ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದ ಬೆಂಗಳೂರಿನಲ್ಲಿ ಸುಮಾರು 50,000 ಕ್ಕೂ ಹೆಚ್ಚು ಅಂಗಡಿಗಳು ಶಾಶ್ವತವಾಗಿ ಮುಚ್ಚಲ್ಪಟ್ಟುದೆ ಹಾಗೂ ಮುಂಬರುವ ಹಬ್ಬದ ಋತುವಿನಲ್ಲಿ ಮಾರಾಟಗಳು ಹೆಚ್ಚಾಗದಿದ್ದರೆ ಇನ್ನೂ ಅನೇಕ ಅಂಗಡಿಗಳು ಮುಚ್ಚುವ ಹಾದಿಯಲ್ಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ರೆಡಿಮೇಡ್ ಉಡುಪುಗಳು, ಪಾದರಕ್ಷೆಗಳು, ಲೇಖನ ಸಾಮಗ್ರಿಗಳು, ಮೊಬೈಲ್ ಪರಿಕರಗಳು ಮತ್ತು ಸಣ್ಣ ತಿನಿಸುಗಳನ್ನು ಮಾರಾಟ ಮಾಡುವ ಅಂಗಡಿಗಳು ಮುಚ್ಚಲ್ಪಟ್ಟ ಪಟ್ಟಿಯಲ್ಲಿ ಸೇರಿವೆ.
ಮುಚ್ಚಲ್ಪಟ್ಟ ಅಂಗಡಿಗಳ ಮುಂದೆ ’ಟು-ಲೆಟ್’ ಬೋರ್ಡುಗಳ ನೇತಾಡುತ್ತಿರುವುದು ಬೆಂಗಳೂರಿನಾದ್ಯಂತ ಕಾಣುತ್ತಿರುವ ಸಾಮಾನ್ಯ ದೃಶ್ಯವಾಗಿದೆ.
ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‌ಕೆಸಿಸಿಐ) ಪ್ರಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಿತಿಯಲ್ಲಿ ಸುಮಾರು 4 ಲಕ್ಷ ಅಂಗಡಿಗಳಿದ್ದು, ಅದರಲ್ಲಿ 12% ರಿಂದ 15% ಮುಚ್ಚಲಾಗಿದೆ, ಅಷ್ಟೇ ಅಲ್ಲದೆ ಇನ್ನೂ 8% -10% ಅಂಗಡಿಗಳು ಮುಚ್ಚುವ ಹಾದಿಯಲ್ಲಿದೆ ಎನ್ನಲಾಗಿದೆ.
ಇದನ್ನೂ ಓದಿ: ಪ್ರವಾಹ, ಕೊರೊನಾ ಸಂದರ್ಭದಲ್ಲಿ ಕಣ್ಮರೆ, ಗಲಭೆ ಆದಾಗ ಪ್ರತ್ಯಕ್ಷ: ಯಾರಿವರು ಗೊತ್ತೇ?
ಪ್ರಸ್ತುತ ಮುಚ್ಚಿರುವ ಹೆಚ್ಚಿನ ಅಂಗಡಿಗಳಲ್ಲಿ ಇತರ ರಾಜ್ಯಗಳ ಅಥವಾ ಬೆಂಗಳೂರಿನ ಹೊರಗಿನ ಕನ್ನಡಿಗರು ಬಾಡಿಗೆಗೆ ಪಡೆದದ್ದಾಗಿದೆ.
“ಅವರು ತಮ್ಮ ಮನೆಗಳ ಬಾಡಿಗೆ ಮತ್ತು ಅಂಗಡಿಗಳಿಗೆ ಕೂಡಾ ಬಾಡಿಗೆ ಪಾವತಿಸಬೇಕಾಗಿರುವುದರಿಂದ ಇದು ಎರಡೆರೆಡು ಹೊಡೆತ ಕೊಡುತ್ತದೆ. ಕೊರೊನಾ ಕಾಲದಲ್ಲಿ ವ್ಯಾಪಾರವು 25% ದಷ್ಟೂ ಇಲ್ಲದಾಗ, ಅವುಗಳು ಹೇಗೆ ಉಳಿಸಿಕೊಳ್ಳುತ್ತಾರೆ?” ಎಫ್‌ಕೆಸಿಸಿಐ ಅಧ್ಯಕ್ಷ ಕೆ ಜನಾರ್ಧನ್ ಪ್ರಶ್ನಿಸಿದ್ದಾರೆ.
