ಹಲವಾರು ರಾಜ್ಯಗಳು ‘ಅನ್ಲಾಕ್ 3’ ಮಾರ್ಗಸೂಚಿಗಳನ್ನು ಘೋಷಿಸಿದರೂ ಸಹ ಕೊರೊನಾ ವೈರಸ್ ಪ್ರಕರಣಗಳು ದೇಶವನ್ನು ಪೀಡಿಸುತ್ತಿದ್ದು, ನಿನ್ನೆ ಒಂದೇ ದಿನ ಅತ್ಯಧಿಕ ಪ್ರಕರಣಗಳನ್ನು ದಾಖಲಿಸಿವೆ.
ಶುಕ್ರವಾರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತವು 15 ಲಕ್ಷ ಗಡಿ ತಲುಪಿದ ಕೇವಲ ಎರಡು ದಿನಗಳ ನಂತರ, 16 ಲಕ್ಷವನ್ನು ಮೀರಿ 55,078 ಕೊರೊನಾ ಸೋಂಕುಗಳ ವರದಿಯೊಂದಿಗೆ ದಾಖಲೆಯ ಏಕದಿನ ಏರಿಕೆ ಕಂಡಿದೆ.
ಚೇತರಿಸಿಕೊಳ್ಳುವರ ಸಂಖ್ಯೆ 10,57,805 ಕ್ಕೆ ಏರಿದರೆ, ದೇಶವು ಈವರೆಗೆ 16,38,870 ಕೊರೊನಾ ವೈರಸ್ ಪ್ರಕರಣಗಳನ್ನು ದಾಖಲಿಸಿದೆ. ಸಾವಿನ ಸಂಖ್ಯೆ 35,747 ಕ್ಕೆ ಏರಿಕೆಯಾಗಿದ್ದು, 24 ಗಂಟೆಗಳಲ್ಲಿ 779 ಸಾವುಗಳು ವರದಿಯಾಗಿವೆ ಎಂದು ಬೆಳಿಗ್ಗೆ 8 ಗಂಟೆಯ ಪ್ರಕಟಣೆ ತಿಳಿಸಿದೆ.
ಕೊರೊನಾ ಪ್ರಕರಣಗಳು ಸತತ ಎರಡನೇ ದಿನ 50,000 ಕ್ಕಿಂತ ಹೆಚ್ಚಾಗಿ ವರದಿಯಾಗಿದೆ. ದೃಢಪಡಿಸಿದ ಒಟ್ಟು ಪ್ರಕರಣಗಳ ಸಂಖ್ಯೆಯಲ್ಲಿ ವಿದೇಶಿಯರು ಸೇರಿದ್ದಾರೆ. ಸದ್ಯಕ್ಕೆ ದೇಶದಲ್ಲಿ 5,45,318 ಸಕ್ರಿಯ ಕೊರೊನಾ ಪ್ರಕರಣಗಳಿವೆ.
ಚೇತರಿಕೆ ಪ್ರಮಾಣವು ಶೇಕಡಾ 64.54 ಕ್ಕೆ ಏರಿದರೆ, ಸಾವಿನ ಪ್ರಮಾಣವು ಶೇ. 2.18 ಕ್ಕೆ ಇಳಿದಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ಜುಲೈ 30 ರವರೆಗೆ ಒಟ್ಟು 1,88,32,970 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಗುರುವಾರ 6,42,588 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ಶುಕ್ರವಾರ ವರದಿಯಾದ 779 ಸಾವುಗಳಲ್ಲಿ 266 ಮಹಾರಾಷ್ಟ್ರ, 97 ತಮಿಳುನಾಡು, ಕರ್ನಾಟಕದಿಂದ 83, ಆಂಧ್ರಪ್ರದೇಶದಿಂದ 68 ಮತ್ತು ಉತ್ತರಪ್ರದೇಶದಿಂದ 57 ಸಾವುಗಳು ಸಂಭವಿಸಿವೆ.
ಪಶ್ಚಿಮ ಬಂಗಾಳದಲ್ಲಿ 46, ದೆಹಲಿ 29, ಗುಜರಾತ್ 22, ಜಮ್ಮು ಮತ್ತು ಕಾಶ್ಮೀರ 17, ಮಧ್ಯಪ್ರದೇಶ 14 ಮತ್ತು ರಾಜಸ್ಥಾನ ಮತ್ತು ತೆಲಂಗಾಣ ತಲಾ 13 ಸಾವುಗಳು ದಾಖಲಾಗಿವೆ.
ಒಡಿಶಾದಿಂದ 10, ಪಂಜಾಬ್‌ನಿಂದ 9, ಜಾರ್ಖಂಡ್‌ನಿಂದ 5, ಬಿಹಾರ, ಹರಿಯಾಣ, ಮಣಿಪುರ ಮತ್ತು ಉತ್ತರಾಖಂಡದಿಂದ ತಲಾ 4, ಗೋವಾ ಮತ್ತು ಛತ್ತೀಸ್ಗಡ ದಿಂದ ತಲಾ ಮೂರು, ಅಸ್ಸಾಂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಕೇರಳದಿಂದ ತಲಾ ಎರಡು ಸಾವುಗಳು ಸಂಭವಿಸಿವೆ ಮತ್ತು ಲಡಾಖ್ ಮತ್ತು ಪುದುಚೇರಿ ತಲಾ ಒಂದು ಸಾವು. ಮಣಿಪುರದಲ್ಲಿ ಮೊದಲ ಬಾರಿಗೆ ಕೊರೊನಾ ಸಾವು ವರದಿಯಾಗಿವೆ.
ಕೊರೊನಾ ಪ್ರಕರಣಗಳ ಅಘಾತಕಾರಿ ಬೆಳವಣಿಗೆಯು ಆಂಧ್ರಪ್ರದೇಶದಲ್ಲಿ ಮುಂದುವರಿದಿದೆ. ಏಕೆಂದರೆ ಇದು ಸತತ ಎರಡನೇ ದಿನದಲ್ಲಿ 10,000 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. ಈಗ ಅಲ್ಲಿ ಒಟ್ಟು ಸಂಖ್ಯೆ 1,30,557 ಕ್ಕೆ ತಲುಪಿದೆ.
ಇದನ್ನೂ ಓದಿ: ವಾಡಿಕೆಯ ಆರೋಗ್ಯ ಪರೀಕ್ಷೆಗಾಗಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು



the graph in the image is only till March 31st !!