Homeಬಹುಜನ ಭಾರತಬಹುಜನ ಭಾರತ: ಭಾರತೀಯ ಮಾಧ್ಯಮದಲ್ಲಿ ಮೇಲ್ಜಾತಿಗಳದೇ ಪ್ರಾಬಲ್ಯ! - ಡಿ.ಉಮಾಪತಿ

ಬಹುಜನ ಭಾರತ: ಭಾರತೀಯ ಮಾಧ್ಯಮದಲ್ಲಿ ಮೇಲ್ಜಾತಿಗಳದೇ ಪ್ರಾಬಲ್ಯ! – ಡಿ.ಉಮಾಪತಿ

ಬಹುಜನರನ್ನೂ, ಬಹುಗ್ರಹಿಕೆಗಳನ್ನೂ ದೂರ ಇರಿಸಿರುವ ನಮ್ಮ ಸುದ್ದಿ ಮನೆಗಳು ರೋಗಗ್ರಸ್ತವೂ ಹೃದಯಶೂನ್ಯವೂ ಆತ್ಮಸಾಕ್ಷಿರಹಿತವೂ ಆಗಿ ಹೋಗಿವೆ. ಹೀಗಾಗಿಯೇ ಬಹುಜನರ ಪಾಲಿಗೆ ಅವು ಕ್ರೂರವೂ ಶಾಪವೂ ಆಗಿ ಹೋಗಿವೆ.

- Advertisement -
- Advertisement -

ಪ್ರಜ್ಞಾಪೂರ್ವಕ ಮತ್ತು ಅಪ್ರಜ್ಞಾಪೂರ್ವಕವಾಗಿ ಅಥವಾ ತಿಳಿದೋ ತಿಳಿಯದೆಯೋ ನುಸುಳುವ ಪೂರ್ವಗ್ರಹಗಳು ಪತ್ರಿಕೆಗಳು- ಚಾನೆಲ್‍ಗಳು- ನವಮಾಧ್ಯಮಗಳಲ್ಲಿ ದೋಷಗಳಿಗೆ ದಾರಿ ಮಾಡಿಕೊಡುತ್ತವೆ. ವಿದೇಶಗಳಲ್ಲಿನ ಮಾಧ್ಯಮಗಳು ಹೆಚ್ಚು ಹೆಚ್ಚು ಕಪ್ಪು ಪತ್ರಕರ್ತರನ್ನು ನೇಮಕ ಮಾಡಿಕೊಳ್ಳುತ್ತಿರುವುದು ಹೌದು. ಆದರೆ ಬಿಳಿಯ ಪತ್ರಕರ್ತರಿಗೆ ಹೋಲಿಸಿದರೆ ಸಂಪಾದಕೀಯ ವಿಭಾಗದ ಇಲ್ಲವೇ ನೀತಿ ನಿರ್ಧಾರ ಕೈಗೊಳ್ಳುವ ಕ್ರಿಯೆಯಲ್ಲಿ ಅವರ ಪಾತ್ರ ಅಷ್ಟಕ್ಕಷ್ಟೇ.

