Homeಅಂತರಾಷ್ಟ್ರೀಯಕೊರೊನಾ ಸೇವೆ: ಭಾರತೀಯ ಮೂಲದ ವೈದ್ಯ ರವಿ ಸೋಲಂಕಿಗೆ ಇಂಗ್ಲೆಂಡ್ ಕಂಪನಿ ಪ್ರಶಸ್ತಿ

ಕೊರೊನಾ ಸೇವೆ: ಭಾರತೀಯ ಮೂಲದ ವೈದ್ಯ ರವಿ ಸೋಲಂಕಿಗೆ ಇಂಗ್ಲೆಂಡ್ ಕಂಪನಿ ಪ್ರಶಸ್ತಿ

- Advertisement -

ಇಂಗ್ಲೆಂಡ್‌ನಾದ್ಯಂತ ಕೊರೊನಾವನ್ನು ನಿಭಾಯಿಸುವಲ್ಲಿನ ಅಸಾಧಾರಣ ಸಾಧನೆಗಳಿಗಾಗಿ ರಾಯಲ್ ಅಕಾಡೆಮಿ ಆಫ್ ಎಂಜಿನಿಯರಿಂಗ್ ನೀಡುವ, ಸಾಂಕ್ರಾಮಿಕ ಸೇವೆಗಾಗಿ ವಿಶೇಷ ಪ್ರಶಸ್ತಿಗಳ 19 ಜನ ವಿಜೇತರಲ್ಲಿ ಭಾರತೀಯ ಮೂಲದ ವೈದ್ಯ ರವಿ ಸೋಲಂಕಿ ಕೂಡ ಸೇರಿದ್ದಾರೆ.

ಹೊಸ ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್) ಚಾರಿಟಿಯು, ಸುರಕ್ಷಿತ ಮತ್ತು ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ವೆಬ್‌ಸೈಟ್ ನಿರ್ಮಿಸಲು ಸಹಾಯ ಮಾಡುವ ಸ್ವಯಂಸೇವಕ ಕೆಲಸಕ್ಕಾಗಿ, ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳ ಬಗ್ಗೆ ಕೆಲಸ ಮಾಡುವ ವೈದ್ಯ ರವಿ ಸೋಲಂಕಿ ಮತ್ತು ಎಂಜಿನಿಯರ್ ರೇಮಂಡ್ ಸೀಮ್ಸ್ ಅವರಿಗೆ ಈ ಪ್ರಶಸ್ತಿ ನೀಡಿದೆ. ಈ ಕೆಲಸಕ್ಕಾಗಿ ಹೆಚ್ಚು ಸಮಯ ದುಡಿದು, ಉನ್ನತ ಸೇವೆ ಸಲ್ಲಿಸಿದ್ದಕ್ಕಾಗಿ ಇವರಿಬ್ಬರನ್ನು ಶ್ಲಾಘಿಸಲಾಯಿತು.

“ರವಿ ಮತ್ತು ರೇಮಂಡ್ ಅವರ ರೌಂಡ್-ದಿ-ಕ್ಲಾಕ್ ಕೊಡುಗೆಗಳು ಹೊಸ ಚಾರಿಟಿಯನ್ನು ಸಾರ್ವಜನಿಕ ಮನಸ್ಥಿತಿಗೆ ತಕ್ಕಂತೆ, ದೇಣಿಗೆಗಳನ್ನು ತ್ವರಿತವಾಗಿ ಸಂಗ್ರಹಿಸಲು ಅವಕಾಶ ಮಾಡಿಕೊಟ್ಟವು. ಇದರಿಂದಾಗಿ ಇಂಗ್ಲೆಂಡ್‌ನಲ್ಲಿ ಕೊರೊನಾ ಬಿಕ್ಕಟ್ಟು ಉತ್ತುಂಗದಲ್ಲಿದ್ದಾಗ ಎನ್ಎಚ್ಎಸ್ ಕಾರ್ಮಿಕರು ಅಗತ್ಯವಾದ ಬೆಂಬಲವನ್ನು ಪಡೆಯಬಹುದು” ಎಂದು ಉಲ್ಲೇಖಿಸಲಾಗಿದೆ.

