ಬುಧವಾರ ರಾತ್ರಿ ಧರ್ಮಪುರಿಯಲ್ಲಿ ನಡೆದ ಜಾತಿ ಆಧಾರಿತ ದಾಳಿಯಲ್ಲಿ 16 ವರ್ಷದ ದಲಿತ ಬಾಲಕನ ಮೇಲೆ ಗುಂಪೊಂದು ಕಬ್ಬಿಣದ ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಥಳಿಸಿದೆ.
ಧರ್ಮಪುರಿಯ ತೆಂಕರೈಕೊಟ್ಟೈ ಗ್ರಾಮದ ಸಂತ್ರಸ್ತ ಬಾಲಕ ಶಾಲೆ ಬಿಟ್ಟ ನಂತರ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ಗೋಪಾಲಪುರಂನಲ್ಲಿರುವ ಆರ್ ಸೆಲ್ವಂ (38) ಅವರ ಒಡೆತನದ ಪೆಟ್ರೋಲ್ ಬಂಕ್‌ನಲ್ಲಿ ಕೆಲವು ದಿನಗಳ ಕಾಲ ಕೆಲಸ ಮಾಡಿದ್ದೇನೆ ಎಂದು ಬಾಲಕ ಹೇಳಿಕೊಂಡಿದ್ದಾನೆ. ಎರಡು ತಿಂಗಳ ಹಿಂದೆ, ಆರು ದಿನಗಳ ಕಾಲ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಸೆಲ್ವಂ ತನಗೆ ಊಟ ಖರೀದಿಸಿ ತರಲಿಲ್ಲ ಎಂದು ಥಳಿಸಿದ್ದಾರೆ ಎಂದು ಆತ ಆರೋಪಿಸಿದ್ದಾನೆ.
ಬುಧವಾರ ರಾತ್ರಿ 9.30 ರ ಸುಮಾರಿಗೆ, ಬಾಲಕ ತನ್ನ 20 ವರ್ಷದ ಸ್ನೇಹಿತನೊಂದಿಗೆ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ತುಂಬಿಸಲು ಬಂಕ್‌ಗೆ ಭೇಟಿ ನೀಡಿದ್ದ. ಪೆಟ್ರೋಲ್ ಪಡೆದ ನಂತರ, ಬಾಲಕ ಟೈರ್‌ನಲ್ಲಿ ಗಾಳಿ ತುಂಬಲು ಪ್ರಯತ್ನಿಸಿದನು. ಆದರೆ, ಬಂಕ್ ಸಿಬ್ಬಂದಿ ಯಾವುದೋ ಕಾರಣ ನೀಡಿ ಗಾಳಿ ತುಂಬಿಸಲು ನಿರಾಕರಿಸಿದರು.
ಹುಡುಗ ತನ್ನ ಚಿಕ್ಕಪ್ಪನ ಬಗ್ಗೆ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನ್ನು ಬಂಕ್ ಸಿಬ್ಬಂದಿಯೊಟ್ಟಿಗೆ ಪ್ರಶ್ನಿಸಿದನು. ಇದರಿಂದ ಕೋಪಗೊಂಡ ಸೆಲ್ವಂ ಮತ್ತು ಇತರ ನಾಲ್ವರು ಸಿಬ್ಬಂದಿ ತಕ್ಷಣ ಇಬ್ಬರನ್ನೂ ಜಾತಿ ನಿಂದನೆ ಮಾಡಿ ನಿಂದಿಸಿದರು.
“ಅವರು ಪದೇ ಪದೇ ಕಟ್ಟಿಗೆಯಿಂದ ಹೊಡೆದರು. ಮತ್ತೆ ನನ್ನನ್ನು ಎಳೆದುಕೊಂಡು ಹೋಗಿ ಕಬ್ಬಿಣದ ಕಂಬಕ್ಕೆ ಕಟ್ಟಿ ಬಿದಿರು ಮತ್ತು ಬೆಲ್ಟ್‌ನಿಂದ ತೀವ್ರವಾಗಿ ಹೊಡೆದರು. ನನ್ನ ಕೈಗಳು, ಕಾಲುಗಳು ಮತ್ತು ತಲೆಗೆ ತೀವ್ರ ಗಾಯಗಳಾಗಿವೆ” ಎಂದು ಹುಡುಗ ತನ್ನ ದೂರಿನಲ್ಲಿ ಹೇಳಿದ್ದಾನೆ.
ಅವನ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ನೋಡಿದ ಮತ್ತೊಬ್ಬ ಯುವಕ ಸ್ಥಳದಿಂದ ತಪ್ಪಿಸಿಕೊಂಡು ತನ್ನ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾನೆ. ನಂತರ ಅವರು ಬಂದು ಬಾಲಕನನ್ನು ಚಿಕಿತ್ಸೆಗಾಗಿ ಹರೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ದೂರಿನ ಆಧಾರದ ಮೇಲೆ, ಹರೂರು ಪೊಲೀಸರು ಐದು ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಗುರುವಾರ ಪೊಲೀಸರು ಬಂಕ್ ಮಾಲೀಕ ಆರ್ ಸೆಂಥಿಲ್ (43) ಮತ್ತು ವಿ ಸೆಲ್ವರಾಜ್ (32) ಅವರನ್ನು ಬಂಧಿಸಿದ್ದಾರೆ, ಟಿ ಸೆಂಥಿಲ್ (45) ಮತ್ತು ವಿ ರಾಮಕೃಷ್ಣನ್ (66) ಅವರನ್ನು ಬಂಧಿಸಲು ಹುಡುಕಾಟ ನಡೆಯುತ್ತಿದೆ. ಅವರೆಲ್ಲರೂ ವನ್ನಿಯಾರ್ ಸಮುದಾಯದವರು; ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಉತ್ತರ ಪ್ರದೇಶ| 16 ವರ್ಷದ ದಲಿತ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ


