ಕೊಟ್ಟಾಯಂ: ದಲಿತ ಚಿಂತಕ, ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತ ಕೆ.ಕೆ. ಕೋಚ್ (76) ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ಈ ಕುರಿತು ಚಿಕಿತ್ಸೆ ಪಡೆಯುತ್ತಿದ್ದರು.
1949ರ ಫೆಬ್ರವರಿ 2ರಂದು ಕೊಟ್ಟಾಯಂ ಜಿಲ್ಲೆಯ ಕಲ್ಲಾರದಲ್ಲಿ ಜನಿಸಿದ ಕೆ.ಕೆ.ಕೋಚ್ ಅವರು ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಚಿಕಿತ್ಸೆ ಪಡೆಯುತ್ತಿದ್ದರು. ಈ ಮಧ್ಯೆ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಕೆ.ಕೆ.ಕೋಚ್ ಕೇರಳದಲ್ಲಿ ದಲಿತ ಪ್ರಗತಿ ಹೋರಾಟಗಳಿಗೆ ಗಮನಾರ್ಹ ಕೆಲಸ ಮಾಡಿದ ವ್ಯಕ್ತಿಯಾಗಿದ್ದಾರೆ. ಅವರು ಬರಹಗಾರ, ಚಿಂತಕ ಮತ್ತು ಅತ್ಯುತ್ತಮ ವಾಗ್ಮಿಯಾಗಿ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಿದ್ದಾರೆ. 2021ರಲ್ಲಿ ತಮ್ಮ ಸಮಗ್ರ ಕೊಡುಗೆಗಾಗಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ. ‘ದಲಿತ’ ಆತ್ಮಚರಿತ್ರೆ ಗಮನಾರ್ಹವಾಗಿದೆ. ಇತರ ಕೃತಿಗಳೆಂದರೆ ‘ದಿ ಡಿಸ್ಟೆನ್ಸ್ ಟು ಬುದ್ಧ’, ‘ಎ ಹಿಸ್ಟರಿ ಲೆಸನ್ ಫಾರ್ ನ್ಯಾಷನಲಿಸಂ’, ‘ಕೇರಳ ಹಿಸ್ಟರಿ ಅಂಡ್ ಸೋಶಿಯಲ್ ಫಾರ್ಮೇಷನ್’, ‘ದಿ ಟೈಮ್ ವಿಥೌಟ್ ದಿ ಲೆಫ್ಟ್’ ಮತ್ತು ‘ರಾಯಿಟ್ ಅಂಡ್ ಕಲ್ಚರ್’ ಸೇರಿವೆ.
ಕೆ.ಕೆ.ಕೋಚ್ ಅವರು ಕೆ.ಎಸ್.ಆರ್.ಟಿ.ಸಿ.ಯಲ್ಲಿ ಹಿರಿಯ ಸಹಾಯಕರಾಗಿ ನಿವೃತ್ತರಾಗಿದ್ದಾರೆ. ಕಮ್ಯುನಿಸ್ಟ್ ಯುವ ವೇದಿಕೆ, ಪೀಪಲ್ಸ್ ವರ್ಕರ್ಸ್ ಯೂನಿಯನ್ ಮತ್ತು ಮಾನವ ಹಕ್ಕುಗಳ ಸಮಿತಿಯನ್ನು ಮುನ್ನಡೆಸಿದ್ದ ಕೆ.ಕೆ. ಕೋಚ್, 1986 ರಲ್ಲಿ ಸಿಡಿಯನ್ ಸಂಘಟನೆಯ ಕೇಂದ್ರ ಸಮಿತಿಯ ಸದಸ್ಯರಾಗಿದ್ದರು ಮತ್ತು ಸಿಡಿಯನ್ ವಾರಪತ್ರಿಕೆಯ ಸಂಪಾದಕರಾಗಿದ್ದರು.
ಕೆ.ಕೆ. ಕೋಚ್ ಅವರ ಮೃತದೇಹವನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಕಡುತುರುತಿಯಲ್ಲಿರುವ ಅವರ ಮನೆಗೆ ಶೀಘ್ರದಲ್ಲೇ ಕೊಂಡೊಯ್ಯಲಾಗುವುದು ಎಂದು ಸಂಬಂಧಿಕರು ಘೋಷಿಸಿದರು. ನಾಳೆ ಬೆಳಿಗ್ಗೆ 11 ಗಂಟೆಯಿಂದ ಕಡುತುರುತಿ ಸಮುದಾಯ ಭವನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಮಧ್ಯಾಹ್ನ 2 ಗಂಟೆಗೆ ಕಡುತುರುತಿಯಲ್ಲಿರುವ ಮನೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ರಾಜ್ಯ ಬಜೆಟ್ ಪ್ರತಿಯಲ್ಲಿ ‘ರೂಪಾಯಿ’ ಚಿಹ್ನೆ ಬದಲಿಸಿದ ತಮಿಳುನಾಡು ಸರ್ಕಾರ


