Homeಅಂಕಣಗಳುಸಂಪಾದಕೀಯ; ಸಾಂವಿಧಾನಿಕ ನೈತಿಕತೆಯಲ್ಲಿ ಕಮಾನು ಕಟ್ಟಬೇಕಿದೆ ಬಣ್ಣಗಳು

ಸಂಪಾದಕೀಯ; ಸಾಂವಿಧಾನಿಕ ನೈತಿಕತೆಯಲ್ಲಿ ಕಮಾನು ಕಟ್ಟಬೇಕಿದೆ ಬಣ್ಣಗಳು

- Advertisement -
- Advertisement -

2017ಅನ್ನಿಸತ್ತೆ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ’ಕಾನ್ಸ್ಟಿಟ್ಯೂಶನ್’ ಎಂಬ ಕ್ರೊಯೇಶಿಯನ್ ಸಿನಿಮಾದ ಪ್ರದರ್ಶನ ಇತ್ತು. ನಾಲ್ಕು ಮುಖ್ಯ ಪಾತ್ರಗಳು, ಅವುಗಳ ನಡುವಿನ ಪೂರ್ವಾಗ್ರಹಗಳು-ಭಿನ್ನಾಭಿಪ್ರಾಯಗಳು ಮತ್ತವುಗಳನ್ನು ಅವರೆಲ್ಲರೂ ಕಳಚಿಕೊಳ್ಳುವ ಅದ್ಭುತ ನಿರೂಪಣೆಯಿದ್ದ ಸಿನಿಮಾವದು.

ವೀಕೋ ಕ್ರೊಯೇಶಿಯನ್ ಪ್ರೊಫೆಸರ್ ಮತ್ತು ಹೋಮೋಸೆಕ್ಷುಯಲ್. ಗಂಡಸಿನ ಬಟ್ಟೆ ತೊಟ್ಟು ಕಾಲೇಜಿನಲ್ಲಿ ಪಾಠ ಮಾಡುವ ಪ್ರೊಫೆಸರ್ ಮನೆಯಲ್ಲಿ ಹೆಂಗಸಿನ ಬಟ್ಟೆ ಹಾಕಿ, ಮಡಿದಿರುವ ತನ್ನ ಪ್ರಿಯಕರನ ನೆನಪಿನಲ್ಲಿ ಪರಿತಪಿಸುತ್ತಿರುತ್ತಾನೆ. ತಂದೆ ಹಾಸಿಗೆ ಹಿಡಿದಿದ್ದಾರೆ. ಅವರು ಹಿಟ್ಲರ್‌ನ ನಾಜಿ ಸೇನೆಯ ಜೊತೆಯಾಗಿ ಹೋರಾಡಿದವರು. ಮಗನ ಸೆಕ್ಷುಯಾಲಿಟಿ ಬಗ್ಗೆ ತನ್ನ ಕೊನೆಯ ದಿನಗಳಲ್ಲೂ ಇನ್ನೂ ಕೋಪ ಇಳಿದಿಲ್ಲ. ಇದರ ಜೊತೆಗೆ ಕಾಲೇಜು ವಿದ್ಯಾರ್ಥಿಗಳಲ್ಲಿ ಕೆಲವರು ಪ್ರೊಫೆಸರ್ ಅವರ ಈ ನಡವಳಿಕೆಯ ವಿರುದ್ಧವಾಗಿದ್ದಾರೆ.

ಈ ಪ್ರೊಫೆಸರ್ ವಾಸಿಸುವ ಅಪಾರ್ಟ್‌ಮೆಂಟ್‌ನಲ್ಲಿಯೇ ಕೆಳಗೆ ವಾಸಿಸುವ ಒಂದು ಜೋಡಿ. ಗಂಡ ಆಂಟೆ ಸರ್ಬಿಯಾ ಮೂಲದವನು. ಪೊಲೀಸ್ ಕೆಲಸ. ಹೆಂಡತಿ ಮಾಜಾ ಆಸ್ಪತ್ರೆಯಲ್ಲಿ ನರ್ಸ್. ಆಂಟೆ ತನ್ನ ಮುಂಬಡ್ತಿಗಾಗಿ ಸಂವಿಧಾನದ ಒಂದು ಪರೀಕ್ಷೆಯನ್ನು ಪಾಸು ಮಾಡಬೇಕಿರುತ್ತದೆ. ಆದರೆ ಅದು ಆತನಿಗೆ ಬಹಳ ತ್ರಾಸದಾಯಕವಾದದ್ದು.

