Homeಮುಖಪುಟ‘ಹಿಂದೂ ರಾಷ್ಟ್ರದಲ್ಲಿ ದಲಿತ-ಶೂದ್ರರಿಗೆ ಮತದಾನದ ಹಕ್ಕಿರುತ್ತದೆಯೇ?’

‘ಹಿಂದೂ ರಾಷ್ಟ್ರದಲ್ಲಿ ದಲಿತ-ಶೂದ್ರರಿಗೆ ಮತದಾನದ ಹಕ್ಕಿರುತ್ತದೆಯೇ?’

ಮೀಸಲಾತಿಯ ಕುರಿತು ದಲಿತ ಸಮುದಾಯದ ಕುರಿತು ಭಾರತದ ಮೇಲ್ಜಾತಿಗಳಿಗೆ ಇರುವ ಅಸಹನೆಯ ಕುರಿತು ಯಾವುದೇ ಪುರಾವೆ ಒದಗಿಸುವ ಅಗತ್ಯವಿಲ್ಲ.

- Advertisement -
- Advertisement -

ಲೇಖನದ ಶೀರ್ಷಿಕೆಯು ಹಿಂದೂ ರಾಷ್ಟ್ರ ಎಂಬುದೊಂದು ಅಸ್ತಿತ್ವಕ್ಕೆ ಬರಲಿದೆ ಎಂಬ ಸಾಧ್ಯತೆಯನ್ನು ಧ್ವನಿಸುತ್ತದೆ. ಇಂದು ಅಂತಹ ಸಾಧ್ಯತೆಯನ್ನು ಖಡಾಖಂಡಿತವಾಗಿ ಯಾರಾದರೂ ಅಲ್ಲಗಳೆದರೆ ಅಂತಹವರನ್ನು ಒಂದು ಮಾತು ಕೇಳಬೇಕಾಗುತ್ತದೆ. ಈ ದೇಶದಲ್ಲಿ ಮುಸ್ಲಿಮರಾಗಿರುವ ಏಕೈಕ ಕಾರಣಕ್ಕೆ ವ್ಯಕ್ತಿಗಳನ್ನು, ಕೆಲವೊಮ್ಮೆ ಅಪರಿಚಿತರನ್ನೂ ಕೊಲ್ಲಬಹುದು ಎಂದು ನೀವು ಊಹಿಸಿದ್ದೀರಾ? ದೇಶದ ಪ್ರಧಾನಮಂತ್ರಿಯು ಧರ್ಮವನ್ನು ಎಳೆದುತಂದು ಕೆಲವರ ಪರ ಅಥವಾ ವಿರುದ್ಧ ನೇರವಾಗಿ ಮಾತಾಡಬಹುದು ಎಂದು ಭಾವಿಸಿದ್ದೀರಾ? ಭಾರತ ದೇಶದ ಪೌರತ್ವವನ್ನು ಧರ್ಮಾಧಾರಿತವಾಗಿ ನಿರ್ಧರಿಸುವ ಕಾನೂನೊಂದು ಬರುತ್ತದೆ ಎಂದು ನಿರೀಕ್ಷಿಸಿದ್ದಿರಾ? ಭಾರತದ ಪ್ರಧಾನಿಯು ಪತ್ರಕರ್ತೆಯೊಬ್ಬರ ಕೊಲೆಯನ್ನು ಸಂಭ್ರಮಿಸುವ ವ್ಯಕ್ತಿಗಳನ್ನು ಟ್ವಿಟ್ಟರ್‌ನಲ್ಲಿ ಫಾಲೋ ಮಾಡುತ್ತಾರಷ್ಟೇ ಅಲ್ಲದೇ, ಅದನ್ನು ಬಯಲಿಗೆ ತಂದರೂ ಅದನ್ನು ಬದಲಿಸದೇ ಸೂಚನೆಯೊಂದನ್ನು ನೀಡಬಹುದು ಎಂದುಕೊಂಡಿದ್ದಿರಾ?

