Homeಅಂಕಣಗಳುಸರ್ಕಾರಿ ನೌಕರರ ರಾಜಕೀಯ ಒಲವಿನ ಬಗ್ಗೆ ಸರ್ಕಾರದ ನಿರ್ಬಂಧ ತಪ್ಪು: ಎಚ್.ಎಸ್ ದೊರೆಸ್ವಾಮಿ

ಸರ್ಕಾರಿ ನೌಕರರ ರಾಜಕೀಯ ಒಲವಿನ ಬಗ್ಗೆ ಸರ್ಕಾರದ ನಿರ್ಬಂಧ ತಪ್ಪು: ಎಚ್.ಎಸ್ ದೊರೆಸ್ವಾಮಿ

ಯಾವ ಪಕ್ಷಕ್ಕೂ ಅವರು ಸದಸ್ಯರಾಗಕೂಡದು ಎಂಬುದು ಸರಿ. ಆದರೆ ಅವರ ಮನೆಯವರ ಮೇಲೆಲ್ಲ ರಾಜ್ಯಾಂಗವಿರೋಧಿ ಕಾನೂನನ್ನು ಹೇರಲು ಮೋದಿ, ಯಡಿಯೂರಪ್ಪನವರ ಸರ್ಕಾರಕ್ಕೆ ಯಾವ ಹಕ್ಕಿದೆ?

- Advertisement -
- Advertisement -

ಹಿಂದೆ ಎಂದೂ ಇಲ್ಲದಷ್ಟು ಅಶಾಂತಿ ಈಗ ರಾಷ್ಟ್ರವನ್ನು ಆವರಿಸಿದೆ. ಇತ್ತೀಚಿನ ಘಟನೆಗಳು ಹಾಗೂ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ದಿನಕ್ಕೊಂದು ರಾಜಕೀಯ ತಿಕ್ಕಾಟಗಳು ಹುಟ್ಟಿಕೊಳ್ಳುತ್ತಲೇ ಇವೆ. ಕಾರ್ಯಾಂಗ ಈಗ ಬಹುಮಟ್ಟಿಗೆ ಆಡಳಿತಾಂಗದ ಗುಲಾಮನಾಗುತ್ತಿದೆ. Enforcement Directorateನ್ನು ಮೋದಿ ಸರ್ಕಾರ ಕಬ್ಜಾ ಮಾಡಿಬಿಟ್ಟಿದೆ. ಮೋದಿ ಆಣತಿಯಂತೆ ಅದು ಕೆಲಸ ಮಾಡುತ್ತಿದೆ. ಸಿಬಿಐನ್ನು ಸರ್ವೋಚ್ಚ ನ್ಯಾಯಾಲಯವೇ ಒಮ್ಮೆ ‘ಪಂಜರದಗಿಣಿ’ ಎಂದು ಬಣ್ಣಿಸಿದೆ.

ಈಚೆಗೆ ಎಲ್ಲ ಸರ್ಕಾರಿ ನೌಕರರನ್ನೂ ಅವರ ಮನೆಯೊಳಗಿರುವ ಎಲ್ಲ ಪರಿವಾರದವರೂ ಯಡಿಯೂರಪ್ಪ ಸರ್ಕಾರಕ್ಕೆ ಅಧೀನರಾಗಿರಬೇಕೆಂದು ಒಂದು ಸರ್ಕ್ಯುಲರ್ ಹೊರಡಿಸಲಾಗಿದೆ. ರಾಜಕೀಯ ಸಭೆಗಳಿಗೆ ಹೋಗಕೂಡದು. ಯಾವ ರಾಜಕೀಯ ಪಕ್ಷಕ್ಕೂ ಒಲವು ತೋರಬಾರದು ಎಂದು ಈ ಫರ್ಮಾನು ಎಚ್ಚರಿಸುತ್ತದೆ. ಅಷ್ಟೇ ಅಲ್ಲ, ಅವರ ಮನೆಯವರು ರಾಜಕೀಯ ಕುರಿತು ಮಾತನಾಡಬಾರದು. ರಾಜಕೀಯ ಪಕ್ಷಗಳ ಸದಸ್ಯರಾಗಕೂಡದು, ಪ್ರಚಾರಕ್ಕೂ ಹೋಗಬಾರದು ಎಂದು ಎಚ್ಚರಿಕೆ ನೀಡಿ ಅವರ ಸ್ವಾತಂತ್ರ್ಯಹರಣ ಮಾಡುವ ರಾಜ್ಯಾಂಗವಿರೋಧಿ ನಿಲುವು ತಳೆದಿದೆ. ಸರ್ಕಾರಿ ನೌಕರರು ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸಕೂಡದು,