ಕೆಲವು ಹೋಮೋಫೋಬಿಕ್ ಯುವಕರು ರಸ್ತೆಯಲ್ಲಿ ವೀಕೋ ಮೇಲೆ ದಾಳಿ ನಡೆಸಿ ಆತನನ್ನು ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ. ಆಸ್ಪತ್ರೆಯಲ್ಲಿ ಮಾಜಾ ಆತನನ್ನು ಗುರುತಿಸಿ ಶುಶ್ರೂಷೆ ಮಾಡುತ್ತಾಳೆ. ಅದನ್ನು ಆತನ ಮನೆಯಲ್ಲಿಯೂ ಮುಂದುವರೆಸುತ್ತಾಳೆ. ಜೊತೆಗೆ ವೀಕೋನ ತಂದೆಯನ್ನು ನೋಡಿಕೊಳ್ಳುತ್ತಾಳೆ. ಇದಕ್ಕೆ ಬದಲಾಗಿ ಆಂಟೆಗೆ ಸಂವಿಧಾನದ ಪಾಠ ಹೇಳಿಕೊಡಲು ಪ್ರೊಫೆಸರ್ ವೀಕೋಗೆ ಕೇಳಿಕೊಳ್ಳುತ್ತಾಳೆ.

ಹೀಗೆ ಏರ್ಪಾಡಾದ ಸಂಬಂಧದಲ್ಲಿ, ಕ್ರೋಯೇಶಿಯನ್ ವೀಕೋ ತಾನೇ ಲೈಂಗಿಕ ಅಲ್ಪಸಂಖ್ಯಾತನಾದರೂ, ಅದಕ್ಕಾಗಿ ದೌರ್ಜನ್ಯವನ್ನು ಎದುರಿಸುತ್ತಿದ್ದರೂ, ಆತನಿಗೆ ಸರ್ಬಿಯನ್ ಅಲ್ಪಸಂಖ್ಯಾತರ ಮೇಲೆ ಪೂರ್ವಾಗ್ರಹಪೀಡಿತ ಅಸಹನೆ. ಆಂಟೆಗೆ ವೀಕೋನ ಲೈಂಗಿಕ ಧೋರಣೆಯ ಬಗ್ಗೆ ವ್ಯಂಗ್ಯದ ಪೂರ್ವಾಗ್ರಹ. ಹೀಗೆ ಅವರ ನಡುವೆ ಘರ್ಷಣೆಗಳು ಜರುಗುತ್ತಲೇ ಇರುತ್ತವೆ.

ಆದರೆ ಸಂವಿಧಾನದ ಪಾಠ ಮಾಡುವ-ಕೇಳುವ ಜೊತೆಜೊತೆಗೇ, ಮಾನವ ಸಂಬಂಧಗಳ ಒಡನಾಟದಿಂದ ಎಲ್ಲರಿಗೂ ತಮ್ಮ ಪೂರ್ವಾಗ್ರಹಗಳನ್ನು ಕಳಚಿಕೊಳ್ಳಲು ಸಾಧ್ಯವಾಗುತ್ತದೆ. ಸಂವಿಧಾನ ಪುಸ್ತಕವನ್ನು ಚೆನ್ನಾಗಿ ಬಲ್ಲ ಪ್ರೊಫೆಸರ್‌ಗೆ ಅದರ ನೈತಿಕತೆ ದಕ್ಕಲು, ತಾವು ಶತ್ರುಗಳು ಎಂದುಕೊಂಡವರ ಪ್ರೀತಿಯ ಒಡನಾಟ ಬೇಕಿರುತ್ತದೆ! ಆಂಟೆಯಲ್ಲು ಬದಲಾವಣೆ ಸಾಧ್ಯವಾಗುತ್ತದೆ.

