Homeಕರೋನಾ ತಲ್ಲಣಕೊರೊನಾ ಹಿನ್ನೆಲೆ; ಪುಣೆಯಲ್ಲಿ 11 ದಿನ ಸಂಪೂರ್ಣ ಲಾಕ್ ಡೌನ್!

ಕೊರೊನಾ ಹಿನ್ನೆಲೆ; ಪುಣೆಯಲ್ಲಿ 11 ದಿನ ಸಂಪೂರ್ಣ ಲಾಕ್ ಡೌನ್!

ಗುರುವಾರ ವರದಿಯಾದ 1,803 ಹೊಸ ಕೊರೊನಾ ಪ್ರಕರಣಗಳು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆಯನ್ನು 34,399 ಕ್ಕೆ ಏರಿಸಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ಉಲ್ಲೇಖಿಸಿದ್ದಾರೆ.

- Advertisement -
- Advertisement -

ಗುರುವಾರ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಅತಿಹೆಚ್ಚು ಕೊರೊನಾ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ನಾಳೆಯಿಂದ ಜುಲೈ 23ರ ವರೆಗೆ, 11 ದಿನಗಳ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.

ದೇಶದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ಮತ್ತು ಅತ್ಯಂತ ಅಪಾಯದಲ್ಲಿರುವ ನಗರಗಳ ಪೈಕಿ ಮೊದಲ ಸ್ಥಾನದಲ್ಲಿರುವ ಮುಂಬೈನ ನಂತರ, ಪುಣೆ ಎರಡನೇ ಸ್ಥಾನದಲ್ಲಿದೆ.

ಗುರುವಾರ ವರದಿಯಾದ 1,803 ಹೊಸ ಕೊರೊನಾ ಪ್ರಕರಣಗಳು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆಯನ್ನು 34,399 ಕ್ಕೆ ಏರಿಸಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ಉಲ್ಲೇಖಿಸಿದ್ದಾರೆ.

34 ಹೊಸ ಸಾವುಗಳು ಸಂಬವಿಸಿ, ಜಿಲ್ಲೆಯಲ್ಲಿ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 978 ಕ್ಕೆ ತಲುಪಿದೆ.

“ಪಿಂಪ್ರಿ-ಚಿಂಚ್‌ವಾಡ್ ಮತ್ತು ಗ್ರಾಮೀಣ ಪುಣೆಯ ಕೆಲವು ಭಾಗಗಳಿಗೆ ಜುಲೈ 13 ರಿಂದ ಜುಲೈ 23 ರವರೆಗೆ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ಅಗತ್ಯ ಸೇವೆಗಳಿಗೆ ಸಂಬಂಧಿಸಿದ ಡೈರಿ, ವೈದ್ಯಕೀಯ ಮಳಿಗೆಗಳು, ಆಸ್ಪತ್ರೆಗಳಿಗೆ ಸಂಬಂಧಿಸಿದ ಅಂಗಡಿಗಳು ಮಾತ್ರ ತೆರೆದಿರುತ್ತವೆ ”ಎಂದು ಪುಣೆ ವಿಭಾಗೀಯ ಆಯುಕ್ತ ದೀಪಕ್ ಮೈಶೇಕರ್ ಹೇಳಿದ್ದಾರೆಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಜಿಲ್ಲೆಯ ಗ್ರಾಮೀಣ ಭಾಗಗಳು ಮತ್ತು ಪುಣೆ ಕಂಟೋನ್ಮೆಂಟ್ ಪ್ರದೇಶಗಳ ಸಂಖ್ಯೆ 3,138 ಕ್ಕೆ ಏರಿದೆ.

ಪುಣೆಯಲ್ಲಿನ ಪ್ರಕರಣಗಳು ಶೀಘ್ರವಾಗಿ ಏರುತ್ತಿರುವುದರಿಂದ ಕಠಿಣ ಲಾಕ್‌ಡೌನ್ ಅನ್ನು ಹೇರುವ ನಿರ್ಧಾರಕ್ಕೆ ಬಂದಿದೆ.

ಗುರುವಾರ, 6,875 ಹೊಸ ಪ್ರಕರಣಗಳ ಜೊತೆಗೆ ಮಹಾರಾಷ್ಟ್ರದ ಕೋವಿಡ್ -19 ಸಂಖ್ಯೆ 2,30,599 ಕ್ಕೆ ಏರಿತು. ರಾಜ್ಯದಲ್ಲಿ ನಿನ್ನೆ 219 ಸಾವುಗಳು ಸಂಭವಿಸಿ, ಒಟ್ಟು ಸಾವಿನ ಸಂಕ್ಯೆ 9,667 ಕ್ಕೆ ತಲುಪಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.


ಇದನ್ನೂ ಓದಿ: ಕೊರೊನಾ: ತ್ವರಿತ ಲಸಿಕೆ ಹೆಸರಿನಲ್ಲಿ ನಮ್ಮ ಜೀವಗಳೊಂದಿಗೆ ಚೆಲ್ಲಾಟವಾಡುತ್ತಿರುವ ICMR‌!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...