Homeಅಂಕಣಗಳುಬಹುಜನ ಭಾರತ; ಚಂಬಲ್ ಸೀಮೆಯಲ್ಲೊಂದು ಹೆಣ್ಣುನೋಟದ ದಲಿತ ಪತ್ರಿಕೋದ್ಯಮ: ಡಿ. ಉಮಾಪತಿ

ಬಹುಜನ ಭಾರತ; ಚಂಬಲ್ ಸೀಮೆಯಲ್ಲೊಂದು ಹೆಣ್ಣುನೋಟದ ದಲಿತ ಪತ್ರಿಕೋದ್ಯಮ: ಡಿ. ಉಮಾಪತಿ

ಸಾಮಾಜಿಕ ಕಳಕಳಿಯ ಹೆಣ್ಣುಮಕ್ಕಳ ಗುಂಪೊಂದು ಇಂತಹ ಬುಂದೇಲಖಂಡದಲ್ಲಿ ಭಿನ್ನ ಬಗೆಯ ಗ್ರಾಮೀಣ ಪತ್ರಿಕೋದ್ಯಮವನ್ನು ನೆಲೆ ನಿಲ್ಲಿಸಿದೆ. ಎಂಟು ಪುಟಗಳ ಈ ವಾರಪತ್ರಿಕೆ ಹೆಸರು "ಖಬರ್ ಲೆಹರಿಯಾ” (ಸುದ್ದಿಯ ಅಲೆಗಳು). ನೂರಕ್ಕೆ ನೂರರಷ್ಟು ಹೆಣ್ಣುಮಕ್ಕಳೇ ಹೊರತರುವ ಏಕೈಕ ಗ್ರಾಮೀಣ ಪತ್ರಿಕೆಯಿದು. ಈ ಎಲ್ಲ ಹೆಣ್ಣುಮಕ್ಕಳೂ ತಳಸಮುದಾಯಗಳವರು. ವಿದ್ಯಮಾನಗಳನ್ನು ಹೆಣ್ಣುನೋಟದಿಂದ ಮತ್ತು ಜಾತ್ಯತೀತ ನೆಲೆಯಿಂದ ವರದಿ ಮಾಡುವುದು ಈ ಪತ್ರಿಕೆಯ ವಿಶೇಷ.

- Advertisement -
- Advertisement -

ಮಧ್ಯಪ್ರದೇಶದಲ್ಲಿ ಹುಟ್ಟಿ ರಾಜಸ್ತಾನವನ್ನು ಹಾದು ಉತ್ತರಪ್ರದೇಶದಲ್ಲಿ ಯಮುನೆಯನ್ನು ಸೇರುವ ಚಂಬಲ್ ನದಿಯ ಪ್ರಾಚೀನ ಹೆಸರು ಚರ್ಮಾನ್ವತಿ. ಅರ್ಥಾತ್ ದಂಡೆಗಳ ಮೇಲೆ ಚರ್ಮವನ್ನು ಒಣಗಿಸಲಾಗುತ್ತಿದ್ದ ನದಿ. ಮಹಾಭಾರತದಲ್ಲಿ ಈ ನದಿಯ ಹೆಸರು ಚರ್ಮಾನ್ಯವತಿ. ಆರ್ಯ ಅರಸು ರಂತಿದೇವನು ಅಗ್ನಿಹೋತ್ರದಲ್ಲಿ ಬಲಿ ನೀಡಿದ ಸಹಸ್ರಾರು ಪ್ರಾಣಿಗಳ ರಕ್ತ ಮತ್ತು ರಾಶಿ ಹಾಕಲಾಗಿದ್ದ ಚರ್ಮಗಳಿಂದ ಹರಿದ ದ್ರವಧಾರೆಯಿಂದ ಹುಟ್ಟಿದ ನದಿ. ಪಾಂಚಾಲ ರಾಜ್ಯದ ದಕ್ಷಿಣ ಸರಹದ್ದಾಗಿತ್ತು. ಶಕುನಿಯ ರಾಜ್ಯವಾಗಿದ್ದ ಸೀಮೆ. ಪಗಡೆಯಾಟ- ವಸ್ತ್ರಾಪಹರಣದ ನಂತರ ಕ್ರುದ್ಧ ದ್ರೌಪದಿ ಚರ್ಮಾನ್ವತಿಯನ್ನೂ ಅದರ ನೀರು ಕುಡಿದವರನ್ನೂ ಶಪಿಸುತ್ತಾಳೆ.

