ಕೊರೊನ ವಿಚಾರವಾಗಿ ಧರ್ಮವನ್ನ ಎಳೆ ತಂದು ಟ್ವೀಟ್ ಮಾಡಿದ ಚಕ್ರವರ್ತಿ ಸೂಲಿಬೆಲೆಗೆ ಚಿತ್ರನಟ ಡಾಲಿ ಧನಂಜಯ್ “ಏನಾದರು ಆಗು ಮೊದಲು ಮಾನವನಾಗು” ಎಂಬ ಕುವೆಂಪು ಅವರ ಸಾಲಿನ ಮೂಲಕ ಪಾಠ ಮಾಡಿರುವ ಘಟನೆ ಜರುಗಿದೆ.
ಇಂದು ಬೆಳಿಗ್ಗೆ ಸೂಲಿಬೆಲೆ “ಜೀಸಸ್ ಎಲ್ಲರನ್ನು ಪ್ರೀತಿಸುತ್ತಾರೆ” ಎಂದು ಬರೆದು ಇಟಲಿಯಲ್ಲಿ ಕೊರೊನಾ ವೈರಸ್ ದಾಳಿ: 80 ವರ್ಷ ಮೇಲ್ಪಟ್ಟವರಿಗೆ ತೀವ್ರ ನಿಗಾಘಟಕ ಇಲ್ಲ” ಎನ್ನುವ ಸುದ್ದಿಯ ಕೊಂಡಿಯನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು.
Jesus loves all!!
Coronavirus Italy: Victims over 80 may not get intensive care https://t.co/QiiAy3p5oj
— Chakravarty Sulibele (@astitvam) March 17, 2020
ಜೀಸಸ್ ಎಲ್ಲರನ್ನು ಪ್ರೀತಿಸಿದರೆ ಈ 80 ವರ್ಷ ಮೇಲ್ಪಟ್ಟವರಿಗೆ ತೀವ್ರನಿಗಾಘಟಕ ಏಕಿಲ್ಲ ಎಂದು ಟ್ರೋಲ್ ಮಾಡುವುದು ಅವರ ಉದ್ದೇಶವಾಗಿತ್ತು. ಆ ಮೂಲಕ ಕ್ರಿಶ್ಚಿಯನ್ ಧರ್ಮವನ್ನು ತಳುಕು ಹಾಕಲು ಪ್ರಯತ್ನಿಸಿದ್ದರು.
ಇದಕ್ಕೆ ಚಿತ್ರನಟ ಡಾಲಿ ಧನಂಜಯ್ ಕುವೆಂಪುರವರ ವಿಶ್ವಮಾನವ ತತ್ವದ ಪಾಠ ಮಾಡಿದ್ದಾರೆ. ಸೂಲಿಬೆಲೆಯ ಟ್ವೀಟ್‌ಗೆ “ಏನಾದರೂ ಆಗು ಮೊದಲು ಮಾನವನಾಗು” ಎಂದು ಬರೆದು ರೀಟ್ವೀಟ್ ಮಾಡಿದ್ದಾರೆ.
ಏನಾದರು ಆಗು ಮೊದಲು ಮಾನವನಾಗು?@astitvam https://t.co/F2SRrNkAn5
— Dhananjaya (@Dhananjayaka) March 17, 2020
ಕರ್ನಾಟಕದ ಮಹತ್ವದ ಕವಿ, ಚಿಂತಕ, ಲೇಖಕ ರಾಷ್ಟ್ರಕವಿ ಕುವೆಂಪುರವರ ಹೇಳಿಕೆಯನ್ನು ಬರೆಯುವ ಮೂಲಕ ಮಾನವ ಧರ್ಮಕ್ಕಿಂತ ಮಿಗಲಾದ ಧರ್ಮವಿಲ್ಲ ಎಂದು ಡಾಲಿ ಧನಂಜಯ್ ಪ್ರತಿಕ್ರಿಯಿಸಿದ್ದಾರೆ. ಇತರ ಧರ್ಮಗಳನ್ನು ತೆಗಳುವುದನ್ನು ಬಿಟ್ಟು ಮಾನವರಾಗೋಣ ಎಂದು ಸಾರಿದ್ದಾರೆ.
ಈ ಮೊದಲು ಸಹ ದೆಹಲಿ ಗಲಭೆಯ ಸಂದರ್ಭದಲ್ಲಿ ಶಾಂತಿ ಕಾಪಾಡುವಂತೆ, ಗಲಭೆ ನಿಲ್ಲಿಸುವಂತೆ ಡಾಲಿ ಧನಂಜಯ್ ಮನವಿ ಮಾಡಿ ಗಮನ ಸೆಳೆದಿದ್ದರು.