ಪತ್ರಿಕೆಯೊಂದು ಜೀವಂತಿಕೆಯಿಂದ ಸಮಾಜಕ್ಕೆ ಸ್ಪಂದಿಸಬೇಕಿದ್ದರೆ ಅದರ ಸುದ್ದಿ ಕಾರ್ಯಸೂಚಿಯಲ್ಲಿ ಹೊಸ ಹೊಸ ಸುದ್ದಿ ಕಥಾನಕಗಳಿಗೆ ಅವಕಾಶವಿರಬೇಕು. ಹೊಸ ಹೊಸ ಸುದ್ದಿ ಕಥಾನಕಗಳು ವೈವಿಧ್ಯಮಯ ಹಿನ್ನೆಲೆಗಳಿಂದ ಬಂದ ಪತ್ರಕರ್ತರ ಒಳನೋಟಗಳಿಂದ ಹುಟ್ಟುತ್ತವೆ. ಮೇಲಿನಿಂದ ಕಾಣುವ ನೋಟ ಬೇರೆಯಾದರೆ, ಕೆಳಗಿನಿಂದ, ಪಾರ್ಶ್ವಗಳಿಂದ ಕಾಣುವ ನೋಟವೇ ಬೇರೆ. ಉದಾಹರಣೆಗೆ ಹಸಿವಿನ ಗ್ರಹಿಕೆ, ಅವಮಾನದ ಗ್ರಹಿಕೆ, ನೋವಿನ ಗ್ರಹಿಕೆಗಳು ಏಣಿಶ್ರೇಣಿಯ ಸಮಾಜದಲ್ಲಿ ತುಳಿದವರು ಮತ್ತು ತುಳಿಸಿಕೊಂಡವರು, ಹಸಿದವರು ಮತ್ತು ಉಂಡವರು, ಅವಮಾನಿತರು ಮತ್ತು ಅವಮಾನ ಮಾಡುವವರಲ್ಲಿ ಏಕರೂಪವಾಗಿರುವುದು ಸಾಧ್ಯವಿಲ್ಲ. ವಿದೇಶಗಳ ಪತ್ರಿಕಾ ಕಚೇರಿಗಳಲ್ಲಿ ನೆಲೆಸಿರುವ ವರ್ಣಭೇದಕ್ಕಿಂತ ಅಗಾಧ ಆಳಕ್ಕೆ, ಅಪಾರ ಅಗಲಕ್ಕೆ ನಮ್ಮ ದೇಶದ ಪತ್ರಿಕೋದ್ಯಮವನ್ನು ಆವರಿಸಿಕೊಂಡಿದೆ ಜಾತೀಯತೆ. ಕಳೆದ ಕೆಲವು ದಶಕಗಳಲ್ಲಿ ಅದರ ಹೊರರೂಪದ ಉಗ್ರತೆ ಕುಗ್ಗಿರಬಹುದು. ಆದರೆ ಒಳಗಣ ಕುದಿ ಕಿಚ್ಚಿನಲ್ಲಿ ವ್ಯತ್ಯಾಸವಿಲ್ಲ. ನವಿರಾಗಿ ಆದರೆ ನಿಶ್ಚಿತವಾಗಿ ಕೆಲಸ ಮಾಡುತ್ತಿರುವುದು ನಿಚ್ಚಳ.

ಬ್ರಿಟಿಷ್ ಮೀಡಿಯಾ ಈಗಲೂ ಶೇ.94ರಷ್ಟು ಶ್ವೇತವರ್ಣೀಯ. ಅತಿಗಣ್ಯ ಪತ್ರಿಕೋದ್ಯಮ ಶಾಲೆಗಳಲ್ಲಿ ಓದಿದವರನ್ನೇ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದ್ದಿದ್ದರಲ್ಲಿ ಬಿ.ಬಿ.ಸಿ. ಪರವಾಗಿಲ್ಲ. ಕಪ್ಪು ವರ್ಣೀಯರು ಮತ್ತು ಹೆಣ್ಣುಮಕ್ಕಳ ಜನಸಂಖ್ಯೆಯನ್ನೂ ಬಿಂಬಿಸುವ ಪ್ರಯತ್ನ ಕಾಣಬಹುದು. ಆದರೆ ಸರ್ವರಿಗೂ ಸಮಾನ ಪ್ರಾತಿನಿಧ್ಯ ನೀಡಿಕೆ ಇನ್ನೂ ಸಾಧ್ಯವಾಗಿಲ್ಲ. ಶ್ವೇತವರ್ಣೀಯರಲ್ಲದವರು ಯಾರೇ ಇರಲಿ ಅವರನ್ನು ಕಪ್ಪು, ಏಷ್ಯನ್, ಅಲ್ಪಸಂಖ್ಯಾತ ಬುಡಕಟ್ಟಿನ ಸಾಮಾನ್ಯ ಛತ್ರಿಯಡಿ ಸಾರಾಸಗಟಾಗಿ ಲೆಕ್ಕ ಹಿಡಿಯಲಾಗುತ್ತಿದೆ. ಇದರಾಚೆಗಿನ ತೃತೀಯಲಿಂಗಿಗಳು ಮುಂತಾದವರನ್ನು ಒಳಗೊಳ್ಳುವ ವೈವಿಧ್ಯಕ್ಕೆ ಬ್ರಿಟಿಷ್ ಮಾಧ್ಯಮ ಇನ್ನೂ ವಿಸ್ತರಿಸಬೇಕಿದೆ.

