ಇರಾನಿನ ಉನ್ನತ ರಹಸ್ಯ ಸೇವಾ ಅಧಿಕಾರಿ ಇಸ್ರೇಲಿ ಗೂಢಚಾರರಾಗಿದ್ದರು ಎಂದು ಇರಾನ್ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಗಂಭೀರ ಆರೋಪ ಮಾಡಿದ್ದಾರೆ. ಇರಾನ್‌ನಲ್ಲಿ ಇಸ್ರೇಲಿ ಬೇಹುಗಾರಿಕೆಯನ್ನು ಎದುರಿಸುವ ರಹಸ್ಯ ಸೇವಾ ಘಟಕದ ಮುಖ್ಯಸ್ಥರೇ ಇಸ್ರೇಲಿ ಗೂಢಚಾರಿ ಎಂದು ಅವರು ಹೇಳಿದ್ದಾರೆ.ಇರಾನ್ ಗೂಢಚಾರಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಇಸ್ರೇಲ್ ಇರಾನ್‌ನಲ್ಲಿ ಸಂಕೀರ್ಣ ಕಾರ್ಯಾಚರಣೆಗಳನ್ನು ಆಯೋಜಿಸಿತು. ಅವರು ಸುಲಭವಾಗಿ ಮಾಹಿತಿಯನ್ನು ಪಡೆಯಬಹುದಾಗಿತ್ತು.ಆದರೆ ಇರಾನ್‌ನಲ್ಲಿ ಅವರು ಇನ್ನೂ ಈ ಬಗ್ಗೆ ಮೌನವಾಗಿದ್ದಾರೆ. ಇಸ್ರೇಲ್ ವಿರುದ್ಧ ಕಾರ್ಯಾಚರಿಸುವ ಇರಾನ್‌ನ ಘಟಕದ ಉಸ್ತುವಾರಿ ವಹಿಸಿದ್ದ ವ್ಯಕ್ತಿಯೆ ಇಸ್ರೇಲಿ ಏಜೆಂಟ್” ಎಂದು ಅಹ್ಮದಿನೆಜಾದ್ ಸಿಎನ್‌ಎನ್ ಟರ್ಕ್‌ಗೆ ನೀಡಿದ್ದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇರಾನ್ ಗೂಢಚಾರಿ
ಇದನ್ನೂಓದಿ: ‘ಬಾಲಕಿ ಆಘಾತಗೊಂಡಿಲ್ಲ’ ಎಂದು ಅತ್ಯಾಚಾರ ಆರೋಪಿಯನ್ನು ಖುಲಾಸೆಗೊಳಿಸಿದ ಕೋರ್ಟ್
ಇಸ್ರೇಲಿ ಗುಪ್ತಚರ ಚಟುವಟಿಕೆಗಳ ಮೇಲೆ ನಿಗಾ ಇಡುವ ಇರಾನಿನ ಗುಪ್ತಚರ ತಂಡದೊಳಗೆ ಹೆಚ್ಚುವರಿ 20 ಏಜೆಂಟ್‌ಗಳು ಮೊಸ್ಸಾದ್‌ಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಹ್ಮದಿನೆಜಾದ್ ಹೇಳಿದ್ದು, ಇದು ಪ್ರತ್ಯೇಕ ಘಟನೆಯಲ್ಲ ಎಂದು ಹೇಳಿದ್ದಾರೆ.
ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಸೂಕ್ಷ್ಮ ಮಾಹಿತಿಯನ್ನು ಇಸ್ರೇಲ್‌ಗೆ ಒದಗಿಸಲು ಈ ಡಬಲ್ ಏಜೆಂಟ್‌ಗಳು ಜವಾಬ್ದಾರರಾಗಿದ್ದರು. ಅವರು 2018 ರಲ್ಲಿ ಇರಾನ್ ಪರಮಾಣು ದಾಖಲೆಗಳ ಕಳ್ಳತನದಲ್ಲಿ ಭಾಗಿಯಾಗಿದ್ದಾರೆ ಮತ್ತು ಹಲವಾರು ಇರಾನ್ ಪರಮಾಣು ವಿಜ್ಞಾನಿಗಳನ್ನು ಕೊಂದಿದ್ದಾರೆ ಎಂದು ಅಹ್ಮದಿನೆಜಾದ್ ಆರೋಪಿಸಿದ್ದಾರೆ.
