Homeಮುಖಪುಟಸಂವಿಧಾನದ ಆಶಯ ಮಣ್ಣು ಪಾಲು ಮಾಡಲಿರುವ ಸಂಸದರು

ಸಂವಿಧಾನದ ಆಶಯ ಮಣ್ಣು ಪಾಲು ಮಾಡಲಿರುವ ಸಂಸದರು

- Advertisement -
- Advertisement -

| ವಿಶ್ವಾರಾಧ್ಯ ಸತ್ಯಂಪೇಟೆ |

ನಮ್ಮ ದೇಶದ ಸಂಸತ್ತಿಗೆ ಅದರದೆ ಆದ ಘನತೆ ಗೌರವ ಇದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಭಾರತೀಯರೆಲ್ಲರ ಮಾನವನ್ನು  ಕಾಪಾಡುತ್ತ ಬಂದಿದೆ. ನಮ್ಮ ರಾಷ್ಟ್ರ , ಧರ್ಮ ನಿರಪೇಕ್ಷವಾದ ರಾಷ್ಟ್ರವಾದರೂ ಸಹ ಹಲವಾರು ಮತ ಧರ್ಮಗಳನ್ನು ತನ್ನ ಒಡಲಲ್ಲಿ ಇದು ಇಂಬಿಟ್ಟುಕೊಂಡಿದೆ. ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಯೂ ತನಗೆ ಇಷ್ಟ ಬಂದ ಧರ್ಮವನ್ನು ಸೇರುವ ಅದರ ತತ್ವಗಳನ್ನು ಅನುಸರಿಸುವ ಸ್ವಾತಂತ್ರ್ಯವಿದೆ. ಹಾಗಂತ ಎಲ್ಲರೂ ಧರ್ಮದ ಅಡಿಯಲ್ಲಿಯೆ ಬದುಕಬೇಕು ಎಂದೆನಿಲ್ಲ. ಅದೆಷ್ಟೋ ಜನರಿಗೆ ಧರ್ಮ ಒಂದು ಅಫೀಮಾಗಿ ಕಾಣಿಸಿದೆ. ಅಂಥವರು ತಮ್ಮ ವಿವೇಚನೆಯಂತೆ ಭಾರತದ ಸೌರ್ವಭೌಮತ್ವಕ್ಕೆ ದಕ್ಕೆಯಾಗದಂತೆ ವರ್ತಿಸುವ ಉದಾಹರಣೆಗಳು ಸಾಕಷ್ಟು ಇವೆ. ಗುಡಿ ಗುಂಡಾರ ಚರ್ಚು ಮಸೀದಿ ಗುರುದ್ವಾರ ಅನುಭವ ಮಂಟಪ ಮುಂತಾದವು ನಮ್ಮಲ್ಲಿ ಸಾಲು ಸಾಲಾಗಿ ಸಿಕ್ಕುತ್ತವೆ. ಆಯಾ ಧರ್ಮಿಯರು ತಮ್ಮ ತಮ್ಮ ನಂಬಿಕೆ ಆಚರಣೆಗಳನ್ನು ಮುನ್ನಡೆಸಿಕೊಂಡು ಹೊರಟಿದ್ದಾರೆ.

ಯಾವುದೆ ಧರ್ಮ ಇನ್ನೊಂದು ಧರ್ಮದ ಮೇಲೆ ಆಕ್ರಮಣ ನಡೆಸಬಾರದು. ಧರ್ಮದ ಮೂಲ ತಳಹದಿಯೆ ದಯೆ, ಪ್ರೀತಿ, ವಿಶ್ವಾಸ, ಅಂತಃಕರಣ ಎಂಬುದನ್ನು ನಾವು ಯಾರೂ ಮರೆಯಬಾರದು. ಆಯಾ ಧರ್ಮದ ಮೂಲಭೂತ ತತ್ವಗಳ ಕುರಿತು ಆರೋಗ್ಯಕರವಾಗಿ ಚಿಂತಿಸಬಹುದೆ ಹೊರತು ಆಕ್ರಮಣಕಾರಿಯಾಗಿ ಅದರ ವಿರುದ್ಧ ದಂಡೆತ್ತಿ ಹೋಗುವುದಲ್ಲ. ಸಮಾಜದಲ್ಲಿ ವಿಚಾರಗಳನ್ನು ಹರಿಬಿಡುವ ಮೂಲಕ ಧರ್ಮದ ಆಚರಣೆಗಳು ತಪ್ಪಾಗಿದ್ದರೆ ಅವನ್ನು ಒಪ್ಪಮಾಡಲು ಶ್ರಮಿಸಬೇಕಾದುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.

