Homeಮುಖಪುಟಪ್ರತಾಪ ಚಂದ್ರ ಸಾರಂಗಿ ರಾಜೀನಾಮೆ: ಓರಿಸ್ಸಾದ ಮೋದಿಯವರ ಮತ್ತೊಂದು ಮುಖ

ಪ್ರತಾಪ ಚಂದ್ರ ಸಾರಂಗಿ ರಾಜೀನಾಮೆ: ಓರಿಸ್ಸಾದ ಮೋದಿಯವರ ಮತ್ತೊಂದು ಮುಖ

ಸಾರಂಗಿಯವರು ಹಲವು ಸಂದರ್ಶನಗಳಲ್ಲಿ ಈಗಲೂ ತಾವು ಕ್ರೈಸ್ತ ಮಿಷನರಿಗಳಿಗೆ ವಿರುದ್ಧವಾಗಿದ್ದೇನೆಂದು ಬಹಿರಂಗವಾಗಿ ಎಂದು ಹೇಳಿಕೊಂಡಿದ್ದಾರೆ. ಇಂತಹ ವ್ಯಕ್ತಿಯನ್ನು ಹೀರೊ ಮಾಡಲು ಮಾಧ್ಯಮಗಳು ಹೊರಟಿವೆ

- Advertisement -
- Advertisement -

ಮಾಧ್ಯಮಗಳು ಮನಸ್ಸು ಮಾಡಿದರೆ ಯಾರನ್ನು ಬೇಕಾದರೂ ಕೆಲವೇ ದಿನಗಳಲ್ಲಿ ಹೀರೋನ್ನನ್ನಾಗಿ ಮಾಡುತ್ತವೆ. ಹೀರೋ ಆದವನು ತಮ್ಮ ಮಾತು ಕೇಳದಿದ್ದರೆ ಮತ್ತೆ ಕೆಲವೇ ದಿನಗಳಲ್ಲಿ ಆತನನ್ನು ದೊಡ್ಡ ವಿಲನ್ ಎಂದು ಚಿತ್ರಿಸಿಬಿಡುತ್ತವೆ. ಈ ಮಾತು ಈಗ ಏಕೆಂದರೆ, ಕಳೆದೆರಡು ದಿನಗಳಿಂದ ಗುಡಿಸಲಿನಿಂದ ಪಾರ್ಲಿಮೆಂಟ್ ವರೆಗೆ, ಸೈಕಲ್ ನಿಂದ ಸಂಸತ್ತಿನವರೆಗೆ ಸಾಗಿದ ಬಡ ಸಾಧು, ಸರಳ ಜೀವಿ, ಓರಿಸ್ಸಾದ ಮೋದಿ, ರಾಜಕಾರಣದ ಫಕೀರ ಎಂದು ಇನ್ನಿತ್ಯಾದಿ ಭೂಷಣಗಳಿಂದ ಪ್ರತಾಪಚಂದ್ರ ಸಾರಂಗಿ ರವರ ಕುರಿತು ಒಂದೇ ಸಮನೇ ಎಲ್ಲಾ ಮಾಧ್ಯಮಗಳು ವಿಪರೀತ ಹೊಗಳುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಮೋದಿ ಸಂಪುಟದಲ್ಲಿ ಸಣ್ಣ, ಅತಿಸಣ್ಣ ಉದ್ಯಮಗಳ ಇಲಾಖೆ ಮತ್ತು ಪಶುಸಂಗೋಪನೆ ಇಲಾಖೆಯ ರಾಜ್ಯ ಸಚಿವರಾಗಿ ಪ್ರತಾಪಚಂದ್ರ ಸಾರಂಗಿ ಕಾರ್ಯನಿರ್ವಹಿಸುತ್ತಿದ್ದರು. ಹಾಗಾಗಿ ಮಾಧ್ಯಮಗಳು ಬಹುಪರಾಕ್ ಹೇಳುವುದನ್ನು ಇನ್ನು ನಿಲ್ಲಿಸಿಲ್ಲ. ಅತಿ ಎನಿಸುವಷ್ಟು ಹೊಗಳಿ ಅಟ್ಟಕ್ಕೇರಿಸಿಬಿಟ್ಟಿದ್ದಾರೆ. ಇದಕ್ಕೆ ಸಾಮಾಜಿಕ ಜಾಲಾತಾಣಗಳಲ್ಲಿ ಚಪ್ಪಾಳೆ ತಟ್ಟುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಈಗ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

