Homeಪಂಚರಾಜ್ಯ ಚುನಾವಣೆಯ ಗೋಜಲುಗಳು

ಪಂಚರಾಜ್ಯ ಚುನಾವಣೆಯ ಗೋಜಲುಗಳು

- Advertisement -
- Advertisement -

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷ ಅದರಲ್ಲೂ ವಿಶೇಷವಾಗಿ ಮೋದಿ ಮತ್ತು ಅಮಿತ್ ಶಾ ಶತಾಯಗತಾಯ ಗೆಲ್ಲಲೇಬೇಕು ಎಂದು ಹಠ ತೊಟ್ಟು ಪ್ರಚಾರ ಮಾಡಿದರು. ಇಡಿ, ಸಿಬಿಐ ಮುಂತಾದ ಸಾರ್ವಜನಿಕ ಸಂಸ್ಥೆಗಳನ್ನು ಬಳಸಿಕೊಂಡರು ಜೊತೆಗೆ ಎಸ್ ಐಆರ್ ಮೂಲಕ ಎಲ್ಲಾ ದಾಖಲೆಗಳಿದ್ದ 27 ಲಕ್ಷ ಮತದಾರರನ್ನು ‘ತಾರ್ಕಿಕ ವ್ಯತ್ಯಾಸ’ ಎನ್ನುವ ನೆಪದಲ್ಲಿ ಪಟ್ಟಿಯಿಂದ ಕೈಬಿಟ್ಟರು.

ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ನಡೆ ಹಾಗೂ ಅನುಸರಿಸಿದ ವಾಮಮಾರ್ಗಗಳು ಮತ್ತು ಅಧಿಕಾರದಲ್ಲಿದ್ದ
ಮಮತಾ ಬ್ಯಾನರ್ಜಿಯವರ ವೈಫಲ್ಯ ಹಾಗೂ ನಿರಂಕುಶ ಆಡಳಿತದ ಕಾರಣಕ್ಕೆ ಟಂಎಂಸಿ ಭಾರೀ ಸೋಲನ್ನು ಅನುಭವಿಸಿಬೇಕಾಯಿತು.

ಪಶ್ಚಿಮ ಬಂಗಾಳದ ಈ ಗೆಲುವು ಪೂರ್ವ ಭಾರತದಲ್ಲಿ ಬಿಜೆಪಿಯ ಬಲಿಷ್ಠ ನೆಲೆಗಟ್ಟನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಜೊತೆಗೆ ಉತ್ತರ ಭಾರತದಲ್ಲಿ ಪ್ರಾಬಲ್ಯ ಸಾಧಿಸಿದ ಕೋಮುವಾದಿ ಧೃವೀಕರಣ, ಬುಲ್ಡೋಜರ್ ಆಡಳಿತ ಮತ್ತು ಮತಧರ್ಮಾಂಧತೆ ಈಗ ಪ.ಬಂಗಾಳಕ್ಕೂ ಅಧಿಕೃತವಾಗಿ ಕಾಲೂರಿದೆ.
ಪಕ್ಕದ ಅಸ್ಸಾಂ ರಾಜ್ಯದಲ್ಲಿಯೂ ಬಿಜೆಪಿ ಪಕ್ಷವು ಕೋಮು ಧೃವೀಕರಣ ನೆಲೆಯಲ್ಲಿ ಮೂರನೇ ಸತತ ಅವಧಿಯನ್ನು ತನ್ನದಾಗಿಸಿಕೊಂಡಿದೆ.

ಈಗ ಉತ್ತರ, ಪಶ್ಚಿಮ ಮತ್ತು ಪೂರ್ವ ಭಾರತವನ್ನು ತನ್ನ ನಿಯಂತ್ರಣಕ್ಕೆ ತಂದಿರುವ ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಮುನ್ನಡೆ ಸಾಧಿಸಲು ಮತ್ತೊಮ್ಮೆ ವಿಫಲವಾಗಿದೆ.ತಮಿಳುನಾಡು ಮತ್ತು ಕೇರಳ ಎರಡೂ ರಾಜ್ಯಗಳು ಸರ್ಕಾರ ಬದಲಾವಣೆಯನ್ನು ಆಯ್ಕೆ ಮಾಡಿಕೊಂಡಿದ್ದರೂ ಸಹ ಅಲ್ಲಿನ ಮತದಾರರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ

ಈ ಚುನಾವಣೆಗಳಲ್ಲಿ ದಕ್ಷಿಣದ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಪೂರ್ವದ ಪ.ಬಂಗಾಳದ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಸೋತಿದ್ದಾರೆ. ಇಬ್ಬರು ಪ್ರಬಲ ಪ್ರಾದೇಶಿಕ ನಾಯಕರ ಆಡಳಿತ ವೈಖರಿ, ಸಿದ್ಧಾಂತ ವಿರುದ್ಧ ಧೃವಗಳಲ್ಲಿದ್ದರೂ ಅವರ ಸೋಲು ಒಂದೇ ತೆರವಾಗಿದೆ.