PC : Mumbai Mirror

ಯಾವ ಪಕ್ಷಕ್ಕೂ ಅವರು ಸದಸ್ಯರಾಗಕೂಡದು ಎಂಬುದು ಸರಿ. ಆದರೆ ಅವರ ಮನೆಯವರ ಮೇಲೆಲ್ಲ ರಾಜ್ಯಾಂಗವಿರೋಧಿ ಕಾನೂನನ್ನು ಹೇರಲು ಮೋದಿ ಸರ್ಕಾರಕ್ಕೆ, ಯಡಿಯೂರಪ್ಪನವರ ಸರ್ಕಾರಕ್ಕೆ ಯಾವ ಹಕ್ಕಿದೆ? ಸರ್ಕಾರಿ ನೌಕರನ ಮನೆಯ ಜನರೆಲ್ಲ ಸರ್ಕಾರಿ ಅಧಿಕಾರಿಗಳಲ್ಲ, ಅವರಿಗೆ ಕೆಲವು ಹಕ್ಕುಗಳಿವೆ. ತಮಗೆ ಸರಿತೋರಿದ ಪಕ್ಷವನ್ನು ಬೆಂಬಲಿಸುವ ಅವರು ನಡೆಸುವ ಸಭೆಸಮ್ಮೇಳನಗಳಿಗೆ ಹೋಗುವ ಅಧಿಕಾರವಿದೆ. ವಾಕ್ ಸ್ವಾತಂತ್ರ್ಯವಿದೆ, ವ್ಯಕ್ತಿ ಸ್ವಾತಂತ್ರ್ಯವಿದೆ. ಈ ಎಲ್ಲ ಹಕ್ಕುಗಳನ್ನು ಮೊಟಕುಗೊಳಿಸುವ ಹಕ್ಕನ್ನು ಮೋದಿಗೆ, ಯಡಿಯೂರಪ್ಪನವರಿಗೆ ಕೊಟ್ಟವರು ಯಾರು?

