ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ 10 ಶಂಕಿತ ಕುಕಿ ಉಗ್ರಗಾಮಿಗಳ “ಹತ್ಯೆ” ಘಟನೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ (ಸಿಆರ್‌ಪಿಎಫ್) ಪಡೆ “ಪಕ್ಷಪಾತವನ್ನು ಪ್ರದರ್ಶಿಸಿದೆ” ಎಂದು ಮಿಜೋರಾಂನ ವಿರೋಧ ಪಕ್ಷವಾದ ಮಿಜೋ ನ್ಯಾಷನಲ್ ಫ್ರಂಟ್ ಬುಧವಾರ ಆರೋಪಿಸಿದೆ. ಸಿಆರ್‌ಪಿಎಫ್ ಪಕ್ಷಪಾತ
ಶಂಕಿತ ಉಗ್ರಗಾಮಿಗಳು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಮೇಲೆ ದಾಳಿ ನಡೆಸಿದ ನಂತರ ಆರಂಭವಾದ ಗುಂಡಿನ ಚಕಮಕಿಯಲ್ಲಿ ಸೋಮವಾರ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಕುಕಿ-ಜೊ ಸಂಘಟನೆಗಳು ಇದನ್ನು ನಿರಾಕರಿಸಿದ್ದು, ಮೃತಪಟ್ಟವರು ‘ಗ್ರಾಮ ಸ್ವಯಂ ಸೇವಕ’ರಾಗಿದ್ದು, ಅವರನ್ನು ಭದ್ರತಾಪಡೆಗಳು ಹೊಂಚು ಹಾಕಿ ಕೊಂದಿದೆ ಎಂದು ಆರೋಪಿಸಿದ್ದಾರೆ. ಸಿಆರ್‌ಪಿಎಫ್ ಪಕ್ಷಪಾತ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಬುಧವಾರ ಹೇಳಿಕೆ ನೀಡಿರುವ ಮಿಜೋರಾಂನ ವಿಪಕ್ಷ ಮಿಜೊ ನ್ಯಾಷನಲ್ ಫ್ರಂಟ್, “ನಾವು CRPFನ ಈ ಕ್ರಮಗಳನ್ನು ಖಂಡಿಸುತ್ತೇವೆ. ಮಿಜೋ ಬುಡಕಟ್ಟುಗಳ ವಿರುದ್ಧ ಅವರ ತಾರತಮ್ಯದ ನಡವಳಿಕೆಯು ನಮ್ಮನ್ನು ತೀವ್ರ ಆತಂಕಕ್ಕೀಡು ಮಾಡಿದೆ” ಹೇಳಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಆಪಾದಿತ ಕ್ರಮಗಳು, ಮಣಿಪುರದಲ್ಲಿ ದುರ್ಬಲವಾದ ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಮತ್ತು ಶಾಂತಿಪಾಲಕರಾಗಿ CRPF ನ ವಿಶ್ವಾಸಾರ್ಹತೆಯನ್ನು ದುರ್ಬಲಗೊಳಿಸುವ ಅಪಾಯವನ್ನುಂಟುಮಾಡುತ್ತದೆ ಎಂದು ವಿರೋಧ ಪಕ್ಷವು ಹೇಳಿದೆ.
ಕುಕಿಗಳು ಮಿಜೋಸ್‌ನೊಂದಿಗೆ ನಿಕಟ ಜನಾಂಗೀಯ ಸಂಬಂಧಗಳನ್ನು ಹೊಂದಿದ್ದು, ತಮ್ಮನ್ನು “ಝೋ ಕುಟುಂಬದ” ಭಾಗವೆಂದು ಪರಿಗಣಿಸುತ್ತಾರೆ. ಮಿಜೋರಾಂನಲ್ಲಿ ಕುಕಿ ಜೋ ಸಮುದಾಯವು ಏಕೈಕ-ದೊಡ್ಡ ಜನಾಂಗೀಯ ಗುಂಪಾಗಿದೆ. ಡಿಸೆಂಬರ್‌ನಲ್ಲಿ ಮಿಜೋರಾಮ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮಿಜೋ ನ್ಯಾಷನಲ್ ಫ್ರಂಟ್ ತನ್ನನ್ನು ಝೋ ನ್ಯಾಶನಲಿಸ್ಟ್ ಪಕ್ಷ ಎಂದು ಬಿಂಬಿಸಿಕೊಂಡಿದೆ.
ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲು ಐಜ್ವಾಲ್‌ನಲ್ಲಿ ಸಮಾರಂಭವನ್ನು ಆಯೋಜಿಸಿದ್ದಕ್ಕಾಗಿ ಮಿಜೋ ಸಂಘಟನೆಗಳ ಗುಂಪಿನ ಉನ್ನತ ಸಂಘವಾದ ಯಂಗ್ ಮಿಜೋ ಅಸೋಸಿಯೇಷನ್ ಅನ್ನು ಪಕ್ಷವು ಶ್ಲಾಘಿಸಿದೆ. ಈ ಸಭೆಯಲ್ಲಿ ಸಂಘವು ಹತ್ಯೆಯನ್ನು ಖಂಡಿಸಿದ್ದು, ಈ ಬಗ್ಗೆ ಕೇಂದ್ರ ಸರ್ಕಾರದಿಂದ ತನಿಖೆಗೆ ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿತು. “10 ಮಂದಿಯ ಕುಟುಂಬಗಳಿಗೆ ಆರ್ಥಿಕವಾಗಿ ಪರಿಹಾರ ನೀಡಬೇಕು ಮತ್ತು ಮಣಿಪುರದಲ್ಲಿನ ಅಶಾಂತಿಯನ್ನು ಆದಷ್ಟು ಬೇಗ ಪರಿಹರಿಸಬೇಕು” ಎಂದು ಸಂಘವು ಒತ್ತಾಯಿಸಿದೆ.
2023ರ ಮೇ ತಿಂಗಳಲ್ಲಿ, ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಜನಾಂಗೀಯ ಘರ್ಷಣೆಗಳು ಪ್ರಾರಂಭವಾದಾಗಿನಿಂದ ಹಳ್ಳಿಗಳನ್ನು ಕಾಪಾಡುವ ಶಸ್ತ್ರಸಜ್ಜಿತ ನಾಗರಿಕರಿಗೆ “ಗ್ರಾಮ ಸ್ವಯಂಸೇವಕರು” ಎಂಬ ಪದವನ್ನು ಬಳಸಲಾಗುತ್ತಿದೆ. ಹಿಂಸಾಚಾರ ಪ್ರಾರಂಭವಾದಾಗಿನಿಂದ ಕನಿಷ್ಠ 237 ಜನರು ಸಾವನ್ನಪ್ಪಿದ್ದಾರೆ ಮತ್ತು 59,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.
ಇದನ್ನೂ ಓದಿ: ಯುಪಿ: ದಲಿತ ವ್ಯಕ್ತಿಯ ಶವಸಂಸ್ಕಾರಕ್ಕೆ ಅಡ್ಡಿಪಡಿಸಿದ ಗ್ರಾಮಸ್ಥರು; ಜಾತಿ ನಿಂದನೆ ಪ್ರಕರಣ ದಾಖಲು
ಯುಪಿ: ದಲಿತ ವ್ಯಕ್ತಿಯ ಶವಸಂಸ್ಕಾರಕ್ಕೆ ಅಡ್ಡಿಪಡಿಸಿದ ಗ್ರಾಮಸ್ಥರು; ಜಾತಿ ನಿಂದನೆ ಪ್ರಕರಣ ದಾಖಲು