ತಮಿಳುನಾಡಿನಲ್ಲಿ ನಟ-ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಏಕ ಅತಿ ದೊಡ್ಡ ಪಕ್ಷವಾಗಿ ಶಕ್ತಿಯಾಗಿ ಹೊರಹೊಮ್ಮಿದೆ.
ಡಿಎಂಕೆ ಎರಡನೇ ಸ್ಥಾನದಲ್ಲಿದ್ದರೆ
ಬಿಜೆಪಿಯ ಮೈತ್ರಿಕೂಟದ ಎಐಎಡಿಎಂಕೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಕೇರಳದಲ್ಲಿ ಮಾತ್ರ ನಿರೀಕ್ಷೆಯಂತೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ 102 ಸ್ಥಾನಗಳಲ್ಲಿ ಗೆದ್ದು(ಕಾಂಗ್ರೆಸ್ 63) ಅಧಿಕಾರಕ್ಕೆ ಬಂದಿದೆ. ಆದರೆ ಎಡಪಕ್ಷಗಳ ಎಲ್ ಡಿಎಫ್ 64 ಕ್ಷೇತ್ರಗಳನ್ನು ಕಳೆದುಕೊಂಡು 35 ಸ್ಥಾನಗಳಿಗೆ ಕುಸಿದಿರುವುದು ಅಚ್ಚರಿ ಸಂಗತಿ.
ಬಿಜೆಪಿ ಪಕ್ಷವು ಶೇ.11.42ರಷ್ಟು ಮತಪ್ರಮಾಣ ಪಡೆದು ಮೂರು ಸ್ಥಾನಗಳನ್ನು ಗಳಿಸಿದೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ 207 ಸ್ಥಾನಗಳನ್ನು ಪಡೆದುಕೊಂಡು(2021ರಲ್ಲಿ 77)ಅಧಿಕಾರಕ್ಕೆ ಬಂದಿದೆ, ಟಿಎಂಸಿ 80 ಸ್ಥಾನಗಳನ್ನು (2021ರಲ್ಲಿ 215) ಗಳಿಸಿ ಅಧಿಕಾರ ಕಳೆದುಕೊಂಡಿದೆ. 2021ರಲ್ಲಿ ಶೇ.38.15ರಷ್ಟಿದ್ದ ಬಿಜೆಪಿಯ ಮತಪ್ರಮಾಣ 2026ರ ಚುನಾವಣೆಯಲ್ಲಿ ಶೇ.45.84ರಷ್ಟಕ್ಕೆ(7.69ರಷ್ಟು ಹೆಚ್ಚಳ) ಏರಿಕೆಯಾಗಿದೆ

2021ರಲ್ಲಿ ಶೇ.48ರಷ್ಟಿದ್ದ ಟಿಎಂಸಿಯ ಮತಪ್ರಮಾಣ 2026ರ ಚುನಾವಣೆಯಲ್ಲಿ ಶೇ.40.80ಕ್ಕೆ(7.22ರಷ್ಟು ಕಡಿಮೆ) ಕುಸಿದಿದೆ.
ಆದರೆ ಮತಧರ್ಮಾಂಧತೆ, ಸಾರ್ವಜನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು, ಎಸ್ ಐಆರ್ ಎನ್ನುವ ಅಸಂವಿಧಾನಿಕ ಪ್ರಕ್ರಿಯೆ ಮೂಲಕ ಗಳಿಸಿದ ಬಿಜೆಪಿಯ ಈ ಗೆಲುವು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಮತ್ತು ಟಿಎಂಸಿ ಸರ್ಕಾರದ ಭ್ರಷ್ಟಾಚಾರ, ನಿರುದ್ಯೋಗ, ಗೂಂಡಾಗಿರಿಯ ಕಾರಣದ 15 ವರ್ಷಗಳ ಆಡಳಿತ ವಿರೋಧಿ ಅಲೆಯ ಲಾಭವನ್ನು ಪಡೆದುಕೊಂಡಿದೆ.

