ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ವಜ್ರಬಂಡಿ ಗ್ರಾಮದಲ್ಲಿ ದಲಿತ ಕೇರಿದ ನುಗ್ಗಿದ ಸವರ್ಣಿಯರು ಪೊಲೀಸರ ಎದುರೇ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ ದಲಿತರು ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.
ಜುಲೈ 27ರ ಸಂಜೆ ಏಕಾಏಕಿ ಸವರ್ಣಿಯರು ದಲಿತರ ಕೇರಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಆದರೆ ಪೊಲೀಸರಿಗೆ ವಿಷಯ ಗೊತ್ತಿದ್ದರೂ ನಮ್ಮ ಕೇರಿಗೆ ಬಂದು ನಮ್ಮನ್ನು ರಕ್ಷಿಸಿಲ್ಲ. ಪೊಲೀಸರೇ ಮುಂದೆ ನಮಗೆ ಬಡಿಸಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.
ಪೊಲೀಸರ ಎದುರೇ ದಲಿತರ ಮೇಲೆ ಹಲ್ಲೆ ಆರೋಪ: ಹೊಲದಲ್ಲಿ ಅಡಗಿ ಕುಳಿತ ದಲಿತರು..ಪೊಲೀಸರೆ ಮುಂದೆ ನಿಂತು ಬಡಿಸಿದ್ದಾರೆ ಎಂದು ದೂರಿದ ದಲಿತರು..ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ವಜ್ರಬಂಡಿ ಗ್ರಾಮದಲ್ಲಿ ನಡೆದ ಘಟನೆ..
Posted by Naanu Gauri on Tuesday, July 28, 2020
ಮಹಿಳೆಯರು, ಮಕ್ಕಳು, ವೃದ್ದರು ಎನ್ನದೇ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಪ್ರಾಣ ರಕ್ಷಿಸಿಕೊಳ್ಳಲು ಹೊಲದಲ್ಲಿ ಅಡಗಿ ಕುಳಿತಿದ್ದೇವೆ. ಈಗಲೂ ಪೊಲೀಸರು ಆರೋಪಿಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರತಿಭಟನೆ ನಡೆಸಿದ್ದಾರೆ.
ಯಾವ ಪೊಲೀಸರು ನಮ್ಮ ರಕ್ಷಣೆಗೆ ಬರಲಿಲ್ಲ ಎಂದ ಮೇಲೆ ಪೊಲೀಸರು ಏಕಿರಬೇಕು? ಪೊಲೀಸರೆ ಕುಮ್ಮಕ್ಕು ನೀಡಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ಹಲ್ಲೆಗೊಳಗಾದ 20ಕ್ಕು ಹೆಚ್ಚು ದಲಿತರನ್ನು ಯಲಬುರ್ಗಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಬೈಕ್ ಮುಟ್ಟಿದ್ದಕ್ಕೆ ದಲಿತ ಯುವಕನನ್ನು ಅರೆಬೆತ್ತಲುಗೊಳಿಸಿ ಹಲ್ಲೆ: 13ಕ್ಕು ಹೆಚ್ಚು ಜನರ ವಿರುದ್ಧ FIR, ಬಂಧನಕ್ಕೆ ಒತ್ತಾಯ


