ದೆಹಲಿಯ ತೀಸ್ ಹಜಾರಿ ಕೋರ್ಟ್ ಪಾರ್ಕಿಂಗ್ ವಿಚಾರದಲ್ಲಿ ಪೊಲೀಸರು ಮತ್ತು ವಕೀಲರ ಮಧ್ಯೆ ನಡೆದ ಗಲಾಟೆ ತಾರಕಕ್ಕೇರಿದೆ. ಕರ್ತವ್ಯ ನಿರತ ಪೊಲೀಸ್ ಪೇದೆಯನ್ನು, ವಕೀಲರೊಬ್ಬರು ಥಳಿಸಿದ್ದನ್ನು ಖಂಡಿಸಿ, ಪೊಲೀಸರೇ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಇದೇ ಮೊದಲ ಬಾರಿಗೆ ರಕ್ಷಣಾ ಹೊಣೆ ಹೊತ್ತ ಪೊಲೀಸರೇ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಆಯುಕ್ತರ ಕಚೇರಿ ಮುಂಭಾಗ ಜಮಾಯಿಸಿದ ಪೊಲೀಸರು, ಪೇದೆ ಮೇಲಿನ ಹಲ್ಲೆಯನ್ನು ಖಂಡಿಸಿ, ಆಕ್ರೋಶ ವ್ಯಕ್ತಪಡಿಸಿದರು. ಕೈಯಲ್ಲಿ ಭಿತ್ತಿಪತ್ರ ಹಿಡಿದುಕೊಂಡಿದ್ದ ಪೊಲೀಸರು, ರಕ್ಷಿಸುವವರನ್ನು ರಕ್ಷಿಸಿ ಎಂದು ಘೋಷಣೆ ಕೂಗಿದರು. ಪ್ರತಿಭಟನಾ ಜಾಥಾ ಹೊರಟು, ಬಿಸಿ ಮುಟ್ಟಿಸಿದರು.

ದೆಹಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಮಾತನಾಡಿ, ಪ್ರತಿಭಟನಾನಿರತ ಪೊಲೀಸರನ್ನು ಸಂತೈಸಿದರು. ನಾವು ಶಿಸ್ತಿನ ಸಿಪಾಯಿಗಳಂತೆ ವರ್ತಿಸಬೇಕು. ಸರ್ಕಾರ ಮತ್ತು ಸಾರ್ವಜನಿಕರು ಕಾನೂನು ಎತ್ತಿ ಹಿಡಿಯುತ್ತೇವೆ, ಕಾನೂನು ರಕ್ಷಣೆ ಮಾಡುತ್ತೇವೆ ಎಂದು ನಂಬಿದ್ದಾರೆ. ಅವರ ನಂಬಿಕೆಯನ್ನು ಉಳಿಸಬೇಕು. ಎಲ್ಲರೂ ಪ್ರತಿಭಟನೆ ಕೈ ಬಿಟ್ಟು ಕೆಲಸಕ್ಕೆ ಮರಳಿ ಎಂದು ಮನವೊಲಿಸುವ ಪ್ರಯತ್ನ ಮಾಡಿದರು.
ಪೊಲೀಸ್ ಭದ್ರತಾ ಕಾಯ್ದೆ ಅಡಿ 10 ಬೇಡಿಕೆಗಳನ್ನಿಟ್ಟು ಪೊಲೀಸರು ಪ್ರತಿಭಟಿಸಿದರು. ಹಿರಿಯ ಅಧಿಕಾರಿಗಳು, ಕಿರಿಯ ಪೊಲೀಸರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಕಿರಿಯ ಪೊಲೀಸರು, ಹಿರಿಯ ಪೊಲೀಸರ ಮಾತು ಕೇಳುತ್ತಿಲ್ಲ. ನಮ್ಮವರೇ ನಮ್ಮ ಮಾತು ಕೇಳದಿದ್ದರೆ ಇನ್ಯಾರು ಕೇಳುತ್ತಾರೆ ಎಂದು ಹೇಳಿದರು.
ಶನಿವಾರ ಪೊಲೀಸರು ಮತ್ತು ವಕೀಲರ ಮಧ್ಯೆ ನಡೆದ ಘರ್ಷಣೆ ಹಿಂಸಾಚಾರಕ್ಕೆ ತಿರುಗಿ 20 ಪೊಲೀಸರು, 8 ವಕೀಲರು ಗಾಯಗೊಂಡಿದ್ದಾರೆ. 20 ವಾಹನಗಳು ಜಖಂಗೊಂಡಿವೆ.
ಬಿಸಿಐ ಮುಖ್ಯಸ್ಥ ಮನನ್ ಕುಮಾರ್ ಮಿಶ್ರಾ ಮಾತನಾಡಿ, ವಕೀಲರು ತಮ್ಮ ತಮ್ಮ ಕೆಲಸಕ್ಕೆ ಹಾಜರಾಗಬೇಕು. ವಕೀಲರ ಗೂಂಡಾ ವರ್ತನೆ, ವಕೀಲರ ಇಮೇಜ್ ಗೆ ಧಕ್ಕೆ ತಂದಿದೆ ಎಂದರು.
A new low in 72 years – Police on protest in ‘National Capital of Delhi’.
Is this BJP’s ‘New India’?
Where will BJP take the country?
Where is India’s HM, Sh. Amit Shah?
मोदी है तो ही ये मुमकिन है!!! pic.twitter.com/6irmEZ7Zam
— Randeep Singh Surjewala (@rssurjewala) November 5, 2019
ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿ, 72 ವರ್ಷಗಳ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೊಲೀಸರು ಬೀದಿಗಿಳಿದು ಪ್ರತಿಭಟನೆ ನಡೆಸುವಂಥ ಸ್ಥಿತಿ ಎದುರಾಗಿದೆ. ಇದು ಬಿಜೆಪಿಯ ಹೊಸ ಇಂಡಿಯಾ..? ಬಿಜೆಪಿ ದೇಶವನ್ನು ಎತ್ತ ಕೊಂಡೊಯ್ಯುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
Incident involving police & lawyers unfortunate. All should take a balanced view of it based on facts in public domain. Countrywide, police stands in solidarity with those police personnel subjected to physical assault & humiliation. Condemn all attempts to break law, by anyone!
— IPS Association (@IPS_Association) November 4, 2019
ಇನ್ನು ಭಾರತೀಯ ಪೊಲೀಸ್ ಸರ್ವೀಸ್ ಟ್ವೀಟ್ ಮಾಡಿದ್ದು, ಪೊಲೀಸರು ಮತ್ತು ವಕೀಲರ ಮಧ್ಯೆ ನಡೆದ ಘರ್ಷಣೆ ಆಕಸ್ಮಿಕ. ಎಲ್ಲವನ್ನೂ ಸಮಾನವಾಗಿ ನೋಡಿ, ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದೆ.


