Homeಮುಖಪುಟಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ವರದಿ ಮಾಡದಂತೆ ತಡೆಯಲು ಸಾಧ್ಯವಿಲ್ಲ: ಸುಪ್ರೀಂ

ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ವರದಿ ಮಾಡದಂತೆ ತಡೆಯಲು ಸಾಧ್ಯವಿಲ್ಲ: ಸುಪ್ರೀಂ

- Advertisement -
- Advertisement -

ನ್ಯಾಯಾಲಯದ ಯಾವುದೆ ವಿಚಾರಣೆಯನ್ನು ವರದಿ ಮಾಡದಂತೆ ಮಾಧ್ಯಮಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ. ಆದರೆ ಮಾಧ್ಯಮಗಳು ನ್ಯಾಯಾಲಯದಲ್ಲಿ ಏನಾಗುತ್ತಿದೆ ಎಂಬುವುದನ್ನು ಸಂಪೂರ್ಣವಾಗಿ ವರದಿ ಮಾಡಬೇಕು ಎಂದು ಅದು ಹೇಳಿದೆ.

“ಮಾಧ್ಯಮವು ಶಕ್ತಿಯುತವಾಗಿದೆ, ನ್ಯಾಯಾಲಯದಲ್ಲಿ ಏನಾಗುತ್ತದೆ ಎಂಬುದನ್ನು ತಿಳಿಸುತ್ತದೆ. ನಮ್ಮ ತೀರ್ಪುಗಳು ಮಾತ್ರವಲ್ಲದೆ, ಜನರ ಹಿತಕ್ಕಾಗಿ ಪ್ರಶ್ನೆಗಳು, ಉತ್ತರಗಳು ಮತ್ತು ಹೇಳಿಕೆಗಳನ್ನು ಮುಂದಿಡುತ್ತದೆ. ಆದರೆ ಮಾಧ್ಯಮಗಳು ನ್ಯಾಯಾಲಯದ ಹೇಳಿಕೆಗಳನ್ನು ವರದಿ ಮಾಡದೇ ಇರುವುದು ಸಾಧ್ಯವಿಲ್ಲ” ಎಂದು ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ತಿಳಿಸಿದೆ.

ಇದನ್ನೂ ಓದಿ: ‘ಕೊಲೆ ಪ್ರಕರಣ’- ವರದಿ ನಿಲ್ಲಿಸುವಂತೆ ಕೋರ್ಟ್ ಮೆಟ್ಟಿಲೇರಿದ ಚುನಾವಣಾ ಆಯೋಗ!

ಕಳೆದ ವಾರ ಮದ್ರಾಸ್ ಹೈಕೋರ್ಟ್ ಮಾಡಿದ ಹೇಳಿಕೆಗಳು, ಆಯೋಗದ ಘನತೆಗೆ ಧಕ್ಕೆ ತಂದಿವೆ ಮತ್ತು ಕೋರ್ಟ್ ಆದೇಶದಲ್ಲಿ ಇರದ, ಮೌಖಿಕವಾಗಿ ಪ್ರಸ್ತಾಪಿಸಿದ ಆಕ್ಷೇಪಣೆಗಳನ್ನು ವರದಿ ಮಾಡುವುದನ್ನು ಮಾಧ್ಯಮಗಳು ನಿಲ್ಲಿಸಬೇಕೆಂದು ಚುನಾವಣಾ ಆಯೋಗ ಆಗ್ರಹಿಸಿದ ಅರ್ಜಿ ವಿಚಾರಣೆ ವೇಳೆ ಕೊರ್ಟ್ ಹೀಗೆ ಅಭಿಪ್ರಾಯ ಪಟ್ಟಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಐದು ರಾಜ್ಯಗಳ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನಡೆದ ರಾಜಕೀಯ ರ್‍ಯಾಲಿಗಳ ವಿಷಯಗಳಲ್ಲಿ ಸುಪ್ರೀಂಕೋರ್ಟ್ ಚುನಾವಣಾ ಆಯೋಗದ ಮೇಲೆ ‘ಬಹುಷಃ ಕೊಲೆ ಪ್ರಕರಣ ದಾಖಲಿಸಬೇಕು’ ಎಂದು ಕಟುವಾಗಿ ತರಾಟೆಗೆ ತೆಗೆದುಕೊಂಡಿತ್ತು. ಈ ವಿಚಾರವಾಗಿ ಮಾಧ್ಯಮಗಳು ವರದಿ ಮಾಡದಂತೆ ಆಯೋಗವು ಕೋರ್ಟ್‌ ಮೆಟ್ಟಿಲೇರಿತ್ತು.

“ಚುನಾವಣಾ ಆಯೋಗಕ್ಕೆ ಯಾವುದೇ ಅವಕಾಶ ನೀಡದೆ ಅಥವಾ ವಿಪತ್ತು ನಿರ್ವಹಣಾ ಕಾಯ್ದೆಯಡಿ ಜವಾಬ್ದಾರಿಯುತ ಅಧಿಕಾರಿಗಳಿಂದ ಯಾವುದೇ ಉತ್ತರವನ್ನು ಪಡೆಯದೆ, ನಮ್ಮನ್ನು ಅಪರಾಧಿಗಳನ್ನಾಗಿ ಮಾಡಲಾಗಿದೆ” ಎಂದು ಚುನಾವಣಾ ಆಯೋಗವು ಇಂದು ವಾದಿಸಿದೆ.

“ನ್ಯಾಯಾಲಯದ ವಿಚಾರಣೆಯ ವಿಷಯಗಳನ್ನು ಮಾಧ್ಯಮಗಳು ವರದಿ ಮಾಡುವಂತಿಲ್ಲ ಎಂದು ನಾವು ಇಂದಿನ ಕಾಲದಲ್ಲಿ ಹೇಳಲು ಸಾಧ್ಯವಿಲ್ಲ. ಅಂತಿಮ ಆದೇಶದಂತೆಯೆ, ನ್ಯಾಯಾಲಯದಲ್ಲಿ ನಡೆಯುವ ಚರ್ಚೆಗಳು ಕೂಡಾ ಸಮಾನ ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿವೆ” ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಇದನ್ನೂ ಓದಿ: ಕೋವಿಡ್‌ಗೆ 135 ಪಂಚಾಯತ್ ಚುನಾವಣಾ ಸಿಬ್ಬಂದಿ ಬಲಿ: ಯುಪಿ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಶೋ-ಕಾಸ್ ನೋಟಿಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನಮ್ಮ ಚುನಾವಣಾ ಆಯೋಗ, ಈಗ ಆಡಳಿತಾರೂಡರ “ಚುನಾವಣಾ ಏಜೆಂಟ್ “ಆಗಿ ಪರಿವರ್ತನೆ ಆಗಿದೆ. ಇಂತಹ ವಿಶಮ ಪರಿಸ್ಥಿತಿಯಲ್ಲಿ ನಮ್ಮ ನ್ಯಾಯಾಂಗವು, ನಮ್ಮ ವಾಕ್ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿರುವುದು ಸ್ವಾಗತಾರ್ಹ.

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕುವಂತೆ...

0
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರಿ ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ " ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ...