Homeಕರೋನಾ ತಲ್ಲಣಕೊರೊನಾ ಸಮಯದಲ್ಲಿ ಮಹಿಳೆಯರ ಸ್ಥಿತಿ; ಬಾಣಲೆಯಿಂದ ಬೆಂಕಿಗೆ...

ಕೊರೊನಾ ಸಮಯದಲ್ಲಿ ಮಹಿಳೆಯರ ಸ್ಥಿತಿ; ಬಾಣಲೆಯಿಂದ ಬೆಂಕಿಗೆ…

- Advertisement -
- Advertisement -

ನಮ್ಮ ದೇಶದ ಮಟ್ಟಿಗೆ ಕೊರೊನಾ ಕೇವಲ ರೋಗಾಣು ತಂದೊಡ್ಡುವ ಸಾಂಕ್ರಾಮಿಕ ರೋಗವಷ್ಟೇ ಆಗದೇ ದೊಡ್ಡ ಸಾಮಾಜಿಕ ಪಿಡುಗಾಗಿಯೂ ಪರಿಣಮಿಸಿರುವುದು ಆತಂಕದ ಸಂಗತಿ. ಒಂದೊಮ್ಮೆ ರೋಗಕಾರಕ ವೈರಸ್ಸು ನಾಶಪಡಿಸುವ ಔಷಧಿ ಕಂಡುಹುಡುಕಿದರೂ ಇದರಿಂದಾದ ಸಾಮಾಜಿಕ ಪರಿಣಾಮಗಳು ದೀರ್ಘಕಾಲ ನಮ್ಮನ್ನು ಬಿಡದೇ ಕಾಡುವಂತಹವು. ಆಡುವ, ಓದುವ ವಯಸ್ಸಿನ ಮಕ್ಕಳ ಓದು ಕುಂಠಿತಗೊಂಡಿತು, ಕುಟುಂಬದ ಸದಸ್ಯರು ಕೆಲಸ ಕಳೆದುಕೊಂಡದ್ದು ಸಂಬಳ ಕಡಿತಗೊಂಡದ್ದು ಕಾರಣವಾಗಿ ಇವರಲ್ಲಿ ಹಲವರು ಸಣ್ಣಪುಟ್ಟ ಕೆಲಸಗಳಿಗೆ ಸೇರಿ ಓದಿಗೆ ಅಂತ್ಯ ಹಾಡುವಂತಾಯಿತು. ಇನ್ನೊಂದು ಕಡೆ ರೋಗ ಹರಡುವ ಭೀತಿ ಹೊಸ ಬಗೆಯ ಹೊರಗಿಡುವಿಕೆ, ತಾರತಮ್ಯದ ಮೂಲಕ ಈಗಾಗಲೇ ಇರುವ ಭೇದಭಾವವನ್ನು ಬಲಪಡಿಸಿತು. ಈಗಾಗಲೇ ಇದ್ದ ಪೂರ್ವಾಗ್ರಹಗಳಿಗೆ ಬಲಕೊಡುವ ಬಗೆಯಲ್ಲಿ ಇದು ಬಡವರು, ಕಾರ್ಮಿಕರು, ಮಕ್ಕಳು, ಮಹಿಳೆಯರ ಬದುಕುಗಳನ್ನು ಛಿದ್ರಗೊಳಿಸಿತು. ಜೊತೆಗೆ, ಎಲ್ಲರೂ ಮನೆಯೊಳಗೇ ಇರುವಂತಾದಾಗ ಮನೆಯ ಸದಸ್ಯರು ವಿಚಿತ್ರ ಮಾನಸಿಕ ಒತ್ತಡಕ್ಕೊಳಗಾಗುವ ಸಂದರ್ಭ ಸೃಷ್ಟಿಯಾಯಿತು. ಬಹುಪಾಲು ಈ ಒತ್ತಡಕ್ಕೆ ಒಳಗಾಗಿರುವವರು ಹೆಣ್ಣುಮಕ್ಕಳು.

