ಸುಳ್ಳು ಗೋಹತ್ಯೆ ಪ್ರಕರಣದಲ್ಲಿ ಮಾಂಸದ ವ್ಯಾಪಾರಿಯೊಬ್ಬರನ್ನು ಸಿಲುಕಿಸಲು ಸಂಚು ರೂಪಿಸಿದ್ದ ಸಹರಾನ್‌ಪುರದ ಸ್ವಘೋಷಿತ ಗೋರಕ್ಷಕನನ್ನು ಉತ್ತರ ಪ್ರದೇಶ ಪೊಲೀಸರು ಮಂಗಳವಾರ (ಮಾ.11) ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ವಿಶ್ ಸಿಂಗ್ ಕಾಂಬೋಜ್ (36) ಬಂಧಿತ ವ್ಯಕ್ತಿ. ಈತ ಟಿಪ್ಪು ಖುರೇಷಿ ಎಂಬ ಮಾಂಸದ ವ್ಯಾಪಾರಿಯಿಂದ 50,000 ರೂಪಾಯಿ ಹಣ ಪಡೆದು, ಆತನ ಜೊತೆ ಈ ಹಿಂದೆ ವ್ಯಾಪಾರದಲ್ಲಿ ಪಾಲುದಾರನಾಗಿದ್ದ ವ್ಯಕ್ತಿಯನ್ನು ಸುಳ್ಳು ಗೋಹತ್ಯೆ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
“ಬಂಧಿತ ವಿಶ್ ಸಿಂಗ್ ತನ್ನ ಸಹಚರರೊಂದಿಗೆ ಮಂಗಳವಾರ ಸಹರಾನ್‌ಪುರದ ಪ್ರಮುಖ ಹೆದ್ದಾರಿಯಲ್ಲಿ ದನದ ಅವಶೇಷಗಳನ್ನು ಇರಿಸಿ, ಗೋಹತ್ಯೆ ಮಾಡಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟಿಸಿದ್ದ. ಗೋವಿನ ಅವಶೇಷಗಳು ಬಹಳ ದಿನಗಳ ಹಿಂದಿನದು ಎಂದು ನಮಗೆ ಮನವರಿಕೆಯಾಗಿ ಅನುಮಾನ ಬಂದಿತು. ನಂತರ ನಾವು ‘ಹಿಂದೂ ಯೋಧ ಪರಿವಾರ’ ಸಂಘಟನೆಯ ಸಂಸ್ಥಾಪಕ ವಿಶ್ ಸಿಂಗ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆವು. ಈ ವೇಳೆ ಖುರೇಷಿಯ ಸೂಚನೆಯ ಮೇರೆಗೆ ಗೋವಿನ ಅಸ್ಥಿಪಂಜರವನ್ನು ರಸ್ತೆಯಲ್ಲಿರಿಸಿ ಪ್ರತಿಭಟನೆ ನಡೆಸಿರುವುದಾಗಿ ಆತ ಒಪ್ಪಿಕೊಂಡಿದ್ದಾರೆ ಎಂಬುದಾಗಿ ಸರಸವಾ ಪೊಲೀಸ್ ಠಾಣೆಯ ಎಸ್‌ಹೆಚ್ಒ ನರೇಂದರ್ ಶರ್ಮಾ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
In #UttarPradesh's #Saharanpur, a #Hindutva organization had protested against cow slaughter by placing the skull (skeleton) of a bovine on the road.
It has now come to light that the founder of the #HinduYodhaParivar organization, #ChaudharyVishSinghKamboj, had staged the… pic.twitter.com/BPlXzAkYeE
— Hate Detector 🔍 (@HateDetectors) March 12, 2025
ಖುರೇಷಿ ಮತ್ತು ಆತ ಗುರಿಯಾಗಿಸಿಕೊಂಡ ವ್ಯಕ್ತಿ ಇಬ್ಬರೂ ಮಾಂಸದ ವ್ಯಾಪಾರಿಗಳು. ಆತ ಮಾಂಸದ ವ್ಯವಹಾರದಲ್ಲಿ ಹೆಚ್ಚು ಯಶಸ್ವಿಯಾಗಿದ್ದ ಎಂದು ಖುರೇಷಿ, ವಿಶ್ ಸಿಂಗ್ ಕಾಂಬೋಜ್ ಮೂಲಕ ಆತನನ್ನು ಜೈಲಿಗೆ ಕಳಿಸಲು ಸಂಚು ರೂಪಿಸಿದ್ದ. ಗೋಹತ್ಯೆ ಪ್ರಕರಣಗಳ ಸೂಕ್ಷ್ಮತೆಯನ್ನು ಗಮನಿಸಿದರೆ, ನ್ಯಾಯಾಲಯಗಳು ಜಾಮೀನು ನೀಡಲು ಕೂಡ ಹಿಂಜರಿಯುತ್ತವೆ ಎಂಬುವುದನ್ನು ಆತ ಗಮನಿಸಿದ್ದ. ವಿಶ್ ಸಿಂಗ್ ಬಂಧನದ ಬಳಿಕ ಖುರೇಷಿ ಪರಾರಿಯಾಗಿದ್ದಾನೆ. ಆತನ ಬಂಧನದ ನಂತರ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
“ಬಂಧಿತ ಕಾಂಬೋಜ್ ವಿರುದ್ದ ಗುಂಡಾ ಕಾಯ್ದೆ, ಗಲಭೆ ಸೇರಿದಂತೆ ಏಳು ಪ್ರಕರಣಗಳು ದಾಖಲಾಗಿವೆ. ಶಾಂತಿ ಭಂಗ ಮತ್ತು ಸುಳ್ಳು ಮಾಹಿತಿ ಒದಗಿಸಿದ್ದಕ್ಕಾಗಿ ಬಿಎನ್ಎಸ್ ಸೆಕ್ಷನ್‌ಗಳ ಅಡಿಯಲ್ಲಿ ಆತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ” ಎಂದು ಸಹರಾನ್‌ಪುರ ಎಸ್ಎಸ್ಪಿ ರೋಹಿತ್ ಸಿಂಗ್ ಸಜ್ವಾನ್ ತಿಳಿಸಿದ್ದಾರೆ.
ಕೇರಳ | ಮಹಾತ್ಮ ಗಾಂಧಿ ಮರಿ ಮೊಮ್ಮಗ ತುಷಾರ್ ಗಾಂಧಿಗೆ ಮುತ್ತಿಗೆ ಹಾಕಿದ ಬಿಜೆಪಿ-ಆರ್‌ಎಸ್‌ಎಸ್


