ತಾನು ಕೊರೊನಾ ಪಾಸಿಟಿವ್ ಆಗಿದ್ದೇನೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಬುಧವಾರ ಹೇಳಿದ್ದಾರೆ. ಮಂಗಳವಾರದಂದು ಅವರ ಸಂಪರ್ಕದಲ್ಲಿದ್ದ ಕೆಲವು ಅಧಿಕಾರಿಗಳಿಗೆ ಕೊರೊನಾ ಪಾಸಿಟಿವ್ ಆಗಿದ್ದ ಹಿನ್ನಲೆಯಲ್ಲಿ ಅವರು ಐಸೋಲೇಷನ್‌ಗೆ ಒಳಗಾಗಿದ್ದರು.
ಇಂದು ಟ್ವೀಟ್ ಮೂಲಕ ಅವರು, “ಆರಂಭಿಕ ರೋಗಲಕ್ಷಣಗಳನ್ನು ಗಮನಿಸಿದ ನಂತರ, ನಾನು ಪರೀಕ್ಷಿಸಿದ್ದು, ಕೊರೊನಾ ಪಾಸಿಟಿವ್ ಆಗಿದ್ದೇನೆ. ನಾನು ಸ್ವಯಂ ಐಸೋಲೇಷನ್‌ಗೆ ಒಳಗಾಗಿದ್ದೇನೆ ಮತ್ತು ವೈದ್ಯರ ಸಲಹೆಯನ್ನು ಅನುಸರಿಸುತ್ತಿದ್ದೇನೆ” ಎಂದು ಕೊರೊನಾ ಪಾಸಿಟಿವ್ ಆಗಿರುವ ಬಗ್ಗೆ ಹೇಳಿದ್ದಾರೆ.
शुरुआती लक्षण दिखने पर मैंने कोविड की जांच कराई और मेरी रिपोर्ट पॉजिटिव आई है।
मैं सेल्फ आइसोलेशन में हूं और चिकित्सकों के परामर्श का पूर्णतः पालन कर रहा हूं। सभी कार्य वर्चुअली संपादित कर रहा हूं।
— Yogi Adityanath (@myogiadityanath) April 14, 2021
ಇದನ್ನೂ ಓದಿ: ’ಟೈಮ್’ ಮ್ಯಾಗಜೀನ್‌ನಲ್ಲಿ ಯುಪಿ ಸರ್ಕಾರದ ಜಾಹೀರಾತು; ’ವರದಿ’ ಎಂದು ಬಿಂಬಿಸಿದ ಭಾರತೀಯ ಮಾಧ್ಯಮಗಳು!
ಅವರು ಈ ಹಿಂದೆಯೆ, “ನನ್ನ ಕಚೇರಿಯ ಅಧಿಕಾರಿಗಳು ಕೊರೊನಾ ವೈರಸ್ ಪಾಸಿಟಿವ್ ಆಗಿದ್ದಾರೆ. ಅವರು ನನ್ನೊಂದಿಗೆ ಸಂಪರ್ಕದಲ್ಲಿದ್ದರು, ಆದ್ದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ನಾನು ಸ್ವಯಂ ಐಸೋಲೇಷನ್ ಅಲ್ಲಿ ಇದ್ದೇನೆ. ನನ್ನ ಎಲ್ಲಾ ಕೆಲಸಗಳನ್ನು ಡಿಜಿಟಲ್ ರೂಪದಲ್ಲಿ ಪ್ರಾರಂಭಿಸುತ್ತಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.
ಅವರ ಆನ್ ಸ್ಪೆಷಲ್ ಡ್ಯೂಟಿ ಅಧಿಕಾರಿ ಅಭಿಷೇಕ್ ಕೌಶಿಕ್ ಸೇರಿದಂತೆ ಕೆಲವು ಅಧಿಕಾರಿಗಳು ಕೊರೊನಾ ಪಾಸಿಟಿವ್ ಆಗಿದ್ದರು ಎಂದು ವರದಿಯಾಗಿತ್ತು.
ಇದನ್ನೂ ಓದಿ: ಸ್ವತಃ ಆದಿತ್ಯನಾಥ್‌ಗೆ ಯುಪಿ ಪೊಲೀಸರ ಮೇಲೆ ನಂಬಿಕೆಯಿಲ್ಲ: ಬಿಜೆಪಿ ನಾಯಕ