ಹೆಣ್ಣುಮಕ್ಕಳ ಕಾಲೇಜಿನಲ್ಲಿ ಕೆಲಸ ಮಾಡುವ ನನಗೆ ಕಳೆದ ಬಾರಿ ಲಾಕ್‌ಡೌನ್ ಮುಗಿದು ತರಗತಿ ಆರಂಭವಾದ ಬಳಿಕ ತರಗತಿ ಭಣಭಣ. ಕೆಲವರು ಮನೆಯಿಂದಲೇ ಆನ್‌ಲೈನ್ ತರಗತಿ ಕೇಳುವ ಆಯ್ಕೆ ಮಾಡಿಕೊಂಡಿದ್ದರೆ ಇನ್ನುಳಿದವರು ಎಲ್ಲಿ ಎಂದಾಗ ಅವರ “ಅವಳ ಮದುವೆ ಆಯ್ತು ಮೇಡಂ” ಎಂಬ ಮಾತು ತೀರಾ ಸಾಮಾನ್ಯ. ಕೆಲವರಿಗೆ ಮದುವೆಯಾಗಿದ್ದರೆ, ಇನ್ನು ಕೆಲವರು ನಿಶ್ಚಿತಾರ್ಥದ ಉಂಗುರ ಧರಿಸಿದ್ದರು. ಓದುವುದಕ್ಕೆ ಪೂರಕವಾದ ವಾತಾವರಣ ಇರದ ಕಾರಣಕ್ಕೆ ಕೆಲವು ಹೆಣ್ಣುಮಕ್ಕಳಿಗೆ ಇದು ತಕ್ಷಣಕ್ಕೆ ಒಂದು ಬಗೆಯ ರಮ್ಯಭಾವ ಮೂಡಿಸಿದ್ದೂ ಹೌದು. ಆದರೆ ಅವರ ಮುಂದಿನ ಬದುಕು ಅಂಥ ಆಶಾದಾಯಕವಾಗೇನೂ ಇಲ್ಲ ಎಂಬುದು ಯಾರಿಗಾದರೂ ಗೋಚರಿಸುವ ಸತ್ಯ. ಇನ್ನು ಕೆಲವರಿಗೆ ಅಸಹಾಯಕತೆ ಓದುವ ಹಂಬಲವನ್ನು ಸೋಲಿಸಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ಕಾಣುವ ಈ ವ್ಯತ್ಯಾಸ ಸಾಮಾಜಿಕವಾದ ದೊಡ್ಡ ಸಮಸ್ಯೆಯತ್ತ ಬೆರಳು ಮಾಡುತ್ತದೆ.

ಕಳೆದ ದಶಕಕ್ಕೆ ಹೋಲಿಸಿದರೆ ಈ ದಶಕದಲ್ಲಿ ಬಾಲ್ಯವಿವಾಹ ಪ್ರಮಾಣ 10 ಮಿಲಿಯನ್ ಹೆಚ್ಚಾಗಬಹುದು ಎಂದು ಯುನಿಸೆಫ್ ಅಂದಾಜಿಸಿದೆ. ಜಗತ್ತಿನಲ್ಲಿ ನಡೆಯುವ ಬಾಲ್ಯವಿವಾಹಗಳಲ್ಲಿ ಮೂರನೇ ಒಂದರಷ್ಟು ಭಾರತದಲ್ಲಿ ನಡೆಯುತ್ತಿವೆ ಎಂಬುದು ಆತಂಕಕಾರಿ ಅಂಶವಾಗಿದೆ. ಚೈಲ್ಡ್ ಲೈನ್‌ಗೆ ಬರುವ ಕರೆಗಳಲ್ಲಿ ಮದುವೆಗೆ ಸಂಬಂಧಿಸಿ ಶೇಕಡಾ 17ರಷ್ಟು ಏರಿಕೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಜಗತ್ತಿನಾದ್ಯಂತ ಮತ್ತು ಭಾರತದಲ್ಲೂ ಬಾಲ್ಯವಿವಾಹವನ್ನು ಹೋಗಲಾಡಿಸುವ ಯತ್ನ ಭರದಿಂದ ಸಾಗಿತ್ತು. 2030ರ ಹೊತ್ತಿಗೆ ಬಾಲ್ಯವಿವಾಹ ನಿರ್ಮೂಲನೆ ಮಾಡುವ ಗುರಿಯೂ ಕಣ್ಣಮುಂದಿತ್ತು. ಆದರೆ ಕೋವಿಡ್‌ನಿಂದಾಗಿ ಇದುವರೆಗೆ ಲಿಂಗ ಸಮಾನತೆ ಸಾಧಿಸುವ ನಿಟ್ಟಿನಲ್ಲಿ ನಡೆದ ಕೆಲಸಗಳಿಗೆ ದೊಡ್ಡ ಹಿನ್ನಡೆ ಉಂಟಾಗಿದೆ.