ಮೇ 4ರಂದು ತಮಿಳುನಾಡು ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ರಾಜಕೀಯ ವಿಶ್ಲೇಷಕರಿಗೆ ‘ತಾವು ಹಾದಿ ತಪ್ಪಿದ್ದು ಎಲ್ಲಿ’ ಎನ್ನುವ ಜಿಜ್ಞಾಸೆ ಶುರುವಾಯಿತು. ಬಹುತೇಕರು ಡಿಎಂಕೆ ಸರಳ ಬಹುಮತ ಗಳಿಸಿ ಎರಡನೇ ಅವಧಿಗೆ ಅಧಿಕಾರಕ್ಕೆ ಬರುತ್ತದೆ, ಟಿವಿಕೆ ಶೇ.8-12ರಷ್ಟು ಮತ‌ ಗಳಿಸಿ vote cutter ಆಗುತ್ತದೆ ಎಂದೇ ವಿಶ್ಲೇಷಿಸಿದ್ದರು.

ಆದರೆ ಎಲ್ಲವೂ ತಲೆಕೆಳಗಾಗಿ ಟಿವಿಕೆ ಶೇ.34.92ರಷ್ಟು ಮತ‌ ಪಡೆದು 107ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇಲ್ಲಿ
ವಿಜಯ್ ಒಂದು ಸ್ಥಾನ ಬಿಟ್ಟುಕೊಡಬೇಕು, ಸ್ಪೀಕರ್ ರ ಒಂದು ಸ್ಥಾನ ಹೊರತುಪಡಿಸಿದರೆ ಟಿವಿಕೆಗೆ ಸರಳ ಬಹುಮತಕ್ಕೆ ಇನ್ನೂ 12 ಶಾಸಕರ ಬೆಂಬಲ ಬೇಕಾಗುತ್ತದೆ. ಮತ್ತೊಮ್ಮೆ ಅಧಿಕಾರಕ್ಕೇರುವ ಕನಸು ಕಂಡ ಡಿಎಂಕೆ ಶೇ.24.19ರಷ್ಟು ಮತ ಪ್ರಮಾಣ ಗಳಿಸಿದೆ.(ಕಳೆದ ಬಾರಿ ಶೇ.37.7) 59 ಸ್ಥಾನಗಳನ್ನು ಪಡೆದುಕೊಂಡಿದೆ.(ಮಿತ್ರ ಪಕ್ಷಗಳು 14)

ಇದು ‘ಫಸ್ಟ್ ಪಾಸ್ಟ್ ದ ಪೋಸ್ಟ್’ ಪದ್ಧತಿಯಲ್ಲಿ ಸಾಮಾನ್ಯ ಸಂಗತಿ.

ಗೆದ್ದ ಟಿವಿಕೆ ಮತ್ತು ಸೋತ ಡಿಎಂಕೆ ನಡುವೆ ಶೇ.11ರಷ್ಟು ಮತ‌ ಪ್ರಮಾಣದ ಅಂತರವಿದ್ದರೂ ಸಹ(ಮಿತ್ರ ಪಕ್ಷಗಳ ಮತ ಪ್ರಮಾಣ ಸೇರಿದರೆ ಶೇ.31.39ರಷ್ಟಾಗುತ್ತದೆ) 47ಸ್ಥಾನಗಳ ಅಂತರವಿದೆ.(ಮಿತ್ರ ಪಕ್ಷಗಳ ಸ್ಥಾನಗಳನ್ನು ಸೇರಿಸಿದರೆ 33 ಸ್ಥಾನಗಳ ಅಂತರ) ಅಂದರೆ ಡಿಎಂಕೆ ಮೈತ್ರಿಕೂಟ ಹಾಗೂ ಟಿವಿಕೆ ನಡುವೆ ಶೇ.4ರಷ್ಟು ಅಂತರವಿದ್ದರೆ ಕ್ಷೇತ್ರಗಳಲ್ಲಿ 33 ಸ್ಥಾನಗಳ ಅಂತರವಿದೆ.

