HomeಮುಖಪುಟCOWIN APP: ಕನ್ನಡ, ತಮಿಳು ಸೇರಿ 9 ಪ್ರಾದೇಶಿಕ ಭಾಷೆಗಳಲ್ಲಿ ಸೌಲಭ್ಯ ಲಭ್ಯ

COWIN APP: ಕನ್ನಡ, ತಮಿಳು ಸೇರಿ 9 ಪ್ರಾದೇಶಿಕ ಭಾಷೆಗಳಲ್ಲಿ ಸೌಲಭ್ಯ ಲಭ್ಯ

ಇಲ್ಲಿಯವರೆಗೆ, ಕೋವಿನ್ ವೆಬ್‌ಸೈಟ್ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಭ್ಯವಿತ್ತು. ಈ ಭಾಷೆಗಳನ್ನು ತಿಳಿದಿಲ್ಲದ ಅನೇಕರು ಲಸಿಕಾ ಅಭಿಯಾನಕ್ಕೆ ನೋಂದಾಯಿಸಿಕೊಳ್ಳುವುದು ಕಷ್ಟಕರವಾಗಿತ್ತು.

- Advertisement -
- Advertisement -

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಮನವಿಯ ನಂತರ ಕೋವಿನ್ ಅಪ್ಲಿಕೇಶನ್ ಸೌಲಭ್ಯದಲ್ಲಿ ತಮಿಳು ಭಾಷೆಯನ್ನು ಸೇರಿಸುವುದಾಗಿ ಕೇಂದ್ರ ಭರವಸೆ ನೀಡಿದೆ.

ಶುಕ್ರವಾರ ಕೋವಿನ್ ಅಪ್ಲಿಕೇಶನ್‌ನಲ್ಲಿ ಸೇರಿಸಲಾಗಿರುವ ಒಂಬತ್ತು ಭಾಷೆಗಳ ಜೊತೆಗೆ, ತಮಿಳು ಭಾಷೆಯ ಸೌಲಭ್ಯವು ಒಂದು ಅಥವಾ ಎರಡು ದಿನಗಳಲ್ಲಿ ಲಭ್ಯವಾಗಲಿದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.

ಭಾರತ ಸರ್ಕಾರದ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಕೋವಿನ್ ಈಗ ತೆಲುಗಿನಲ್ಲಿ ಲಭ್ಯವಾಗುತ್ತಿದೆ ಮತ್ತು ಇತರ ಒಂಬತ್ತು ಭಾಷೆಗಳಲ್ಲಿ ಶುಕ್ರವಾರ ಪ್ರಕಟಿಸಲಾಗಿದೆ.

ಇಲ್ಲಿಯವರೆಗೆ, ಕೋವಿನ್ ವೆಬ್‌ಸೈಟ್ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಭ್ಯವಿತ್ತು. ಈ ಭಾಷೆಗಳನ್ನು ತಿಳಿದಿಲ್ಲದ ಅನೇಕರು ಲಸಿಕಾ ಅಭಿಯಾನಕ್ಕೆ ನೋಂದಾಯಿಸಿಕೊಳ್ಳುವುದು ಕಷ್ಟಕರವಾಗಿತ್ತು.

ಇನ್ನು ಮುಂದೆ ವೆಬ್‌ಸೈಟ್ ಅನ್ನು ತೆಲುಗು, ಮರಾಠಿ, ಮಲಯಾಳಂ, ಪಂಜಾಬಿ, ಗುಜರಾತಿ, ಅಸ್ಸಾಮೀಸ್, ಕನ್ನಡ, ಮತ್ತು ಒರಿಯಾಗಳಲ್ಲಿ ಪ್ರವೇಶಿಸಬಹುದು ಎಂದು ಕೇಂದ್ರ ಶುಕ್ರವಾರ ಪ್ರಕಟಿಸಿದೆ.