ಅಷ್ಟೇ ಅಲ್ಲ, ಸರ್ಕಾರಿ ನೌಕರನೂ ಮೊದಲು ಭಾರತದ ಪ್ರಜೆ. ಅವನು ಸರ್ಕಾರಿ ಅಧಿಕಾರಿಯಾದೊಡನೆ ಅವನು ಎಲ್ಲ ಪ್ರಜಾ ಹಕ್ಕನ್ನು ಕಳೆದುಕೊಳ್ಳುವುದಿಲ್ಲ. ಇಂದಿರಾಗಾಂಧಿ ತುರ್ತುಪರಿಸ್ಥಿತಿ ಘೋಷಿಸಿದಾಗ ಇಂತಹದ್ದೇ ಒಂದು ಪ್ರಸಂಗ ನಡೆಯಿತು. ಎಂ.ಸಿ ಚಾಗ್ಲಾರವರು ಆಗ ಮಹಾರಾಷ್ಟ್ರ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದರು. ಅವರು ಜೆಪಿಯವರ ಒಂದು ಸಾರ್ವಜನಿಕ ಸಭೆಗೆ ಹೋಗಿದ್ದರು ಎಂದು ಇಂದಿರಾಗಾಂಧಿ ಸರ್ಕಾರ ಚಾಗ್ಲಾರವರ ಮೇಲೆ ಒಂದು ಕೇಸು ಹಾಕಿತು. ಚಾಗ್ಲಾರವರು ಕಾನೂನನ್ನು ಧಿಕ್ಕರಿಸಿ ನಡೆದುಕೊಂಡಿದ್ದಾರೆ. ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಕೋರಿ ಅರ್ಜಿ ಸಲ್ಲಿಸಲಾಯಿತು. ಚಾಗ್ಲಾರವರ ವಕೀಲರು ಅವರ ನಡಾವಳಿಯನ್ನೂ ಸಮರ್ಥಿಸುತ್ತಾ ಹೀಗೆ ವಾದ ಮಾಡಿದರು: ಚಾಗ್ಲಾರವರು ಜೆಪಿ ಅವರ ಬಹಿರಂಗ ಸಭೆಗೆ ಹೋಗಿದ್ದು ನಿಜ. ಜೆಪಿಯವರ ಭಾಷಣವನ್ನು ಚಾಗ್ಲಾರವರು ಕೇಳಿದ್ದು ಅಪರಾಧವಲ್ಲ. ಒಬ್ಬ ರಾಷ್ಟ್ರನಾಯಕ ಮಾತನಾಡಿದರೆ, ಅವರೇನು ಮಾತಾಡಿದರು ಎಂದು ತಿಳಿಯಲು ಅವರು ನಡೆಸಿಕೊಡುವ ಸಾರ್ವಜನಿಕ ಸಭೆಗೆ ಹೋಗಿ ಅದನ್ನು ಆಲಿಸುವುದು ಒಂದು ಕ್ರಮ. ಅದೇ ಭಾಷಣದ ಮುಖ್ಯ ವಿಚಾರಗಳನ್ನು ಪತ್ರಿಕೆಗಳು ಅಚ್ಚು ಮಾಡುತ್ತವೆ. ಅದನ್ನು ಓದಿ ತಿಳಿದುಕೊಳ್ಳುವುದು ಎರಡನೆಯ ಮಾರ್ಗ. ಮೂರನೆಯದೆಂದರೆ ದೃಶ್ಯಮಾಧ್ಯಮಗಳಲ್ಲಿ ಮಾಡಲಾಗುವ ಜೆಪಿ ಭಾಷಣವನ್ನು ಆಲಿಸುವುದು. ಈ ಮೂರು ರೀತಿಯಲ್ಲಿ ಭಾಷಣದ ಸಾರಾಂಶವನ್ನು ತಿಳಿಯಲು ಅವಕಾಶವಿದೆ. ಜೆಪಿ ಭಾಷಣ ಕೇಳಲು ಹೋಗದೆಯೂ ಜೆಪಿ ಏನು ಭಾಷಣ ಮಾಡಿದರು ಎಂದು ತಿಳಿಯಲು ಈ ಎರಡು ಮಾಧ್ಯಮಗಳಿವೆ. ಸರ್ಕಾರದ ನಿಲುವು ಜೆಪಿ ಭಾಷಣದ ಕೇಳಬಾರದು ಎಂಬುದಾದರೆ ಸರ್ಕಾರಿ ನೌಕರರು ಭಾಷಣ ಕೇಳಲೂ ಹೋಗಬಾರದು, ಪತ್ರಿಕೆ ಓದಲೂಬಾರದು, ದೃಶ್ಯಮಾಧ್ಯಮ ವೀಕ್ಷಿಸಲುಬಾರದು ಎಂದು ಆಜ್ಞೆಮಾಡಿ ಎಂದು ಚಾಗ್ಲಾರವರ ವಕೀಲರು ವಾದ ಮಂಡಿಸಿದರು. ಚಾಗ್ಲಾರವರ ಮೇಲೆ ಹಾಕಿದ್ದ ಕೇಸು ವಜಾ ಆಯಿತು. ಮೋದಿ ಸರ್ಕಾರ ಮತ್ತು ಯಡಿಯೂರಪ್ಪನವರ ಸರ್ಕಾರ ಸರ್ಕಾರಿ ನೌಕರರ ಮೇಲೆ ಹೇರಲು ರಚಿಸಿರುವ ಕಾನೂನನ್ನು ರದ್ದುಮಾಡಿ ಎಂದು ಆಗ್ರಹಪೂರ್ವಕವಾಗಿ ಒತ್ತಾಯ ಮಾಡುತ್ತೇನೆ.

ಮೋದಿ ಸರ್ಕಾರ ನೈತಿಕತೆಗೆ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬಿಡಿಕಾಸಿನ ಕಿಮ್ಮತ್ತನ್ನೂ ಕೊಡುತ್ತಿಲ್ಲ. ಕಾಶ್ಮೀರಕ್ಕೆ ಇದ್ದ 370ನೇ ವಿಧಿಯ ವಿಶೇಷ ಅಧಿಕಾರವನ್ನು ಅನೀತಿಯಿಂದ ಕಾಶ್ಮೀರ ಪ್ರಜೆಗಳ ಅಭಿಪ್ರಾಯವನ್ನೂ ಪಡೆಯದೆ ಪಾರ್ಲಿಮೆಂಟಿನಲ್ಲಿ ಚರ್ಚೆಗೂ ಅವಕಾಶ ನೀಡದೆ ಕಿತ್ತುಹಾಕಿರುವುದು ಇದಕ್ಕೆ ಒಂದು ಜ್ವಲಂತ ಉದಾಹರಣೆ.

ಆಡಳಿತ ಕುಸಿದು ಬಿದ್ದಿರುವುದಕ್ಕೆ ಹತ್ತಾರು ಉದಾಹರಣೆಗಳನ್ನ ಕೊಡಬಹುದು. ಹೆಣ್ಣುಮಕ್ಕಳು, ಸಣ್ಣಮಕ್ಕಳು, ದಲಿತರು, ಮುಸ್ಲಿಮರು ಇವರ ಮೇಲೆ ನೂರಾರು ದೌರ್ಜನ್ಯ ಪ್ರಕರಣಗಳು ದೇಶದಾದ್ಯಂತ ಅದರಲ್ಲೂ ಮುಖ್ಯವಾಗಿ ಉತ್ತರಪ್ರದೇಶ ಮತ್ತು ಮಂಗಳೂರಿನಲ್ಲಿ ದಿನನಿತ್ಯ ನಡೆಯುತ್ತಿವೆ. ಅಪೌಷ್ಠಿಕತೆಯಿಂದ, ಹಸಿವಿನಿಂದ ಸಾಯುವ ಗರ್ಭಿಣಿಯರು, ಸಣ್ಣಮಕ್ಕಳು ಲೆಕ್ಕವಿಲ್ಲದಷ್ಟು. ಮೋದಿಯವರು ಕೋಟ್ಯಂತರ ರೂಪಾಯಿಗಳ ಸಾರ್ವಜನಿಕ ಹಣವನ್ನು ವಿದೇಶ ಪ್ರವಾಸಗಳಿಗೆ ಬಳಸಿಕೊಂಡಿದ್ದಾರೆ. ಪತ್ರಿಕೆಗಳಿಗೆ ಮೋದಿಯವರ ಸರ್ಕಾರ ಕೋಟಿ ಕೋಟಿ ರೂ ಪಾಯಿಗಳನ್ನು ತಮ್ಮ ಪ್ರಜಾರಕ್ಕೋಸ್ಕರ ಸುರಿದಿದೆ. ದೃಶ್ಯಮಾಧ್ಯಮಗಳು ತಮ್ಮ ಪ್ರಜಾಪ್ರಭುತ್ವದ ಕಾವಲುಗಾರನಂತೆ ವರ್ತಿಸುವುದು ಬಿಟ್ಟು ಸಾಕುನಾಯಿಗಳಾಗಿ ಪರಿವರ್ತನೆಗೊಂಡಿವೆ. ಮಾಧ್ಯಮಗಳು ರಾಜಕೀಯದಲ್ಲಿ ತೊಡಗಿಕೊಂಡು ಮೋದಿಯವರ ಹಿಂಬಾಲಕರಂತೆ ವರ್ತಿಸುತ್ತಿವೆ.