 

ಆದರೆ ಕೇಂದ್ರ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಪ್ರತಾಪ ಸಾರಂಗಿ ವಿರುದ್ಧ ಗಂಭೀರವಾದ ಕ್ರಿಮಿನಲ್ ಆರೋಪಗಳಿವೆ ಎಂಬ ಸತ್ಯ ಬಯಲಿಗೆ ಬಂದಿದೆ. ಸಾರಂಗಿಯವರ ಈ ಇನ್ನೊಂದು ಮುಖವನ್ನು ತೋರಿಸಲು ಯಾವ ಮುಖ್ಯವಾಹಿನಿ ಮಾಧ್ಯಮಗಳು ಮನಸ್ಸು ಮಾಡುತ್ತಿಲ್ಲ.

ಸಾರಂಗಿಯವರು ತಮ್ಮ ಮೇಲೆ ಏಳು ಗಂಭೀರ ಕ್ರಿಮಿನಲ್ ಆಪಾದನೆಗಳಿವೆ ಎಂದು ಚುನಾವಣಾ ಅಫಿಡವಿಟ್ ನಲ್ಲಿ ಹೇಳಿಕೊಂಡಿದ್ದಾರೆ. ಇದರಲ್ಲಿ ಹೆಚ್ಚಿನ ಕೇಸ್ ಗಳು ದಾಖಲಾಗಿರುವುದು ಬಿಜೆಪಿ-ಬಿಜೆಡಿ ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದಾಗ. ಇಂತಹ ಗಂಭೀರ ಆರೋಪಿ ಈಗ ಕೇಂದ್ರದ ಸಚಿವ. ಅದೂ, ಹಲವಾರು ಖಾತೆಗಳಿಗೆ ಎಂದು ಫೇಸ್ ಬುಕ್ ನಲ್ಲಿ ನೂರಾರು ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

2002ರ ಮಾರ್ಚ್ ನಲ್ಲಿ ಒರಿಸ್ಸಾದ ವಿಧಾನಸಭೆಯ ಮೇಲೆ ಬಜರಂಗದಳದ ಸುಮಾರು 500 ಶಸ್ತ್ರದಾರಿ ಸದಸ್ಯರು ದಾಳಿ ನಡೆಸಿದಾಗ ಅದರ ರಾಜ್ಯ ಅಧ್ಯಕ್ಷರಾಗಿದ್ದು ಇದೇ ಸಾರಂಗಿ. 1999ರ ಫೆಬ್ರವರಿಯಲ್ಲಿ ಕ್ರೈಸ್ತ ಧರ್ಮದ ಪ್ರಚಾರಕ ಗ್ರಹಾಂ ಸ್ಟೈನ್ ಮತ್ತು ಅವರ ಮೂವರು ಪುಟ್ಟ ಮಕ್ಕಳನ್ನು ಬೆಂಕಿ ಹಚ್ಚಿ ಸುಟ್ಟುಹಾಕಿದ ದಾರಾಸಿಂಗನ ಗುರು ಈ ಸಾರಂಗಿ.

1999 ರಲ್ಲಿ ಒಡಿಶಾ ರಾಜ್ಯದ ಮಯೂಬರ್ಂಜ್ ಜಿಲ್ಲೆಯಲ್ಲಿ ಕುಷ್ಠ ರೋಗ ಮಿತಿ ಮೀರೀತ್ತು. ಆಗ ಗ್ರಹಾಂ ಸ್ಟೈನ್ಸ್ ಎಂಬ ಕ್ರೈಸ್ತ ಮಿಷನರಿ ರೋಗಿಗಳ ಚಿಕಿತ್ಸೆ, ಆರೈಕೆ ಮಾಡುತ್ತಿದ್ದರು. ಆದರೆ ಹಲವು ಜನರನ್ನು ಮತಾಂತಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ದಾರಾ ಸಿಂಗ್ ಮತ್ತು ಹಲವರು ಗ್ರಹಾಂ ಸ್ಟೈನ್ಸ್ ಅವರರನ್ನು ಅವರ ಮಕ್ಕಳ ಸಮೇತ ವಾಹನವೊಂದಕ್ಕೆ ಕೂಡಿ ಹಾಕಿ ಸಜೀವ ದಹನ ಮಾಡಿದ್ದರು. ಆ ತಂಡಕ್ಕೆ ಗುರುವಾಗಿದ್ದವರು ಇದೇ ಸಾರಂಗಿ ಎಂಬ ಆರೋಪವಿದೆ.

