Homeಮುಖಪುಟಲೈಂಗಿಕ ದೌರ್ಜನ್ಯ ಕುರಿತು ವಿವಾದಾತ್ಮಕ ತೀರ್ಪು: ನ್ಯಾಯಾಧೀಶೆಯ ದೃಢೀಕರಣ ತಡೆ ಹಿಡಿದ ಸುಪ್ರಿಂ

ಲೈಂಗಿಕ ದೌರ್ಜನ್ಯ ಕುರಿತು ವಿವಾದಾತ್ಮಕ ತೀರ್ಪು: ನ್ಯಾಯಾಧೀಶೆಯ ದೃಢೀಕರಣ ತಡೆ ಹಿಡಿದ ಸುಪ್ರಿಂ

- Advertisement -
- Advertisement -

ಕಳೆದ ಕೆಲವು ದಿನಗಳಲ್ಲಿ ಲೈಂಗಿಕ ದೌರ್ಜನ್ಯಗಳ ಕುರಿತು ಎರಡು ವಿವಾದಾತ್ಮಕ ಆದೇಶಗಳನ್ನು ಜಾರಿಗೊಳಿಸಿದ ಬಾಂಬೆ ಹೈಕೋರ್ಟ್ ನ್ಯಾಯಾಧೀಶರ ಶಾಶ್ವತ ಸ್ಥಾನಮಾನದ ದೃಢಿಕರಣದ ಕುರಿತು ತಾನು ಮಾಡಿದ್ದ ಶಿಫಾರಸನ್ನು ಸುಪ್ರೀಂ ಕೋರ್ಟ್ ಕೊಲ್ಜಿಯಂ ಹಿಂತೆಗೆದುಕೊಂಡಿದೆ. ಅಂತಹ ಪ್ರಕರಣಗಳಲ್ಲಿ “ಹೆಚ್ಚಿನ ಮಾನ್ಯತೆ” ನೀಡುವ ಅಗತ್ಯವನ್ನು ಆಧರಿಸಿ ಶಾಶ್ವತ ಸ್ಥಾನಮಾನವನ್ನು ನೀಡದಿರುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಉನ್ನತ ನ್ಯಾಯಾಲಯದ ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ.

“ಆ ನ್ಯಾಯಾಧೀಶೆಯ ವಿರುದ್ಧ ವೈಯಕ್ತಿಕವಾಗಿ ಏನೂ ಇಲ್ಲ. ಅವರಿಗೆ ಇನ್ನೂ ಅನುಭವ ಬೇಕು ಮತ್ತು ಅವರು ವಕೀಲರಾಗಿದ್ದಾಗ ಈ ರೀತಿಯ ಪ್ರಕರಣಗಳನ್ನು ಎದುರಿಸದಿರಬಹುದು… ಅವರಿಗೆ ತರಬೇತಿ ಬೇಕು” ಎಂದು ಕೊಲೆಜಿಯಂ ಅಭಿಪ್ರಾಯ ಪಟ್ಟಿದ್ದಾಗಿ ಸುಪ್ರೀಂ ಕೋರ್ಟ್‌ನ ಮೂಲಗಳು ಉಲ್ಲೇಖಿಸಿವೆ.

ಖಾಯಂ ನ್ಯಾಯಾಧೀಶರನ್ನು ನೇಮಿಸುವ ಅಥವಾ ನ್ಯಾಯಾಧೀಶರನ್ನು ಶಾಶ್ವತಗೊಳಿಸುವ ಕುರಿತು ಕೊಲೆಜಿಯಂ ತನ್ನ ಶಿಫಾರಸುಗಳನ್ನು ಕೇಂದ್ರ ಸರ್ಕಾರಕ್ಕೆ ಕಳಿಸುತ್ತದೆ ಮತ್ತು ನಂತರ ಕೇಂದ್ರ ಅದನ್ನು ಅನುಮೋದಿಸುತ್ತದೆ. ಕೆಲವೊಮ್ಮೆ, ಶಿಫಾರಸುಗಳನ್ನು ಪ್ರಶ್ನೆಗಳೊಂದಿಗೆ ಕೊಲೆಜಿಯಂಗೆ ಹಿಂತಿರುಗಿಸಲಾಗುತ್ತದೆ.

ಜನವರಿ 20 ರಂದು, ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ಖಾಯಂ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ಪುಷ್ಪಾ ಗಣದೇವಾಲಾ ಅವರ ಹೆಸರನ್ನು ದೃಢಿಕರಿಸಲು ಕೊಲೆಜಿಯಂ ಶಿಫಾರಸು ಮಾಡಿತ್ತು.