PC : The Asian Age

ಭ್ರಷ್ಟ ಅಧಿಕಾರಿಗಳು ಲಂಚದ ರೂಪದಲ್ಲಿ ಲಕ್ಷಾಂತರ ಪಡೆದು ಐಷಾರಾಮಿ ಜೀವನ ನಡೆಸುತ್ತಿದ್ದರೆ, ಅವರನ್ನು ಹೊರಗೆಡಹಲಾದರೂ, ಅಂತಹ ಅಧಿಕಾರಿಗಳಿಗೆ ಸರ್ಕಾರ ಕೊಡುವ ಶಿಕ್ಷೆ, ವರ್ಗಾವಣೆ, ಸಸ್ಪೆನ್‍ಷನ್ ಮಾತ್ರ. ಆಡಳಿತ ಕುಸಿದು ಬಿದ್ದರೂ ಅದನ್ನು ಸದೃಢಗೊಳಿಸಲು ಯಾವ ಕಠಿಣ ಕ್ರಮಕೈಗೊಳ್ಳದೆ, ನೆಪಮಾತ್ರಕ್ಕೆ ಒಂದು ವಿಚಾರಣಾ ಸಮಿತಿ ರಚಿಸಿ ಸುಮ್ಮನಾಗುವುದು ಇಂದಿನ ಸರ್ಕಾರದ ನೀತಿಯಾಗಿದೆ. ಹಿಂಸಾಚಾರ, ಅನ್ಯಾಯ ಮತ್ತು ಆಡಳಿತ ವೈಫಲ್ಯಗಳು ಒಂದಾದಮೇಲೆ ಒಂದು ನಡೆಯುತ್ತಿದ್ದರೂ ವೈಫಲ್ಯಕ್ಕೆ ಮೂಲಕಾರಣ ಏನು ಎಂದು ಆತ್ಮವಿಮರ್ಶೆ ಮಾಡಿಕೊಳ್ಳಲು ಸರ್ಕಾರ ತಯಾರಿಲ್ಲ. ಐದು ವರ್ಷಕ್ಕೊಮ್ಮೆ ಬದಲಾಗುವ ಸರ್ಕಾರಕ್ಕೆ ಕಾಯಂ ಆಗಿ ಇರುವ ಅಧಿಕಾರಿಗಳು ಹೆದರಿ, ಕಾನೂನು ರೀತ್ಯಾ ಕೆಲಸ ಮಾಡುವುದನ್ನು ಕೈಬಿಟ್ಟು, ಆಳುವ ಜನರ ಆಜ್ಞಾಧಾರಕರಂತೆ ವರ್ತಿಸುವ ಅಧಿಕಾರಿಗಳಿಂದ ನ್ಯಾಯ ದೊರಕುವುದಾದರೂ ಸಂಭವನೀಯವೇ?

ಅಧಿಕಾರಿ ಕಾನೂನುರೀತ್ಯಾ ಕೆಲಸ ಮಾಡಬೇಕು. ಪ್ರಧಾನಿ ಅಥವ ಮಂತ್ರಿ ಒಂದು ಕಾನೂನುಬಾಹಿರ ಬೇಡಿಕೆಯ ಅರ್ಜಿಗೆ ನಿಮ್ಮ ಸಮ್ಮತಿ ಸೂಚಿಸಿ ಅರ್ಜಿದಾರನ ಕೆಲಸ ಮಾಡಿಕೊಡಿ ಎಂದರೆ ಇಂತಹ ಅನ್ಯಾಯದ ಕೆಲಸ ನಾನು ಮಾಡುವುದಿಲ್ಲ ಎಂದು ಹೇಳುವ ಎದೆಗಾರಿಕೆ ಸರ್ಕಾರಿ ಅಧಿಕಾರಿಗೆ ಇರಬೇಕು. ಆದರೆ ಇಂದಿನ ಆಡಳಿತ ಹೀಗೆ ನಡೆಯುತ್ತಿಲ್ಲ. ಸರ್ಕಾರ ನಡೆಸುವವರ ರಾಜಕೀಯ ಜಗ್ಗಾಟದ ವೈಪರೀತ್ಯ ಅವ್ಯಾಹತವಾಗಿ ನಡೆಯುತ್ತಿರುವಾಗ ಸರ್ಕಾರಿ ಅಧಿಕಾರಿಗಳು ರಾಜ್ಯಾಂಗಕ್ಕೆ ಅಂಟಿಕೊಳ್ಳುವ ತೀರ್ಮಾನ ಕೈಗೊಳ್ಳಬೇಕು. ಇದನ್ನು ಉಪೇಕ್ಷ ಮಾಡಿದರೆ ಅವರು ಚುನಾಯಿತ ಸರ್ವಾಧಿಕಾರದ ಭಾಗವಾಗಿಬಿಡುವ ಸಾಧ್ಯತೆಗಳಿವೆ. ಆದ್ದರಿಂದ ಅವರು ಅಲಿಪ್ತರಾಗಿದ್ದುಕೊಂಡು ತಮ್ಮ ಅಂತರಾತ್ಮ ಒಪ್ಪುವ ರೀತಿ ಕಾರ್ಯಪ್ರವರ್ತಕರಾಗಬೇಕು. ಉನ್ನತಮಟ್ಟದ ಅಧಿಕಾರದಲ್ಲಿರುವ ಸರ್ಕಾರಿ ಅಧಿಕಾರಿಗಳು ಮುಖ್ಯವಾಗಿ ಸರ್ಕಾರ ನಡೆಸುವವರ ಎಳೆದಾಟ, ಸೆಣಸಾಟಗಳಿಗೆ ಜಗ್ಗದೆ ಅವರಿಗಿರುವ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು, ರಾಜ್ಯಾಂಗದ ಆಶಯಗಳನ್ನು ಕಾರ್ಯಗತಗೊಳಿಸುವ ಪವಿತ್ರ ಕೆಲಸದಲ್ಲಿ ತೊಡಗಿರೆಂದು ವಿನಂತಿ ಮಾಡಿಕೊಳ್ಳುತ್ತೇನೆ.