ಪ್ರಶ್ನೆಗಳ ಪಟ್ಟಿ ಇನ್ನೂ ದೀರ್ಘವಿದೆ ಎಂಬುದು ನಿಮಗೆ ಗೊತ್ತು. ಹಾಗಾಗಿ ಹಿಂದೂ ರಾಷ್ಟ್ರವೆಂಬುದೊಂದು ಬರುವುದೇ ಇಲ್ಲ ಎಂದು ಅಂದುಕೊಳ್ಳಲಾಗದು. ಪ್ರಧಾನಿ ಹಾಗೂ ಆಳುವ ಪಕ್ಷವು ಸದಾ ಪೂಜಿಸುವ ಭಾರತ ಮಾತೆಯ ಫೋಟೋದಲ್ಲಿ ರಾಷ್ಟ್ರಧ್ವಜ ಇರುವುದಿಲ್ಲ; ಕೇಸರಿ ಧ್ವಜ ಮಾತ್ರ ಇರುತ್ತದೆ ಎಂಬುದನ್ನು ಗಮನಿಸಿ. ಈ ಪರಿವಾರವು ಬಳಸುವ ಸಂಕೇತಗಳು, ದೀರ್ಘಕಾಲದಿಂದ ಮುಂದಿಡುತ್ತಾ ಬಂದಿರುವ ಯೋಜನೆಗಳು, ಡಿಮ್ಯಾಂಡ್‍ಗಳು ಒಂದೊಂದೇ ನಿಜವಾಗುತ್ತಿರುವುದನ್ನೂ ಗಮನಿಸಿ. ಮುಂದಿನ ಎರಡು ವರ್ಷಗಳಲ್ಲಿ ಗೋಡ್ಸೆಯನ್ನು ಬಹಿರಂಗವಾಗಿ ಆರಾಧಿಸುವ (ಆ ಚಿಂತನೆಯು ಸಾಕಷ್ಟು ಕಾಲದಿಂದ ಸಾಕಷ್ಟು ವ್ಯಾಪಕವಾಗಿಯೇ ಚಾಲನೆಯಲ್ಲಿದೆ ಎಂಬುದು ತಿಳಿದಿಲ್ಲವಾದರೆ, ಆರೆಸ್ಸೆಸ್‍ನ ಯಾವುದೇ ಸ್ವಯಂಸೇವಕನನ್ನು ಖಾಸಗಿಯಾಗಿ ಮಾತನಾಡಿಸಿ) ಕಾರ್ಯಕ್ರಮಗಳು ನಡೆಯಲು ಎಲ್ಲಾ ತಯಾರಿಗಳು ನಡೆದಿಲ್ಲವೇ?

ಪ್ರಗ್ಯಾ ಠಾಕೂರ್ ಎಂಬ ಸಂಸದೆ ಈಗಾಗಲೇ ಗೋಡ್ಸೆ ಒಬ್ಬ ದೇಶಭಕ್ತ ಎಂದು ದೇಶದ ಸಂಸತ್ತಿನಲ್ಲೇ ಹೇಳಿಯಾಗಿದೆ. ಅಂತಹ ಹಲವು ಹೇಳಿಕೆಗಳ ನಂತರ ಬಿಜೆಪಿ ಪಕ್ಷವು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲವೆಂಬುದು ಸ್ಪಷ್ಟ ಸೂಚನೆಯನ್ನು ನೀಡುತ್ತಿದೆ. ಅಂದರೆ ಹಿಂದೂ ರಾಷ್ಟ್ರದ ಕಲ್ಪನೆ ಏನಿತ್ತೋ, ಅದು ಸಾಕಾರವಾಗುವ ದಿಕ್ಕಿನಲ್ಲಿ ದೇಶ ನಡೆದಿದೆ. ಗಾಂಧಿ ಕೊಲೆಯನ್ನು ಆರೆಸ್ಸೆಸ್ಸಿನವರೇ ಮಾಡಿದ್ದು ಮತ್ತು ಅದನ್ನು ಅವರು ಸಂಭ್ರಮಿಸಿದರು ಎಂಬುದಕ್ಕೆ ದಾಖಲೆಗಳಿವೆ. ಗಾಂಧಿ ದ್ವೇಷ ಮಾತ್ರವಲ್ಲದೇ ಅಂಬೇಡ್ಕರ್‍ಗೆ ವಿರೋಧ, ಮಂಡಲ್ ವರದಿಗೆ ವಿರೋಧ ಇತ್ಯಾದಿಗಳು ಬಹಿರಂಗವಾಗಿ ವ್ಯಕ್ತವಾಗಿವೆ. ಮೀಸಲಾತಿಯ ಕುರಿತು ದಲಿತ ಸಮುದಾಯದ ಕುರಿತು ಭಾರತದ ಮೇಲ್ಜಾತಿಗಳಿಗೆ ಇರುವ ಅಸಹನೆಯ ಕುರಿತು ಯಾವುದೇ ಪುರಾವೆ ಒದಗಿಸುವ ಅಗತ್ಯವಿಲ್ಲ.