ಶಪಿತ ನದಿಯ ನೀರನ್ನು ಯಾರೂ ಮುಟ್ಟುವುದಿಲ್ಲ. ಹೀಗಾಗಿ ಈ ನದಿ ಮಲಿನವಾಗಲಿಲ್ಲ ಎಂಬ ಪ್ರತೀತಿಯಿದೆ. ಚಂಬಲ್ ಇಂದಿಗೂ ದೇಶದ ಅತ್ಯಂತ ಪರಿಶುದ್ಧ ನದಿಗಳಲ್ಲೊಂದು. ಚಂಬಲ್ ನೂರಾರು ವರ್ಷಗಳ ಕಾಲ ಕೊರೆದು ರಚಿಸಿರುವ ದುರ್ಗಮ ಕಣಿವೆಗಳು ಖ್ಯಾತ-ಕುಖ್ಯಾತ. ತಮ್ಮನ್ನು ಬಂಡಾಯಗಾರರು ಎಂದು ಕರೆದುಕೊಂಡ ಡಕಾಯಿತರು 20ನೆಯ ಶತಮಾನದಲ್ಲಿ ಈ ಕಣಿವೆಗಳಿಗೆ ಭೀತಿ- ನಿಗೂಢತೆಯನ್ನು ಲೇಪಿಸಿದರು. ಡಕಾಯಿತರ ಕುರಿತು ತಯಾರಿಸಿದ ಚಲನಚಿತ್ರಗಳು ಚಂಬಲ್ ಕಣಿವೆಯ ದಂತಕತೆಯನ್ನು ದೇಶದ ಮನೆಮನೆಗೆ ಮುಟ್ಟಿಸಿದವು. ಭೂಲಕ್ಷಣಗಳು ಮತ್ತು ಹಿಂಸೆಯ ಕುಖ್ಯಾತಿಯ ಕಾರಣ ಈ ಸೀಮೆಗೆ ಕೈಗಾರಿಕೆಗಳು ಕಾಲಿಡಲಿಲ್ಲ. ಚಂಬಲ್ ನದಿಯ ನೀರು ಇಂದಿಗೂ ಸ್ಫಟಿಕ ಶುದ್ಧವಾಗಿಯೇ ಉಳಿದಿದೆ.

ದಟ್ಟದಾರಿದ್ರ್ಯ, ಹೆಪ್ಪುಗಟ್ಟಿರುವ ಜಾತಿಪದ್ಧತಿಯ ಕ್ರೌರ್ಯ ಉತ್ತರಪ್ರದೇಶ-ಮಧ್ಯಪ್ರದೇಶ-ರಾಜಸ್ತಾನದ ಈ ಸಂಗಮ ಸೀಮೆಯ ಬಹುಜನರಾದ ದಲಿತರು ಹಿಂದುಳಿದವರು ಹಾಗೂ ಬುಡಕಟ್ಟು ಜನರನ್ನು ಇಂದಿಗೂ ತುಳಿದಿಟ್ಟಿದೆ. ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ ಸೀಮೆಗಳು ಸೇರಿ ಬುಂದೇಲಖಂಡ ಎಂದು ಎರಡು ರಾಜ್ಯಗಳ ಈ ಪ್ರದೇಶವನ್ನು ಕತ್ತಲ ಖಂಡ ಎನ್ನುವುದುಂಟು. ಅನಕ್ಷರತೆ, ಬಂಜರು, ಬಡತನ, ಬರಗಾಲ, ಬವಣೆಗಳೇ ಹಿಂಡಿರುವ ಖಂಡವಿದು. ಉಪ್ಪು-ರೊಟ್ಟಿ, ಹುಲ್ಲುಬೀಜಗಳನ್ನು ಬೀಸಿದ ಹಿಟ್ಟಿನ ರೊಟ್ಟಿಯನ್ನು ತಿಂದು ಜೀವ ಹಿಡಿದು ಸುದ್ದಿಯಾದವರು ಇಲ್ಲಿನ ಜನ. ಬೆಂಬಿಡದ ಬರಗಾಲ ಸಾವಿರಾರು ಸಣ್ಣ ಹಿಡುವಳಿದಾರರ ಪ್ರಾಣಬಲಿ ಪಡೆದ ಪ್ರದೇಶ. ಹಸಿದ ಮಕ್ಕಳ ಸಂಕಟ ನೋಡಲಾಗದೆ ರಕ್ತ ಮಾರಿ ಹೊಟ್ಟೆ ಹೊರೆದ ಪ್ರಕರಣಗಳು ಇಲ್ಲಿಂದ ವರದಿಯಾಗಿರುವುದು ಉಂಟು.