ಮೂಲತಃ ಧರ್ಮ ಸಂಸ್ಥಾಪಕರು ಯಾರಿಗೂ ಕೇಡುಂಟು ಮಾಡದ, ಎಲ್ಲರಿಗೂ ಒಳಿತನ್ನು ಉಂಟು ಮಾಡುವ ತತ್ವಗಳಿಂದ ಧರ್ಮವನ್ನು ಕಟ್ಟಿಕೊಟ್ಟಿದ್ದಾರೆ. ಆದರೆ ಅವನ್ನು ಆಚರಣೆಗೆ ತರಬೇಕಾದ ಮುಲ್ಲಾ ಪಾದ್ರಿ ಪೂಜಾರಿಗಳು ತಮ್ಮ ತಪ್ಪು ಗ್ರಹಿಕೆಯಿಂದ ಮೂಲ ಗ್ರಂಥದ ತತ್ವಗಳನ್ನು ಜಾರಿಗೆ ತರುವಲ್ಲಿ ಸೋತು ಹೋಗಿದ್ದಾರೆ. ಇದರಿಂದಾಗಿ ಧರ್ಮ ವಿವೇಚನೆಯ ಮಾರ್ಗವಾಗುವ ಬದಲು ಇಂದು ಧರ್ಮ ಬಂಧನದವಾಗಿದೆ. ಸ್ವಚ್ಚಂದ ಹಕ್ಕಿಯನ್ನು ಕೂಡಿಹಾಕಿ ಅದರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ.

ಕೃಪೆ: ಪಂಜು ಗಂಗೊಳ್ಳಿ

ಭಾರತದ ಇಂದಿನ ಪರಿಸ್ಥಿತಿ ಎಂದಿಗಿಂತಲೂ ತುಂಬಾ ಭೀಕರವಾಗಿದೆ. ಧರ್ಮದ ಆಶಯಗಳು ಸಂಸತ್ತನ್ನು ಪ್ರವೇಶಿಸಿದ್ದರೆ ಯಾರಿಗೂ ತೊಂದರೆ ಇರುತ್ತಿರಲಿಲ್ಲ. ಆದರೆ  ಅಧರ್ಮದ ಹಿನ್ನೆಲೆಯ ಉಗ್ರವಾದ ನಮ್ಮ ಸಂಸತ್ತನ್ನು ಪ್ರವೇಶಿಸಿದೆ. ಮೊನ್ನೆ ಮೊನ್ನೆಯ ಸಂಸತ್ತಿನ ಆರಂಭದಲ್ಲಿ ಮೊಳಗಿದ ಜೈಶ್ರೀರಾಮ್, ತಕ್ಬಿರ್ ಅಲ್ಲಾಹು ಅಕ್ಬರ್, ಜೈ ಕಾಳಿ ಮಾತೆ ಎಂಬ ಮಾತುಗಳು ಅವರವ ಅಂತಃಕರಣದಿಂದ ಬಂದಿದ್ದರೆ ಯಾವ ಪ್ರಶ್ನೆಯೂ ನಮ್ಮಲ್ಲಿ ಮೊಳೆಯುತ್ತಿರಲಿಲ್ಲ. ಆದರೆ ಆ ಘೋಷಣೆಗಳ ಹಿಂದೆ ದೇಶದ ಜನರ ಭಾವನಾತ್ಮಕ ಮನಸ್ಸುಗಳನ್ನು ಉಪಯೋಗಿಸಿಕೊಂಡು ಮೇಲೇರಬೇಕೆಂಬ ತುಡಿತ ಇವರಲ್ಲಿ ಇದ್ದದ್ದು ಯಾರಿಗಾದರೂ ಕಾಣುತ್ತದೆ. ನಿಜವಾದ ಧರ್ಮದ ತಿರುಳುಗಳು ಓಟ್ ಬ್ಯಾಂಕ್ ಮಾಡಿಕೊಂಡರೆ ಯಾರದೂ ತಕರಾರು ಇಲ್ಲ. ಆದರೆ ಧರ್ಮದ ತತ್ವಗಳನ್ನು ಮೂಲೆಗುಂಪು ಮಾಡಿ, ಆ ತತ್ವಗಳನ್ನು ತಮ್ಮ ಮೂಗಿನ ನೇರಕ್ಕೆ ಅರ್ಥೈಸಿಕೊಂಡು ಓಟಿನ ರಾಜಕಾರಣ ಮಾಡುವುದು ಇದೆಯಲ್ಲ ಇದು ಜನತೆಯನ್ನು ಗಂಡಾಂತರಕ್ಕೆ ದೂಡಬಲ್ಲುದು.