ಈ ಕಥೆಯನ್ನು ಭಾರತಕ್ಕೆ ಅನ್ವಯಿಸುವುದು ಕಷ್ಟವೇನಲ್ಲ. ಇಲ್ಲಿಯೂ ಲೈಂಗಿಕ ಅಲ್ಪಸಂಖ್ಯಾತರಾಗಿರುವ ಮೇಲ್ಜಾತಿಯ ಬರಹಗಾರರು ಮುಸ್ಲಿಂ ದ್ವೇಷವನ್ನು ತಮ್ಮ ಕಥೆ-ಕಾದಂಬರಿಗಳಲ್ಲಿ ಧಾರಾಳವಾಗಿ ಎಳೆದು ತರುತ್ತಾರೆ. ತಾವೇ ತಮ್ಮ ಲೈಂಗಿಕ ಅಲ್ಪಸಂಖ್ಯಾತ ಹಕ್ಕುಗಳಿಗೆ ಹೋರಾಟ ಮಾಡುತ್ತಿದ್ದರೂ, ಬ್ರಾಹ್ಮಣ್ಯ ಹೋಗಲಾಡಿಸಬೇಕೆನ್ನುವ, ಸಮ ಸಮಾಜದ, ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕೆನ್ನುವ, ಪ್ರಾತಿನಿಧ್ಯ ಸರಿಪಡಿಸಬೇಕೆನ್ನುವ ಸಾಂವಿಧಾನಿಕ ನೈತಿಕತೆಯ ವಿವೇಕ ಅವರಿಗೆ ಸುಲಭವಾಗಿ ಸಿಕ್ಕಿರುವುದಿಲ್ಲ. ತಮ್ಮ ಪ್ರಿವಿಲೆಜ್‌ಗಳನ್ನು ದಾಟಿಕೊಂಡು, ತಮ್ಮ ಹಕ್ಕುಗಳ ಜೊತೆಗೆ ಇತರ ದುರ್ಬಲ ಸಮುದಾಯಗಳ ಹಕ್ಕುಗಳನ್ನು ಗುರುತಿಸುವ, ಅವರ ಶೋಷಣೆಯನ್ನೂ ಪರಿಗಣಿಸಲು ತಮ್ಮ ಪೂರ್ವಾಗ್ರಹಗಳನ್ನು ಕಳೆದುಕೊಳ್ಳಬೇಕಿರುವ ಅಗತ್ಯವನ್ನು ಚಿತ್ರಿಸುವ ಕಾನ್ಸ್ಟಿಟ್ಯೂಶನ್ ಚಿತ್ರಕಥೆ ನೆನಪಿಗೆ ಬಂದದ್ದು ಲೈಂಗಿಕ ಅಲ್ಪಸಂಖ್ಯಾತ ಹೋರಾಟದ ಮುಂಚೂಣಿಯಲ್ಲಿರುವ ಅಕ್ಕಯ್ ಪದ್ಮಶಾಲಿ ಅವರ ಆತ್ಮಕಥನದ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದಾಗ.

ಲೈಂಗಿಕತೆಯನ್ನು, ಲೈಂಗಿಕ ಕ್ರಿಯೆಯನ್ನು ತಪ್ಪಾಗಿ ಸಂಬೋಧಿಸಲಾಗಿದ್ದ, ಮತ್ತು ಲೈಂಗಿಕ ಅಲ್ಪಸಂಖ್ಯಾತರನ್ನು ಕ್ರಿಮಿನಲೈಸ್ ಮಾಡಿದ್ದ ಸೆಕ್ಷನ್ 377ಅನ್ನು ರದ್ದುಗೊಳಿಸಲು ಚಳವಳಿ ರೂಪಿಸಿದ್ದವರಲ್ಲಿ ಒಬ್ಬರಾಗಿದ್ದವರು ಅಕ್ಕಯ್ ಪದ್ಮಶಾಲಿ. ಅದಕ್ಕಾಗಿ ಹೋರಾಡಿ ಶ್ರಮಿಸಿದ್ದವರು. 2009 ಜುಲೈ 2ರಂದು ದೆಹಲಿ ನ್ಯಾಯಾಲಯ ಈ ಚಳವಳಿಯನ್ನು ಪುರಸ್ಕರಿಸಿ ನೀಡಿದ ತೀರ್ಪು ಐತಿಹಾಸಿಕವಾದದ್ದು. ಇದರ ಬಗ್ಗೆ ತಮ್ಮ ಪುಸ್ತಕದಲ್ಲಿ ಅಕ್ಕಯ್ ಅವರು ಬರೆಯುತ್ತಾ “ಖಾಸಗಿಯಾಗಿ ವಯಸ್ಕರ ನಡುವೆ ಸಹಮತದ ಲೈಂಗಿಕತೆಯು ಶಿಕ್ಷಾರ್ಹವಲ್ಲ ಎಂದು ಅದು ಹೇಳಿತು. ತೀರ್ಪನ್ನು ಸಾಂವಿಧಾನಿಕ ನೈತಿಕತೆಯ ಹಿನ್ನೆಲೆಯಲ್ಲಿ ನೀಡಲಾಗಿತ್ತು. ನೀವು, ಸ್ವಂತ ನೈತಿಕತೆಯನ್ನು ಕ್ರಿಯಾಚರಣೆಯಲ್ಲಿ ತರಬಹುದು. ಅದು ಭಾರತಕ್ಕೆ ಸಂಬಂಧಿಸಿದಂತೆ ಅಲ್ಲ. ಸಾಂವಿಧಾನಿಕ ನೈತಿಕತೆಯು ಮುಖ್ಯ ನೈತಿಕತೆಯಾಗಿದ್ದು, ಪ್ರತಿಯೊಬ್ಬರೂ ಅದರ ಅಡಿಯಲ್ಲಿ ಬರುತ್ತಾರೆ” ಎನ್ನುತ್ತಾರೆ.