ಇದ್ದ ಕೆಲಸವೂ ಹೋಯ್ತು, ಮಗಳಿಗೆ ವರ ಬಂದಾಗ ಈಗ ಬಿಟ್ಟುಕೊಂಡರೆ ಮುಂದೆ ಹೇಗೋ ಎನುವ ಆತಂಕ ಒಂದೆಡೆ, ಕಾಲೇಜಿಗೆ ಕಳಿಸುವ ಸ್ಥಿತಿಯಲ್ಲಿಲ್ಲ, ಮದುವೆಯಾದರೂ ಮಾಡಿ ಜವಾಬ್ದಾರಿ ಕಳೆದುಕೊಳ್ಳೋಣ ಎಂಬ ಯೋಚನೆ ಇನ್ನೊಂದೆಡೆ. ಈಗಿರುವ ಆರ್ಥಿಕ ಸ್ಥಿತಿಯಲ್ಲಿ ಮದುವೆ ಕಡಿಮೆ ಖರ್ಚಿನಲ್ಲಿ ಮುಗಿಯುತ್ತದಲ್ಲ ಎಂಬ ಲೆಕ್ಕಾಚಾರ ಬೇರೆ. ಜೊತೆಗೆ, ಶಾಲೆಯಿಂದ ಡ್ರಾಪ್‌ಔಟ್ ಆದವರಲ್ಲಿ ಹೆಣ್ಣುಮಕ್ಕಳೇ ಹೆಚ್ಚು. ಆನ್‌ಲೈನ್ ಶಿಕ್ಷಣಕ್ಕೆ ಮೊಬೈಲ್ ಬೇಕು, ಇದು ಖರ್ಚಿನ ಬಾಬ್ತು. ಇಂಥವುಗಳಿಗೆ ಖರ್ಚು ಮಾಡುವುದರ ಜೊತೆಗೆ ಮದುವೆಗೆ ಬೇರೆ ಖರ್ಚು ಮಾಡಬೇಕಲ್ಲ ಎಂಬ ಚಿಂತೆಯಲ್ಲಿ, ಜೊತೆಗೆ ಮೊಬೈಲ್‌ನಿಂದ ಇವರು ಎಲ್ಲಿ ದಾರಿಬಿಟ್ಟು ಹೋಗುತ್ತಾರೋ ಎಂಬ ಭಯದಲ್ಲಿ ಮದುವೆ ಮಾಡಿ ಕೈತೊಳೆದುಕೊಂಡು ಬಿಡೋಣ ಎಂದೆಣಿಸಿ ಪೋಷಕರು ಲಾಕ್‌ಡೌನ್ ಅವಧಿಯಲ್ಲೇ ಧಾವಂತದಲ್ಲಿ ಮದುವೆ ಮಾಡಿಬಿಟ್ಟರು.