ಇದನ್ನೂ ಓದಿ: ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಅಮಿತ್ ಶಾ ಪಣ: ಹಗಲುಗನಸು ಎಂದ ಟಿಎಂಸಿ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...

ಮುಂಬೈ: 2 ದಿನಗಳಿಂದ ಹೊತ್ತಿ ಉರಿಯುತ್ತಿರುವ ಪೊವೈ ಬೆಟ್ಟಗಳು: ನಿವಾಸಿಗಳಿಂದ ಅಧಿಕಾರಿಗಳ ನಿಷ್ಕ್ರಿಯತೆಯ ಆರೋಪ 

ಮುಂಬೈನ ಪೊವೈ ಬೆಟ್ಟಗಳ ಪ್ರದೇಶದಲ್ಲಿ ಸಂಭವಿಸಿದ ಬೆಂಕಿ ಕಳೆದ ಎರಡು ದಿನಗಳಿಂದ ಉರಿಯುತ್ತಿದೆ ಎಂದು ವರದಿಯಾಗಿದೆ. ನಿವಾಸಿಗಳು ಬೆಂಕಿಯ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು ನಾಗರಿಕ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆಯು ಸಿಕ್ಕಿಲ್ಲ...

‘ದಲಿತ ಕ್ರೈಸ್ತ’ರನ್ನು ಪರಿಶಿಷ್ಟ ಜಾತಿ ಎಂದು ಗುರುತಿಸಬೇಕು: ಮಾನವ ಹಕ್ಕುಗಳ ಕಾರ್ಯಕರ್ತ ವಿನ್ಸೆಂಟ್ ಕಥಿರ್

"ದಲಿತ ಕ್ರೈಸ್ತರನ್ನು ಪರಿಶಿಷ್ಟ ಜಾತಿ ಎಂದು ಗುರುತಿಸಬೇಕು, ಇದರಿಂದಾಗಿ ಜಾತಿ ಹಿಂಸಾಚಾರದ ಬಲಿಪಶುಗಳು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ನಿಬಂಧನೆಗಳ ಪ್ರಕಾರ ಸರ್ಕಾರದಿಂದ ಪರಿಹಾರವನ್ನು ಪಡೆಯಬಹುದು" ಎಂದು ಮಾನವ ಹಕ್ಕುಗಳ ಕಾರ್ಯಕರ್ತ ಹಾಗೂ...

ಪಶ್ಚಿಮ ಏಷ್ಯಾ ಬಿಕ್ಕಟ್ಟು : ಇರಾನ್ ವಿದೇಶಾಂಗ ಸಚಿವರ ಜೊತೆ ಜೈಶಂಕರ್ ಚರ್ಚೆ

ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಅವರೊಂದಿಗೆ ಮಂಗಳವಾರ (ಮಾ.10) ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಈ ವೇಳೆ ಪಶ್ಚಿಮ ಏಷ್ಯಾದ ಬೆಳವಣಿಗೆಗಳು...

ಪಾಕಿಸ್ತಾನದ ಐಎಸ್‌ಐ ಪರ ಬೇಹುಗಾರಿಕೆ ಆರೋಪ : ನೌಕಾಪಡೆಯ ಲ್ಯಾನ್ಸ್ ನಾಯಕ್ ಆದರ್ಶ್ ಕುಮಾರ್ ಬಂಧನ

ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ 24 ವರ್ಷದ ಭಾರತೀಯ ನೌಕಾಪಡೆಯ ಲ್ಯಾನ್ಸ್ ನಾಯಕ್ ಅವರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮಂಗಳವಾರ (ಮಾ.10)...

ಅಮೆರಿಕದ ತೈಲ ಸಂಸ್ಕರಣಾ ಘಟಕಕ್ಕೆ ರಿಲಯನ್ಸ್ ಹೂಡಿಕೆ : ಟ್ರಂಪ್ ಘೋಷಣೆ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಹೂಡಿಕೆಯ ಸಹಾಯದಿಂದ 50 ವರ್ಷಗಳಲ್ಲಿ ಅಮೆರಿಕ ತನ್ನ ಮೊದಲ ಹೊಸ ತೈಲ ಸಂಸ್ಕರಣಾಗಾರವನ್ನು ಪಡೆಯಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 'ಅಮೆರಿಕ ಫಸ್ಟ್ ರಿಫೈನಿಂಗ್ ಸಂಸ್ಥೆ'ಯು ಟೆಕ್ಸಾಸ್‌ನ...

ಭಾರತೀಯರ ಅಡುಗೆ ಮನೆ ತಲುಪಿದ ಯುದ್ಧದ ಪರಿಣಾಮ : ದೇಶದಾದ್ಯಂತ ಎಲ್‌ಪಿಜಿ ಕೊರತೆ ಉಲ್ಬಣ

ಅಮೆರಿಕ, ಇಸ್ರೇಲ್, ಇರಾನ್ ಮತ್ತು ಗಲ್ಫ್ ರಾಷ್ಟ್ರಗಳ ಸಂಘರ್ಷದಿಂದ ಭಾರತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ದೇಶ ಪ್ರಧಾನಿ ಮೋದಿಯವರ ಕೈಯಲ್ಲಿ ಭದ್ರವಾಗಿದೆ ಎಂದು ಒಂದಷ್ಟು ಜನರು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿರುವಾಗಲೇ,...

ಪಹಲ್ಗಾಮ್ ದಾಳಿ ಕುರಿತ ಪೋಸ್ಟ್‌: ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಅವರಿಗೆ ನಿರೀಕ್ಷಣಾ ಜಾಮೀನು...

ಮಧ್ಯಪ್ರಾಚ್ಯ ಉದ್ವಿಗ್ನತೆ: ಎಲ್‌ಪಿಜಿ ಕೊರತೆಗೆ ಮುಂಬೈನಲ್ಲಿ ಶೇ. 20 ರಷ್ಟು ಹೋಟೆಲ್‌, ರೆಸ್ಟೋರೆಂಟ್‌ ಬಂದ್: ಬೆಂಗಳೂರು, ಚೆನ್ನೈನಲ್ಲೂ ಸಮಸ್ಯೆ

ಪಶ್ಚಿಮ ಏಷ್ಯಾ ಸಂಘರ್ಷ ಹತ್ತು ದಿನಗಳಿಗೂ ಹೆಚ್ಚು ಕಾಲ ಮುಂದುವರಿದಿರುವುದರಿಂದ, ಭಾರತದ ಹೋಟೆಲ್‌ಗಳು ಮತ್ತು ಇತರ ಉಧ್ಯಮಗಳು ಎಲ್‌ಪಿಜಿ ಪೂರೈಕೆ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬೆಂಗಳೂರಿನ ನಂತರ, ಚೆನ್ನೈ ಮತ್ತು ಮುಂಬೈನಂತಹ ಇತರ ನಗರಗಳು ಸಹ...