ಸಾಮಾಜಿಕ ಕಳಕಳಿಯ ಹೆಣ್ಣುಮಕ್ಕಳ ಗುಂಪೊಂದು ಇಂತಹ ಬುಂದೇಲಖಂಡದಲ್ಲಿ ಭಿನ್ನ ಬಗೆಯ ಗ್ರಾಮೀಣ ಪತ್ರಿಕೋದ್ಯಮವನ್ನು ನೆಲೆ ನಿಲ್ಲಿಸಿದೆ. ಎಂಟು ಪುಟಗಳ ಈ ವಾರಪತ್ರಿಕೆ ಹೆಸರು “ಖಬರ್ ಲೆಹರಿಯಾ” (ಸುದ್ದಿಯ ಅಲೆಗಳು). ನೂರಕ್ಕೆ ನೂರರಷ್ಟು ಹೆಣ್ಣುಮಕ್ಕಳೇ ಹೊರತರುವ ಏಕೈಕ ಗ್ರಾಮೀಣ ಪತ್ರಿಕೆಯಿದು. ಈ ಎಲ್ಲ ಹೆಣ್ಣುಮಕ್ಕಳೂ ತಳಸಮುದಾಯಗಳವರು. ವಿದ್ಯಮಾನಗಳನ್ನು ಹೆಣ್ಣುನೋಟದಿಂದ ಮತ್ತು ಜಾತ್ಯತೀತ ನೆಲೆಯಿಂದ ವರದಿ ಮಾಡುವುದು ಈ ಪತ್ರಿಕೆಯ ವಿಶೇಷ.

ಅವಧಿ, ಬುಂದೇಲಿ, ಭೋಜ್ಪುರಿ ಹಾಗೂ ಬಜ್ಜಿಕಾ ಎಂಬ ನಾಲ್ಕು ಪ್ರಾದೇಶಿಕ ನುಡಿಗಟ್ಟುಗಳಲ್ಲಿ ಹೊರಬರುವ ಈ ವಾರಪತ್ರಿಕೆಯು ದೇಶವಿದೇಶಗಳ ಮಾಧ್ಯಮಗಳ ಗಮನ ಸೆಳೆದಿದೆ. ಪತ್ರಕರ್ತೆಯರಿಗೆಂದು ಮೀಸಲಾದ ಪ್ರತಿಷ್ಠಿತ ಚಮೇಲಿ ದೇವಿ ಜೈನ್ ಪ್ರಶಸ್ತಿ, ಯುನೆಸ್ಕೋದ ಕಿಂಗ್ ಸೆಜೋಂಗ್ ಸಾಕ್ಷರತೆ ಬಹುಮಾನ, ಲಾಡ್ಲಿ ಮೀಡಿಯಾ ಪ್ರಶಸ್ತಿ, ಟೈಮ್ಸ್ ನೌ ಸುದ್ದಿವಾಹಿನಿಯ ಅಮೇಝಿಂಗ್ ಇಂಡಿಯನ್ ಪ್ರಶಸ್ತಿ, ಕೈಫಿ ಅಜ್ಮಿ ಪ್ರಶಸ್ತಿ, ಬೆಂಗಳೂರಿನ ಸ್ಫೂರ್ತಿಧಾಮ ಟ್ರಸ್ಟ್‌ನ ಬೋಧಿವೃಕ್ಷ ಪ್ರಶಸ್ತಿಗಳು ಈ ಸಾಹಸಕ್ಕೆ ಸಂದಿವೆ.