PC : The Wire

ಹಾಗೆಯೇ ಒಬ್ಬಳಿಗೆ ಮದುವೆ ಆದರೆ ಅಥವಾ ಒಬ್ಬಳು ತಾನು ಮೆಚ್ಚಿದವನ ಜೊತೆ ಹೋದರೆ ಸಾಕು, ಆ ಊರಿನ ಉಳಿದ ಹೆಣ್ಣುಮಕ್ಕಳನ್ನು ಆತುರದಿಂದ ವಿವಾಹಬಂಧನಕ್ಕೆ ತಳ್ಳುವುದೂ ಸಾಮಾನ್ಯ ವಿಚಾರ. ಸದ್ಯದ ಪರಿಸ್ಥಿತಿಯಿಂದ ಮನೆಯೊಳಗೆ ಉಂಟಾದ ಸಂಘರ್ಷಮಯ ವಾತಾವರಣ, ಹೇಗಾದರೂ ಇದರಿಂದ ಪಾರಾದರೆ ಸಾಕು ಎಂಬ ಭಾವವನ್ನು ಹೆಣ್ಣುಮಕ್ಕಳಲ್ಲಿ ಮೂಡಿಸುವುದು ಸಹಜ. ಈ ಕಾರಣದಿಂದ ಇದರಿಂದ ಬಚಾವಾಗಲು ಅವರು ಕ್ಷಣದ ಆಕರ್ಷಣೆಗೆ ಬಲಿಯಾಗಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿರುವ ಸಂದರ್ಭಗಳೂ ಇವೆ. ಇವರಲ್ಲಿ ಬಹುಪಾಲು ಹೆಣ್ಣುಮಕ್ಕಳ ವಯೋಮಾನ 18ಕ್ಕಿಂತ ಕಡಿಮೆ. ಒಂದು ವೇಳೆ 18 ಕಳೆದಿದ್ದರೂ ಅವರದು ಪ್ರಬುದ್ಧತೆ ಪಡೆದ ವಯಸ್ಸಂತೂ ಅಲ್ಲ, ಶಿಕ್ಷಣವೂ ಅರ್ಧದಲ್ಲೇ ಮೊಟಕುಗೊಂಡದ್ದೂ ನಿಜ. ಇದು ಎದ್ದು ಕಾಣುವ ಮಾನವ ಹಕ್ಕಿನ ಉಲ್ಲಂಘನೆ.

ಕಳೆದ ಮುಂಗಾರು ಲೋಕಸಭೆ ಅಧಿವೇಶನದಲ್ಲಿ ರಾಜ್ಯ ಸಭೆಯ ಸಂಸದ ಅಮನ್ ಪಟ್ನಾಯಕ್ ಅವರು ಕೋವಿಡ್ ಸಂದರ್ಭದಲ್ಲಿ ಬಾಲ್ಯವಿವಾಹ ಹೆಚ್ಚುತ್ತಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಮ್ಮ ಬಳಿ ಅಂಕಿಅಂಶಗಳಿಲ್ಲ ಎಂಬ ಉತ್ತರ ನೀಡಿತ್ತು. ಅದೇ ಪ್ರಶ್ನೆಯನ್ನು ಮಾಹಿತಿ ಹಕ್ಕಿನಡಿ ಕೇಳಿದಾಗ, 2019ನೇ ವರ್ಷಕ್ಕೆ ಹೋಲಿಸಿದರೆ ಲಾಕ್‌ಡೌನ್ ಅವಧಿಯಲ್ಲಿ ಬಾಲ್ಯವಿವಾಹದ ಪ್ರಮಾಣ ಶೇ.33ಕ್ಕಿಂತಲೂ ಹೆಚ್ಚಾಗಿರುವ ಅಂಶ ತಿಳಿದುಬಂತು. ಕೇವಲ ಆಗಸ್ಟ್ ತಿಂಗಳೊಂದರಲ್ಲೇ ಇದು ಶೇ.88ರಷ್ಟು ಹೆಚ್ಚಳ ಕಂಡಿದೆ. ಇದು ಸನ್ನಿವೇಶದ ಘೋರಚಿತ್ರಣವನ್ನು ನೀಡುತ್ತದೆ.