ಇಷ್ಟೆಲ್ಲ ಅರಿವು ಜಾಗೃತಿ ಆಂದೋಲನದ ನಂತರವೂ ಶ್ವೇತವರ್ಣೀಯರಲ್ಲದವರು ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎನ್ನುವ ದುಸ್ಥಿತಿ. ಭಾರತದಲ್ಲಿ ಶ್ವೇತವರ್ಣೀಯರ ಜಾಗದಲ್ಲಿ ಮೇಲ್ಜಾತಿಗಳನ್ನು ಮತ್ತು ಕಪ್ಪುವರ್ಣೀಯರು-ಹೆಣ್ಣುಮಕ್ಕಳು, ಏಷ್ಯನ್ನರು ಹಾಗೂ ಅಲ್ಪಸಂಖ್ಯಾತ ಬುಡಕಟ್ಟಿನ ಜಾಗದಲ್ಲಿ ದಲಿತರನ್ನೂ, ಹೆಣ್ಣುಮಕ್ಕಳನ್ನೂ, ಅಲ್ಪಸಂಖ್ಯಾತರನ್ನೂ, ಹೆಚ್ಚು ಹಿಂದುಳಿದ ಜಾತಿಗಳನ್ನೂ ಇಟ್ಟು ನೋಡಿದರೆ ಕಹಿ ವಾಸ್ತವ ಕಣ್ಣಿಗೆ ರಾಚುವುದು. ಈ ಎಲ್ಲ ವರ್ಗಗಳು ನಮ್ಮ ಸುದ್ದಿಮನೆಗಳಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಇತ್ತೀಚಿಗೆ ಕರೋನಾ ವೈರಾಣುವಿನ ನೆಪವೊಡ್ಡಿ ಇವರನ್ನು ಆಟದಿಂದಲೂ ತೆಗೆದು ಮನೆಗೆ ಕಳಿಸಲಾಗುತ್ತಿದೆ.

ಹಿಂಸೆಯಿಂದ ಕೂಡಿದ ಶ್ವೇತವರ್ಣೀಯ ಶ್ರೇಷ್ಠತೆ ಮತ್ತು ದ್ವೇಷ ಬಿತ್ತುವ ಭಾಷಣಗಳು ವಿದೇಶಗಳಲ್ಲಿ ಹೆಚ್ಚುತ್ತಿವೆ. ಅದರ ತದ್ರೂಪಿನಂತೆ ಭಾರತದಲ್ಲಿ ಹಿಂಸಾವಾದೀ ಸವರ್ಣೀಯ ಶ್ರೇಷ್ಠತೆ ಮತ್ತು ದ್ವೇಷಬಿತ್ತನೆಯ ಭಾಷಣಗಳು ವಾತಾವರಣಕ್ಕೆ ವಿಷ ಕಕ್ಕುತ್ತಿವೆ. ಈ ಬಾಬತ್ತಿನಲ್ಲಿ ದೇಶವನ್ನು ಆಳುವವರೇ ಮುಂಚೂಣಿಯಲ್ಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ಇಷ್ಟು ಕಾಲ ಸುದ್ದಿಮನೆಗಳನ್ನು ಆಳಿಕೊಂಡು ಬಂದಿರುವ ಏಕಗ್ರಹಿಕೆಯೇ ಈಗಲೂ ಮುಂದುವರೆದಿದೆ. ಹೀಗಾಗಿಯೇ ನಮ್ಮ ಸುತ್ತಮುತ್ತಲ ಬಹುತೇಕ ಪತ್ರಿಕೆಗಳು ಸವರ್ಣೀಯ ಪಾರಮ್ಯದ ಏಕಗ್ರಹಿಕೆಯನ್ನೇ ಉನ್ಮಾದದಿಂದ ಬಿಂಬಿಸತೊಡಗಿವೆ. ಆರೋಗ್ಯಕರ ಮಾಧ್ಯಮಗಳು ತಲೆಯೆತ್ತಬೇಕಿದ್ದರೆ ಪತ್ರಿಕೆಗಳ ಅರ್ಥವ್ಯವಸ್ಥೆಯ ಮಾದರಿಯು ಮಾರುಕಟ್ಟೆ ನಿರ್ದೇಶಿತ ಬಂಡವಾಳಶಾಹಿ ಆತ್ಮವನ್ನು ತ್ಯಜಿಸುವ ಜೊತೆ ಜೊತೆಗೆ ಬಹುತ್ವದ ಬಹುಗ್ರಹಿಕೆಗಳಿಗೆ ಸುದ್ದಿಮನೆಯಲ್ಲಿ ಜಾಗ ದೊರೆಯಬೇಕಿದೆ. ಸರ್ವರನ್ನೂ ಒಳಗೊಳ್ಳುವ ಸುದ್ದಿಮನೆಗಳು ಹಿಂದೆಂದಿಗಿಂತಲೂ ಹೆಚ್ಚು ತುರ್ತಾಗಿ ರೂಪು ತಳೆಯಬೇಕಿದೆ. ಆದರೆ ವಿಶೇಷವಾಗಿ ಭಾರತೀಯ ಸಮಾಜದ- ಸುದ್ದಿಮನೆಗಳ ಪಯಣ ಹಿಂದೆಂದಿಗಿಂತಲೂ ಹೆಚ್ಚು ವಿರುದ್ಧ ದಿಕ್ಕಿನಲ್ಲಿ ಸಾಗಿರುವುದು ಏಕಕಾಲಕ್ಕೆ ಬಹುದೊಡ್ಡ ವಿಡಂಬನೆಯೂ, ಗಂಡಾಂತರಕಾರಿಯೂ ಆಗಿದೆ.

