- Advertisement -
- Advertisement -
ಭಾರತದಲ್ಲಿ ಮತ್ತೆ ಮೂರು ಶಂಕಿತ ಕರೋನ ವೈರಸ್ ಪ್ರಕರಣ ಪತ್ತೆಯಾಗಿದ್ದು, ಇದುವರೆಗೆ ಒಟ್ಟು ಆರು ದೃಡೀಕರಿಸಿದ ಕರೋನವೈರಸ್ ಪ್ರಕರಣಗಳು ವರದಿಯಾಗಿವೆ.
ಈವರೆಗೆ ಭಾರತದಲ್ಲಿ ಕೊರೊನಾವೈರಸ್ (ಕೋವಿಡ್ -19) ಆರು ಸಕಾರಾತ್ಮಕ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಸಚಿವಾಲಯದ ಪ್ರಕಾರ, ಹೊಸ ದೆಹಲಿ, ತೆಲಂಗಾಣ ಮತ್ತು ರಾಜಸ್ಥಾನದಿಂದ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ, ಜೈಪುರದಲ್ಲಿ ಇಟಾಲಿಯನ್ ಪ್ರಜೆಯೊಬ್ಬರಲ್ಲಿ ವೈರಸ್ ಇರುವುದು ಕಂಡುಬಂದಿತ್ತು. ಕಳೆದ ತಿಂಗಳು, ಕೇರಳದಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದವು, ಅವರು ಈಗ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಕೊರೊನಾವೈರಸ್ ಮೊದಲ ಬಾರಿಗೆ ಚೀನಾದ ನಗರವಾದ ವುಹಾನ್‌ನಲ್ಲಿ ಹುಟ್ಟಿಕೊಂಡಿತು ಮತ್ತು ಅಂದಿನಿಂದ ವಿಶ್ವದಾದ್ಯಂತ ಹಲವಾರು ದೇಶಗಳಿಗೆ ಹರಡಿತು. ಇದು ಅಂತಾರಾಷ್ಟ್ರೀಯ ಆರೋಗ್ಯ ತುರ್ತುಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ.