ಸಹಜವಾಗಿಯೇ ಡಿಎಂಕೆ ಹಾಗೂ ಎಡಿಎಂಕೆ ವಿರೋಧಿ ಮತಗಳು ಟಿವಿಕೆ ಪಕ್ಷಕ್ಕೆ ದೊರಕಿದೆ.
ಅದರಲ್ಲೂ ಡಿಎಂಕೆ ಪಕ್ಷವು ತನ್ನ ಪ್ರಾಬಲ್ಯದ ಗ್ರೇಟರ್ ಚೈನ್ನೈನ 37 ಸ್ಥಾನಗಳ ಪೈಕಿ ಕೇವಲ 2ರಲ್ಲಿ ಗೆದ್ದಿದ್ದರೆ ಟಿವಿಕೆ 32 ಸ್ಥಾನ ಪಡೆದುಕೊಂಡಿದೆ. ಹಾಗೆಯೇ ಪಶ್ಚಿಮ ತ.ನಾಡಿನಲ್ಲಿ ಇವೆರಡೂ ಪಕ್ಷಗಳ ನಡುವೆ ಭಾರಿ ವ್ಯತ್ಯಾಸವಿದೆ.

ಚೆನ್ನೈ ಪ್ರದೇಶ ಹಾಗೂ ಕೊಯಂಬತ್ತೂರು, ಸೇಲಂ, ಈರೋಡ್, ತಿರುಪ್ಪೂರು, ನಮಕ್ಕಲ್, ಧರ್ಮಪುರಿ, ನೀಲಗಿರೀಸ್ ಭಾಗಗಳು ಟಿವಿಕೆ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. ಇವುಗಳಲ್ಲಿ ಬಹುತೇಕ ಕೈಗಾರಿಕಾ ಪ್ರದೇಶಗಳು ಎನ್ನುವುದು ಏನನ್ನು ಸೂಚಿಸುತ್ತದೆ?

ಎರಡನೆಯದಾಗಿ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ 75 ವರ್ಷಗಳ ಅನುಭವಿ ಪಕ್ಷ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷ ಅಧಿಕಾರದಲ್ಲಿ ಇರಲು ಸಾಧ್ಯವಾಗಲಿಲ್ಲ. ಇವೆರಡೂ ಈಗಿನ ಬೆಳವಣಿಗೆಗಳು.

ಮುಖ್ಯವಾಗಿ ವಿಜಯ್ ಅವರ ಟಿವಿಕೆ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಯಾವುದೇ ಸೈದ್ಧಾಂತಿಕತೆ ಬದ್ಧತೆಯನ್ನೂ ಸಹ ಪ್ರಕಟಿಸದೆ‌ ಸಂಪೂರ್ಣವಾಗಿ ಕಲ್ಯಾಣ ಯೋಜನೆಗಳ ಬಗ್ಗೆ ಭರವಸೆಗಳನ್ನು ನೀಡಿದೆ. ಇದು ಇವರ ಗೆಲುವಿಗೆ ಮುಖ್ಯ ಕಾರಣ ಎಂದು ಹೇಳಲು ಸಾಧ್ಯವೇ?

ಯಾಕೆಂದರೆ ಡಿಎಂಕೆ ಮತ್ತು ಎಐಎಡಿಎಂಕೆ ಸಹ ಅನೇಕ ಕಲ್ಯಾಣ ಯೋಜನೆಗಳ ಭರವಸೆ ನೀಡಿದ್ದಾರೆ ಮತ್ತು ಮುಖ್ಯವಾಗಿ 2021-26ರ ಅವಧಿಯಲ್ಲಿ ಅಧಿಕಾರದಲ್ಲಿದ್ದ‌ ಡಿಎಂಕೆ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ಯೋಜನೆಗಳ ಕಾರಣಕ್ಕೆ ಯಾವುದೇ ಅನುಭವವಿಲ್ಲದ ಟಿವಿಕೆಯನ್ನು ನೆಚ್ಚಿಕೊಂಡು ಅಧಿಕಾರ ಕೊಡುತ್ತಾರೆಯೇ ಎನ್ನುವ ಪ್ರಶ್ನೆಯೂ ಇದೆ.
ಆದರೆ ನಿರ್ದಿಷ್ಟ ಪ್ರದೇಶಗಳ ಮತದಾರರು ಬೇರೆ ಬೇರೆ ಕಾರಣಗಳಿಗಾಗಿ ಟಿವಿಕೆಯನ್ನು ಆಯ್ಕೆ ಮಾಡುವಾಗ ಇದೂ‌ ಸಹ ಅದರ ಭಾಗವಾಗಿರುತ್ತದೆ ಎನ್ನುವುದಂತೂ ಸತ್ಯ.

ವಿಜಯ್ ತಮ್ಮ ಚುನಾವಣಾ ಪ್ರಚಾರದಲ್ಲಿ ಎಲ್ಲಿಯೂ ಸಾರ್ವಜನಿಕ ನೀತಿಗಳು, ಅಭಿವೃದ್ಧಿ ಯೋಜನೆಗಳು, ಸೈದ್ಧಾಂತಿಕ ಒಲವಿನ ರಾಜಕೀಯ ಕುರಿತು
ಮಾತನಾಡಲೇ ಇಲ್ಲ. ಕೇವಲ ಭ್ರಷ್ಟಾಚಾರವನ್ನು ಉದಾಹರಿಸುತ್ತಾ ಬದಲಾವಣೆ ಬಯಸಿದ್ದರು. ಆದರೆ ಇಷ್ಟು ಮಾತ್ರದಿಂದ ಶೇ.35ರಷ್ಟು ಮತಗಳನ್ನು ಪಡೆಯಲು ಸಾಧ್ಯವಿರಲಿಲ್ಲ. ಇಂತಹ ಮಿತಿಗಳನ್ನು ದಾಟಲು ತಮ್ಮ ವರ್ಚಸ್ಸನ್ನು ಮತಗಳಾಗಿ ಪರಿವರ್ತಿಸುವ ಒಂದಂಶದ ಕಾರ್ಯಸೂಚಿಯನ್ನು ಬಲವಾಗಿ ನಂಬಿಕೊಂಡಿದ್ದರೇ?
ಆದರೆ ವಿಜಯ್ ಅವರ ಸ್ಟಾರ್ ಕ್ರೇಜ್ ಮಾತ್ರ ಈ ಗೆಲುವಿಗೆ ಮುಖ್ಯ ಕಾರಣ ಎಂದರೆ ಅದು ಸರಳೀಕರಣಗೊಳಿ‌ಸಿದಂತಾಗುತ್ತದೆ.

ಮೂರನೆಯದಾಗಿ

18-40 ವಯಸ್ಸಿನವರು ವಿಜಯ್ ಪರ ಆಕರ್ಷಿತರಾಗಿದ್ದಾರೆ. ಜೊತೆಗೆ ಇದುವರೆಗೂ ಡಿಎಂಕೆ/ಎಐಎಡಿಎಂಕೆ ಪರ ಮತ ಹಾಕುತ್ತಿದ್ದ ತಮ್ಮ ಕುಟುಂಬದ ಹಿರಿಯ ಸದಸ್ಯರ ಮೇಲೂ ವಿಜಯ್ ಪರ ಬಟನ್ ಒತ್ತಲು ಪ್ರಭಾವ ಬೀರಿದ್ದಾರೆ. ‘ಒಮ್ಮೆ ಅವಕಾಶ ಕೊಡಿ’ ಎಂದು ಜೆನ್ ಜಿಗಳ ಆಗ್ರಹಕ್ಕೆ ಈ ಹಿರಿಯರು ಮಣಿದಂತಿದೆ.
ಈ ಸಾಧ್ಯತೆಯು ಆಡಳಿತ‌ ವಿರೋಧಿ ಅಲೆಯೊಂದಿಗೆ ಪೂರಕವಾಗಿ ಬೆರೆತಂತಿದೆ.

ನಾಲ್ಕನೆಯದಾಗಿ

ಈ ಕಾಲದಲ್ಲಿ ಡಿಎಂಕೆ/ಎಐಎಡಿಎಂಕೆ ಪಕ್ಷಗಳ ಕೇಡರ್ ಆಧಾರಿತ ಸಾಂಪ್ರದಾಯಿಕ ರೀತಿಯ ಸಂಘಟನೆಗೆ ತಾತ್ಕಾಲಿಕವಾಗಿ ಹಿನ್ನಡೆಯಾಗಿದೆ ಎಂದು ಕಂಡುಬಂದರೂ ಅದು ಸತ್ಯವಲ್ಲ. ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಇವರು ಎಡವಿದ್ದಾರೆ ಎನ್ನುವುದು ವಾಸ್ತವ.ಮತ್ತು ಸಾಮಾಜಿಕ ಜಾಲತಾಣಗಳ ಪ್ರಾಬಲ್ಯ ಬಳಸಿಕೊಂಡು ರೂಪಿಸಿದ ಚುನಾವಣಾ ತಂತ್ರಗಾರಿಕೆ ವಿಜಯ್ ಅವರ ಗೆಲುವಿಗೆ ಮುಖ್ಯ ಕಾರಣಗಳಲ್ಲಿ ಒಂದಾಗಿದೆ ಎನ್ನುವುದೂ ಸತ್ಯ.