ಅದೇ ರೀತಿ ಬಡವರು, ಅನಕ್ಷರಸ್ಥರು, ‘ಕೀಳು’ ಜಾತಿಯವರು (ಕೀಳು ಜಾತಿ ಎಂಬ ಪದ ಇಂದಿಗೂ ಬಳಕೆಯಲ್ಲಿದೆ ಎಂಬುದನ್ನು ಮರೆಯಲಾಗುತ್ತದೆಯೇ?) ಚುನಾವಣೆಯಲ್ಲಿ ಸರಿಯಾದ ಆಯ್ಕೆ ಮಾಡುವುದಿಲ್ಲ; ಸ್ಲಂ ಜನರಂತಹವರು ಸೇರಿಕೊಂಡು ದೇಶ ಹಾಳು ಮಾಡುತ್ತಿದ್ದಾರೆ ಎಂಬ ಭಾವವೂ ‘ಕುಲೀನ’ರಲ್ಲಿ ಗಾಢವಾಗಿಯೇ ಇದೆ. ವಿದ್ಯಾವಂತರಲ್ಲದವರಿಗೆ ಮತದಾನದ ಹಕ್ಕು ಇರಬಾರದು ಎಂದು ಪ್ರತಿಪಾದಿಸುವವರೂ ಇದ್ದಾರೆ.

ಪೌರತ್ವವೆಂಬುದು ಹಕ್ಕುಗಳನ್ನು ಪಡೆಯಲು ಇರುವ ಹಕ್ಕಾಗಿದೆ. ಇಂದು ದಾಖಲಾತಿಗಳ ಆಧಾರದ ಮೇಲೆ ಪೌರತ್ವವನ್ನು ನಿರ್ಧರಿಸುವ ಪ್ರಕ್ರಿಯೆಯೊಂದು ದೇಶದಲ್ಲಿ ಚಾಲ್ತಿಗೆ ಬಂದಿದೆ. ಅಂತಹ ಹಕ್ಕುಗಳಲ್ಲಿ ಒಂದು ಮತದಾನದ ಹಕ್ಕೂ ಆಗಿದೆ. ದೇಶದ ಬಡವರಿಗೆ, ದಲಿತರಿಗೆ ಏನಾದರೂ ಹಕ್ಕುಗಳು ಸಿಕ್ಕಿದ್ದರೆ ಅದಕ್ಕೆ ಓಟೂ ಒಂದು ಕಾರಣವಾಗಿದೆ. ಆದರೆ, ದಾಖಲಾತಿಗಳ ಮೇಲೆ ನಿರ್ಧರಿಸಲಾಗುವ ಪೌರತ್ವವು ಮುಂದೊಂದು ದಿನ ಈ ಬಡವರ, ದಲಿತರ, ಹಿಂದುಳಿದವರ ಓಟಿನ ಹಕ್ಕನ್ನೂ ಕಸಿಯುವ ಅಸ್ತ್ರವಾಗುವುದಿಲ್ಲ ಎಂದು ಸುಮ್ಮನೇ ಕೂರುವ ಹಾಗಿಲ್ಲ. ಈಗ ಮೈಮರೆತರೆ ಮುಂದೊಂದು ದಿನ ಬಹಳ ದುಬಾರಿ ಬೆಲೆ ತೆರಬೇಕಾಗಿ ಬರಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...