ಲಾಕ್‌ಡೌನ್ ಅವಧಿ ಈಗಾಗಲೇ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ತೀವ್ರತೆ ಹೆಚ್ಚಿಸುವ ಬಗೆಯಲ್ಲಿದೆ. ತಮಗೆ ಬೇಕಾದಂತೆ ತವರು ಮನೆಗೆ, ಬಂಧುಗಳು ಗೆಳತಿಯರ ಮನೆಗೆ ಹೋಗಲು ಅವಕಾಶವಿರದೇ ಹೊಸದಾಗಿ ಸೇರಿದ ಪತಿಯ ಮನೆಯೊಳಗೇ ಇರುವುದು ಅವರ ಮಾನಸಿಕ ಒತ್ತಡ ಹೆಚ್ಚಿಸುತ್ತದೆ. ಹಲವರು ಮದುವೆಯಾದ ಕೆಲವು ದಿನಗಳು, ತಿಂಗಳುಗಳೊಳಗೇ ಸಂಗಾತಿಗಳನ್ನು ಕಳೆದುಕೊಂಡು ಒಂಟಿಯಾಗಿ, ಅವರ ಭವಿಷ್ಯ ಕತ್ತಲಾಗಿಬಿಟ್ಟಿದೆ. ಸರಿಯಾದ ಶಿಕ್ಷಣವಿಲ್ಲದಿರುವುದು, ಬಡತನ ಇವು ಮುಂದಿನ ಹಲವು ಪೀಳಿಗೆಗಳ ಮೇಲೆ ಪರಿಣಾಮ ಬೀರುವಂತಹುದು. ಶಿಕ್ಷಣ, ಸ್ವಾಯತ್ತತೆ, ಆರೋಗ್ಯ, ಅಪೌಷ್ಟಿಕತೆ, ಸಂತಾನೋತ್ಪತ್ತಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು, ಕೌಟುಂಬಿಕ ದೌರ್ಜನ್ಯ ಮುಂತಾದವುಗಳಿಗೆ ಈ ಹೆಣ್ಣುಮಕ್ಕಳು ತುತ್ತಾಗುವಂತಾಗಿದೆ.