ಒಂದು ಕಾಲಕ್ಕೆ ಕಂಪ್ಯೂಟರನ್ನು ಮುಟ್ಟುವುದಿರಲಿ, ನೋಡುವುದೂ ದುಸ್ಸಾಧ್ಯವಿದ್ದ ಹಿನ್ನೆಲೆಯಿಂದ ಬಂದ ಬಡ ಯುವತಿಯರ ಆತ್ಮವಿಶ್ವಾಸ ಕುದುರಿದೆ. ಸಮಾಜ, ಸರ್ಕಾರ, ಸರೀಕ ಪತ್ರಕರ್ತರು ಗುರುತಿಸಿ ನಡೆಸಿಕೊಳ್ಳುವ ಪರಿ ಹೊಸ ಹುಮ್ಮಸ್ಸು ನೀಡಿದೆ. ಹೆಸರಿಗಂಟಿಕೊಂಡು ಬಂದ ತಳಸಮುದಾಯದ ಅಡ್ಡಹೆಸರುಗಳನ್ನು ಈ ಯುವತಿಯರು ಕಿತ್ತೆಸೆದಿದ್ದಾರೆ.

ದೊಡ್ಡ ಪತ್ರಿಕೆಗಳು ದೊಡ್ಡ ಪೇಟೆ ಪಟ್ಟಣಗಳ ಸುದ್ದಿ ಪ್ರಕಟಿಸುತ್ತವೆ. ಅವುಗಳ ಸಂಪಾದಕೀಯ ಸಿಬ್ಬಂದಿ ವಿಶ್ವವಿದ್ಯಾಲಯ ಶಿಕ್ಷಣ ಉಳ್ಳವರು, ಇಂಗ್ಲಿಷ್ ಬಲ್ಲವರು. ಬುಂದೇಲಖಂಡದ ಈ ಹಳ್ಳಿಗಾಡಿನ ಜನರ ಪಾಲಿಗೆ ಇಂಗ್ಲಿಷ್ ಮಾತ್ರವಲ್ಲ, ಹಿಂದಿ ಕೂಡ ಕುಲೀನ ಭಾಷೆ. ದಲಿತ ಮಹಿಳೆಯರು ದುಪ್ಪಟ್ಟು ಶೋಷಣೆ ಎದುರಿಸಿದವರು. ಬೇರುಮಟ್ಟದ ಸ್ಥಳೀಯ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲವರು ಎಂಬುದು ’ಲೆಹರಿಯಾ’ ಹಿಂದಿನ ಆಲೋಚನೆ.

