ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು (IIMB) ಇಲ್ಲಿನ ನಿರ್ದೇಶಕರು, ಡೀನ್ ಮತ್ತು ಇತರ ಆರು ಅಧ್ಯಾಪಕರು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಎಂದು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಖಚಿತಪಡಿಸಿದ್ದು, ಅವರ ವಿರುದ್ಧ ಜಾತಿ ಆಧಾರಿತ ತಾರತಮ್ಯ ಮತ್ತು ಕಿರುಕುಳದ ಗಂಭೀರ ಆರೋಪಗಳನ್ನು ಮಾಡಿದೆ. IIMBಯಲ್ಲಿ
ನವೆಂಬರ್ 26 ರಂದು ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಸಲ್ಲಿಸಿದ ವರದಿಯ ನಂತರ ಇದು ಬಹಿರಂಗವಾಗಿದ್ದು, ನಿರ್ದೇಶಕ ಡಾ. ರಿಷಿಕೇಶ ಟಿ. ಕೃಷ್ಣನ್ ಮತ್ತು ಡೀನ್ ಡಾ. ದಿನೇಶ್ ಕುಮಾರ್ ಸೇರಿದಂತೆ ಐಐಎಂಬಿಯ ಪ್ರಮುಖರಿಂದ ಜಾತಿ ದೌರ್ಜನ್ಯಗಳು ನಡೆದಿವೆ ಎಂದು ಇದು ದೃಢಪಡಿಸಿದೆ.
ಡಿಸೆಂಬರ್ 9 ರಂದು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿತ್ತು. ಆದರೆ, ಇನ್ನೂ ಯಾವುದೆ ಪ್ರಕರಣ ದಾಖಲಾಗಿಲ್ಲ ಎಂದು ದಿನ್ಯೂಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
2018 ರಲ್ಲಿ ಐಐಎಂಬಿಗೆ ಸೇರ್ಪಡೆಗೊಂಡ ಮಾರ್ಕೆಟಿಂಗ್‌ನ ಸಹ ಪ್ರಾಧ್ಯಾಪಕ ಗೋಪಾಲ್ ದಾಸ್ ಅವರ ದೂರಿನ ನಂತರ ತನಿಖೆ ಪ್ರಾರಂಭಿಸಲಾಗಿತ್ತು. ಗೋಪಾಲ್ ದಾಸ್ ಅವರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದರೂ, ಅವರು ಅರ್ಹತೆಯ ಆಧಾರದ ಮೇಲೆ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು ಎಂದು ಹೇಳಲಾಗುತ್ತದೆ.
ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಿಂದ ಸತತ ಐದು ವರ್ಷಗಳ ಕಾಲ ವಿಶ್ವದಾದ್ಯಂತ ಅಗ್ರ 2% ಪ್ರಾಧ್ಯಾಪಕರಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟ ಗೋಪಾಲ್ ದಾಸ್ ಅವರು, ಸಂಸ್ಥೆಯೊಳಗಿನ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಬಗ್ಗೆ ಧ್ವನಿ ಎತ್ತಿದ್ದಾರೆ.
ಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (ಡಿಸಿಆರ್‌ಇ)ದ ವರದಿಯ ಪ್ರಕಾರ, ರಿಷಿಕೇಶ ಕೃಷ್ಣನ್ ಮತ್ತು ದಿನೇಶ್ ಕುಮಾರ್ ಅವರು ಸಾಮೂಹಿಕ ಇಮೇಲ್‌ಗಳ ಮೂಲಕ ಗೋಪಾಲ್ ದಾಸ್‌ನ ಜಾತಿಯ ಗುರುತನ್ನು ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿದೆ. ಇದು ಗೋಪಾಲ್ ದಾಸ್ ಅವರ ವಿರುದ್ಧ ತಾರತಮ್ಯ ಮತ್ತು ಪ್ರತಿಕೂಲವಾದ ಕೆಲಸದ ವಾತಾವರಣವನ್ನು ಸೃಷ್ಟಿಸಲು ಕಾರಣವಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಇಷ್ಟೆ ಅಲ್ಲದೆ, SC/ST ಸದಸ್ಯರಿಗೆ ದೂರು ಪರಿಹಾರ ಕಾರ್ಯವಿಧಾನವನ್ನು ಕಡ್ಡಾಯವಾಗಿ ಸ್ಥಾಪಿಸಬೇಕು ಎಂದು ಕಾನೂನು ಇದ್ದರೂ, ಐಐಎಂಬಿ ಇದನ್ನು ಸ್ಥಾಪಿಸಲು ವಿಫಲವಾಗಿದೆ ಎಂದು ಡಿಸಿಆರ್‌ಇ ತನ್ನ ವರದಿಯಲ್ಲಿ ಹೇಳಿದೆ. IIMBಯಲ್ಲಿ
ಇದನ್ನೂ ಓದಿ: ಮಧ್ಯಪ್ರದೇಶ ಟೇಕ್ ಹೋಮ್ ಪಡಿತರ ಯೋಜನೆ: 2018-21ರಿಂದ ₹428 ಕೋಟಿ ಅಕ್ರಮ
ಮಧ್ಯಪ್ರದೇಶ ಟೇಕ್ ಹೋಮ್ ಪಡಿತರ ಯೋಜನೆ: 2018-21ರಿಂದ ₹428 ಕೋಟಿ ಅಕ್ರಮ


