಣ್ಗಾವಲನ್ನು ಬಲಪಡಿಸಲಾಗಿದೆ.

ಕೊರೋನ ಭೀತಿಯಿಂದಾಗಿ ಮಾರ್ಚ್‌ 31ರವರೆಗೆ ಬಹುತೇಕ ಸಿನಿಮಾ ಮಂದಿರಗಳನ್ನು ಮುಚ್ಚಲಾಗಿದೆ. ಹಲವು ಸಿನಿಮಾ ಸಂಘಟನೆಗಳ ಸಭೆಯ ನಂತರ ಈ ನಿರ್ಧಾರ ಬಂದಿದೆ.

“ಸುಮಾರು 1,116 ಜನರು ವೀಕ್ಷಣೆಯಲ್ಲಿದ್ದಾರೆ, 976 ಮಂದಿ ಮನೆ ಕ್ಯಾರೆಂಟೈನ್‌ನಲ್ಲಿದ್ದರೆ, 149 ಜನರು ಆಸ್ಪತ್ರೆಗಳಲ್ಲಿದ್ದಾರೆ. ಇದರಲ್ಲಿ ರೋಗಲಕ್ಷಣಗಳು ಇದ್ದವರೂ ಇದ್ದಾರೆ” ಎಂದು ಕೇರಳ ರಾಜ್ಯ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ತಿಳಿಸಿದ್ದಾರೆ.

ಸೋಮವಾರ ಬೆಂಗಳೂರಿನಲ್ಲಿ ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ನಿವಾಸಿಯೊಬ್ಬರು ಕೊರೋನ ವೈರಸ್ ಭಾದಿತರಾಗಿದ್ದು ಪತ್ತೆಯಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೆಳಗಾವಿ: ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ -ಕರವೇ ಪ್ರತಿಭಟನೆ

0
ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಅದು ಕಾಲೇಜು ಹಂತದವರೆಗೂ ವ್ಯಾಪಿಸಿರುವುದು ದುರಂತ. ನಿನ್ನೆ ಬೆಳಗಾವಿಯ ಗೋಗ್ಟೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಬಾವುಟ ಹಿಡಿದು ಸಂಭ್ರಮಿಸಿದ ದ್ವಿತೀಯ ಪಿಯುಸಿ...