ನ್ಯಾಯಾಧೀಶೆ ಇತ್ತೀಚೆಗೆ ಲೈಂಗಿಕ ದೌರ್ಜನ್ಯದ ಕುರಿತು ಎರಡು ತೀರ್ಪುಗಳನ್ನು ಜಾರಿಗೊಳಿಸಿದರು, ಅದು ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಈಗ ಅದೇ ಅವರಿಗೆ ಮುಳುವಾಗಿದೆ.

ಜನವರಿ 19 ರ ತೀರ್ಪಿನಲ್ಲಿ, “ಚರ್ಮದಿಂದ ಚರ್ಮಕ್ಕೆ ಸಂಪರ್ಕವಿಲ್ಲದೆ” ಅಪ್ರಾಪ್ತ ವಯಸ್ಕಳ ಸ್ತನವನ್ನು ಹಿಡಿಯುವುದನ್ನು ಲೈಂಗಿಕ ದೌರ್ಜನ್ಯ ಎಂದು ಕರೆಯಲಾಗುವುದಿಲ್ಲ ಎಂದು ಪೋಕ್ಸೋ ಕಾಯಿದೆಯಡಿ ವ್ಯಾಖ್ಯಾನಿಸಲಾಗಿದೆ ಎಂದು ಅವರು ವಿವಾದಾತ್ಮಕ ತೀರ್ಪು ನೀಡಿದ್ದರು.

ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ನ್ಯಾಯಾಧೀಶರ ಈ ತೀರ್ಪಿನ ವಿರುದ್ಧ ಅರ್ಜಿ ಸಲ್ಲಿಸಿದ ನಂತರ ಸುಪ್ರೀಂ ಕೋರ್ಟ್ ಬುಧವಾರ ಆ ಆದೇಶವನ್ನು ತಡೆಹಿಡಿದಿದೆ. ‘ಈ ಆದೇಶವು ಗೊಂದಲದ ಮತ್ತು ಅಪಾಯಕಾರಿ ಪೂರ್ವನಿದರ್ಶನವನ್ನು ಸೃಷ್ಟಿಸುತ್ತದೆ’ ಎಂದು ಅಟಾರ್ನಿ ಜನರಲ್ ಹೇಳಿದ್ದರು.

ಗುರುವಾರ, ಮತ್ತೊಂದು ಪ್ರಕರಣದಲ್ಲಿ, ನ್ಯಾಯಮೂರ್ತಿ ಗಣದೇವಾಲಾ ಅವರು ‘ ಅಪ್ರಾಪ್ತ ವಯಸ್ಕಳ ಕೈಗಳನ್ನು ಹಿಡಿದಿಟ್ಟುಕೊಳ್ಳುವ ಕ್ರಿಯೆಗಳು, ಅಥವಾ ಅವಳ ಎದುರು ಪ್ಯಾಂಟ್ ಜಿಪ್ ತೆರೆಯುವುದು ‘ಲೈಂಗಿಕ ದೌರ್ಜನ್ಯ’ದ ವ್ಯಾಖ್ಯಾನಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ತೀರ್ಪು ನೀಡಿದ್ದರು. ಈ ಆಧಾರದಲ್ಲಿ ಆರೋಪಿಯೊಬ್ಬನಿಗೆ ಪೋಕ್ಸೋ ಅಡಿಯಲ್ಲಿ ನೀಡಿದ ಶಿಕ್ಷೆಯನ್ನು ರದ್ದುಪಡಿಸಿದ್ದರು. ಈ ಪ್ರಕರಣದಲ್ಲಿ ಬಲಿಪಶು, ಐದು ವರ್ಷದ ಅಪ್ರಾಪ್ತ ವಯಸ್ಕ ಬಾಲಕಿಯಾಗಿದ್ದಳು.

ಈ ತೀರ್ಪುಗಳ ನಂತರ, ಕೊಲೆಜಿಯಂ ನ್ಯಾಯಮೂರ್ತಿಗಳು ಗಣದೇವಾಲಾ ಅವರನ್ನು ಖಾಯಂ ನ್ಯಾಯಾಧೀಶರನ್ನಾಗಿ ಶಿಫಾರಸು ಮಾಡುವ ನಿರ್ಧಾರವನ್ನು ಹಿಂದಕ್ಕೆ ಪಡೆದರು ಎಂದು ಮೂಲಗಳು ತಿಳಿಸಿವೆ.


ಇದನ್ನೂ ಓದಿ: ಅಪ್ರಾಪ್ತರ ಎದುರು ಪ್ಯಾಂಟ್ ಜಿಪ್ ತೆಗೆಯುವುದು ಲೈಂಗಿಕ ದೌರ್ಜನ್ಯವಲ್ಲ: ಬಾಂಬೆ ಹೈಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...