ಸಂಸತ್ತಿನಲ್ಲಿ ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಿದ ಅಮಿತ್ ಶಾ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಸಮಾಜವಾದಿ ಪಕ್ಷದ ಸಂಸದ ಅಖಿಲೇಶ್ ಯಾದವ್ ಅವರು, ಆಡಳಿತ ಪಕ್ಷವು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಶುಕ್ರವಾರ ಆರೋಪಿಸಿದ್ದಾರೆ.
ಲೋಕಸಭೆಯನ್ನು ಮುಂದೂಡಿದ ನಂತರ ಎಎನ್‌ಐ ಜೊತೆ ಮಾತನಾಡಿದ ಅವರು, ಬಾಬಾಸಾಹೇಬ್ ಅವರ ಸಂವಿಧಾನವು ದೇಶವನ್ನು ಮುನ್ನಡೆಸುವ ಮಾರ್ಗವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಎಫ್‌ಐಆರ್ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಇದೊಂದು ಸುಳ್ಳು ಪ್ರಕರಣ ಎಂದು ಬಣ್ಣಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಸಂಸತ್ತಿನ ಅಧಿವೇಶನ ಇಂದು ಮುಕ್ತಾಯವಾಗಬಹುದು, ಆದರೆ ಸಮಸ್ಯೆಗಳು ಮುಕ್ತಾಯಗೊಳ್ಳುವುದಿಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದು ಮತ್ತು ಅವರ ಬಗ್ಗೆ ಬಿಜೆಪಿಯ ವರ್ತನೆಯ ಬಗ್ಗೆ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಬೇಕು ಎಂದು ವಿರೋಧ ಪಕ್ಷಗಳ ಆಗ್ರಹವಾಗಿದೆ…” ಎಂದು ಅಖಿಲೇಶ್ ಅವರು ಹೇಳಿದ್ದಾರೆ.
ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಬೇಕಾದರೆ ಬಾಬಾಸಾಹೇಬರ ಸಂವಿಧಾನವೇ ದಾರಿ ತೋರಿಸುತ್ತದೆ. ಕಾಲಕಾಲಕ್ಕೆ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಬಿಜೆಪಿಯ ತಂತ್ರಗಾರಿಕೆಯನ್ನು ಅರ್ಥ ಮಾಡಿಕೊಳ್ಳಬೇಕು. ಅವರು ಮೊದಲು ಅಸಾಂವಿಧಾನಿಕ ಕೆಲಸಗಳನ್ನು ಮಾಡುತ್ತಾರೆ ಮತ್ತು ಅನ್ಯಾಯ ಮಾಡುತ್ತಾರೆ. ಅನ್ಯಾಯಕ್ಕೆ ಒಳಗಾದವರ ಜೊತೆ ನಿಂತರೆ ಸುಳ್ಳು ಕೇಸುಗಳನ್ನು ಜಡಿಯುತ್ತಾರೆ. ಇದು ಮೊದಲ ಬಾರಿಗೆ ಆಗುತ್ತಿಲ್ಲ. ಬಿಜೆಪಿಯ ತಂತ್ರ ಇದಾಗಿದೆ ಎಂದು ಅಖಿಲೇಶ್ ಅವರು ಹೇಳಿದ್ದಾರೆ.
ಎಸ್‌ಪಿ ಸಂಸದೆ ಡಿಂಪಲ್ ಯಾದವ್ ಅವರು ಕೂಡಾ ಗುರುವಾರ ಸಂಸತ್ತಿನ ಆವರಣದಲ್ಲಿ ನಡೆದ ಘರ್ಷಣೆಗೆ ಬಿಜೆಪಿ ಸಂಸದರನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ. ಈ ಘರ್ಷನೆಯಲ್ಲಿ ಇಬ್ಬರು ಆಡಳಿತ ಪಕ್ಷದ ಸಂಸದರು ಗಾಯಗೊಂಡಿದ್ದರು. “ನಾವು ನಿನ್ನೆ ಮಕರ ದ್ವಾರದಲ್ಲಿ ಕಂಡ ಘರ್ಷಣೆಗೆ ಬಿಜೆಪಿ ಸಂಸದರೆ ಜವಾಬ್ದಾರರು. ನಾವು ಅಂತಹ ಬಿಕ್ಕಟ್ಟನ್ನು ನೋಡಿರಲಿಲ್ಲ” ಎಂದು ಅವರು ಹೇಳಿದ್ದಾರೆ.
ಬಿಜೆಪಿ ಸಂಸದರ ಕ್ಷಮೆಯಾಚನೆಗೆ ಆಗ್ರಹಿಸಿದ ಅವರು, ‘‘ದೇಶದ ಪ್ರತಿಯೊಬ್ಬ ಪ್ರಜೆಗೂ ಆರಾಧ್ಯ ದೈವವಾಗಿರುವ ಡಾ.ಭೀಮರಾವ್ ಅಂಬೇಡ್ಕರ್ ಅವರನ್ನು ಅವಮಾನಿಸಿರುವ ಬಿಜೆಪಿ ಸಂಸದರು ಕ್ಷಮೆ ಯಾಚಿಸಬೇಕು. ಬಿಜೆಪಿ ಕೇವಲ ಒಂದು ಕಡೆಯಿಂದ ಮುಂದುವರಿಯುತ್ತದೆ. ಅದು ಭಾರತದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ದೇಶದ ಜನರೊಂದಿಗೆ ಎಂದಿಗೂ ಮುಂದುವರಿಯುವುದಿಲ್ಲ. ನಾಳೆಯ ಮುಖಾಮುಖಿಯಲ್ಲಿ ಬಿಜೆಪಿ ಕ್ಷಮೆಯಾಚಿಸಬೇಕು ಏಕೆಂದರೆ ಬಿಜೆಪಿ ಸರ್ಕಾರ ಮತ್ತು ಬಿಜೆಪಿ ಸಂಸದರು ಮಾತ್ರ ಇದಕ್ಕೆ ಕಾರಣರಾಗಿದ್ದಾರೆ’’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ ಟೇಕ್ ಹೋಮ್ ಪಡಿತರ ಯೋಜನೆ: 2018-21ರಿಂದ ₹428 ಕೋಟಿ ಅಕ್ರಮ
ಮಧ್ಯಪ್ರದೇಶ ಟೇಕ್ ಹೋಮ್ ಪಡಿತರ ಯೋಜನೆ: 2018-21ರಿಂದ ₹428 ಕೋಟಿ ಅಕ್ರಮ