ಇವರ ಮೊದಲ ಪ್ರಯತ್ನದ ಗೆಲುವನ್ನು ಎಂಜಿಆರ್ ಅವರ 1977ರ ಗೆಲುವಿಗೆ ಹೋಲಿಸಬಹುದು. ಎಂಜಿಆರ್ ರೀತಿಯಲ್ಲಿ ‘ಜನ ಬದಲಾವಣೆ ಬಯಸುತ್ತಿದ್ದರು ಎನ್ನುವ ಪ್ರಚಾರಕ್ಕೆ ಸೆಲ್ಯುಲಾಯ್ಡ್ ನ ಹೀರೋ ನಿಜಜೀವನದ ‘ಜನ ನಾಯಕನೂ ಆಗಬಲ್ಲ’ ಎನ್ನುವ ಪ್ರಚಾರವೂ ಸಹಾಯ ಮಾಡಿದೆ. ಆದರೆ ಈ ಹೋಲಿಕೆ ಇಲ್ಲಿಗೆ ನಿಲ್ಲುತ್ತದೆ.

ಎಂಜಿಆರ್ ಅನೇಕ ದಶಕಗಳಿಂದ ಡಿಎಂಕೆ ಜೊತೆಗೆ ಗುರುತಿಸಿಕೊಂಡಿದ್ದರು ಮತ್ತು ಅವರ ಸಿನಿಮಾಗಳಲ್ಲಿಯೂ ಅದರ ಪ್ರತಿಫಲನ ಕಂಡು ಬರುತ್ತದೆ. ವಿಜಯ್ ಇಂತಹ ಯಾವುದೇ ರಾಜಕೀಯ, ಚಳುವಳಿ ಹಿನ್ನೆಲೆ ಇಲ್ಲದೆ ದಿಢೀರನೆ ಉದ್ಭವಿಸಿ ಗೆಲುವಿನ ರುಚಿ ಕಂಡಿದ್ದಾರೆ.

ಈ ಮೂಲಕ ಜನಪ್ರಿಯ ಸಿನಿಮಾ ಕಲಾವಿದರಿಗೆ ‘ನಿಮ್ಮ ಅಭಿಮಾನಿಗಳನ್ನು ವ್ಯವಸ್ಥಿತವಾಗಿ ಸಂಘಟಿಸಿ, ಅದಕ್ಕೆ ಭಾವುಕತೆಯನ್ನು ಬೆರೆಸಿ, ಇವೆರಡೂ ಸರಿಯಾಗಿ ಸೇರಿಕೊಂಡಾಗ ಭರಪೂರು ಕಲ್ಯಾಣ ಯೋಜನೆಗಳ ಮೂಲಕ ಒಂದು ಪ್ರಣಾಳಿಕೆ ಸಿದ್ಧಪಡಿಸಿ.. ಇದು ಮತಗಳಾಗಿ ಪರಿವರ್ತನೆ ಆಗುತ್ತದೆ’ ಎನ್ನುವ ಮಾದರಿ ಸಮೀಕರಣವನ್ನು(template) ಮುಂದಿಟ್ಟಿದ್ದಾರೆ. ಇದಕ್ಕೆ ಯಶಸ್ಸು ದೊರಕಿದ ಕಾರಣ ಮುಂದಿನ ದಿನಗಳಲ್ಲಿ ಚರ್ಚೆಯಲ್ಲಿರುತ್ತದೆ.. ಮುಂದೇನು ಎನ್ನುವ ಪ್ರಶ್ನೆಗೆ ಎರಡು ವರ್ಷಗಳ ಆಡಳಿತದ ನಂತರವಷ್ಟೇ ಉತ್ತರ ದೊರೆಯಲಿದೆ