ವೆಬ್‍ಸೈಟಿನ ಯುಆರ್‍ಎಲ್ cowin.in ಮಾತ್ರ ಇಂಗ್ಲಿಷ್‌ನಲ್ಲಿ ಇರಲಿದೆ. ವೆಬ್‌ಸೈಟ್ ಪ್ರವೇಶಿಸಿದ ನಂತರ, ಬಳಕೆದಾರರು ವೆಬ್‌ಸೈಟ್‌ನ ಮೇಲ್ಭಾಗದಲ್ಲಿರುವ ಸಣ್ಣ ಪೆಟ್ಟಿಗೆಯಲ್ಲಿರುವ ‘ಎ’ ವರ್ಣಮಾಲೆಯನ್ನು ಕ್ಲಿಕ್‍ ಮಾಡಬೇಕಾಗುತ್ತದೆ. ನಂತರ ಬಲತುದಿಯಲ್ಲಿರುವ ಐಕಾನ್ ಕ್ಲಿಕ್ ಮಾಡಿದ ನಂತರ, ಬಳಕೆದಾರನು ಅವನ ಅಥವಾ ಅವಳ ಆಯ್ಕೆಯ ಭಾಷೆಯನ್ನು ಆಯ್ಕೆ ಮಾಡಬಹುದು. ಇದು ನೋಂದಣಿ / ಸೈನ್-ಇನ್ ಲಿಂಕ್ ಅನ್ನು ಆಯ್ಕೆ ಮಾಡಿದ ಭಾಷೆಗೆ ಅನುವಾದಿಸುತ್ತದೆ. ನಂತರ ಸ್ಲಾಟ್ ಅನ್ನು ಕಾಯ್ದಿರಿಸುವ ಲಿಂಕ್ ಆಯ್ಕೆಯ ಭಾಷೆಯಲ್ಲಿ ಲಭ್ಯವಾಗುತ್ತದೆ.

ಆದರೂ ಪ್ರಾದೇಶಿಕ ಭಾಷೆಗಳಲ್ಲಿ ಪ್ರವೇಶದ ವಿಷಯದಲ್ಲಿ ವೆಬ್‌ಸೈಟ್‌ನಲ್ಲಿ ಇನ್ನೂ ಕೆಲವು ಮಿತಿಗಳಿವೆ. ಏಕೆಂದರೆ ಸ್ಲಾಟ್ ಕಾಯ್ದಿರಿಸುವ ಲಿಂಕ್ ಅನ್ನು ಒಮ್ಮೆ ಕ್ಲಿಕ್ ಮಾಡಿದರೆ, ಆಯ್ಕೆಯ ಭಾಷೆಯಲ್ಲಿ  ಎಲ್ಲಾ ಮಾಹಿತಿಗಳು  ಲಭ್ಯವಿಲ್ಲ.  ಆಸ್ಪತ್ರೆಗಳು ರಾಜ್ಯ, ಜಿಲ್ಲೆ, ಆಸ್ಪತ್ರೆಗಳು ಮತ್ತು ಲಸಿಕಾಕೇಂದ್ರಗಗಳ ಹೆಸರುಗಳು  ಇನ್ನೂ ಇಂಗ್ಲಿಷ್‌ನಲ್ಲಿ ಉಳಿದಿವೆ.


ಇದನ್ನೂ ಓದಿ: ಬ್ಲ್ಯಾಕ್ ಫಂಗಸ್: ವಾಸ್ತವವೇನು? ವೈದ್ಯರೇನು ಹೇಳುತ್ತಿದ್ದಾರೆ?: ಡಾ. ವಾಸು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಣದುಬ್ಬರ, ಉದ್ಯೋಗಗಳ ಬಗ್ಗೆ ಮಾತನಾಡುವ ಬದಲು ಬಿಜೆಪಿ ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ: ಪ್ರಿಯಾಂಕಾ...

0
'ಆಡಳಿತಾರೂಢ ಬಿಜೆಪಿ ಹಣದುಬ್ಬರವನ್ನು ಹೇಗೆ ನಿಯಂತ್ರಿಸುತ್ತದೆ ಅಥವಾ ಜನರಿಗೆ ಉದ್ಯೋಗವನ್ನು ನೀಡುತ್ತದೆ ಎಂಬುದರ ಕುರಿತು ಮಾತನಾಡುವ ಬದಲು ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ' ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ...