ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 49 ಲಕ್ಷಗಳ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 83,809 ಕೊವೀಡ್ ಪ್ರಕರಣಗಳು ದೃಢವಾಗಿದ್ದು, 1,054 ಮಂದಿ ಮೃತಪಟ್ಟಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ ಪ್ರಸ್ತುತ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 49,30,237 ಲಕ್ಷವಿದ್ದು, ಈ ಕೇಸ್‌ಗಳಲ್ಲಿ 9,90,061 ಸಕ್ರಿಯ ಪ್ರಕರಣಗಳಿವೆ. 38,59,399 ಲಕ್ಷ ಜನ ಕೊವೀಡ್‌ನಿಂದ ಗುಣಮುಖರಾಗಿದ್ದಾರೆ. ಈವರೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 80,776 ಸಾವಿರ ಎಂದು ತಿಳಿಸಿದೆ.
ಇದನ್ನೂ ಓದಿ: ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಯ್ತು #NoMoreBJP, #unemploymentday
?Total #COVID19 Cases in India (as on September 15, 2020)
▶️78.28% Cured/Discharged/Migrated (38,59,399)
▶️20.08% Active cases (9,90,061)
▶️1.64% Deaths (80,776)Total COVID-19 confirmed cases = Cured/Discharged/Migrated+Active cases+Deaths pic.twitter.com/S6le1tSaOE
— #IndiaFightsCorona (@COVIDNewsByMIB) September 15, 2020
ದೇಶದಲ್ಲೇ ಮೊದಲನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10,77,374 ಇದ್ದು, ಸಕ್ರೀಯ ಪ್ರಕರಣಗಳು 2,91,630 ಇವೆ. ಸೋಂಕಿತರ ಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕರ್ನಾಟಕ, ಸಕ್ರೀಯ ಸೋಂಕಿತ ಪ್ರಕರಣದ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಸದ್ಯ ರಾಜ್ಯದಲ್ಲಿ 98,482 ಸಕ್ರೀಯ ಪ್ರಕರಣಗಳಿವೆ.
ವಿಶ್ವದಲ್ಲೇ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿರುವ ಭಾರತದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.