 

1999 ರಲ್ಲಿ ಒಡಿಶಾ ರಾಜ್ಯದ ಬಜರಂಗದಳ ಸಂಚಾಲಕರಾಗಿದ್ದ ಸಾರಂಗಿ, ದಾರಾ ಸಿಂಗ್ ತಂಡಕ್ಕೆ ನೇರಾ ಹಾಗೂ ಪರೋಕ್ಷವಾಗಿ ಸಹಕಾರಿಸಿದ್ದಾರೆ ಎಂಬ ಆರೋಪದ ಮೇಲೆ ಸಾರಂಗಿಯವರಿಗೆ 2003ರಲ್ಲಿ ಅಪರಾಧಿಗಳೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿದಿಸಿತ್ತು. ನಂತರ ಓರಿಸ್ಸಾ ಹೈಕೋರ್ಟ್ ಸಾಕ್ಷ್ಯಗಳ ಕೊರತೆಯ ನೆಪದಿಂದ ಜೀವಾವಧಿ ಶಿಕ್ಷೆಯನ್ನು ಎರಡು ವರ್ಷಕ್ಕೆ ಇಳಿಸಿ ನಂತರ ಬಿಡುಗಡೆಗೊಳಿಸಲಾಗಿತ್ತು.

ಸಾರಂಗಿಯವರು ಹಲವು ಸಂದರ್ಶನಗಳಲ್ಲಿ ಈಗಲೂ ತಾವು ಕ್ರೈಸ್ತ ಮಿಷನರಿಗಳಿಗೆ ವಿರುದ್ಧವಾಗಿದ್ದೇನೆಂದು ಬಹಿರಂಗವಾಗಿ ಎಂದು ಹೇಳಿಕೊಂಡಿದ್ದಾರೆ. ಇಂತಹ ವ್ಯಕ್ತಿಯನ್ನು ಹೀರೊ ಮಾಡಲು ಮಾಧ್ಯಮಗಳು ಹೊರಟಿವೆ. ಸಂಪೂರ್ಣ ಪರಾಮರ್ಶಿಸುವ ಗುಣವನ್ನು ಎಂದೋ ಕಳೆದುಕೊಂಡ ಬಹಳಷ್ಟು ಭಾರತೀಯರು ಅದಕ್ಕೆ ದನಿಗೂಡಿಸಿ ಬಹುಪರಾಕ್ ಹೇಳುತ್ತಿದ್ದಾರೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಕಾದು ನೋಡಬೇಕಿದೆ.

(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‍ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)


ಇದನ್ನೂ ಓದಿ: ಬ್ರಾಹ್ಮಣ್ಯದ ಉಗಮ ಮತ್ತು ಹೂರಣ: ಅಂದು-ಇಂದು – ಜಿ ಎನ್ ನಾಗರಾಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಹೀರೊ ಯಾವತ್ತಿಗು ಹೀರೊನೆ,
    ಅವರ ಸರಳತೆ ಹಾಗು ಜೀವನ ಶೈಲಿಯ ಬಗ್ಗೆ ತಿಳಿದು ಇಂತಹ ವ್ಯಕ್ತಿಯನ್ನು ಗುರುತಿಸಿ ಪಕ್ಷದಿಂದ ಟಿಕೆಟ್ ನೀಡಿ ಗೆಲ್ಲಿಸಿದಂತಹ ವಿಷಯ ಬಹಳ ಮಹತ್ವದಾಗಿತ್ತು,ನಿಜವಾದ ಅಚ್ಚೆ ದಿನ ಇದಾಗಿತ್ತು ಹೀಗಿದ್ದು ಅವರು ಸಂಘ ಪರಿವಾರ,ಭಜರಂಗದಳದ ವ್ಯಕ್ತಿಯೆಂಬ ಮಾಹಿತಿ ತಿಳಿದು ಇನ್ನಷ್ಟು ಹೆಮ್ಮೆ ಮೂಡುತ್ತಿದೆ ನಿಮ್ಮ ಈ ಮಾಹಿತಿಗಾಗಿ ಧನ್ಯವಾದಗಳು.
    ಸಂಘ ಶಕ್ತಿಗೆ ಜಯವಾಗಲಿ
    ಜೈ ಭಜರಂಗದಳ???

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...