Homeಮುಖಪುಟ’ಟೈಮ್’ ಮ್ಯಾಗಜೀನ್‌ನಲ್ಲಿ ಯುಪಿ ಸರ್ಕಾರದ ಜಾಹೀರಾತು; ’ವರದಿ’ ಎಂದು ಬಿಂಬಿಸಿದ ಭಾರತೀಯ ಮಾಧ್ಯಮಗಳು!

’ಟೈಮ್’ ಮ್ಯಾಗಜೀನ್‌ನಲ್ಲಿ ಯುಪಿ ಸರ್ಕಾರದ ಜಾಹೀರಾತು; ’ವರದಿ’ ಎಂದು ಬಿಂಬಿಸಿದ ಭಾರತೀಯ ಮಾಧ್ಯಮಗಳು!

ಜಾಹಿರಾತನ್ನು ವಾಸ್ತವದ ವರದಿ/ಲೇಖನ ಎಂದು ಬಿಂಬಿಸಲು ಯತ್ನಿಸಿದ ಹಲವು ಭಾರತೀಯ ಮಾಧ್ಯಮಗಳು ಯೋಗಿ ಆದಿತ್ಯನಾಥರನ್ನು ಸಿಕ್ಕಾಪಟ್ಟೆ ಹೊಗಳಿ ಕೃತಾರ್ಥವಾಗಿವೆ!

- Advertisement -
- Advertisement -

ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌‌ ಕೊರೊನಾ ಬಿಕ್ಕಟ್ಟನ್ನು ನಿರ್ವಹಿಸಿದ ರೀತಿಯನ್ನು ಟೈಮ್ ಮ್ಯಾಗಜೀನ್ ಹೊಗಳಿ ವರದಿ/ಲೇಖನ ಪ್ರಕಟಿಸಿದೆ ಎಂದು ಝೀ ನ್ಯೂಸ್, ಎಬಿಪಿ ಗಂಗಾ, ನ್ಯೂಸ್18-ಯುಪಿ ಸೇರಿದಂತೆ ಹಲವು ಚಾನೆಲ್‌ಗಳು ಸುಳ್ಳು ಸುದ್ದಿ ಪ್ರಸಾರ ಮಾಡಿವೆ.

ಟೈಮ್ ಮ್ಯಾಗಜೀನ್‌ನ ಜಾಹಿರಾತನ್ನು ತೋರಿಸಿ ಮುಖ್ಯಮಂತ್ರಿ ಆದಿತ್ಯನಾಥ್‌ನನ್ನು ಈ ಚಾನೆಲ್‌ಗಳ ಆಂಕರ್‌ಗಳು ವಿಪರೀತವಾಗಿ ಹೊಗಳಿದ್ದಾರೆ. ಟಿವಿ ಪರದೆಯ ಮೇಲೆ ಆದಿತ್ಯನಾಥ್‌‌ನನ್ನು ಶ್ಲಾಘಿಸುವ ಭರದಲ್ಲಿ ಹಲವು ಗುಣನಾಮಳನ್ನೂ ನೀಡಿದ್ದವು. ಇದೇ ಮಾದರಿಯ ವರದಿಯನ್ನು ಕೆಲವು ಮುದ್ರಣ ಮಾಧ್ಯಮಗಳು ಕೂಡಾ ಮಾಡಿವೆ.

ವಾಸ್ತವದಲ್ಲಿ ಟೈಮ್‌ನಲ್ಲಿ ಬಂದಿದ್ದು ಉತ್ತರಪ್ರದೇಶ ಸರ್ಕಾರ ನೀಡಿದ ಜಾಹೀರಾತು. ಅದನ್ನು ಲೇಖನ ರೂಪದಲ್ಲಿ ಪ್ರೆಸೆಂಟ್ ಮಾಡಲಾಗಿತ್ತು. ಇಂತಹ ಜಾಹೀರಾತುಗಳನ್ನು ಅಡ್ವಟೋರಿಯಲ್ ಎಂದೇ ಕರೆಯಲಾಗುತ್ತದೆ. ಇದರ ಮೇಲುಗಡೆ ’ಯುಪಿ ಸರ್ಕಾರ ನಿಡಿದ ಕಂಟೆಂಟ್’ ಎಂದೂ ಉಲ್ಲೇಖಿಸಲಾಗಿದೆ. ಈ ಅಡ್ವಟೋರಿಯಲ್ ಟೈಮ್‌ನ ಇಂಟರ್‌ನೆಟ್ ಆವೃತ್ತಿಯಲ್ಲಿ ಪ್ರಕಟವಾಗಿಲ್ಲ. ವಿದೇಶಿ ಮತ್ತು ಅಮೆರಿಕನ್ ಪ್ರಿಂಟ್ ಆವೃತ್ತಿಯಲ್ಲೂ ಇದನ್ನು ಪ್ರಕಟಿಸಲಾಗಿಲ್ಲ.