ಐದನೆಯದಾಗಿ

ವಿಜಯ್ ಮತ್ತು ಟಿವಿಕೆ ಪಕ್ಷದ ಪರೀಕ್ಷೆ ಶುರುವಾಗುವುದೇ ಇಲ್ಲಿಂದ. ವಿಜಯ್ ಜೊತೆಗೆ ಅಧವ್ ಅರ್ಜುನ ಮತ್ತು ಬುಸ್ಸಿ ಆನಂದ್ ರಂತಹ ಪಕ್ಷ ಬದ್ಧತೆಯುಳ್ಳ ಮುಖಂಡರಿದ್ದಾರೆ. ಆದರೆ ಇವರಿಬ್ಬರು ಮತ್ತೊಂದಿಬ್ಬರನ್ನು ಹೊರತುಪಡಿಸಿ ಸಂಪೂರ್ಣ ಅನನುಭವಿಗಳನ್ನು ಬೆನ್ನ ಹಿಂದಿಟ್ಟುಕೊಂಡು ಆಡಳಿತ ದಕ್ಷತೆ ಸಾಧಿಸುವ ಸವಾಲು ಮುಂದಿದೆ. ಇದಕ್ಕಾಗಿ ಕಾರ್ಯಯೋಜನೆ ರೂಪಿಸಿಕೊಂಡಿದ್ದಾರೆಯೇ? ಕಾಲವೇ ಉತ್ತರಿಸಬೇಕು..

ಇನ್ನು ಪಕ್ಷವನ್ನು ಹೇಗೆ ಕಟ್ಟುತ್ತಾರೆ? ಅಭಿಮಾನಿಗಳನ್ನು ರಾಜಕೀಯ ಕಾರ್ಯಕರ್ತರನ್ನಾಗಿ ಹೇಗೆ ಬದಲಾಯಿಸುತ್ತಾರೆ? ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವವನ್ನು ಹೇಗೆ ಬೆಳೆಸುತ್ತಾರೆ? ಮುಂದಿನ ದಿನಗಳಲ್ಲಿ ಸಮಾಜೋ-ಆರ್ಥಿಕ-ಶೈಕ್ಷಣಿಕ ನೀತಿಗಳ ನೀಲನಕ್ಷೆ ಹೇಗೆ ತಯಾರಿಸುತ್ತಾರೆ? ಸಾರ್ವಜನಿಕ ಶಿಕ್ಷಣ, ಆರೋಗ್ಯ, ಉದ್ಯೋಗ ನೀತಿ, ಸಾಮಾಜಿಕ ನ್ಯಾಯ ಕುರಿತು ಆಡಳಿತಾತ್ಮಕವಾಗಿ ಅನುಷ್ಠಾನಗೊಳಿಸಲು ಯಾವ ಬಗೆಯ ಕಾರ್ಯಯೋಜನೆಗಳನ್ನು ರೂಪಿಸಿದ್ದಾರೆ? ಮುಖ್ಯವಾಗಿ ಸಿನಿಮಾ ಪಯಣದಿಂದ ರಾಜಕೀಯ ಪಯಣಕ್ಕೆ ಪರಿವರ್ತನೆಗೊಳ್ಳಲು ಯಾವ ಬಗೆಯ ಸಿದ್ಧತೆ ಮಾಡಿಕೊಂಡಿದ್ದಾರೆ? ಇನ್ನೂ ಅನೇಕ ಪ್ರಶ್ನೆಗಳಿವೆ. ಕಾಯಬೇಕು.

ಕಡೆಯದಾಗಿ

ಇದರಾಚೆಗೆ, ಯಾವುದೇ ಸಿದ್ಧಾಂತವಿಲ್ಲದ ರಾಜಕೀಯ ಪಕ್ಷಗಳು ಇಂದಿನ ಸಂದರ್ಭದಲ್ಲಿ ಮತ್ತೊಂದು ಜೆಡಿಎಸ್, ಟಿಡಿಪಿ, ಜಗನ್ ರೆಡ್ಡಿ, ಆಪ್, ಎಜಿಪಿ ಪಕ್ಷಗಳಾಗುತ್ತವೆ. ಇದು ಶತಸಿದ್ಧ. ಇದಕ್ಕೆ ಟಿವಿಕೆ ಹೊರತಾಗುವುದೇ? ಕಾಯಬೇಕು.

