ಬಿಕ್ಕಟ್ಟು ಎದುರಿಸಿದಾಗಲೆಲ್ಲಾ ದೇಶವು ಒಗ್ಗಟ್ಟಿನಿಂದ ಮತ್ತು ಬಲಿಷ್ಠವಾಗಿ ಉಳಿದಿದೆ; ಇದರ ಕೀರ್ತಿ ಸಂವಿಧಾನಕ್ಕೆ ಸಲ್ಲಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿಆರ್ ಗವಾಯಿ ಶನಿವಾರ ಹೇಳಿದ್ದಾರೆ.
ಅಲಹಾಬಾದ್ ಹೈಕೋರ್ಟ್‌ನಲ್ಲಿ ವಕೀಲರ ಕೊಠಡಿಗಳು ಮತ್ತು ಬಹು ಹಂತದ ಪಾರ್ಕಿಂಗ್ ಉದ್ಘಾಟನೆಯ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಸಿಜೆಐ ಗವಾಯಿ, “ಸಂವಿಧಾನವನ್ನು ರಚಿಸುವಾಗ ಮತ್ತು ಅದರ ಅಂತಿಮ ಕರಡನ್ನು ಸಂವಿಧಾನ ಸಭೆಯ ಮುಂದೆ ಮಂಡಿಸಿದಾಗ, ಆ ಸಮಯದಲ್ಲಿ ಕೆಲವರು ಸಂವಿಧಾನವು ತುಂಬಾ ಫೆಡರಲ್ ಎಂದು ಹೇಳುತ್ತಿದ್ದರು. ಆದರೆ, ಕೆಲವರು ಅದು ತುಂಬಾ ಏಕೀಕೃತ ಎಂದು ಹೇಳುತ್ತಿದ್ದರು” ಎಂದು ಅವರು ಹೇಳಿದರು.
“ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರು ಸಂವಿಧಾನವು ಸಂಪೂರ್ಣವಾಗಿ ಫೆಡರಲ್ ಅಥವಾ ಸಂಪೂರ್ಣವಾಗಿ ಏಕೀಕೃತವಲ್ಲ ಎಂದು ಉತ್ತರಿಸಿದ್ದರು. ಆದರೆ ನಾನು ನಿಮಗೆ ಹೇಳಬಹುದಾದ ಒಂದು ವಿಷಯವೆಂದರೆ, ಶಾಂತಿ ಮತ್ತು ಯುದ್ಧದ ಸಮಯದಲ್ಲಿ ಭಾರತವನ್ನು ಒಗ್ಗಟ್ಟಿನಿಂದ ಮತ್ತು ಬಲಿಷ್ಠವಾಗಿಡುವ ಸಂವಿಧಾನವನ್ನು ನಾವು ನೀಡಿದ್ದೇವೆ” ಎಂದು ಸಿಜೆಐ ಗವಾಯಿ ಹೇಳಿದರು.
ಸಂವಿಧಾನದಿಂದಾಗಿ ಸ್ವಾತಂತ್ರ್ಯದ ನಂತರ ಭಾರತ ಅಭಿವೃದ್ಧಿಯ ಹಾದಿಯಲ್ಲಿದೆ ಎಂದು ಅವರು ಹೇಳಿದರು.
“ಇಂದು ನಮ್ಮ ನೆರೆಯ ರಾಷ್ಟ್ರಗಳ ಸ್ಥಿತಿ ಹೇಗಿದೆ ಎಂದು ನಾವು ನೋಡುತ್ತಿದ್ದೇವೆ. ಸ್ವಾತಂತ್ರ್ಯದ ನಂತರ ಭಾರತ ಅಭಿವೃದ್ಧಿಯತ್ತ ಪಯಣ ಬೆಳೆಸುತ್ತಿದೆ. ದೇಶದಲ್ಲಿ ಬಿಕ್ಕಟ್ಟು ಉಂಟಾದಾಗಲೆಲ್ಲಾ ಅದು ಒಗ್ಗಟ್ಟಿನಿಂದ ಮತ್ತು ಬಲಿಷ್ಠವಾಗಿ ಉಳಿದಿದೆ. ಇದರ ಕೀರ್ತಿ ಸಂವಿಧಾನಕ್ಕೆ ಸಲ್ಲಬೇಕು” ಎಂದು ಅವರು ಹೇಳಿದರು.
“ನ್ಯಾಯದ ಅಗತ್ಯವಿರುವ ಈ ದೇಶದ ಕೊನೆಯ ನಾಗರಿಕನನ್ನು ತಲುಪುವುದು ನಮ್ಮ ಮೂಲಭೂತ ಕರ್ತವ್ಯ. ಅದು ಶಾಸಕಾಂಗವಾಗಲಿ, ಕಾರ್ಯಾಂಗವಾಗಲಿ ಅಥವಾ ನ್ಯಾಯಾಂಗವಾಗಲಿ, ಪ್ರತಿಯೊಬ್ಬರೂ ಆ ನಾಗರಿಕನನ್ನು ತಲುಪಬೇಕು” ಎಂದು ಸಿಜೆಐ ಸಭೆಗೆ ತಿಳಿಸಿದರು.
ಆರೋಗ್ಯ ಸೌಲಭ್ಯಗಳ ಕೊರತೆ: ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಆದಿವಾಸಿ ಮಹಿಳೆ


