ಕ್ಲಬ್ ಹೌಸ್ ವೇದಿಕೆಯಲ್ಲಿ ಮುಸ್ಲಿಂ ಮಹಿಳೆಯ ಕುರಿತು ಅಶ್ಲೀಲ, ದ್ವೇಷದ ಮಾತುಗಳನ್ನಾಡಿದ ಆರೋಪದ ಮೇಲೆ ಹರಿಯಾಣ ಮೂಲದ ಮೂವರನ್ನು ಮುಂಬೈ ಪೋಲಿಸರು ಬಂಧಿಸಿದ್ದಾರೆ.
ಮುಂಬೈ ಅಪರಾಧ ವಿಭಾಗದ ಸೈಬರ್ ಪೋಲಿಸ್ ಠಾಣೆಯ ಸಿಬ್ಬಂದಿಯು ಕ್ಲಬ್ ಹೌಸ್ ಚರ್ಚೆಯಲ್ಲಿ ಭಾಗವಹಿಸಿದ್ದವರನ್ನು ಪತ್ತೆ ಹಚ್ಚಿ ಗುರುವಾರ ತಡರಾತ್ರಿ ಬಂಧಿಸಿದ್ದಲ್ಲೆ ಆರೋಪಿಗಳನ್ನು ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಒಪ್ಪಿಸುವುದ್ದಾಗಿ ತಿಳಿಸಿದ್ದಾರೆ.
ಕ್ಲಬ್ ಹೌಸ್ ಚರ್ಚೆ ಬೇಧಿಸಿ ದ್ವೇಷ ಹರಡುತ್ತಿದ್ದವರನ್ನು ಬಂಧಿಸಿದ್ದಕ್ಕಾಗಿ ಮುಂಬೈ ಪೊಲೀಸರನ್ನು ಹಲವರು ಶ್ಲಾಘಿಸಿದ್ದಾರೆ. ಈ ಕುರಿತು ಇಂದು ಮುಂಜಾನೆ ಶಿವಸೇನೆಯ ರಾಜಸಭಾ ಸದ್ಯಸರಾದ ಪ್ರಿಯಾಂಕ ಚತುರ್ವೆದಿ ಅವರು “ಹಿಂಸೆಯನ್ನು ವಿರೋಧಿಸೋಣ, ಕ್ಲಬ್ ಹೌಸ್ ಚರ್ಚೆಗಳನ್ನು ಪತ್ತೆಹಚ್ಚಿ ಆರೋಪಿ೯ಗಳನ್ನು ಬಂಧಿಸಿದ ಮುಂಬೈ ಪೊಲೀಸರಿಗೆ ಧನ್ಯವಾದ” ಎಂದು ಟ್ವೀಟ್ ಮಾಡಿದ್ದಾರೆ.
ಬುಧುವಾರ ದೆಹಲಿ ಪೋಲಿಸರು ಕ್ಲಬ್ ಹೌಸ್ ಮತ್ತು ಗೂಗಲ್‌ಗೆ ಪತ್ರ ಬರೆದು ಮುಸ್ಲಿಂ ಮಹಿಳೆಯರ ಕುರಿತು ಅಶ್ಲೀಲ ಮತ್ತು ದ್ವೇಷದ ಚರ್ಚೆ ನಡೆಸಿದ್ದ ಆಯೋಜಕರ ಮತ್ತು ಭಾಗವಹಿಸಿದ್ದವರ ವಿವರಗಳನ್ನು ಕೇಳಿದ್ದರು. ಹಾಗೆ ಆಡಿಯೋ ಚಾಟ್‌ನಲ್ಲಿ ಭಾಗವಹಿಸಿದ್ದ ಹಲವು ಸದ್ಯಸರನ್ನು ಪೋಲಿಸರು ಗುರುತಿಸಿದ್ದಾರೆ, ಇದರಲ್ಲಿ ಕೆಲ ಪುರುಷ ಮತ್ತು ಮಹಿಳೆಯರು ಪಾಲ್ಗೊಂಡಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮುಂಬೈ ಮೂಲದ ಸಂಸ್ಥೆಯೊಂದು ಈ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಕ್ಲಬ್ ಹೌಸ್ ಅನ್ನು ನಿಷ್ಕ್ರಿಯಗೊಳಿಸಬೇಕು ಮತ್ತು ಆರೋಪಿಗಳನ್ನು ಬಂಧಿಸಬೇಕೆಂದು ಬುಧುವಾರ ಮುಂಬೈ ನಗರ ಪೋಲಿಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ: ಹೊಸ ಸಂಸತ್ತು ‘ಸೆಂಟ್ರಲ್ ವಿಸ್ಟಾ’ ನಿರ್ಮಾಣ ವೆಚ್ಚ ಯೋಜನೆಗಿಂತ 282 ಕೋಟಿ ರೂ. ಹೆಚ್ಚಳ