ಓಂ ಸಹನಾವವತು | ಸಹ ನೌ ಭುನಕ್ತು | ಸಹ ವೀರ್ಯಂ ಕರವಾವಹೈ | ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ | ಓಂ ಶಾಂತಿಃ ಶಾಂತಿಃ ಶಾಂತಿಃ |

ಆ ಪರಮಾತ್ಮ ನಮ್ಮನ್ನು ಜೊತೆಯಾಗಿ ರಕ್ಷಿಸಲಿ, ಜೊತೆಯಾಗಿ ಆಹಾರ ಸೇವಿಸುವಂತೆ ಮಾಡಲಿ, ಜೊತೆಯಾಗಿ ಧೀರ ಕಾರ್ಯ ಮಾಡುತ್ತೇವೆ. ನಮ್ಮ ಅಧ್ಯಯನ ತೇಜಸ್ಸಿನಿಂದ ಕೂಡಿರಲಿ, ದ್ವೇಷವೆಂಬುದು ಎಂದೆಂದಿಗೂ ನಮ್ಮನ್ನು ಆವರಿಸಿಕೊಳ್ಳದಿರಲಿ ಎಂಬ ಅರ್ಥದ ಶ್ಲೋಕವಿದು. ವಸುಧೈವಕ ಕುಟುಂಬಕಂ ತತ್ವವನ್ನು ಸಾರುವ ದೇಶ ನಮ್ಮದೆಂದು ಎದೆ ತಟ್ಟಿಕೊಳ್ಳುತ್ತೇವೆ. ಆದರೆ ಅಸಲು ಆಚರಣೆಯಲ್ಲಿರುವುದೇನು? ಇದೆಲ್ಲವೂ ನೂರಾರು ವರ್ಷಗಳಿಂದ ಕಾಗದದ ಮೇಲೆಯೂ, ಹೆಚ್ಚೆಂದರೆ ಬಾಯಿ ಮಾತಿನ ಬಡಾಯಿಯಾಗಿಯೂ ಉಳಿದಿರುವುದು ಸುಳ್ಳೇನು?

ಭಾರತೀಯ ಮಾಧ್ಯಮದಲ್ಲಿ ಮೇಲ್ಜಾತಿಗಳದೇ ಪ್ರಾಬಲ್ಯ. ಮೀಡಿಯಾ ಸಂಸ್ಥೆಗಳು ತಮ್ಮ ಸುದ್ದಿಮನೆಗಳನ್ನು, ಸುದ್ದಿ ಸಂಗ್ರಹದ ವಿಧಾನಕ್ಕೆ ವಿವಿಧತೆಯನ್ನು ತಂದು ತುಂಬುವಲ್ಲಿ ಸೋತಿವೆ ಎಂಬುದು ಕಾಲ ಕಾಲಕ್ಕೆ ರುಜುವಾತಾಗುತ್ತ ಬಂದಿರುವ ವಾಸ್ತವ. ಈ ವಾಸ್ತವವನ್ನು ಆಕ್ಸ್ ಫ್ಯಾಮ್ ಇಂಡಿಯಾ ಮತ್ತು ನ್ಯೂಸ್ ಲಾಂಡ್ರಿ ಇತ್ತೀಚಿನ ಅಧ್ಯಯನ ವರದಿಯಲ್ಲಿ ಸಾರಿ ಹೇಳಿವೆ.

