ರಾಜಧಾನಿ ದೆಹಲಿಯಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟದ ಹಿನ್ನಲೆ, ಕೃಷಿ ತ್ಯಾಜ್ಯಗಳನ್ನು ಸುಡುವ ರೈತರಿಗೆ ವಿಧಿಸುವ ದಂಡವನ್ನು ಕೇಂದ್ರ ಸರ್ಕಾರ ಗುರುವಾರ ದ್ವಿಗುಣಗೊಳಿಸಿದೆ. “ಐದು ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ ರೈತರು 30,000 ರೂ. ದಂಡವನ್ನು ಪಾವತಿಸಬೇಕಾಗುತ್ತದೆ” ಎಂದು ಬುಧವಾರ ಕೇಂದ್ರ ಸರ್ಕಾರ ಪ್ರಕಟಿಸಿದ ಅಧಿಸೂಚನೆ ಹೇಳಿದೆ. ಕೃಷಿ ತ್ಯಾಜ್ಯ
ಅಧಿಸೂಚಣೆಯಲ್ಲಿ, ಎರಡು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರು 5,000 ರೂಪಾಯಿಗಳ ಪರಿಸರ ಪರಿಹಾರವನ್ನು ಪಾವತಿಸಬೇಕಾಗುತ್ತದೆ. ಈ ಹಿಂದೆ ಈ ವರ್ಗದ ರೈತರು 2500 ರೂ. ದಂಡ ಪಾವತಿಸಬೇಕಾಗಿತ್ತು. ಎರಡರಿಂದ ಐದು ಎಕರೆ ಜಮೀನು ಹೊಂದಿರುವ ರೈತರು ಹಿಂದೆ 5 ಸಾವಿರ ದಂಡ ಪಾವತಿಸಬೇಕಾಗಿತ್ತು, ಆದರೆ ಇಂದಿನಿಂದ ಅದರ ದಂಡ 10 ಸಾವಿರ ರೂ.ಗಳಿಗೆ ಏರಿಸಲಾಗಿದೆ. ಕೃಷಿ ತ್ಯಾಜ್ಯ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪಂಜಾಬ್ ಮತ್ತು ಹರಿಯಾಣದಲ್ಲಿ ಕೃಷಿ ತ್ಯಾಜ್ಯಗಳನ್ನು ಸುಡುವ ಘಟನೆಗಳ ಸಂಖ್ಯೆಯು ಹೆಚ್ಚಾದರೆ ನವೆಂಬರ್ 1 ರಿಂದ 15 ರವರೆಗೆ ದೆಹಲಿಯು ಗರಿಷ್ಠ ಮಟ್ಟದ ಮಾಲಿನ್ಯವನ್ನು ಅನುಭವಿಸುತ್ತದೆ ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (DPCC) ವಿಶ್ಲೇಷಣೆ ಹೇಳಿದೆ.
ಭತ್ತ-ಗೋಧಿ ಬೆಳೆ ಪದ್ಧತಿ, ದೀರ್ಘಾವಧಿಯ ಭತ್ತದ ತಳಿಗಳ ಬೇಸಾಯ, ಯಾಂತ್ರೀಕೃತ ಕೊಯ್ಲು, ಹೊಲದಲ್ಲಿ ಬೆಳೆದಿರುವ ಕೊಯ್ಲು, ಕಾರ್ಮಿಕರ ಕೊರತೆ, ಮತ್ತು ಕೃಷಿ ತ್ಯಾಜ್ಯಕ್ಕೆ ಮಾರುಕಟ್ಟೆಯ ಕೊರತೆ ಮುಂತಾದ ಸಮಸ್ಯೆಗಳ ಕಾರಣಕ್ಕೆ ಅದನ್ನು ಸುಡುಡಕಲಾಗುತ್ತದೆ ಎನ್ನಲಾಗಿದೆ.
ಈ ಅವಶೇಷಗಳನ್ನು ಹೆಚ್ಚಾಗಿ ಸುಡುವ ಅವಧಿಯಲ್ಲಿ, ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗುವ ವಾಯು ಮಾಲಿನ್ಯಕ್ಕೆ 30% ದಷ್ಟು ಕೊಡುಗೆ ನೀಡುತ್ತದೆ ಎಂದು ಅಧ್ಯಯನಗಳು ಅಂದಾಜಿಸಿವೆ.
ಅದಾಗ್ಯೂ ಈ ವಾದವನ್ನು ಪರಿಸರ ತಜ್ಞರು ಅಲ್ಲಗೆಳೆದಿದ್ದು, ಹಿರಿಯ ಪರಿಸರವಾದಿ ಸುನೀತಾ ನಾರಾಯಣ್ ಅವರು, “ಚಳಿಗಾಲದ ಸಮಯ ರೈತರು ಕೃಷಿ ತ್ಯಾಜ್ಯವನ್ನು ವ್ಯಾಪಕವಾಗಿ ಸುಡುವುದಕ್ಕೆ ಮಾತ್ರ ದೆಹಲಿಯಲ್ಲಿ ವಾಯು ಮಾಲಿನ್ಯ ಆಗುತ್ತಿಲ್ಲ. ಬದಲಾಗಿ, ದೆಹಲಿಯ ಸಾರಿಗೆ ಮತ್ತು ಕೈಗಾರಿಕೆಗಳು ಸೇರಿದಂತೆ ನಗರದೊಳಗಿನ ನಿರಂತರ ಮಾಲಿನ್ಯದ ಕಾರಣಕ್ಕೆ ಇದು ನಡೆಯುತ್ತದೆ” ಎಂದು ಹೇಳುತ್ತಾರೆ.
ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ : ಐದು ಗ್ಯಾರಂಟಿಗಳನ್ನು ಘೋಷಿಸಿದ ಪ್ರತಿಪಕ್ಷಗಳ ಒಕ್ಕೂಟ ಎಂವಿಎ
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ : ಐದು ಗ್ಯಾರಂಟಿಗಳನ್ನು ಘೋಷಿಸಿದ ಪ್ರತಿಪಕ್ಷಗಳ ಒಕ್ಕೂಟ ಎಂವಿಎ