ಇದನ್ನೂ ಓದಿ: ನಿಮ್ಮ ಕಾಯ್ದೆಯಿಂದ ರಾಜ್ಯ ಧರ್ಮಾಂಧತೆಯ ಕೇಂದ್ರವಾಗಿದೆ: ಆದಿತ್ಯನಾಥ್‌ಗೆ 104 ಮಾಜಿ IAS ಅಧಿಕಾರಿಗಳ ಪತ್ರ

ಬಲಪಂಥಿಯ ವೆಬ್‌ಸೈಟ್ ಒಪಿ‌ಇಂಡಿಯಾ, ’ಹಿಂದೊಮ್ಮೆ ಯೋಗಿ ಅವರನ್ನು ರಾಡಿಕಲ್ ಎಂದು ಕರೆದಿದ್ದ ಟೈಮ್ ಈಗ ಯೋಗಿಯವರನ್ನು ಹೊಗಳಿದೆ’ ಎಂಬ ಶಿರ್ಷಿಕೆ ನೀಡಿ ವರದಿ ಪ್ರಕಟಿಸಿದೆ.

‘Hang in there, better times are ahead’ – ಎಂಬ ತಲೆಬರಹದ ಈ ಅಡ್ವಟೋರಿಯಲ್ ಅನ್ನು ಡಿಸೆಂಬರ್ 15 ರಂದು ಆದಿತ್ಯನಾಥ್ ಶೇರ್ ಮಾಡಿ, ಅದನ್ನು ಲೇಖನ ಎಂಬಂತೆ ಬಿಂಬಿಸಿದ್ದರು. ಆ ಸಮಯದಲ್ಲಿ ಇದು ಗಮನ ಸೆಳೆದಿರಲಿಲ್ಲ. ನಂತರದ ಇದು ಸಾಮಾಜಿಕ ಜಾಲತಾಣಗಳ ಮೂಲಕ ಹರಡಿದೆ. ಎರಡು ವಾರಗಳ ನಂತರ ಎಚ್ಚೆತ್ತುಕೊಂಡ ಚಾನೆಲ್‌ಗಳು ಇತ್ತೀಚೆಗೆ ಯೋಗಿ ಧ್ಯಾನ ಮಾಡಿದವು.

ಒಂದೆರಡು ತಿಂಗಳ ಹಿಂದಷ್ಟೇ ಟೈಮ್‌ನಲ್ಲಿ, ಭಾರತದ ಕೊರೊನಾ ನಿರ್ವಹಣೆಯ ವಿಫಲತೆ ಕುರಿತು ಬರೆಯಲಾಗಿತ್ತು. ಅದರಲ್ಲಿ ಕೊರೊನಾ ಕುರಿತು ತಪ್ಪು ಮಾಹಿತಿ ಹರಡುವವರ ಕುರಿತ ಬಾಕ್ಸ್‌ನಲ್ಲಿ ಆದಿತ್ಯನಾಥ್‌ ಕೂಡಾ ಇದ್ದರು. ’ಯೋಗದಿಂದ ಕೊವಿಡ್ ನಿವಾರಿಸಬಹುದು’ ಎಂಬ ಅವರ ಹೇಳಿಕೆಯನ್ನು ಟೈಮ್ ಟೀಕಿಸಿತ್ತು.

ಅಡ್ವಟೋರಿಯಲ್‌ಗಳು ಪಾವತಿ ಕೊಟ್ಟು ಪ್ರಕಟಿಸುವ ಲೇಖನಗಳಾಗಿದ್ದು, ಅವು ಜಾಹೀರಾತಿನಂತಿರದೇ ಎಡಿಟೋರಿಯಲ್ ಶೈಲಿಯಲ್ಲಿ ನಿರೂಪಿತಗೊಂಡಿರುತ್ತವೆ.

ಇದನ್ನೂ ಓದಿ: ಸ್ವತಃ ಆದಿತ್ಯನಾಥ್‌‌ಗೆ ಯುಪಿ ಪೊಲೀಸರ ಮೇಲೆ ನಂಬಿಕೆಯಿಲ್ಲ: ಬಿಜೆಪಿ ನಾಯಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...