ಸುದ್ದಿ ಮಾಧ್ಯಮದಲ್ಲಿ ಯಾರಿಗೆ ಎಷ್ಟು ಜಾಗ ನೀಡಬೇಕು, ಎಂತಹ ಪ್ರಾಮುಖ್ಯತೆ ಕೊಡಬೇಕು ಎಂಬುದನ್ನು ತೀರ್ಮಾನಿಸುವ ನಾಯಕತ್ವದ ಸ್ಥಾನಮಾನಗಳಲ್ಲಿ ದಲಿತರು- ಆದಿವಾಸಿಗಳಂತಹ ಅಂಚಿನಲ್ಲಿ ಜೀವಿಸಿರುವ ಸಮುದಾಯಗಳು ಇಲ್ಲವೇ ಇಲ್ಲ ಎಂದು ಈ ವರದಿ ಬೊಟ್ಟು ಮಾಡಿ ತೋರಿದೆ.

ಸುದ್ದಿಮನೆಗಳಲ್ಲಿ ಹೆಚ್ಚು ದನಿಗಳಿಗೆ ಅವಕಾಶ ಒದಗಿಸಲು ಮತ್ತು ಸಮಾನ ಪ್ರಾತಿನಿಧ್ಯ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನಗಳು ಸಾಮೂಹಿಕವಾಗಿ ನಡೆದೇ ಇಲ್ಲ. ಜನತಂತ್ರ ವ್ಯವಸ್ಥೆಯ ಪ್ರಮುಖ ಅಂಗವಾದ ಸುದ್ದಿ ಮಾಧ್ಯಮವು ದಲಿತರು-ಆದಿವಾಸಿಗಳು ಮತ್ತು ಅಂಚಿಗೆ ನೂಕಲ್ಪಟ್ಟ ಇತರೆ ಸಮುದಾಯಗಳು-ಗುಂಪುಗಳನ್ನು ಕೈ ಬಿಟ್ಟಿರುವುದು ಅತ್ಯಂತ ನಿರಾಶಾದಾಯಕ ಎಂದಿದೆ.

ಆರು ಇಂಗ್ಲಿಷ್, ಏಳು ಹಿಂದೀ ಪತ್ರಿಕೆಗಳು, 14 ಟೆಲಿವಿಷನ್ ಚಾನೆಲ್ಲುಗಳ ಡಿಬೇಟ್ ಶೋಗಳು, ಹನ್ನೊಂದು ಡಿಜಿಟಲ್ ಮಾಧ್ಯಮಗಳು, ಹನ್ನೆರಡು ನಿಯತಕಾಲಿಗಳನ್ನು ಆರಿಸಿಕೊಂಡು 2018ರ ಅಕ್ಟೋಬರ್ ನಿಂದ 2019ರ ಮಾರ್ಚ್ ಅವಧಿಯಲ್ಲಿ ಪರಿಶೀಲಿಸಲಾಯಿತು. ಸುಮಾರು 65 ಸಾವಿರ ಲೇಖನಗಳು ಮತ್ತು ನ್ಯೂಸ್ ಡಿಬೇಟುಗಳನ್ನು ವಿಶ್ಲೇಷಿಸಲಾಯಿತು.

ನಾನಾ ಪತ್ರಿಕೆಗಳು, ಚಾನೆಲ್ಲುಗಳು, ಅಂತರ್ಜಾಲ ತಾಣಗಳು ಹಾಗೂ ನಿಯತಕಾಲಿಕಗಳ ಸುದ್ದಿಮನೆಗಳ ಒಟ್ಟು 121 ನಾಯಕತ್ವ ಹುದ್ದೆಗಳನ್ನು (ಪ್ರಧಾನ ಸಂಪಾದಕ, ವ್ಯವಸ್ಥಾಪಕ ಸಂಪಾದಕ, ಕಾರ್ಯನಿರ್ವಾಹಕ ಸಂಪಾದಕ, ಬ್ಯೂರೋ ಮುಖ್ಯಸ್ಥ, ಇನ್ಪುಟ್-ಔಟ್ಪುಟ್ ಎಡಿಟರ್) ಅವಲೋಕಿಸಲಾಯಿತು. 121ರ ಪೈಕಿ 106 ಹುದ್ದೆಗಳಲ್ಲಿದ್ದವರು ಮೇಲ್ಜಾತಿಗಳಿಗೆ ಸೇರಿದವರು. ಹಿಂದುಳಿದ ವರ್ಗಗಳಿಗೆ ಸೇರಿದವರು ಐವರು. ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದವರು ಆರು ಮಂದಿ. ನಾಲ್ಕು ಮಂದಿಯ ಜಾತಿ ಹಿನ್ನೆಲೆಯನ್ನು ಪತ್ತ ಮಾಡುವುದಾಗಲಿಲ್ಲ.