ಲಾಕ್‌ಡೌನ್ ಅವಧಿಯಲ್ಲಿ ಕೌಟುಂಬಿಕ ದೌರ್ಜನ್ಯದ ಪ್ರಕರಣಗಳು ಹೆಚ್ಚಿವೆ. ರಾಷ್ಟ್ರೀಯ ಮಹಿಳಾ ಆಯೋಗ, ಮಾರ್ಚ್15 ಮತ್ತು ಮೇ31ರ ನಡುವಣ ಅವಧಿಯಲ್ಲಿ 1,477 ದೂರುಗಳು ದಾಖಲಾಗಿರುವುದನ್ನು ತಿಳಿಸುತ್ತಾ ಏಪ್ರಿಲ್ ಒಂದು ತಿಂಗಳಲ್ಲೇ ಪ್ರಕರಣಗಳು ಎರಡೂವರೆ ಪಟ್ಟು ಹೆಚ್ಚಿವೆ ಎಂಬ ಆಘಾತಕಾರಿ ಸಂಗತಿಯನ್ನು ಹೊರಹಾಕಿದೆ. ಮಹಿಳೆಯರು ಕೆಲಸ ಮಾಡುವ ಅವಧಿ ಹೆಚ್ಚಿದೆ. ಹೊರಗಿನ ಸನ್ನಿವೇಶದಿಂದ ಉಂಟಾದ ಒತ್ತಡಕ್ಕೆ ಮಹಿಳೆಯರು ಬಲಿಪಶುಗಳಾಗಿದ್ದಾರೆ. ಅವರು ಅದನ್ನು ಹೊರಹಾಕುವ ಅವಕಾಶಗಳೂ ಇಲ್ಲದೆ ಉಸಿರುಗಟ್ಟುವ ವಾತಾವರಣದಲ್ಲಿ ಇವರು ಸಿಲುಕಿಕೊಂಡಿದ್ದಾರೆ. ಲೈಂಗಿಕ ಶೋಷಣೆ ಹೆಚ್ಚಾಗಿದೆ. ಸೂಕ್ತ ಸಂತಾನ ನಿಯಂತ್ರಣ ಕ್ರಮಗಳಿಗೆ ಅವಕಾಶ ದೊರೆಯದೇ ಗರ್ಭ ಧರಿಸುವ ಪ್ರಮಾಣ ಹೆಚ್ಚಾಗಿದೆ. ಇದಕ್ಕನುಗುಣವಾದ ಆಹಾರ, ವೈದ್ಯಕೀಯ ಸೌಲಭ್ಯಗಳ ಲಭ್ಯತೆ ಇಲ್ಲದೆ ಮಹಿಳೆಯರು, ಹುಟ್ಟುವ ಮಕ್ಕಳು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಸದ್ಯದ ಸಮಸ್ಯೆಗಳಿಗೆ ಕ್ಷಣಿಕ ಪರಿಹಾರವೆಂಬಂತೆ ಭಾಸವಾಗುವ ಇವು ಸಮಾಜದ ಮೇಲೆ ಬೀರುವ ಪರಿಣಾಮ ದೀರ್ಘಕಾಲ ಉಳಿಯುವಂಥದ್ದು. ಮಹಿಳಾ ಸಮಾನತೆ ಅಭಿವೃದ್ಧಿಯ ಸೂಚ್ಯಂಕದಲ್ಲಿ ಒಂದಾಗಿದ್ದು ಈ ದಿಕ್ಕಿನಲ್ಲಿ ನಮ್ಮ ನಿರ್ಲಕ್ಷ್ಯ ದೇಶದ ಒಟ್ಟು ಬೆಳವಣಿಗೆಯ ದೃಷ್ಟಿಯಿಂದ ಕೆಟ್ಟ ಪರಿಣಾಮ ಬೀರುತ್ತದೆ. ಮಹಿಳೆಯರನ್ನು ಗೌರವದಿಂದ, ಪೂಜ್ಯಭಾವನೆಯಿಂದ ನೋಡುತ್ತೇವೆ ಎಂಬ ಬಾಯಿಮಾತಿನ ಮಾತು ಎಷ್ಟೇ ಇದ್ದರೂ ಅವರ ವ್ಯಕ್ತಿತ್ವದ ಸಮಗ್ರ ಬೆಳವಣಿಗೆಯತ್ತ ಗಮನ ಹರಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಏನೇನೂ ಸಾಲದು. ಕೊರೊನಾ ಕೇವಲ ಒಂದು ವೈರಾಣು, ಅದನ್ನು ದಮನಿಸುವ ಮಾರ್ಗಗಳನ್ನು ನಾವು ಕಂಡುಕೊಂಡೆವು. ಆದರೆ ಈ ಪೂರ್ವಾಗ್ರಹಗಳನ್ನು ದಾಟುವ ಹಾದಿ ಬಹಳ ಕಠಿಣವೆಂದೇ ತೋರುತ್ತದೆ.

ಡಾ. ಭಾರತೀದೇವಿ.ಪಿ

ಡಾ. ಭಾರತೀದೇವಿ.ಪಿ
ಭಾರತೀದೇವಿ ಅವರು ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕಿಯಾಗಿದ್ದು ಈ ಸದ್ಯ ಹಾಸನದಲ್ಲಿ ನೆಲೆಸಿದ್ದಾರೆ.


ಇದನ್ನೂ ಓದಿ: ಕೊರೊನಾ ಸೋಂಕಿತರಾಗಿ, ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ ಕರ್ನಾಟಕದ ಮಾನವ ಕಂಪ್ಯೂಟರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....