ಹೇಮಾ ಸಮಿತಿ ವರದಿ ಬಿಡುಗಡೆಯಾದ ನಂತರ ಮಲಯಾಳಂ ಚಲನಚಿತ್ರ ನಟರು ಎತ್ತಿರುವ ಲೈಂಗಿಕ ಆರೋಪಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT), ಸಿಪಿಎಂ ಶಾಸಕ, ನಟ ಎಂ. ಮುಖೇಶ್ ವಿರುದ್ಧ ಅತ್ಯಾಚಾರ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಿದೆ. ಸಿಪಿಎಂ ಶಾಸಕ ಮುಖೇಶ್
ಸಂದರ್ಭೋಚಿತ ಮತ್ತು ಡಿಜಿಟಲ್ ಸಾಕ್ಷ್ಯಗಳ ಬೆಂಬಲದೊಂದಿಗೆ ಎಸ್‌ಐಟಿ ಎರ್ನಾಕುಲಂ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಆರೋಪಪಟ್ಟಿ ಸಲ್ಲಿಸಿದೆ. ತ್ರಿಶೂರ್‌ನಲ್ಲಿ ನಡೆದ ಪ್ರತ್ಯೇಕ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಸಲ್ಲಿಸಲಾದ ಮೊದಲ ಆರೋಪಪಟ್ಟಿಯ ಜೊತೆಗೆ ಮುಖೇಶ್ ವಿರುದ್ಧ ಸಲ್ಲಿಕೆಯಾಗುತ್ತಿರುವ ಎರಡನೇ ಆರೋಪಪಟ್ಟಿಯಾಗಿದೆ. ಸಿಪಿಎಂ ಶಾಸಕ ಮುಖೇಶ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಹೆಚ್ಚುವರಿಯಾಗಿ, ಫೋರ್ಟ್ ಕೊಚ್ಚಿಯ ಫ್ಲಾಟ್‌ನಲ್ಲಿ ನಡೆದಿದೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆ ಸಲ್ಲಿಸಿದ ದೂರಿನ ಮೇರೆಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನಟ, ನಿರ್ಮಾಪಕ ಮಣಿಯನ್‌ಪಿಲ್ಲ ರಾಜು ವಿರುದ್ಧ ಎಸ್‌ಐಟಿ ಆರೋಪಪಟ್ಟಿ ಸಲ್ಲಿಸಿದೆ.
ಇತ್ತೀಚಿನ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಎಸ್‌ಐಟಿ ಸದಸ್ಯ ಎಐಜಿ ಜಿ ಪೂಂಕುಳಲಿ, “ನಾವು ಕಳೆದ ವಾರ ಆರೋಪಪಟ್ಟಿ ಸಲ್ಲಿಸಿದ್ದೇವೆ. 150 ಪುಟಗಳ ದಾಖಲೆಯಲ್ಲಿ ಮುಖೇಶ್ ವಿರುದ್ಧ ಅತ್ಯಾಚಾರ ಮತ್ತು ಮಣಿಯನ್‌ಪಿಲ್ಲ ರಾಜು ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳಿವೆ. ನಮ್ಮ ತನಿಖೆಯ ಸಮಯದಲ್ಲಿ, ನಟರು ಮತ್ತು ಬಲಿಪಶುಗಳ ನಡುವಿನ ಡಿಜಿಟಲ್ ಸಂವಹನ ಸೇರಿದಂತೆ ನಿರ್ಣಾಯಕ ಪುರಾವೆಗಳನ್ನು ನಾವು ಸಂಗ್ರಹಿಸಿದ್ದೇವೆ, ಇವುಗಳನ್ನು ಆರೋಪಪಟ್ಟಿಯಲ್ಲಿ ಸೇರಿಸಲಾಗಿದೆ.” ಎಂದು ಹೇಳಿದ್ದಾರೆ
ಆರಂಭದಲ್ಲಿ ಸೆಷನ್ಸ್ ನ್ಯಾಯಾಲಯವು ಮುಖೇಶ್‌ಗೆ ಜಾಮೀನು ನೀಡುವಾಗ ಪ್ರಕರಣದ ತೀವ್ರತೆಯನ್ನು ಪ್ರಶ್ನಿಸಿದ್ದರೂ, ಎಸ್‌ಐಟಿ ವಿವರವಾದ ತನಿಖೆ ನಡೆಸಿ ಆರೋಪಗಳನ್ನು ಬೆಂಬಲಿಸಲು ಗಣನೀಯ ಪುರಾವೆಗಳನ್ನು ಸಂಗ್ರಹಿಸಿದೆ ಎಂದು ಅವರು ಹೇಳಿದ್ದಾರೆ. “ಪ್ರಕರಣವು ಈಗ ನ್ಯಾಯಾಲಯದ ವ್ಯಾಪ್ತಿಯಲ್ಲಿದೆ ಮತ್ತು ನಾವು ನಮ್ಮ ಪಾತ್ರವನ್ನು ಸಂಪೂರ್ಣವಾಗಿ ಮಾಡಿದ್ದೇವೆ” ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ಸೆಪ್ಟೆಂಬರ್ 24, 2024 ರಂದು ಮುಖೇಶ್ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಔಪಚಾರಿಕವಾಗಿ ಬಂಧಿಸಲಾಯಿತು. ನಂತರ ಎಐಜಿ ಜಿ ಪೂಂಕುಝಲಿ ನೇತೃತ್ವದಲ್ಲಿ ಕೊಚ್ಚಿಯ ಕರಾವಳಿ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಆದರೆ, ಬಂಧನದ ಸ್ವಲ್ಪ ಸಮಯದಲ್ಲೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಇದನ್ನೂಓದಿ: ಮೈಕ್ರೋ ಫೈನಾನ್ಸ್‌ಗಳ ಆಟಾಟೋಪಗಳಿಗೆ ಕಡಿವಾಣಕ್ಕೆ ಮಹತ್ವದ ಸಭೆ ನಡೆಸಿದ ಸಚಿವ ಕೃಷ್ಣೇಬೈರೆ ಗೌಡ
ಮೈಕ್ರೋ ಫೈನಾನ್ಸ್‌ಗಳ ಆಟಾಟೋಪಗಳಿಗೆ ಕಡಿವಾಣಕ್ಕೆ ಮಹತ್ವದ ಸಭೆ ನಡೆಸಿದ ಸಚಿವ ಕೃಷ್ಣೇಬೈರೆ ಗೌಡ