ಈ ತೀರ್ಪನ್ನು ಮತ್ತೆ ಸುಪ್ರೀಂ ಕೋರ್ಟ್ ರದ್ದುಪಡಿಸಿದ್ದು, ಅದರ ವಿರುದ್ಧ ಮತ್ತೆ ಚಳವಳಿ, ಮತ್ತೆ ಸಿಕ್ಕ ಜಯ ಹೀಗೆ ಇವುಗಳ ಬಗ್ಗೆ ಪುಸ್ತಕ ಬಿಡುಗಡೆಯಲ್ಲಿಯೂ ಮಾತನಾಡಿದ ಅಕ್ಕಯ್, ಸಾಂವಿಧಾನಿಕ ನೈತಿಕತೆಯನ್ನು ಅಳವಡಿಸಿಕೊಳ್ಳುವುದರ ಅಗತ್ಯದ ಬಗ್ಗೆ ಮತ್ತು ತಮ್ಮ ಹಕ್ಕುಗಳಿಗಾಗಿ ಮಾಡುವ ಹೋರಾಟವನ್ನು ಪ್ರತ್ಯೇಕವಾಗಿ ನೋಡದೆ ಸಮಸ್ತವಾಗಿ ಎಲ್ಲ ದುರ್ಬಲ ಸಮುದಾಯಗಳ ಹೋರಾಟಗಳನ್ನು ಒಟ್ಟಿಗೆ ಕೊಂಡೊಯ್ಯುವ – ಅದು ದಲಿತ ಹೋರಾಟ ಆಗಿರಲಿ, ಅಲ್ಪಸಂಖ್ಯಾತ ಧರ್ಮೀಯರ ಹೋರಾಟವಿರಲಿ ಅಥವಾ ಮಹಿಳಾ ಹಕ್ಕುಗಳ ಹೋರಾಟವಿರಲಿ- ಎಷ್ಟು ಮುಖ್ಯ ಎಂಬುದನ್ನು ಮನಮುಟ್ಟುವಂತೆ ವಿವರಿಸುತ್ತಿದ್ದರು.

ಅಕ್ಕಯ್ ತಮ್ಮ ಆತ್ಮಕತೆಗೆ ಮೊದಲು ’ಕರುಣೆಗೊಂದು ಸವಾಲು’ ಎಂದು ಹೆಸರಿಸಿದ್ದರಂತೆ. ಪ್ರಸಕ್ತ ಸಂಚಿಕೆಯಲ್ಲಿ ಸುಭಾಷ್ ಅವರಿಗೆ ನೀಡಿರುವ ಸಂದರ್ಶನದಲ್ಲೂ ಅವರು ಇದರ ಬಗ್ಗೆ ವಿವರಿಸಿದ್ದಾರೆ. ಕರುಣೆ ಸಾಕೆನ್ನುವ ಅವರು, ಮನುಷ್ಯರಿದ್ದಾರೆ, ಅದರಲ್ಲಿ ವೈವಿಧ್ಯತೆ ಇದೆ, ಅದನ್ನು ಒಪ್ಪಿಕೊಳ್ಳುವುದನ್ನು ಕಲಿಯಿರಿ ಎಂದು ಸಮಸ್ತ ಸಹನಾಗರಿಕರಿಗೆ ಕರೆ ನೀಡುತ್ತಿದ್ದಾರೆ.

LGBTQ ಸಮುದಾಯ ಜಗತ್ತಿನಾದ್ಯಂತ ಸಂಭ್ರಮಿಸುವ ದಿನ ಜೂನ್ 28. ಅದೇ ದಿನ ಅಕ್ಕಯ್ ಪುಸ್ತಕದ ಬಿಡುಗಡೆ ಇತ್ತು. ಜೂನ್ ಅನ್ನು ಪ್ರೈಡ್ ತಿಂಗಳು ಎಂದೇ ಕರೆಯಲಾಗುತ್ತದೆ. ವೈವಿಧ್ಯತೆಯ ಬಣ್ಣಗಳನ್ನು ಅರಿತು ಅದರಲ್ಲಿ ಮಿಂದು ಒಂದಾಗಬೇಕಿರುವ ಮತ್ತು ದೇಶದ ಬಹುತ್ವವನ್ನು ಸರಿ ದಾರಿಯಲ್ಲಿ ಕೊಂಡೊಯ್ಯಬೇಕಿರುವುದಕ್ಕೆ ಹೋರಾಟದ ಬದುಕು ಸಾಗಿಸಿ, ಕರುಣೆಯ ನಿರೀಕ್ಷೆಯನ್ನು ಪಕ್ಕಕ್ಕಿಟ್ಟು, ತಮ್ಮ ನೋವುಗಳನ್ನು ಇತರ ಅಂಚಿನಲ್ಲಿರುವ ಸಮುದಾಯದ ಜನರ ನೋವುಗಳಿಗೆ ಸಮೀಕರಿಸಿಕೊಂಡು ಹೋರಾಡಿದ ಅಕ್ಕಯ್, ಮಾನವಿ ಬಂದೋಪಾಧ್ಯಾಯ, ರೇವತಿ ಇಂತಹ ಮುಂತಾದವರ ಬದುಕು ಬರಹ ನಮಗೆ ಮುಖ್ಯವಾಗುತ್ತದೆ.

ರೇವತಿ ಅವರ ಬಗ್ಗೆ ಗೌರಿಯವರ ಒಂದು ಹಳೆಯ ಬರಹ, ಅಕ್ಕಯ್ ಅವರ ಸಂದರ್ಶನ ಮತ್ತು ಮಾನವಿ ಬಂದೋಪಾಧ್ಯಾಯ ಅವರ ಆತ್ಮಕತೆಯ ಕನ್ನಡಾನುವಾದದ ಒಂದು ಭಾಗವನ್ನು ಈ ಸಂಚಿಕೆಯಲ್ಲಿ ಪ್ರಕಟ ಮಾಡುವುದರೊಂದಿಗೆ ನಾವು ಪ್ರೈಡ್‌ನಲ್ಲಿ ಭಾಗಿಯಾಗುತ್ತಿದ್ದೇವೆ ಹಾಗೂ ಈ ಮೂರು ಜನ ತೋರಿಸಿಕೊಟ್ಟ ಭ್ರಾತೃತ್ವವನ್ನು ಅಪ್ಪಿಕೊಳ್ಳಲು ಮುಂದಾಗುತ್ತಿದ್ದೇವೆ.

ಭ್ರಾತೃತ್ವವೆನ್ನುವುದು (ಬಾಬಾಸಾಹೇಬರೂ ಪ್ರತಿಪಾದಿಸಿದಂತೆ) ರಾಷ್ಟ್ರವೊಂದನ್ನು ರೂಪಿಸುವ ಪ್ರಮುಖ ಮೌಲ್ಯಗಳಲ್ಲೊಂದು. ಅದೇ ದೇಶದ ಘೋಷಿತ ಗಡಿಗಳ ಒಳಗೆ ಬದುಕುವ ಸಹಜೀವಿಯನ್ನು ತನ್ನಂತೆ ಭಾವಿಸದಿದ್ದರೆ ಅದು ಹೇಗೆ ದೇಶವಾದೀತು? ಆ ದೃಷ್ಟಿಯಲ್ಲಿ ಮಹಿಳೆ, ಲೈಂಗಿಕ ಅಲ್ಪಸಂಖ್ಯಾತರು, ದಲಿತರು ಹಾಗೂ ಮುಸ್ಲಿಮರ ಜೊತೆಗಿನ ಬಾಂಧವ್ಯವನ್ನು ’ದೇಶವಾಸಿ’ಗಳು ನೋಡಬೇಕಿದೆ. ಅತ್ಯಂತ ಸಹಜವಾಗಿ. ಆಗ ನಿಜವಾದ ಅರ್ಥದಲ್ಲಿ ರಾಷ್ಟ್ರವು ಮೈದಾಳುತ್ತದೆ; ನಿಧಾನಕ್ಕೆ ಗಡಿಗಳನ್ನೂ ದಾಟಿದ ’ಮನುಷ್ಯ ಸಮಾಜ’ ರೂಪುಗೊಳ್ಳುತ್ತದೆ.


