ಯಾದಗಿರಿ ಜಿಲ್ಲೆಯ ಕೆಂಬಾವಿಯಲ್ಲಿ ಆರೆಸ್ಸೆಸ್ ನವೆಂಬರ್ 4ರಂದು ಪಥಸಂಚಲನ ನಡೆಸಲು ಉದ್ದೇಶಿಸಿ ತಾಲೂಕು ಆಡಳಿತಕ್ಕೆ ಅನುಮತಿಗಾಗಿ ಅರ್ಜಿ ಸಲ್ಲಿಸಲಾಗಿತ್ತು. ಇದರ ಬೆನ್ನಲ್ಲೇ ದಲಿತ ಸಂಘರ್ಷ ಸಮಿತಿಯೂ ಅಂದೇ ತಮಗೂ ಅರ್ಜಿ ಅವಕಾಸ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿತ್ತು. ಇದರ ಬೆನ್ನಲ್ಲೇ ತಾಲೂಕು ಆಡಳಿತ ಶಾಂತಿ ಸಂದಾನ ಸಭೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡಿತ್ತಾದರೂ ಯಶಸ್ವಿಯಾಗಲಿಲ್ಲ.
ಆರೆಸ್ಸೆಸ್ ಪಥಸಂಚಲನಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ದಲಿತ ಸಂಘರ್ಷ ಸಮಿತಿಯು ಆರೆಸ್ಸೆಸ್ ನೋದಣಿಯಾಗದ ಸಂಸ್ಥೆ ಹಾಗೂ ದಂಡ ಹಿಡಿದು ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತದೆ. ಹಾಗಾಗಿ ಆರೆಸ್ಸೆಸ್ ಗೆ ದಂಡ ಹಿಡಿದು ಪಥಸಂಚಲನಕ್ಕೆ ಅವಕಾಶ ಕೊಡಬಾರದು, ಕೊಟ್ಟರೆ ನಮಗೂ ಸಂವಿಧಾನ ಪೀಠಿಕೆ ಹಿಡಿದು ಜಾಥಾ ಮಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿವೆ.
ಆದರೆ ಆರೆಸ್ಸೆಸ್‌ನ ಗಣವೇಶದಲ್ಲಿ ದಂಡವೂ ಬಹಳಮುಖ್ಯವಾದ್ದರಿಂದ ಅದನ್ನು ಬಿಟ್ಟು ಪಥಸಂಚಲನ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿವೆ. ಈ ಕಾರಣದಿಂದಾಗಿ ಶಾಂತಿ ಸಭೆ ವಿಫಲವಾಗಿ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ.
ರಾಜ್ಯದ ಹಲವು ಕಡೆಗಳಲ್ಲಿ ದಲಿತರು ಆರೆಸ್ಸೆಸ್ ನ ದ್ವೇಷರಾಜಕಾರಣವನ್ನು ವಿರೋಧಿಸಿ, ಸನಾತನವಾದದ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಿರುವ ಸಂಘಟನೆ ಆರೆಸ್ಸೆಸ್ ಆಗಿದೆ. ಈ ಕಾರಣದಿಂದ ದಲಿತ ಸಂಘಟನೆಗಳು ಆರೆಸ್ಸೆಸ್ ಗೆ ರಾಜ್ಯದೆಲ್ಲೆಡೆ ಸವಾಲಾಗಿ ಪರಿಣಮಿಸುತ್ತಿದೆ.