“ನಾನು ಏಪ್ರಿಲ್‌ನಿಂದ ಬಾಡಿಗೆ ಪಾವತಿಸಿಲ್ಲ. ಲಾಕ್‌ಡೌನ್ ಕಾರಣ ನನ್ನ ಅಂಗಡಿಯನ್ನು ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಮುಚ್ಚಲಾಯಿತು. ನಂತರ ಅದನ್ನು ಮತ್ತೆ ತೆರೆದರೂ ಗ್ರಾಹಕರು ಇಲ್ಲ” ಎಂದು ಸಂಜಯ್‌ನಗರದ ರೆಡಿಮೇಡ್ ಗಾರ್ಮೆಂಟ್ಸ್ ಅಂಗಡಿಯ ಮಾಲೀಕ ವಿಶ್ವಜಿತ್ ಹೇಳಿದ್ದಾರೆ.
ಅವರು ತಿಂಗಳಿಗೆ 12,000 ರೂಗಳನ್ನು ಬಾಡಿಗೆಯಾಗಿ ಪಾವತಿಸುತ್ತಾರೆ ಮತ್ತು ವಿಶ್ವಜಿತ್ ಪಾವತಿಸಿದ 2.5 ಲಕ್ಷ ರೂ. ಮುಂಗಡ ಹಣದಿಂದ ಬಾಡಿಗೆ ಬಾಕಿ ಕಡಿತಗೊಳಿಸುವುದಾಗಿ ಮಾಲೀಕರು ಹೇಳಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬಿಜೆಪಿ ಶಾಸಕ ಮತ್ತು ಗರುಡ ಮಾಲ್ ಮಾಲೀಕ ಉದಯ್ ಗರುಡಾಚಾರ್ ಮಾತನಾಡಿ, ಬಾಡಿಗೆದಾರರು ನಾಲ್ಕು ತಿಂಗಳವರೆಗೆ ಯಾವುದೇ ವ್ಯವಹಾರವಿಲ್ಲದ ಕಾರಣ ಬಾಡಿಗೆ ಪಾವತಿಸುವುದು ಕಷ್ಟಕರವಾಗಿದೆ. ಮಾಲ್‌ನಲ್ಲೂ ಕಳೆದ ಎರಡು ತಿಂಗಳಲ್ಲಿ ನಾಲ್ಕು ಅಂಗಡಿಗಳು ಖಾಲಿ ಇವೆ. ಬಾಡಿಗೆದಾರರ ಪರಿಸ್ಥಿತಿಯನ್ನು ತಿಳಿದುಕೊಂಡು, ನಾವು ಬಾಡಿಗೆಗೆ ಒತ್ತಾಯಿಸುತ್ತಿಲ್ಲ. ಗರುಡ ಮಾಲ್‌ನಲ್ಲಿ, ನಾವು ಬಾಡಿಗೆದಾರರಿಂದ ಕೋರ್ ಏರಿಯಾ ನಿರ್ವಹಣೆ ಶುಲ್ಕವನ್ನು ಮಾತ್ರ ಸಂಗ್ರಹಿಸುತ್ತಿದ್ದೇವೆ. ಇದು ನಾವು ಪರಸ್ಪರ ಸಹಕರಿಸುವ ಸಮಯ ಎಂದು ಹೇಳಿದ್ದಾರೆ.
ಕೊರೊನಾ ಪ್ರಾರಂಭವಾಗುವುದಕ್ಕಿಂತ ಕೆಲವೇ ತಿಂಗಳುಗಳ ಮೊದಲು ಪ್ರಾರಂಭವಾದ ವ್ಯವಹಾರಗಳ ಮಾಲೀಕರು ಬಾಡಿಗೆ ಮತ್ತು ಸಾಲದ ಕಂತುಗಳನ್ನು ಪಾವತಿಸಲು ಹೆಣಗಾಡುತ್ತಿದ್ದಾರೆ.
“ನಾನು ಬೇಸರದಲ್ಲೆ ಭವಿಷ್ಯವನ್ನು ನೋಡುತ್ತಿದ್ದೇನೆ. ಏನು ಮಾಡಬೇಕೆಂದು ನನಗೆ ತಿಳಿದಿಲ್ಲ” ಎಂದು ಜನವರಿ ತಿಂಗಳಲ್ಲಿ ಸಂಜಯ್‌ನಗರದ ಬಳಿ ಉಪಾಹಾರ ಗೃಹವನ್ನು ಪ್ರಾರಂಭಿಸಿದ ಅವಿನಾಶ್ ಹೇಳುತ್ತಾರೆ.
ಕೃಪೆ: ಟೈಮ್ಸ್ ಆಫ್ ಇಂಡಿಯಾ
ಓದಿ: ಕಿಮ್ಸ್‌ನಲ್ಲಿ ಆಮ್ಲಜನಕ ವಿತರಣೆ ಕೊರತೆ: ಕೊರೊನಾ ರೋಗಿಗಳ ಸ್ಥಳಾಂತರ