ಕ್ಷೇತ್ರಕ್ಕೆ ತೆರಳಿ ಸುದ್ದಿ ಸಂಗ್ರಹಿಸುವವರು, ಬರೆಯುವವರು, ಪರಿಷ್ಕರಿಸಿ ತಲೆಬರೆಹ ನೀಡುವವರು, ಪತ್ರಿಕೆಯ ವಿನ್ಯಾಸ ಮಾಡುವವರು, ಮುದ್ರಣ ಮಾಡಿಸಿ ತರುವವರು, ಹಳ್ಳಿಗಳಿಗೆ ಹಂಚುವವರು ಎಲ್ಲರೂ ಹೆಣ್ಣುಮಕ್ಕಳೇ. ಒಂಟಿಯಾಗಿ ಹಳ್ಳಿ ಹಳ್ಳಿ ಸುತ್ತಿ ಸುದ್ದಿ ಹೆಕ್ಕುತ್ತಾರೆ. ನಕಾಶೆಯಲ್ಲೇ ಇಲ್ಲದ, ನೀರು ದೀಪಗಳಿರದ, ಅಂಚೆಯೂ ತಲುಪದ ಕೊಂಪೆಗಳನ್ನೂ ಬಿಟ್ಟಿಲ್ಲ ಇವರು. ದೊಡ್ಡ ಪತ್ರಿಕೆಗಳ ವರದಿಗಾರರು ಅನುಭವಿಸುವ ಸೌಲಭ್ಯಗಳು ಇವರಿಗಿಲ್ಲ. ಹಸಿವಾದರೆ ಮನೆಯಿಂದ ಒಯ್ದ ಬುತ್ತಿಯೇ ಗತಿ. ಬಸ್ಸು, ಸೈಕಲ್ಲು, ಕಿಲೋಮೀಟರುಗಟ್ಟಲೆ ಕಾಲ್ನಡಿಗೆ ಮಾಮೂಲು. ಪುಂಡು ಪೋಕರಿಗಳನ್ನೂ ಪುರುಷಪ್ರಾಧಾನ್ಯ ವ್ಯವಸ್ಥೆಯ ಕಿರುಕುಳಗಳನ್ನೂ ನಿತ್ಯ ನುಂಗಿ ನಡೆಯುತ್ತಾರೆ.

ಬುಂದೇಲ್ ಖಂಡದ ಚಿತ್ರಕೂಟ, ಫೈಝಾಬಾದ್, ಝಾನ್ಸಿ, ಲಲಿತಪುರ್, ಅಂಬೇಡ್ಕರ್ ನಗರ್, ಬಾಂದಾ ಜಿಲ್ಲೆಗಳಲ್ಲಿ ಲೆಹರಿಯಾ ಹೆಜ್ಜೆ ಗುರುತುಗಳು ಪಡಿಮೂಡಿವೆ. ಆರುನೂರು ಕುಗ್ರಾಮಗಳ ಬದುಕಿನ ಹಾಸು ಹೊಕ್ಕಾಗಿದೆ ಖಬರ್ ಲೆಹರಿಯಾ. ಈ ಪೈಕಿ ಬಹುತೇಕ ಹಳ್ಳಿಗಳು ಮುಖ್ಯವಾಹಿನಿಯ ಸುದ್ದಿಪತ್ರಿಕೆಗಳನ್ನು ಕಂಡಿಲ್ಲ. ಹಳ್ಳಿ ಹಳ್ಳಿಗಳ ಕುಡಿವ ನೀರು, ರಸ್ತೆ, ಶಾಲೆ, ಆಸ್ಪತ್ರೆ, ಮನರೇಗ ಯೋಜನೆಯಲ್ಲಿ ಕೂಲಿ ನಿರಾಕರಿಸಿ ಬಡಪಾಯಿಗಳ ವಂಚಿಸುವ ಪಂಚಾಯತಿ ಪ್ರಧಾನ, ರೇಷನ್ ಕಾರ್ಡ್ ಸಮಸ್ಯೆ, ಕಳವು, ಕೊಲೆ, ದಬ್ಬಾಳಿಕೆ, ಅಧಿಕಾರಿಗಳ ನಿರ್ಲಕ್ಷ್ಯದ ವ್ಯಥೆಯ ಕತೆಗಳ ಕುರಿತು ದೊಡ್ಡ ಪತ್ರಿಕೆಗಳಿಗೆ ರುಚಿಯಿಲ್ಲ.