ಗೆದ್ದ ಪಕ್ಷಕ್ಕೆ ಪ್ರಜಾಪ್ರಭುತ್ವದ ಮೇಲಿನ ಅಚಲ ನಂಬಿಕೆ, ಸಾಮಾಜಿಕ ನ್ಯಾಯ, ಸಮತಾವಾದ, ಸಂವಿಧಾನ ಬದ್ಧತೆ ಮತ್ತು ವೈಚಾರಿಕ ಪ್ರಜ್ಞೆ ಇರುವವರೆಗೂ ಹಾಗೂ ಕನಿಷ್ಠ ನೈತಿಕತೆ ಹೊಂದಿರುವವರೆಗೂ ಬದಲಾವಣೆ ರಾಜಕೀಯದ ಕುರಿತು ಆಶಾವಾದವೂ ಇರುತ್ತದೆ. ಇಲ್ಲದೇ ಹೋದರೆ ‘ನಾನು ಹೇಳಿಲ್ಲವೇ..’ ಎಂದು ಉದ್ಗಾರ ಹೊರಡಿಸುವುದು ಇದ್ದೇ ಇದೆ. ಆದರೆ ತಮಿಳುನಾಡು ಜನತೆ ಬದಲಾವಣೆ ಬಯಸಿ ಟಿವಿಕೆ ಪಕ್ಷವನ್ನು ಆಯ್ಕೆ ಮಾಡಿದ್ದಾರೆ. ಇದನ್ನು ಎಲ್ಲರೂ ಗೌರವಿಸಬೇಕು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...

ಬಿಹಾರ-ಬಂಗಾಳದ ಬಳಿಕ ಕರ್ನಾಟಕದ ಸರತಿ; ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

ಭಾಗ-1 ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಜಾರಿ ಮಾಡಿದ ಹಿಂದಿನ ದುರುದ್ದೇಶ ಬಿಹಾರದ ಬಳಿಕ ಈಗ ಪಶ್ಚಿಮ ಬಂಗಾಳದಲ್ಲಿ ಸಾಬೀತಾಗಿದೆ. ಹಿಂದಿನ ಚುನಾವಣೆಗಳಲ್ಲಿ ಕಡಿಮೆ...

ವಿಜಯ್ ಪಕ್ಷದ ಗೆಲುವಿಗೆ ಕಾರಣವಾದ ಡಿಎಂಕೆ-ಎಐಎಡಿಎಂಕೆ ಪಕ್ಷದ ವಲಸೆ ನಾಯಕರು

50 ವರ್ಷಗಳಿಂದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಎಂಬ ಎರಡು ದ್ರಾವಿಡ ಪಕ್ಷಗಳ ಅಧಿಪತ್ಯದಲ್ಲಿದ್ದ ತಮಿಳು ಮಣ್ಣಿನಲ್ಲಿ ಈಗ ಮಹತ್ವದ ಬದಲಾವಣೆ ಗಾಳಿ ಬೀಸಿದೆ. ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ...

ಪಶ್ಚಿಮ ಬಂಗಾಳದ ಬಿಜೆಪಿ ಗೆಲುವು ಎಸ್‌ಐಆರ್‌ ಕುತಂತ್ರದ ಫಲ?

ಕಳೆದ 15 ವರ್ಷದಿಂದ ಪಶ್ಚಿಮ ಬಂಗಾಳದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮಮತಾ ಬ್ಯಾನರ್ಜಿ ಆಡಳಿತಕ್ಕೆ 2026ರ ಚುನಾವಣಾ ಫಲಿತಾಂಶ ಬ್ರೇಕ್ ನೀಡಿದೆ.  ಪಶ್ಚಿಮ ಬಂಗಾಳದ ಒಟ್ಟು 294 ಕ್ಷೇತ್ರಗಳ ಪೈಕಿ 200ರಲ್ಲಿ ಬಿಜಿಪಿ...

ಗೋಮಾಂಸ ಸಾಗಣೆ ಆರೋಪದ ಮೇಲೆ ವಾಹನ ಮುಟ್ಟುಗೋಲು: ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂದು ಕೇವಲ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಂತಹ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ದೃಢೀಕರಣ ಅಗತ್ಯ...

ಎಕ್ಸಿಟ್‌ ಪೋಲ್ಸ್‌ಗಳು ‘ಹಣ-ಒತ್ತಡ’ದಿಂದ ಕೂಡಿವೆ; ಟಿಎಂಸಿ 226 ಸ್ಥಾನಗಳನ್ನು ಮೀರಲಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ನಂತರ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲವಾಗಿ ತಳ್ಳಿಹಾಕಿದ್ದಾರೆ. ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ 226...