ಹಿಂದೀ ಚಾನೆಲ್ಲುಗಳ 40 ಮತ್ತು ಇಂಗ್ಲಿಷ್ ಚಾನೆಲ್ಲುಗಳ 47 ನಿರೂಪಕರ ಹಿನ್ನೆಲೆಯನ್ನು ಪರಿಶೀಲಿಸಲಾಯಿತು. ಡಿಬೇಟುಗಳನ್ನು ನಡೆಸುವ ಪ್ರತಿ ನಾಲ್ವರು ನಿರೂಪಕರಗಳ ಪೈಕಿ ಮೂವರು ಮೇಲ್ಜಾತಿಗಳಿಗೆ ಸೇರಿದವರು. ದಲಿತ-ಆದಿವಾಸಿ-ಓಬಿಸಿ ಒಬ್ಬರೂ ಇಲ್ಲ. ನ್ಯೂಸ್ ಚಾನೆಲ್ಲುಗಳು ತಮ್ಮ ಶೇ.70ರಷ್ಟು ಪ್ರೈಮ್ ಟೈಮ್ ಡಿಬೇಟುಗಳಿಗೆ ಆರಿಸುವ ಪ್ಯಾನಲಿಸ್ಟುಗಳು ಮೇಲ್ಜಾತಿಗಳಿಗೆ ಸೇರಿದವರು. ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನಗಳ ಪೈಕಿ ದಲಿತರು ಆದಿವಾಸಿಗಳು ಬರೆದ ಲೇಖನಗಳ ಪ್ರಮಾಣ ಶೇ.ಐದನ್ನು ಮೀರುವುದಿಲ್ಲ. ಹಿಂದೀ ಪತ್ರಿಕೆಗಳಲ್ಲಿ ಈ ಪ್ರಮಾಣ ಶೇ.10. ಸುದ್ದಿ ಅಂತರ್ಜಾಲ ತಾಣಗಳಲ್ಲಿ ಪ್ರಕಟವಾಗುವ ಶೇ.72ರಷ್ಟು ಬೈಲೈನ್ ವರದಿಗಳು-ಲೇಖನಗಳು ಮೇಲ್ಜಾತಿಯವರು ಬರೆದಂತಹವು.

ಈ ಎಲ್ಲ ಸಂಗತಿಗಳು ಕನ್ನಡದ ಪತ್ರಿಕೋದ್ಯಮಕ್ಕೂ ಅನ್ವಯಿಸುತ್ತವೆ ಶೇ.99ರಷ್ಟು ಅಥವಾ ಇನ್ನೂ ಹೆಚ್ಚು. ಬಹುಜನರನ್ನೂ, ಬಹುಗ್ರಹಿಕೆಗಳನ್ನೂ ದೂರ ಇರಿಸಿರುವ ನಮ್ಮ ಸುದ್ದಿ ಮನೆಗಳು ರೋಗಗ್ರಸ್ತವೂ ಹೃದಯಶೂನ್ಯವೂ ಆತ್ಮಸಾಕ್ಷಿರಹಿತವೂ ಆಗಿ ಹೋಗಿವೆ. ಹೀಗಾಗಿಯೇ ಬಹುಜನರ ಪಾಲಿಗೆ ಅವು ಕ್ರೂರವೂ ಶಾಪವೂ ಆಗಿ ಹೋಗಿವೆ.


ಇದನ್ನು ಓದಿ: ಬಹುಜನ ಭಾರತ: ಲಾಭದ ಗುಲಾಮಗಿರಿಗೆ ಬಿದ್ದಿರುವ ಮಾಧ್ಯಮ! – ಡಿ.ಉಮಾಪತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...