ಇದನ್ನೂ ಓದಿ: ನನ್ನ ತಪ್ಪಿನಿಂದ ರಾಹುಲ್ ಗಾಂಧಿ ಕೆಟ್ಟ ರೀತಿಯ ಟ್ರೋಲ್‌ಗೆ ಒಳಗಾದರು- ನಟಿ ರಮ್ಯಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...

ಬುರ್ಖಾ ಧರಿಸದ ಕಾರಣಕ್ಕೆ ಪತ್ನಿ-ಮಕ್ಕಳ ಕೊಲೆ; ಮನೆಯೊಳಗೆ ಹೂತುಹಾಕಿದ ವ್ಯಕ್ತಿ

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಘೋರ ಘಟನೆಯಿಂದು ವರದಿಯಾಗಿದೆ, ತನ್ನ ಪತ್ನಿ ಮತ್ತು ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ತ್ರಿವಳಿ ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿ ಫಾರೂಕ್ ಎಂದು...

ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ವಿಶೇಷ ಕಾರ್ಯಾಚರಣೆ: ಮೊಬೈಲ್ ಫೋನ್, ಗಾಂಜಾ ವಶ: ಡಿಜಿಪಿ ಅಲೋಕ್ ಕುಮಾರ್

ಕರ್ನಾಟಕದ ಕಾರಾಗೃಹಗಳಲ್ಲಿ 36 ಗಂಟೆಗಳ ಕಾಲ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು, ಚಾಕುಗಳು ಮತ್ತು ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಿದ್ದುಪಡಿ ಸೌಲಭ್ಯಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು...

ನ್ಯಾಷನಲ್ ಹೆರಾಲ್ಡ್ ಪ್ರಕರಣ : ಮೋದಿ, ಅಮಿತ್ ಶಾ ರಾಜೀನಾಮೆಗೆ ಖರ್ಗೆ ಒತ್ತಾಯ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ದ ಜಾರಿ ನಿರ್ದೇನಾಲಯ (ಇಡಿ) ದಾಖಲಿಸಿದ್ದ ಹಣ ಅಕ್ರಮ ವರ್ಗಾವಣೆ (ಪಿಎಂಎಲ್‌ಎ) ದೂರು ಸ್ವೀಕರಿಸಲು ದೆಹಲಿ ನ್ಯಾಯಾಲಯ ನಿರಾಕರಿಸಿರುವುದನ್ನು ಕಾಂಗ್ರೆಸ್‌ ಸ್ವಾಗತಿಸಿದೆ. ಬಿಜೆಪಿ...

ಹಿಜಾಬ್ ಎಳೆದ ನಿತೀಶ್ ಕುಮಾರ್: ಸರ್ಕಾರಿ ಸೇವೆಗೆ ಸೇರದಿರಲು ನಿರ್ಧರಿಸಿದ ವೈದ್ಯೆ?

ಆಯುಷ್ ವೈದ್ಯೆ ನುಸ್ರತ್ ಪರ್ವೀನ್ ಇತ್ತೀಚೆಗೆ ತಮ್ಮ ನೇಮಕಾತಿ ಪತ್ರವನ್ನು ಪಡೆದಿದ್ದರೂ ಬಿಹಾರ ಸರ್ಕಾರಿ ಸೇವೆಗೆ ಸೇರದಿರಲು ನಿರ್ಧರಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಪಾಟ್ನಾದಲ್ಲಿ ನಡೆದ ಸಕಾfರಿ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ...

ಮಹಿಳೆಯ ಹಿಜಾಬ್ ಎಳೆದ ಆರೋಪ: ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ಬೆಂಗಳೂರಿನ ವಕೀಲರಿಂದ ದೂರು

ಬೆಂಗಳೂರು: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಿಳೆಯೊಬ್ಬರ ಹಿಜಾಬ್ ಅನ್ನು ಹಿಡಿದ ಎಳೆದ ವಿಚಾರಕ್ಕೆ ಸಂಬಂಧ ಪಟ್ಟಂತೆ ಅವರ ವಿರುದ್ಧ ಬೆಂಗಳೂರು ಮೂಲದ ವಕೀಲರೊಬ್ಬರು ಮಂಗಳವಾರ ಪೊಲೀಸ್ ಮಹಾನಿರ್ದೇಶಕರು ಮತ್ತು ಇನ್ಸ್‌ಪೆಕ್ಟರ್...