ಕೃಪೆ: ಪಿ ಮಹಮ್ಮದ್

ಈ ಮನೋಭಾವದ ಹಿನ್ನೆಲೆಯ ಜೈಶ್ರೀರಾಮ ಘೋಷಣೆ ತುಂಬಾ ಅಪಾಯಕಾರಿಯಾದ ಬೆಳವಣಿಗೆ. ಜೈಶ್ರೀರಾಮ ಘೋಷಣೆ ಕೂಗುವುದು ಸಂವಿಧಾನ ವಿರೋಧಿ ಅಲ್ಲ, ಆದರೆ ಆ ಘೋಷಣೆಯೊಳಗೆ ಇನ್ನೊಬ್ಬರ ಕೆರಳಿಸುವುದು, ಅವಮಾನಿಸುವುದು, ತುಚ್ಛವಾಗಿ ಕಾಣುವುದು ಇದೆಯಲ್ಲ ಇದು ಒಳ್ಳೆಯ ಬೆಳವಣಿಗೆ ಅಲ್ಲ. ಜೈ ಶ್ರೀರಾಮ ಘೋಷಣೆ ಕೂಗಿದಾಕ್ಷಣ ಅವರನ್ನು ಮಮತಾ ಬ್ಯಾನರ್ಜಿ ಜೈಲಿಗೆ ಅಟ್ಟುವುದು ಎಷ್ಟು ತಪ್ಪೋ, ಮಮತಾ ಅವರನ್ನು ಕಂಡಾಕ್ಷಣ ಅವರ ಚಿತ್ತಾವಣೆಗಾಗಿ ಜೈ ಶ್ರೀರಾಮ ಕೂಗುವುದು ಕೂಡ ತಪ್ಪು.

ಮತ್ತೊಂದು ಸಂಗತಿ : ಧರ್ಮದ ಆಚರಣೆಗಳು , ತತ್ವಗಳು ತೀರಾ ಖಾಸಗಿಯಾದ ಸಂಗತಿಗಳು. ಗಂಡ ಹೆಂಡತಿಯ ಸಂಬಂಧದಂತೆ ಅದು ಅಂತರಂಗದ ಸತ್ಯ. ಅದನ್ನು ಎಲ್ಲರಿಗೂ ಕಾಣಿಸುವಂತೆ ತೋರಿಸುವ ಅಗತ್ಯತೆ ಕಾಣುವುದಿಲ್ಲ. ಎಲ್ಲರಿಗೂ ಕಾಣಲಿ ಎಂಬಂತೆ ಧರ್ಮದ ಆಚರಣೆಗಳು ಮಾಡುತ್ತಿದ್ದರೆ ಅದು ಕೇವಲ ಆಡಂಬರದ ಆಚರಣೆಯಾಗುತ್ತದೆ. ಅಂತರಂಗದ ಆಚರಣೆ ಆಗಿರುವುದಿಲ್ಲ. ಧರ್ಮ ನಮ್ಮ ನಮ್ಮ ಮನದ ಕೊಳೆಯನ್ನು ತೊಳೆಯಲು ಉಪಯೋಗಿಸಿಕೊಳ್ಳಬೇಕೇ ಹೊರತು, ನಮ್ಮ ಅಂತರಂಗಕ್ಕೆ ಎಲ್ಲಿಯದೋ ಕಸ ಕಡ್ಡಿ ತಂದು ಹಾಕುವುದಕ್ಕೆ ಅಲ್ಲ. ಧರ್ಮ ಹರಿವ ನೀರಿನಂತೆ ನಿರ್ಮಲ. ನಿಷ್ಕಲ್ಮಶ. ಅದು ನಿಂತ ನೀರಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡರೆ ನಮ್ಮ ಸಂಸತ್ ಸದಸ್ಯರು ಭಾರತವನ್ನು ಊಧ್ರ್ವಮುಖದತ್ತ ಕೊಂಡು ಹೋಗಬಲ್ಲರು.

ಸ್ವವಿಮರ್ಶೆ , ಆತ್ಮವಲೋಕನ ಇಲ್ಲದೆ ನಾ ಹೆಚ್ಚು ನೀ ಹೆಚ್ಚು ಎಂಬ ದಾಟಿಯಲ್ಲಿ ಹೊರಟ ಸಂಸದರ ಮಾತು ವರ್ತನೆಗಳಿಗೆ ಕಡಿವಾಣ ಹಾಕಬೇಕು. ಇಲ್ಲದೆ ಹೋದರೆ ನಮ್ಮ ಭಾರತದ ಸಂಸತ್ತು ಅಧರ್ಮ ಸಂಸತ್ತಾಗಿ ಮಾರ್ಪಾಟಾಗುತ್ತದೆ. ಸಂತೆಯ ಗದ್ದಲ,  ಬಲಶಾಲಿಯ ನಡೆ ನುಡಿಗಳೆ ಶ್ರೇಷ್ಠ ಎಂಬ ಕಾಡು ನ್ಯಾಯ ಸಂಸತ್ತು ಪ್ರವೇಶಿಸಿದರೆ ದೇಶದ ಜನತೆ ಮತ ಧರ್ಮಗಳ ನೆಪದಲ್ಲಿ ಹತರಾಗುವ ಕಾಲ ದೂರವಿಲ್ಲವೆನಿಸುತ್ತದೆ. ಧರ್ಮ ಅಫೀಮಾಗಿ ಮಾರ್ಪಟ್ಟಾಗ ಇದೆಲ್ಲ ಸಾಧ್ಯವಾಗುತ್ತದೆ. ಭಾರತ ನಿಜವಾದ ಧರ್ಮದ ಆಶಯಗಳನ್ನು ಹೊತ್ತುಕೊಂಡು ಹೋಗಲಿ. ಸಂವಿಧಾನದ ಮಾನವನ್ನು ಸಂಸದರು ಹಾಳು ಮಾಡದಿರಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...