“ಅವರ ತಾಂತ್ರಿಕ ತಿಳಿವಳಿಕೆ ಮೂರು ತಿಂಗಳಲ್ಲಿ 90,000 ಎನ್‌ಎಚ್‌ಎಸ್ ಕಾರ್ಮಿಕರನ್ನು ಬೆಂಬಲಿಸಲು ಹೀರೋಸ್‌ಗೆ ಅವಕಾಶ ಮಾಡಿಕೊಟ್ಟಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್ ವಿಸ್ತರಿಸಲು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಒದಗಿಸುವ ಬೆಂಬಲವನ್ನು ಮುಂದುವರೆಸಲು ತಂಡದ ಕಾರ್ಯಗಳು ನಡೆಯುತ್ತಿವೆ” ಎಂದು ಅದು ಹೇಳಿದೆ.

ಎರಡು ದಿನಗಳಿಗಿಂತ ಕಡಿಮೆ ಅವಧಿಯಲ್ಲಿ, ಇದರ ಮೂಲಕ 5,43,000 ಕ್ಕೂ ಹೆಚ್ಚು ವಸ್ತುಗಳನ್ನು, ಸುಸ್ಥಿರ ಪಿಪಿಇಯಿಂದ ಮಕ್ಕಳ ಆರೈಕೆ ಮತ್ತು ಸಮಾಲೋಚನೆ ಸೇವೆಗಳವರೆಗೆ ಅಗತ್ಯ ಸೌಲಭ್ಯಗಳನ್ನು ಎನ್‌ಎಚ್‌ಎಸ್ ಕಾರ್ಮಿಕರಿಗೆ ಒದಗಿಸಲಾಗಿದೆ.

ಈ ವರ್ಷದ ಕೊನೆಯಲ್ಲಿ ಎಲ್ಲಾ 19 ವಿಜೇತರಿಗೆ ಪದಕಗಳನ್ನು ನೀಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೊರೊನಾ ಸಾಂಕ್ರಾಮಿಕವು ನಮ್ಮ ಕಾಲದ ಅತಿದೊಡ್ಡ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು. ಇದರಿಂದ ಸಮಾಜವು ಅನೇಕ ಸವಾಲುಗಳನ್ನು ಎದುರಿಸಿದೆ. ಎಂಜಿನಿಯರಿಂಗ್ ಪರಿಣತಿ ಮತ್ತು ನಾವೀನ್ಯತೆಯು ಜೀವಗಳನ್ನು ಉಳಿಸಲು ಮತ್ತು ಜೀವನೋಪಾಯವನ್ನು ರಕ್ಷಿಸುವ ಜಾಗತಿಕ ಹೋರಾಟದ ಕೇಂದ್ರವಾಗಿದೆ ಎಂದು ರಾಯಲ್ ಅಕಾಡೆಮಿ ಆಫ್ ಎಂಜಿನಿಯರಿಂಗ್ ಅಧ್ಯಕ್ಷ ಪ್ರೊಫೆಸರ್ ಸರ್ ಜಿಮ್ ಮೆಕ್ಡೊನಾಲ್ಡ್ ಹೇಳಿದ್ದಾರೆ.

ತಮ್ಮ ತರಬೇತಿ ಮತ್ತು ಕೌಶಲ್ಯಗಳನ್ನು ಬಳಸಿಕೊಂಡು ಹಲವಾರು ಸಮಸ್ಯೆಗಳಿಗೆ ನವೀನ ಪರಿಹಾರಗಳನ್ನು ಕಂಡುಹಿಡಿಯಲು ಮತ್ತು ಅದರ ಪರಿಣಾಮವನ್ನು ತಗ್ಗಿಸಲು ಸಹಾಯ ಮಾಡುವ ಎಂಜಿನಿಯರ್‌ಗಳ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಜನಾಂಗೀಯ ದಾಳಿಯನ್ನು ಹಿಮ್ಮೆಟ್ಟಿಸುವ ಹೋರಾಟಕ್ಕೆ ಸಿದ್ದಳಾಗಿದ್ದೇನೆ: ಕಮಲಾ ಹ್ಯಾರಿಸ್.

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ ಮಹಿಳೆ | Naanu Gauri

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ...

0
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ರಸ್ತೆಯಲ್ಲೇ ಆರು ತಿಂಗಳ ಶಿಶುವಿಗೆ ಜನ್ಮ ನೀಡಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಆರು ತಿಂಗಳ ಗರ್ಭಿಣಿಯಾಗಿದ್ದ ಕಲ್ಲೋ ಬಾಯಿಯನ್ನು...
Wordpress Social Share Plugin powered by Ultimatelysocial