ಡಿಜಿಟಲ್ ದಾರಿ ಹಿಡಿದ ನಂತರ ಪತ್ರಿಕೆಯನ್ನು ಓದುವ ಹೆಣ್ಣುಮಕ್ಕಳ ಪ್ರಮಾಣ ಭಾರೀ ಜಿಗಿತ ಕಂಡಿದೆ. ಸ್ಮಾರ್ಟ್ ಫೋನ್ ಮತ್ತು ಸೆಲ್ಫಿ ಸ್ಟಿಕ್ ಬಳಸಿ ಫೋಟೋ-ವಿಡಿಯೋ ತೆಗೆದು ವರದಿ ಸಂದರ್ಶನಗಳನ್ನು ವಾಟ್ಸಾಪ್‌ನಲ್ಲಿ ಕಚೇರಿಗೆ ರವಾನಿಸುತ್ತಿದ್ದಾರೆ ವರದಿಗಾರ್ತಿಯರು. ಪತ್ರಿಕೆಯಲ್ಲಿ ಅಚ್ಚಾಗುವ ವರದಿಗಳು ದೃಶ್ಯರೂಪದಲ್ಲಿ ಸಾಮಾಜಿಕ ಅಂತರ್ಜಾಲ ತಾಣಗಳ ಮೂಲಕ ಲಕ್ಷಾಂತರ ಮಂದಿಯನ್ನು ತಲುಪುತ್ತಿವೆ.

ಪತ್ರಿಕೆಯ ಡಿಜಿಟಲ್ ವ್ಯವಹಾರಗಳನ್ನು ಮುದ್ರಣದಿಂದ ಪ್ರತ್ಯೇಕಿಸಿ ಚಂಬಲ್ ಮೀಡಿಯಾ ಎಂಬ ಹೊಸ ಕಂಪನಿಯ ಕೈಗೆ ಒಪ್ಪಿಸಲಾಗಿದೆ. ಗ್ರಾಮೀಣ ಡಿಜಿಟಲ್ ಮಾಧ್ಯಮದ ಹೂರಣವನ್ನು ರೂಪಿಸಿ ಪ್ರಸ್ತುತಪಡಿಸುವುದು ಈ ಕಂಪನಿಯ ಕಾರ್ಯಸೂಚಿ. ಗ್ರಾಮೀಣ ಪ್ರದೇಶಗಳಲ್ಲೂ ಈಗ ಅಂತರ್ಜಾಲ ಸೌಲಭ್ಯ ಧಾರಾಳ. ಆದರೆ ಆ ಜನರಿಗೆ ಗುಣಮಟ್ಟದ ಸ್ವತಂತ್ರ ಪ್ರಗತಿಪರ ಡಿಜಿಟಲ್ ಮೀಡಿಯಾ ಲಭ್ಯವಿಲ್ಲ. ಅವರ ಸುದ್ದಿಯನ್ನು ಅವರದೇ ಭಾಷೆಯಲ್ಲಿ ಹೇಳುವ ಮತ್ತೊಂದು ಪ್ರಯತ್ನ ಈವರೆಗೆ ಆಗಿಲ್ಲ, ಸನಿಹ ಭವಿಷ್ಯದಲ್ಲಿ ನಡೆಯುವುದೂ ಇಲ್ಲ. ದಲಿತ, ಆದಿವಾಸಿ ಹಾಗೂ ಮುಸ್ಲಿಮ್ ಹೆಣ್ಣುಮಕ್ಕಳೇ ಚಂಬಲ್ ಮೀಡಿಯಾದಲ್ಲೂ ಸಕ್ರಿಯರಾಗಿರುತ್ತಾರೆ. ಮುಂಬರುವ ಮೂರು ವರ್ಷಗಳಲ್ಲಿ ಹಿಂದೀ ರಾಜ್ಯಗಳ ಎಂಬತ್ತು ಜಿಲ್ಲೆಗಳಲ್ಲಿ ನೆಲೆಯೂರುವ ಗುರಿಯನ್ನು ಇರಿಸಿಕೊಳ್ಳಲಾಗಿದೆ.

ಚಂಬಲ್ ಹೆಣ್ಣುಮಕ್ಕಳ ಈ ವಿರಳ ಪ್ರಯೋಗ ದೇಶದ ಇತರೆ ಸೀಮೆಗಳಲ್ಲೂ ಕುಡಿಯೊಡೆದು ಹಬ್ಬಬೇಕಿದೆ.


ಇದನ್ನೂ ಓದಿ:

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...