ಇರಾನ್‌ನ ಗೂಢಚಾರರೊಬ್ಬರು ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರ ಸ್ಥಳದ ಬಗ್ಗೆ ಇಸ್ರೇಲ್‌ಗೆ ಸುಳಿವು ನೀಡಿದ್ದಾರೆ ಎಂಬ ವರದಿಗಳ ಹಿನ್ನಲೆ ಇರಾನ್‌ನ ಮಾಜಿ ಅಧ್ಯಕ್ಷರ ಹೇಳಿಕೆಗೆ ಮಹತ್ವ ಬಂದಿದೆ. ಇಸ್ರೇಲ್ ಬೈರುತ್‌ನ ಹೆಜ್ಬುಲ್ಲಾ ಪ್ರಧಾನ ಕಚೇರಿಯ ಮೇಲೆ ವೈಮಾನಿಕ ದಾಳಿ ಮಾಡಿ ಸಂಘಟನೆಯ ಪ್ರಮುಖ ನಾಯಕರನ್ನು ಕೊಂದು ಹಾಕಿತ್ತು.
ಇದನ್ನೂ ಓದಿ: ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಪಾಕ್ ಮೂಲದ ನಾಲ್ವರ ಬಂಧನ; ‘ಶರ್ಮಾ’ ಹೆಸರಿನಲ್ಲಿ ಆಧಾರ್ ಪಡೆದಿದ್ದ ಶಂಕಿತ ಆರೋಪಿಗಳು
ಅಹ್ಮದಿನೆಜಾದ್ ಅವರು ಪ್ರಸ್ತುತ ಇರಾನ್ ಸರ್ಕಾರದ ತೀವ್ರ ಟೀಕಾಕಾರರಾಗಿದ್ದಾರೆ. ಈ ಹಿಂದೆ ಇರಾನಿನ ಮಾಜಿ ಗುಪ್ತಚರ ಸಚಿವ ಅಲಿ ಯೂನೆಸಿ ಅವರು ಕೂಡಾ ಇಂತದ್ದೆ ಹೇಳಿಕೆಗಳನ್ನು ನೀಡಿದ್ದರು. ಇಸ್ರೇಲಿ ಗೂಢಚಾರರು ಇರಾನ್ ಸರ್ಕಾರದ ಉನ್ನತ ಶ್ರೇಣಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದರು.
“ಕಳೆದ 10 ವರ್ಷಗಳಲ್ಲಿ ದೇಶದ ಎಲ್ಲಾ ಉನ್ನತ ಅಧಿಕಾರಿಗಳು ತಮ್ಮ ಜೀವಕ್ಕೆ ಭಯಪಡುವ ಮಟ್ಟಕ್ಕೆ ಮೊಸಾದ್ ಅನೇಕ ಸರ್ಕಾರಿ ಇಲಾಖೆಗಳಿಗೆ ನುಸುಳಿದೆ” ಎಂದು ಯೂನೇಸಿ 2021 ರಲ್ಲಿ ಸಂದರ್ಶನವೊಂದರಲ್ಲಿ ಹೇಳಿದ್ದರು.
ಇಸ್ರೇಲ್ ಸೆಪ್ಟೆಂಬರ್ 23 ರಿಂದ ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ಸಂಘಟನೆಗಳನ್ನು ಗುರಿಯಾಗಿಸಿ ವ್ಯಾಪಕವಾದ ವಾಯುದಾಳಿಗಳನ್ನು ನಡೆಸುತ್ತಿದೆ. ಇದರ ಪರಿಣಾಮವಾಗಿ 960 ಕ್ಕೂ ಹೆಚ್ಚು ಸಾವುಗಳು ಮತ್ತು 2,770 ಕ್ಕೂ ಹೆಚ್ಚು ಗಾಯಗಳಾಗಿವೆ ಎಂದು ಲೆಬನಾನಿನ ಆರೋಗ್ಯ ಸಚಿವಾಲಯ ತಿಳಿಸಿದೆ.
ವಿಡಿಯೊ ನೋಡಿ: ಕೇರಳ ಸಿನಿಮಾ ರಂಗದಲ್ಲಿ ಲೈಂಗಿಕ ದೌರ್ಜನ್ಯದ ಭಯಾನಕ ಕಥೆಗಳನ್ನು ಬಿಚ್ಚಿಟ್ಟ ಹೇಮಾ ಸಮಿತಿ ವರದಿ


